ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

By Nagaraja

ಜಗತ್ತಿನ ಜನ ಸಾಮಾನ್ಯ ಸಂಪರ್ಕ ವಾಹನಗಳಲ್ಲಿ ಆಟೋ ರಿಕ್ಷಾ ಸಹ ಒಂದಾಗಿದೆ. ಈ ಮೂರು ಚಕ್ರದ ವಾಹನವನ್ನು ಆಟೋ ರಿಕ್ಷಾ ಅಥವಾ ಸಮೊಸಾ, ಟೆಂಪೊ, ಟಕ್-ಟಕ್, ಆಟೋ, ರಿಕ್ಷಾ, ಆಟೋರಿಕ್, ರಿಕ್, ಬಜಾಜ್, ಟ್ರೈಸೈಕಲ್, ಮೊಟೊಟ್ಯಾಕ್ಸಿ, ಬೇಬಿ ಟ್ಯಾಕ್ಸಿ ಲಾಪಾ ಎಂದು ಕರೆಯಲಾಗುತ್ತದೆ. ಇದು ಸಾಂಪ್ರದಾಯಿಕ ಸೈಕಲ್ ರಿಕ್ಷಾ ಅಥವಾ ತಳ್ಳುವ ಬಂಡಿಯ ಮೋಟಾರು ಸ್ವರೂಪವಾಗಿದೆ.

ಕನ್ನಡದ ಕಂಪು ಪಸರಿಸುವ ಆಟೋ ರಿಕ್ಷಾಗಳು..!

ಭಾರತದಂತಹ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಆಟೋ ರಿಕ್ಷಾಗಳು ಜನಸಾಮಾನ್ಯರ ಪ್ರಮುಖ ಸಂಪರ್ಕ ಮಾಧ್ಯಮವಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರನ್ನು ಕೊಂಡೊಯ್ಯುವ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿರುವ ಆಟೋ ರಿಕ್ಷಾಗಳಿಂದ ಬರುವ ಸಂಪಾದನೆಯಿಂದಲೇ ಹಲವಾರು ಕುಟುಂಬಗಳು ತಮ್ಮ ದೈನಂದಿನ ಜೀವನವನ್ನು ಸಾಗಿಸುತ್ತಿದ್ದಾರೆ. ಇತಿಹಾಸದತ್ತ ಗಮನ ಹರಿಸಿದರೆ 1948ರಲ್ಲಿ ಪಿಯಾಜಿಯೊ ಆಪೆ ಸಿ ಯು ವೆಸ್ಪಾ ವಾಹನ ರಚನೆಯನ್ನಾಧರಿಸಿ ಆಟೋರಿಕ್ಷಾಗಳನ್ನು ಭಾರತ ಮತ್ತು ಆಫ್ರಿಕಾದಲ್ಲಿ ತಯಾರಿಸಲಾಗಿತ್ತು. ಭಾರತದಲ್ಲಿ ಪಿಯಾಜಿಯೊ ಪರಿಣತಿಯನ್ನು ಪಡೆದ ಬಜಾಜ್ ಆಟೋ ಸಂಸ್ಥೆಯು 1959ರಿಂದ 1974ರ ವರೆಗೆ ಆಟೋರಿಕ್ಷಾದ ರಚನೆಯನ್ನು ಮೊತ್ತ ಮೊದಲ ಬಾರಿಗೆ ಪ್ರಾರಂಭಿಸಿತ್ತು.

ಚುನಾವಣೆಗೆ ಬಿಜೆಪಿ ಹೈಟೆಕ್ ಗಾಡಿ

ಅಷ್ಟಕ್ಕೂ 'ರಿಕ್ಷಾ' ಎಂಬ ಪದದ ಮೂಲ ಜಪಾನ್‌ನ 'ಜಿನ್ ರಿಕ್ಷಾ' ಎಂಬ ಪದದಿಂದ ಹುಟ್ಟಿಕೊಳ್ಳುತ್ತದೆ. ಇಲ್ಲಿ ಜಿನ್ ಎಂಬುದು 'ಮಾನವ' ಹಾಗೂ ರಿಕ್ಕಿ ಎಂಬುದು ಶ'ಕ್ತಿ ಅಥವಾ ಬಲ'ವಾಗಿದೆ. ಸಾಮಾನ್ಯವಾಗಿ ಆಟೋ ರಿಕ್ಷಾಗಳು ಶೀಟ್ ಮೆಟಲ್ ದೇಹ ವಿನ್ಯಾಸ ಹೊಂದಿದ್ದು, ಮುಂಭಾಗದಲ್ಲಿ ಚಾಲಕರಿಗೆ ಸಣ್ಣ ಕ್ಯಾಬಿನ್ ಹೊಂದಿರುತ್ತದೆ. ಹಾಗೆಯೇ ಹಿಂದುಗಡೆ ಮೂರು ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯಿದೆ. ಇದು 200ಸಿಸಿ ಫೋರ್ ಸ್ಟ್ರೋಕ್ ಎಂಜಿನ್, ಜತೆಗೆ ಹ್ಯಾಂಡಲ್ ಬಾರ್ (ಸ್ಟೀರಿಂಗ್ ಬದಲು) ಇದ್ದು, ಗರಿಷ್ಟ 50 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. ಇಲ್ಲಿದೆ ನೋಡಿ ಜಗತ್ತಿನ ವಿವಿಧ ದೇಶಗಳಲ್ಲಿ ಬಳಕೆಯಲ್ಲಿರುವ ವರ್ಣಮಯ ಆಟೋ ರಿಕ್ಷಾಗಳು..

ಭಾರತ

ಭಾರತ

ಭಾರತದಲ್ಲಿ ನಗರ ಹಾಗೂ ಸಣ್ಣ ಪಟ್ಟಣಗಳಲ್ಲಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಆಟೋ ರಿಕ್ಷಾಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಪರಿಸರ ಮಾಲಿನ್ಯ, ಟ್ರಾಫಿಕ್ ಸಮಸ್ಯೆಗಳನ್ನು ಸೃಷ್ಟಿಸುತ್ತದೆಯೆಂಬ ಅಪವಾದವೂ ಆಟೋ ರಿಕ್ಷಾಗಳ ಮೇಲಿದೆ. ಇಲ್ಲಿ ಆಟೋ ಮೀಟರ್‌ಗಳು ಪ್ರಮುಖವಾಗಿದೆ.

ಎಲ್ ಸಾಲ್ವಡೋರ್

ಎಲ್ ಸಾಲ್ವಡೋರ್

ಮಧ್ಯ ಅಮೆರಿಕದ ಎಲ್ ಸಾಲ್ವಡೋರ್ ರಾಷ್ಟ್ರದಲ್ಲಿ ಮೊಟೊ ಟ್ಯಾಕ್ಸಿ ಅಥವಾ ಮೊಟೊ ಎಂದರಿಯಲ್ಪಡುತ್ತದೆ.

ಫಿಲಿಫೈನ್ಸ್

ಫಿಲಿಫೈನ್ಸ್

ಫಿಲಿಫೈನ್ಸ್‌ನಲ್ಲೂ ಆಟೋ ರಿಕ್ಷಾಗಳು ಪ್ರಮುಖ ಸಾರಿಗೆ ಸಂಪರ್ಕ ಮಾಧ್ಯಮವಾಗಿದೆ. ಇಲ್ಲಿ ಟ್ರೈಸೈಕಲ್ ಎಂದು ಗುರುತಿಸಲ್ಪಟ್ಟಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಫಿಲಿಫೈನ್ಸ್‌‍ನ ನೆಗ್ರೊಸ್ ಒರಿಯಂಟಲ್ ಪ್ರಾಂತ್ಯದ ಡುಮಗುಟೆ (Dumaguete) ನಗರದಲ್ಲಿ ಬಳಕೆಯಾಗುತ್ತಿರುವ ಯಾಂತ್ರಿಕೃತ ಟ್ರೈಸೈಕಲ್

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ನಮ್ಮ ಬೆಂಗಳೂರಿನ ಆಟೋ ರಿಕ್ಷಾಗಳು

ಶೇರ್ ಆಟೋ

ಶೇರ್ ಆಟೋ

ನೆರೆಯ ಚೆನ್ನೈನಲ್ಲಿ ಶೇರ್ ಆಟೋ ಎಂದೇ ರಿಕ್ಷಾಗಳು ಹೆಚ್ಚು ಜನಪ್ರಿಯವಾಗಿದೆ. ವಿಶಿಷ್ಟ ಶೈಲಿಯ ಈ ಶೇರ್ ಆಟೋಗಳು ಜನ ಸಾಮಾನ್ಯರ ದಿನನಿತ್ಯ ಬಳಕೆ ಪ್ರಮುಖ ಘಟಕವಾಗಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಮಧ್ಯಪ್ರದೇಶದಲ್ಲಿ ಬಳಕೆಯಲ್ಲಿದ್ದ ಹಳೆಯ ಆಟೋ ರಿಕ್ಷಾ - ಭೇದಘಟ್ (Bhedaghat)

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಇಂಗ್ಲೆಂಡ್‌ನ ಬ್ರೈಟನ್ ಮರಿನಾದಲ್ಲಿರುವ ಟ್ರಕ್ಟಾಸ್ ಬುಕ್ಕಿಂಗ್ ಆಟೋ ರಿಕ್ಷಾ

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಇನ್ನು ಕಂಬೋಡಿಯಾದಲ್ಲಿ ಟಕ್ ಟಕ್ ಎಂದೇ ಆಟೋ ರಿಕ್ಷಾಗಳು ಜನಪ್ರಿಯವಾಗಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಥಾಯ್ಲೆಂಡ್ ಆಟೋ ರಿಕ್ಷಾಗಳು ಸಹ ಟಕ್ ಟಕ್ ಎಂದೇ ಗುರುತಿಸಲ್ಪಟ್ಟಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಬ್ಯಾಂಕಾಂಕ್ ಜತೆಗೆ ಇತರ ಥಾಯ್ಲೆಂಡ್ ನಗರಗಳಲ್ಲೂ ಟಕ್ ಟಕ್ ವಾಹನಗಳು ಬಳಕೆಯಲ್ಲಿದೆ. ಆದರೆ ಇಲ್ಲಿನ ಸರಕಾರಕ್ಕೆ ಟ್ರಾಫಿಕ್ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿಟ್ಟಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ವಿಭಿನ್ನ ಆಟೋ ರಿಕ್ಷಾಗಳು ಚೀನಾದಲ್ಲಿ ಬಳಕೆಯಾಗುತ್ತಿದ್ದು, ಈ ಪೈಕಿ ಮೂರು ಚಕ್ರದ ವಾಹನ ಹಾಗೂ ಬೀಪ್ ಬೀಪ್ ಕಾರು, ಎಲೆಕ್ಟ್ರಿಕ್ ಮಾದರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ಟರ್ಡಿ ಸಾಮಾನ್ಯವಾಗಿ ಬಳಕೆಯಲ್ಲಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಚೀನಾದ ಹೈಕೂನಲ್ಲಿ ಬಳಕೆಯಾಗುತ್ತಿರುವ ಎಲೆಕ್ಟ್ರಿಕ್ ಮಾದರಿಯ ಆಟೋ ರಿಕ್ಷಾಗಳು

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ವಿಶಿಷ್ಟ ವಿನ್ಯಾಸ ಪಡೆದುಕೊಂಡಿರುವ ಮೂರು ಚಕ್ರಗಳ ಚೊಕೊ ಟ್ಯಾಕ್ಸಿಗಳು ಕ್ಯೂಬಾದಲ್ಲಿ ತೆಂಗಿನ ಮರಗಳನ್ನು ಪ್ರತಿನಿಧಿಸುತ್ತದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಬಾಂಗ್ಲಾದೇಶದಲ್ಲಿ ಬೇಬಿ ಟ್ಯಾಕ್ಸಿ ಎಂದು ಅರಿಯಲ್ಪಡುತ್ತಿದ್ದ ಆಟೋ ರಿಕ್ಷಾಗಳು ಇದೀಗ ಸಿಎನ್‌ಜಿ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ಸಿಎನ್‌ಜಿ ಆಟೋ ಬಳಕೆಯಾಗುತ್ತಿರುವುದರಿಂದ ಇದೇ ಹೆಸರಿನಿಂದ ಜನಪ್ರಿಯವಾಗುತ್ತಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಮೊಟೊಟ್ಯಾಕ್ಸಿಗಳು ಇಕ್ವಾಡೋರ್ ವರ್ಷನ್ ಆಟೋ ರಿಕ್ಷಾಗಳಾಗಿವೆ. ಇದು ಹಿಂದುಗಡೆ ಮನೆಯ ಶೈಲಿಯ ವಿನ್ಯಾಸ ಹೊಂದಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಟಕ್ ಟಕ್ ಆಟೋ ರಿಕ್ಷಾಗಳು ಪೂರ್ವ ಆಫ್ರಿಕಾ ರಾಷ್ಟ್ರವಾದ ಇಥೋಪಿಯಾದಲ್ಲೂ ಸಾಮಾನ್ಯವಾಗಿದೆ.

ಕರಾಚಿ

ಕರಾಚಿ

ಭಾರತದಂತೆ ಪಾಕಿಸ್ತಾನದಲ್ಲೂ ಆಟೋ ರಿಕ್ಷಾಗಳು ಪ್ರಮುಖ ಸಂಪರ್ಕ ಮಾಧ್ಯಮವಾಗಿದೆ. ಇಲ್ಲೂ ವೆಸ್ಪಾ ಬ್ರಾಂಡ್‌ಗಳು ಪ್ರಮುಖವಾಗಿದೆ.

ಲಾಹೋರ್‌

ಲಾಹೋರ್‌

ಪಾಕಿಸ್ತಾನದ ನಗರಗಳಲ್ಲಿ ಆಟೋ ರಿಕ್ಷಾಗಳು ಚಾಂದ್ ಗರಿ (Moon Car) ಎಂದು ಹೆಸರುವಾಸಿಯಾಗಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಕೀನ್ಯಾದ ನಗರಗಳಲ್ಲೂ ಟಕ್ ಟಕ್ ರಿಕ್ಷಾಗಳು ಓಡಾಡುತ್ತಿವೆ. ಇದು ಸಾಮಾನ್ಯ ಟ್ಯಾಕ್ಸಿಗಿಂತಲೂ ಅಗ್ಗವಾಗಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಪೆರೊನಲ್ಲಿ ಆಟೋ ರಿಕ್ಷಾಗಳು ಮೊಟೊಟ್ಯಾಕ್ಸಿ, ಮೊಟೊಕಾರ್ಸ್, ಟ್ಯಾಕ್ಸಿ ಚೊಲೊ ಅಥವಾ ಚೊಲೊಟ್ಯಾಕ್ಸಿ ಎಂದರಿಯಲ್ಪಡುತ್ತದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಲಾವೋಸ್ ರಾಷ್ಟ್ರದಲ್ಲಿ ಜಂಪೋ ಟಕ್ ಟಕ್ ರಿಕ್ಷಾಗಳು ಬಳಕೆಯಲ್ಲಿದೆ. ಇದು ದೊಡ್ಡದಾದ ಡೈಹಟ್ಸು ನಿಯಂತ್ರಿತ 3 ಅಥವಾ 4 ಸಿಲಿಂಡರ್ ಫೋರ್ ಸ್ಟ್ರೋಕ್ ಎಂಜಿನ್‌ಗಳು ಹೊಂದಿವೆ. ಇದರಲ್ಲಿ ಗರಿಷ್ಠ 12 ಮಂದಿ ಸಂಚರಿಸಬಹುದಾಗಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ನೆರೆಯ ಶ್ರೀಲಂಕಾದಲ್ಲೂ ಆಟೋ ರಿಕ್ಷಾಗಳು ಪ್ರಮುಖ ಸಂಪರ್ಕ ಮಾಧ್ಯಮವಾಗಿದೆ. ಇಲ್ಲಿ ಟಕ್ ಟಕ್ ರಿಕ್ಷಾಗಳಲ್ಲದೇ ಭಾರತದಿಂದ ರಫ್ತಾಗುತ್ತಿರುವ ಬಜಾಜ್ ಆಟೋಗಳು ಬಳಕೆಯಲ್ಲಿದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ವಿಯೆಟ್ನಾಂದಲ್ಲಿ ರಿಕ್ಷಾಗಳು ಎಕ್ಸ್ ಲ್ಯಾಮ್ (xe lam) ಎಂದು ಅರಿಯಲ್ಪಡುತ್ತದೆ.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

1956ರಿಂದ 1967ರ ವರೆಗಿದ್ದ ಆಪೆ ಸಿ ಆಟೋ ರಿಕ್ಷಾಗಳು.

ಜಗತ್ತಿನ ವಿವಿಧ ದೇಶಗಳಲ್ಲಿನ ವರ್ಣಮಯ ಆಟೋ ರಿಕ್ಷಾಗಳು!

ಇದೀಗ ನಿಮ್ಮ ನಗರಗಳಲ್ಲಿ ಓಡಾಡುವ ಆಟೋ ರಿಕ್ಷಾಗಳ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಉಲ್ಲೇಖಿಸಿರಿ.

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X