ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra) ಕಂಪನಿಯ ಸಿಇಒ ಆನಂದ್ ಮಹೀಂದ್ರಾ ರವರು ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಕೆಲವು ವೀಡಿಯೊ ಅಥವಾ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ಟ್ವಿಟರ್‌ನಲ್ಲಿ ಶೇರ್ ಮಾಡುವ ಪೋಸ್ಟ್‌ಗಳು ಪ್ರೇರಕವಾಗಿರುತ್ತವೆ, ಇಲ್ಲವೇ ತಮಾಷೆಯಿಂದ ಕೂಡಿರುತ್ತವೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಈಗ ಆನಂದ್ ಮಹೀಂದ್ರಾರವರು ಹಳೆ ಗಾದೆಗೆ ಹೊಸ ನಿದರ್ಶನವನ್ನು ನೀಡಿರುವ ವಿಶೇಷ ಚೇತನ ವ್ಯಕ್ತಿಯೊಬ್ಬರ ವೈರಲ್ ವೀಡಿಯೊ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬ ಗಾದೆಯನ್ನು ಈ ವಿಶೇಷ ಚೇತನ ವ್ಯಕ್ತಿ ಸಂಪೂರ್ಣವಾಗಿ ನಿಜವೆಂದು ಸಾಬೀತುಪಡಿಸಿದ್ದಾರೆ. ಈ ವಿಶೇಷ ಚೇತನ ವ್ಯಕ್ತಿಯ ವಿಡಿಯೋವನ್ನು ಆನಂದ್ ಮಹೀಂದ್ರಾರವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿರುವ ವಿಶೇಷ ಚೇತನ ವ್ಯಕ್ತಿ ಎರಡೂ ಕೈ ಹಾಗೂ ಎರಡೂ ಕಾಲುಗಳನ್ನು ಹೊಂದದೇ ಇದ್ದರೂ ವಿಶೇಷವಾಗಿ ಮಾಡಿಫೈ ಮಾಡಲಾದ ವಾಹನವನ್ನು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಈ ವೀಡಿಯೊವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿ ಅಪ್ ಲೋಡ್ ಮಾಡಿದ್ದಾರೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಈ ವೀಡಿಯೊದಲ್ಲಿ ಅವರು ವಿಶೇಷ ಚೇತನ ವ್ಯಕ್ತಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ನನಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಜೊತೆಗೆ ಹೆಂಡತಿ ಹಾಗೂ ವಯಸ್ಸಾದ ತಂದೆ ತಾಯಿಯರಿದ್ದಾರೆ, ಅವರಿಗಾಗಿ ಈ ಕೆಲಸ ಮಾಡಬೇಕು ಎಂದು ವಿಶೇಷ ಚೇತನ ವ್ಯಕ್ತಿ ಹೇಳುವುದನ್ನು ಈ ವೀಡಿಯೊದಲ್ಲಿ ಕೇಳಬಹುದು. ಆ ದಾರಿಹೋಕ ವ್ಯಕ್ತಿ ವಾಹನವನ್ನು ಸ್ಟಾರ್ಟ್ ಮಾಡುವುದು ಹೇಗೆ ಎಂದು ಕೇಳುತ್ತಾರೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಆಗ ಅವರು ಅದನ್ನು ಸ್ಟಾರ್ಟ್ ಮಾಡಿ ತೋರಿಸುತ್ತಾರೆ. ಕೈಕಾಲು ಇಲ್ಲದ ನಂತರವೂ ಆ ವಾಹನವನ್ನು ಹೇಗೆ ಚಾಲನೆ ಮಾಡುತ್ತಾರೆ ಎಂಬುದನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಟ್ವಿಟರ್‌ನಲ್ಲಿ ವೈರಲ್ ಆದ ಈ ವೀಡಿಯೊ ಮಹೀಂದ್ರಾ ಅಂಡ್ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ರವರ ಗಮನ ಸೆಳೆದಿದೆ. ವೀಡಿಯೊ ವೀಕ್ಷಿಸಿದ ನಂತರ ಆ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ರವರು ಈ ವೀಡಿಯೊವನ್ನು ಶೇರ್ ಮಾಡಿ, ಈ ವೀಡಿಯೊವನ್ನು ನನ್ನ ಟೈಮ್‌ಲೈನ್‌ನಲ್ಲಿ ಸ್ವೀಕರಿಸಿದೆ. ಈ ವೀಡಿಯೊ ಎಷ್ಟು ಹಳೆಯದು ಅಥವಾ ಎಲ್ಲಿಯದು ಎಂದು ನನಗೆ ತಿಳಿದಿಲ್ಲ. ಆದರೆ ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಈ ವ್ಯಕ್ತಿಯನ್ನು ಕಂಡು ನಾನು ಆಶ್ಚರ್ಯಚಕಿತನಾಗಿದ್ದೇನೆ. ಅವರನ್ನು ಹೊಂದಿದ್ದಕ್ಕಾಗಿ ಕೃತಜ್ಞರಾಗಿರುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಜೊತೆಗೆ ತಮ್ಮ ಸಹವರ್ತಿಗಳಾದ ರಾಮ್ ಹಾಗೂ ಮಹೀಂದ್ರಾ ಲಾಜಿಸ್ಟಿಕ್ಸ್ ಅನ್ನು ಟ್ಯಾಗ್ ಮಾಡಿ, ರಾಮ್, Mahindralog_MLL ಈ ವ್ಯಕ್ತಿಯನ್ನು ಲಾಸ್ಟ್ ಮೈಲ್ ಡೆಲಿವರಿಗೆ ವ್ಯಾಪಾರದ ಸಹವರ್ತಿಯಾಗಿ ಮಾಡಬಹುದೇ? ಎಂದು ಕೇಳಿದ್ದಾರೆ. ಈ ಮೂಲಕ ವೀಡಿಯೊದಲ್ಲಿರುವ ವಿಶೇಷ ಚೇತನ ವ್ಯಕ್ತಿಗೆ ಕೆಲಸ ಕೊಡಿಸುವ ಬಗ್ಗೆ ಆನಂದ್ ಮಹೀಂದ್ರಾ ಮಾತನಾಡಿದ್ದಾರೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್, ಖಂಡಿತವಾಗಿಯೂ ಆನಂದ್! ನಾವು ಅವರನ್ನು ಆದಷ್ಟು ಬೇಗ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಅವರು ನಮ್ಮ ರಾಷ್ಟ್ರದ ಪೂರೈಕೆ ಸರಪಳಿಗೆ ಆಸ್ತಿಯಾಗಿರುತ್ತಾರೆ. ಅವರು ನಿಜವಾದ ಸೂಪರ್ ಹೀರೋ ಎಂದು ಹೇಳಿದೆ. ಆನಂದ್ ಮಹೀಂದ್ರಾ ರವರು ಶೇರ್ ಮಾಡಿರುವ ಈ ವೀಡಿಯೊವನ್ನು 1.5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 2,000 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ವಿಶೇಷ ಚೇತನ ವ್ಯಕ್ತಿ ತಾವು 5 ವರ್ಷಗಳಿಂದ ಈ ವಾಹನ ಚಲಾಯಿಸುತ್ತಿರುವುದಾಗಿ ಹೇಳಿದ್ದಾರೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾರವರು ಕೆಲವು ದಿನಗಳ ಹಿಂದೆ ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊ ಸಹ ಸಾಕಷ್ಟು ವೈರಲ್ ಆಗಿತ್ತು. ಕಿಕ್ ಸ್ಟಾರ್ಟ್ ಮಾಡಿದಾಗ ಆರಂಭವಾಗುವ ಸಣ್ಣ ಜೀಪ್ ಅನ್ನು ಈ ವೀಡಿಯೊದಲ್ಲಿ ತೋರಿಸಲಾಗಿತ್ತು. ಸಾಮಾನ್ಯವಾಗಿ ಸ್ಕೂಟರ್ ಅಥವಾ ಬೈಕ್ ಗಳನ್ನು ಕಿಕ್ ಮಾಡುವ ಮೂಲಕ ಸ್ಟಾರ್ಟ್ ಮಾಡಲಾಗುತ್ತದೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಆದರೆ ಜೀಪ್ ಅನ್ನು ಕಿಕ್ ಮೂಲಕ ಸ್ಟಾರ್ಟ್ ಮಾಡುವುದನ್ನು ಯಾರೂ ನೋಡಿಯೇ ಇಲ್ಲವೆಂದು ಹೇಳಬಹುದು. ಈ ಕಾರಣಕ್ಕೆ ಆನಂದ್ ಮಹೀಂದ್ರಾ ರವರು ಶೇರ್ ಮಾಡಿರುವ ಈ ವೀಡಿಯೊ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವೀಡಿಯೊ ಶೇರ್ ಮಾಡಿರುವ ಆನಂದ್ ಮಹೀಂದ್ರಾ, ಈ ವಾಹನವು ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲ. ಆದರೆ ನಾನು ಯಾವಾಗಲೂ ಕಡಿಮೆ ವಸ್ತುವಿನಿಂದ ಹೆಚ್ಚು ಮಾಡುವ ಜನರ ಈ ಪ್ರವೃತ್ತಿಯನ್ನು ಮೆಚ್ಚುತ್ತೇನೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ವಾಹನಗಳ ಬಗ್ಗೆ ಅವರಿಗಿರುವ ಉತ್ಸಾಹ ನಿಜಕ್ಕೂ ಅದ್ಭುತವೆಂದು ಹೇಳಿದ್ದಾರೆ. ಹಲವು ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಆನಂದ್ ಮಹೀಂದ್ರಾರವರು ಶೇರ್ ಮಾಡಿರುವ ಈ ವೀಡಿಯೊವನ್ನು ಇಡುವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ, 15 ಸಾವಿರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. ಇನ್ನು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಅಂದ ಹಾಗೆ ಈ ವೀಡಿಯೊ ಮಹಾರಾಷ್ಟ್ರದ ಹಳ್ಳಿಯೊಂದಕ್ಕೆ ಸಂಬಂಧಿಸಿದೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಈ ವೀಡಿಯೊದಲ್ಲಿ ಆ ಹಳ್ಳಿಯ ವ್ಯಕ್ತಿಯೊಬ್ಬರು ಮಾಡಿಫೈ ಮಾಡಿದ ಜೀಪ್ ಅನ್ನು ಚಾಲನೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ಈ ಜೀಪ್ ಅನ್ನು ಹಳೆಯ ವಸ್ತುಗಳಿಂದ ತಯಾರಿಸಲಾಗಿದೆ. ಈ ಜೀಪ್'ಗೆ ಬೈಕಿನ ಎಂಜಿನ್ ಅಳವಡಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊದಲ್ಲಿ, ಜೀಪ್ ಅನ್ನು ಕಿಕ್ ಮಾಡಿ ಸ್ಟಾರ್ಟ್ ಮಾಡುವುದನ್ನು ಸಹ ತೋರಿಸಲಾಗಿದೆ.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಕೆಲ ದಿನಗಳ ಹಿಂದಷ್ಟೇ ಆನಂದ್ ಮಹೀಂದ್ರಾ ರವರು ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಯೊರ್ವನ ವೀಡಿಯೊವನ್ನು ಶೇರ್ ಮಾಡಿದ್ದರು. ಈ ವೀಡಿಯೋವನ್ನು ಶೇರ್ ಮಾಡುವಾಗ ಸಿನಿಮಾ ಹಾಡಿನ ಕೆಲವು ಸಾಲುಗಳನ್ನೂ ಬರೆದಿದ್ದರು. ವೀಡಿಯೊ ವೈರಲ್ ಆದ ನಂತರ ಕೆಲವರು ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಯನ್ನು ಹೊಗಳಿದರೆ, ಇನ್ನೂ ಕೆಲವರು ಈ ಅಪಾಯಕಾರಿ ಸ್ಟಂಟ್ ಅನ್ನು ಬೈಕ್ ಚಾಲಕನ ನಿರ್ಲಕ್ಷ್ಯವೆಂದು ಹೇಳಿದ್ದರು.

ವಿಶೇಷ ಚೇತನ ವ್ಯಕ್ತಿಗೆ ಕೆಲಸದ ಆಫರ್ ನೀಡಿದ ಆನಂದ್ ಮಹೀಂದ್ರಾ

ಇನ್ನು ಮಹೀಂದ್ರಾ ಕಂಪನಿಯು ತನ್ನ ವಾಣಿಜ್ಯ ತ್ರಿಚಕ್ರ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸುವ ಯೋಜನೆಯಲ್ಲಿ ಕಾರ್ಯನಿರತವಾಗಿದೆ. 2025ರ ವೇಳೆಗೆ ದೇಶದ ತ್ರಿಚಕ್ರ ವಾಹನ ವಿಭಾಗದಲ್ಲಿ 30%ನಷ್ಟು ಎಲೆಕ್ಟ್ರಿಕ್ ವಾಹನಗಳಿರಲಿವೆ ಎಂಬುದು ಕಂಪನಿಯ ಅಭಿಪ್ರಾಯ.

Most Read Articles

Kannada
English summary
Anand mahindra offers job to specially abled man details
Story first published: Tuesday, December 28, 2021, 14:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X