ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

By Super Admin

'ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್' (Bharat stage emission standards) ಎಂಬುದು ಆಂತರಿಕ ದಹನಕಾರಿ ಎಂಜಿನ್ (internal combustion engine) ವಾತಾವರಣಕ್ಕೆ ಬಿಡುಗಡೆ ಮಾಡುವ ಮಾಲಿನ್ಯಕಾರಕ ಹೊಗೆ ನಿಯಂತ್ರಿಸಲು ಭಾರತ ಸರಕಾರವು ಹೊರತಂದಿರುವ ಕಾನೂನಾತ್ಮಕ ಮಾಪನವಾಗಿದೆ.

ವರ್ಷದಿಂದ ವರ್ಷಕ್ಕೆ ದೇಶದಲ್ಲಿ ವಾಹನಗಳ ಸಂಖ್ಯೆಯು ಗಣನೀಯವಾಗಿ ವರ್ಧನೆಯಾಗುತ್ತಿದೆ. ಇನ್ನೊಂದೆಡೆ ಹಳೆಯ ವಾಹನಗಳು ಅತಿ ಮಾರಕ ಮಿತಿ ಮೀರಿದ ವಾಯು ಮಾಲಿನ್ಯ ಉಗುಳುತ್ತಾ ಈಗಲೂ ರಸ್ತೆಗಳಲ್ಲಿ ಓಡಾಟುತ್ತಿದೆ. ಸುಸ್ಥಿರ ಪರಿಸರಕ್ಕೆ ಮಾರಕವಾಗಿರುವ ಈ ಎಲ್ಲ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಹೊಗೆ ಮಾಲಿನ್ಯ ಗುಣಮಟ್ಟತೆಯನ್ನು ಕೇಂದ್ರ ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಲು ಬದ್ಧವಾಗಿದೆ.

ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

ಯುರೋಪ್ ನಲ್ಲಿ ಜಾರಿಗೆ ಬಂದಿರುವುದಕ್ಕೆ ಸಮಾನವಾಗಿ ಭಾರತದಲ್ಲೂ ಭಾರತ್ ಸ್ಟೇಜ್ ಸುರಕ್ಷಾ ಗುಣಮಟ್ಟತೆಯನ್ನು ಅನುಸರಿಸಲಾಗುತ್ತಿದೆ. ಹೊಸದಾಗಿ ನಿರ್ಮಾಣವಾಗುವ ಪ್ರತಿಯೊಂದು ವಾಹನವು ಈ ಸುರಕ್ಷಾ ಮಾಪನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

2000ನೇ ಇಸವಿಯಲ್ಲಿ ಭಾರತ್ ಸ್ಟೇಜ್ ವಾಹನ ಹೊಗೆ ಮಾಲಿನ್ಯ ನಿಯಂತ್ರಣವು ಮೊದಲ ಬಾರಿಗೆ ಜಾರಿಗೆ ಬಂದಿತ್ತು. ಟು ಸ್ಟ್ರೋಕ್ ಬೈಕ್ ಹಾಗೂ ಮಾರುತಿ 800 ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಇವೆಲ್ಲದರ ಭಾಗವಾಗಿದೆ.

ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

ಭಾರತವೀಗ ಭಾರತ್ ಸ್ಟೇಜ್ IV (ಬಿಎಸ್ IV) ಎಮಿಷನ್ ಸ್ಟ್ಯಾಂಡರ್ಡ್ ಗೆ ಕಾಲಿಡುತ್ತಿದ್ದು, 2017 ಎಪ್ರಿಲ್ ಒಂದರಂದು ಜಾರಿಗೆ ಬರಲಿದೆ. ಅಂದರೆ ಈ ನಿಗದಿತ ದಿನಾಂಕದ ಬಳಿಕ ಭಾರತ್ ಸ್ಟೇಜ್ IV ಮಾನ್ಯತೆ ಪಡೆದ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸಂಚರಿಸುವ ಅವಕಾಶವಿರುತ್ತದೆ.

ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

ಈ ಮಹತ್ತರ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸುವುದು ಕೇಂದ್ರ ಸಚಿವಾಲಯದ ಯೋಜನೆಯಾಗಿದೆ. ಇದರಂಗವಾಗಿ 2015 ಅಕ್ಟೋಬರ್ 01ರಂದು ಜಮ್ಮು ಮತ್ತು ಕಾಶ್ಮೀರ (ಲೇಹ್ ಮತ್ತು ಕಾರ್ಗಿಲ್ ಹೊರತುಪಡಿಸಿ), ಪಂಜಾಬ್, ಹರಿಯಾಮ, ಹಿಮಾಚಲ ಪ್ರದೇಶ, ಉತ್ತರಖಂಡ ಮತ್ತು ರಾಜಸ್ತಾನದ ಹನುಮಾನ್ ಗರ್ ಹಾಗೂ ಶ್ರೀ ಗಂಗಾನಗರ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಉತ್ತರ ಪ್ರದೇಶದ 23 ಜಿಲ್ಲೆಗಳು ಇದರಲ್ಲಿ ಸೇರಲಿದೆ.

ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

ತದಾ ಬಳಿಕ 2016 ಎಪ್ರಿಲ್ 01ರಂದು ಕರ್ನಾಟಕ ಸೇರಿದಂತೆ ತೆಲಂಗಾಣ, ಒಡಿಸ್ಸಾ, ಗೋವಾ, ದಮಾನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಮುಂಬೈನ ಜಿಲ್ಲೆಗಳು, ಮಹಾರಾಷ್ಟ್ರದ ಥಾಣೆ ಮತ್ತು ಪುಣೆ ಹಾಗೂ ಇನ್ನು ಕೆಲವು ಗುಜರಾತ್ ನಗರಗಳಲ್ಲೂ ಜಾರಿಗೆ ಬರಲಿದೆ.

ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಬಿಎಸ್ IV ಗುಣಮಟ್ಟದ ಇಂಧನಗಳನ್ನು 2010 ಎಪ್ರಿಲ್ 01ರಿಂದಲೇ ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಅಹಮಾದಾಬಾದ್, ಬೆಂಗಳೂರು, ಹೈದರಾಬಾದ್, ಪುಣೆ, ಕಾನ್ಪುರ, ಸೂರತ್, ಆಗ್ರ, ಲಕ್ನೋ ಮತ್ತು ಶೋಲಾಪುರದಲ್ಲಿ ವಿತರಣೆಯನ್ನು ಆರಂಭಿಸಿತ್ತು.

Most Read Articles

Kannada
English summary
Bharat Stage emission standards
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X