ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ಹುಲಿಯೊಂದು ಮಹೀಂದ್ರಾ ಕ್ಸೈಲೋ ಎಸ್‌ಯುವಿಯನ್ನು ಎಳೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ.

ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ಒಂದೂವರೆ ನಿಮಿಷಗಳಷ್ಟಿರುವ ಈ ವೀಡಿಯೊ ಹುಲಿ ಎಷ್ಟು ಬಲಶಾಲಿ ಪ್ರಾಣಿ ಎಂಬುದನ್ನು ತೋರಿಸುತ್ತದೆ. ಈ ವೀಡಿಯೊದಲ್ಲಿ ಹುಲಿ ಮಹೀಂದ್ರಾ ಕ್ಸೈಲೋ ಎಸ್‌ಯುವಿಯ ಹಿಂಭಾಗವನ್ನು ತನ್ನ ಬಾಯಿಯಿಂದ ಕಚ್ಚುತ್ತಿರುವುದನ್ನು ಕಾಣಬಹುದು.

ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ಈ ಘಟನೆ ನಡೆದಾಗ ಎಸ್‌ಯುವಿಯ ಒಳಗೆ 6 ಜನ ಪ್ರವಾಸಿಗರು ಕುಳಿತಿದ್ದರು. ಮಹೀಂದ್ರಾ ಕ್ಸೈಲೋ ಎಸ್‌ಯುವಿಯು 1,875 ಕೆ.ಜಿ ತೂಕವನ್ನು ಹೊಂದಿದೆ. ಇದರಿಂದಾಗಿ ಹುಲಿ ಸುಮಾರು 2 ಟನ್ ತೂಕವನ್ನು ಎಳೆದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ಘಟನೆ ನಡೆದಾಗ ಬ್ಯಾಟರಿಯಲ್ಲಿ ಸಮಸ್ಯೆ ಕಂಡು ಬಂದ ಕಾರಣ ಮಹೀಂದ್ರಾ ಕ್ಸೈಲೋ ಸ್ಟಾರ್ಟ್ ಆಗಿಲ್ಲ. ಸುತ್ತಲೂ ಹುಲಿಗಳಿದ್ದ ಕಾರಣಕ್ಕೆ ಪ್ರವಾಸಿಗರು ಕೆಳಗಿಳಿದು ಕಾರನ್ನು ತಳ್ಳಿ ಸ್ಟಾರ್ಟ್ ಮಾಡುವ ಪ್ರಯತ್ನಕ್ಕೆ ಮುಂದಾಗಿಲ್ಲ.

ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು, ಬ್ಯಾಟರಿ ತೊಂದರೆಯಿಂದಾಗಿ ಕಾರು ನಿಂತು ಹೋಗಿತ್ತು. ಕಾರನ್ನು ಸ್ಟಾರ್ಟ್ ಮಾಡಲು ಚಾಲಕನಿಗೆ ಸಾಧ್ಯವಾಗಿಲ್ಲ. ಕಾರು ನಿಂತಿದ್ದ ಕಾರಣಕ್ಕೆ ಹುಲಿ ಅಲ್ಲಿಗೆ ಬಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ತಕ್ಷಣವೇ ನಮ್ಮ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಕಾರನ್ನು ಟೋಯಿಂಗ್ ಮಾಡಿದೆ ಎಂದು ಹೇಳಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊ ಹಳೆಯದು ಎಂದು ತಿಳಿದು ಬಂದಿದೆ. ಈ ಘಟನೆ ಸುಮಾರು 2 ತಿಂಗಳ ಹಿಂದೆ ನಡೆದಿದೆ ಎಂದು ಹೇಳಲಾಗಿದೆ.

ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ಹುಲಿಗಳು ತುಂಬಾ ಬಲಶಾಲಿಗಳಾಗಿರುತ್ತವೆ. ಈ ಕಾರಣದಿಂದಾಗಿಯೇ ಮಹೀಂದ್ರಾ ಕ್ಸೈಲೋದಂತಹ ದೊಡ್ಡ ವಾಹನಗಳನ್ನು ಎಳೆಯಲು ಸಾಧ್ಯವಾಗಿದೆ. ಇನ್ನು ಕ್ಸೈಲೋ ಕಾರಿನ ಬಗ್ಗೆ ಹೇಳುವುದಾದರೆ, ಮಹೀಂದ್ರಾ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸುರಕ್ಷತಾ ನಿಯಮಗಳು ಹಾಗೂ ಬಿಎಸ್ -6 ಮಾಲಿನ್ಯ ನಿಯಮಗಳ ಕಾರಣಕ್ಕೆ ಮಹೀಂದ್ರಾ ಕ್ಸೈಲೋ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.ಮಹೀಂದ್ರಾ ಕ್ಸೈಲೋ 4520 ಎಂಎಂ ಉದ್ದ, 1,850 ಎಂಎಂ ಅಗಲ ಹಾಗೂ 2,760 ಎಂಎಂ ವ್ಹೀಲ್‌ಬೇಸ್ ಹೊಂದಿದೆ.

ಭಾರೀ ಗಾತ್ರದ ಎಸ್‌ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ

ಮಹೀಂದ್ರಾ ಕ್ಸೈಲೋವನ್ನು 2.2 ಲೀಟರಿನ ಎಂಹಾಕ್ ಡೀಸೆಲ್ ಎಂಜಿನ್ ಹಾಗೂ 2.5 ಲೀಟರಿನ ಸಿಆರ್'ಡಿ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿತ್ತು. ಮಹೀಂದ್ರಾ ಕಂಪನಿಯು ಸದ್ಯಕ್ಕೆ ಹೊಸ ತಲೆಮಾರಿನ ಸ್ಕಾರ್ಪಿಯೋ ಹಾಗೂ ಎಕ್ಸ್‌ಯುವಿ 500ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

Most Read Articles

Kannada
English summary
Angry Tiger pulls Mahindra Xylo SUV in Bannerghatta national park. Read in Kannada.
Story first published: Wednesday, January 20, 2021, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X