ಉಗ್ರರ ಪ್ರತಿದಾಳಿಗಾಗಿ ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ

Written By:

ಭದ್ರತೆಯ ವಿಚಾರದಲ್ಲಿ ಬೆಂಗಳೂರು ಸಿಟಿ ಪೊಲೀಸ್ ಮತ್ತಷ್ಟು ಬಲಿಷ್ಠಗೊಂಡಿದ್ದು, ಮಹೀಂದ್ರ ಮಾರ್ಕ್ಸ್‌ಮ್ಯಾನ್ (Mahindra Marksman) ಬುಲೆಟ್ ಫ್ರೂಪ್ ಗಾಡಿ ಬಂದು ಸೇರಿದೆ. ಇದನ್ನು ಪ್ರಮುಖವಾಗಿಯೂ ಉಗ್ರ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಪ್ರತಿದಾಳಿಗಾಗಿ ಬಳಕೆ ಮಾಡಲಾಗುವುದು.

ಕ್ಯಾಫ್ಸುಲ್ ತಳಹದಿಯ ಈ ಹಗುರ ಬುಲೆಟ್ ಫ್ರೂಫ್ ಗಾಡಿಯಲ್ಲಿ ಚಾಲಕ, ಸಹ ಚಾಲಕ ಸೇರಿದಂತೆ ನಾಲ್ವರಿಗೆ ಸಂಚರಿಸಬಹುದಾಗಿದೆ. ಅಷ್ಟಕ್ಕೂ ಬೆಂಗಳೂರಿನಲ್ಲಿ ಇದರ ಅಗತ್ಯವಿತ್ತೇ? ಮುಂದೆ ಓದಿ...

ಉಗ್ರರ ಪ್ರತಿದಾಳಿಗಾಗಿ ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ

ದೇಶದಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡಾ ಒಂದಾಗಿದೆ. ಈ ನಿಟ್ಟಿನಲ್ಲಿ ಭದ್ರತೆಗೂ ಹೆಚ್ಚಿನ ಆದತ್ಯೆ ಕೊಡಬೇಕಾಗಿದೆ. ಪ್ರಮುಖವಾಗಿಯೂ ಮಹೀಂದ್ರ ಮಾರ್ಕ್ಸ್ ಮ್ಯಾನ್ ವಾಹನಗಳನ್ನು ಅರೆಸೇನಾ ಪಡೆ ಹಾಗೂ ಪೊಲೀಸ್ ಇಲಾಖೆಯು ಬಳಕೆ ಮಾಡಲಿದೆ.

ಉಗ್ರರ ಪ್ರತಿದಾಳಿಗಾಗಿ ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ

7.62 x 51ಎಂಎಂ SLR, 7.62 x 39 ಎಂಎಂ ಎಕೆ-47/56 ಮತ್ತು 5.56 ಇನ್ಸಾಸ್ ಶ್ರೇಣಿಯ ಬುಲೆಟ್ ಗಳನ್ನು ತಡೆಯುವ ಸಾಮರ್ಥ್ಯವನ್ನು ಮಹೀಂದ್ರ ಮಾರ್ಕ್ಸ್ ಮ್ಯಾನ್ ಹೊಂದಿರುತ್ತದೆ.

ಉಗ್ರರ ಪ್ರತಿದಾಳಿಗಾಗಿ ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ

ಇದು ಸಣ್ಣ ಸ್ಪೋಟಕ ಹಾಗೂ ಗ್ರೇನೆಡ್ ದಾಳಿಗಳನ್ನು ಎದುರಿಸುವಷ್ಟು ಶಕ್ತವಾಗಿದೆ. ಇನ್ನು ಪ್ರತಿದಾಳಿಗಾಗಿ ಮೆಷಿನ್ ಗನ್ ಮೌಂಟೆಡ್, ಏಳು ಫೈರಿಂಗ್ ಕ್ರ್ಯೂ ಪೋರ್ಟ್, ರಿಯರ್ ವ್ಯೂ ಕ್ಯಾಮೆರಾ, ಎಲ್‌ಸಿಡಿ ಸ್ಕ್ರೀನ್ ವ್ಯವಸ್ಥೆಯಿರಲಿದೆ.

ಉಗ್ರರ ಪ್ರತಿದಾಳಿಗಾಗಿ ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ

2009ರಲ್ಲೇ ಮುಂಬೈ ಪೊಲೀಸ್ ಮಹೀಂದ್ರ ಮಾರ್ಕ್ಸ್ ಮ್ಯಾನ್ ವಾಹನವನ್ನು ತಮ್ಮದಾಗಿಸಿಕೊಂಡಿತ್ತು. ಈಗ ಬೆಂಗಳೂರಿಗೂ ಬಂದು ಸೇರಿದ್ದು, ನಗರ ಪೊಲೀಸ್ ಗೆ ಆನೆ ಬಲ ಬಂದಂತಾಗಿದೆ.

ಉಗ್ರರ ಪ್ರತಿದಾಳಿಗಾಗಿ ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ

ಅಂದ ಹಾಗೆ ಮಹೀಂದ್ರ ಮ್ಯಾಕ್ಸ್ ಮ್ಯಾನ್ ‌ನಲ್ಲಿ 2.5 ಲೀಟರ್ ಸಿಆರ್ ಡಿಇ ಎಂಜಿನ್ ಬಳಕೆ ಮಾಡಲಾಗಿದ್ದು, 105 ಅಶ್ವಶಕ್ತಿ (228 ತಿರುಗುಬಲ) ಉತ್ಪಾದಿಸು ಸಾಮರ್ಥ್ಯ ಹೊಂದಿದೆ. ಅಲ್ಲದೆ 3200 ಕೆ.ಜಿಗಳಷ್ಟು ಭಾರವನ್ನು ಹೊಂದಿರಲಿದೆ.

ಉಗ್ರರ ಪ್ರತಿದಾಳಿಗಾಗಿ ಬೆಂಗಳೂರು ಬಂದಿಳಿದ ಬುಲೆಟ್ ಫ್ರೂಪ್ ಗಾಡಿ

ಇನ್ನು 5 ಸ್ಪೀಡ್ ಗೇರ್ ಬಾಕ್ಸ್, 4 ವೀಲ್ ಡ್ರೈವ್, ಪವರ್ ಸ್ಟೀರಿಂಗ್, ಎಸಿ ವ್ಯವಸ್ಥೆಯು ಇದರಲ್ಲಿರುತ್ತದೆ. ಫ್ಲ್ಯಾಟ್ ಟೈರ್ (ಪಂಚರ್) ನಲ್ಲೂ ಸುಮಾರು ಕೀ.ಮೀ.ಗಳಷ್ಟು ಮುಂದಕ್ಕೆ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಾಗೆಯೇ ಗಂಟೆಗೆ ಗರಿಷ್ಠ 120 ಕೀ.ಮೀ. ವೇಗದಲ್ಲಿ ಚಲಿಸಲಿದೆ.

English summary
Mahindra Marksman is India’s first armoured capsule-based light bulletproof vehicle to provide protection to the personnel of defence, paramilitary and police forces against small arms fire and grenade attacks. It has capability to be used in counter terrorist as well as conventional roles.
Story first published: Friday, May 29, 2015, 12:30 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more