ಬಿಎಸ್-3 ಮತ್ತು ಬಿಎಸ್-4 ಬಗ್ಗೆ ಗೊಂದಲ- ಹೊಸ ವಾಹನಗಳ ನೋಂದಣಿಗೆ ಬ್ರೇಕ್

Written By:

ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ ತಂದಿದ್ದ ಸುಪ್ರೀಂಕೋರ್ಟ್, ಏಪ್ರಿಲ್ 1 ರಿಂದಲೇ ಬಿಎಸ್-3 ಎಂಜಿನ್ ಸಾಮರ್ಥ್ಯದ ಎಲ್ಲಾ ವಾಹನಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಇದೀಗ ಬಿಎಸ್-4 ವಾಹನಗಳು ಮಾತ್ರ ಉತ್ಪಾದನೆಯಾಗುತ್ತಿದ್ದು, ಹೊಸ ವಾಹನಗಳ ನೋಂದಣಿಗೂ ಅಡ್ಡಿಯಾಗುತ್ತಿದೆ.

ಇದಕ್ಕೆ ಪ್ರಮುಖ ಕಾರಣ ಬಿಸ್-4 ಎಂಜಿನ್‌ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು. ಹೀಗಾಗಿ ಹೊಸ ವಾಹನಗಳ ಬಗ್ಗೆ ಅನುಮಾನುಗಳು ಶುರುವಾಗಿದ್ದು, ತಾತ್ಕಾಲಿಕವಾಗಿ ನೋಂದಣಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಎಪ್ರಿಲ್ 1ರಿಂದ ಜಾರಿಯಾದ ಕಾಯ್ದೆ ಪ್ರಕಾರ ಬಿಎಸ್-4 ವಾಹನಗಳು ಮಾತ್ರ ನೋಂದಣಿಯಾಗಬೇಕು. ಆದ್ರೆ ಉತ್ಪಾದಕರಿಂದ ನೋಂದಣಾಧಿಕಾರಿಗಳಿಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದ ಹಿನ್ನೆಲೆ ತಮಿಳುನಾಡಿನ ಚೆನ್ನೈ ಸೇರಿದಂತೆ ಹಲವೆಡೆ ಹೊಸ ಬೈಕ್‌ ಗಳ ನೋಂದಣಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಪ್ರಮುಖ ಬೈಕ್ ಮಾದರಿಗಳಿಗೆ ಸಂಕಷ್ಟ
ಹೌದು ಬಿಎಸ್-4 ಎಂಜಿನ್ ಅಳವಡಿಕೆ ಕುರಿತಂತೆ ಯಮಹಾ, ಹೀರೋ ಮತ್ತು ಟಿವಿಎಸ್ ಸಂಸ್ಥೆಗಳಿಗೆ ಸಂಕಷ್ಟ ಎದುರಾಗಿದೆ. ಹೊಸ ಎಂಜಿನ್ ಉತ್ಪಾದನೆ ಕುರಿತಂತೆ ಆರ್‌ಟಿಓ ಸಂಸ್ಥೆಗಳಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ ನೋಂದಣಿ ಬಂದ್ ಮಾಡಲಾಗಿದೆ.

ಗೊಂದಲದಲ್ಲಿ ಗ್ರಾಹಕರು
ಸಾವಿರಾರು ರೂಪಾಯಿ ಪಾವತಿಸಿ ಬೈಕ್ ಖರೀದಿ ಮಾಡಿದವರು ಇದೀಗ ಕಣ್ಣೀರು ಹಾಕುವಂತಾಗಿದೆ. ಯಾಕೇಂದ್ರೆ ವಾಹನ ನೋಂದಣಿ ಬಂದ್ ಮಾಡಲಾಗಿದ್ದು, ಹೊಸ ಬೈಕ್‌ಗಳನ್ನು ಅನುಮಾನದಿಂದ ನೋಡುವಂತಾಗಿದೆ.

ಬಿಎಸ್-3 ಮತ್ತು ಬಿಎಸ್-4 ನಡುವಿನ ವ್ಯತ್ಯಾಸ ಪತ್ತೆ ಹಚ್ಚಲು ಆರ್‌ಟಿಓ ಅಧಿಕಾರಿಗಳಿಯೇ ಕಷ್ಟವಾಗುತ್ತಿದ್ದು, ಇನ್ನು ಜನಸಾಮಾನ್ಯರಿಗೆ ಇದು ಅರ್ಥವಾಗದ ಹೊಸ ಸಮಸ್ಯೆ.

ಹೀಗಾಗಿ ಏಪ್ರಿಲ್ 17ರಿಂದಲೇ ಯಮಹಾ, ಹೀರೋ ಮತ್ತು ಟಿವಿಎಸ್ ಸಂಸ್ಥೆಗಳ ಬೈಕ್ ಮಾದರಿಗಳು ಯಾವುದೇ ರೀತಿಯ ನೋಂದಣಿಯಾಗಿಲ್ಲ. ಜೊತೆಗೆ ಬಿಎಸ್-4 ಎಂಜಿನ್ ಕುರಿತಾದ ಸಂಪೂರ್ಣ ಮಾಹಿತಿ ಬರುವ ತನಕ ಯಾವುದೇ ನೋಂದಾಣಿ ಇಲ್ಲ ಎನ್ನಲಾಗುತ್ತಿದೆ.

ಆದ್ರೆ ಕರ್ನಾಟಕದಲ್ಲಿ ಇಂತಹ ಸಮಸ್ಯೆ ಕಂಡು ಬಂದಿಲ್ಲವಾದರೂ ಯಮಹಾ, ಹೀರೋ ಮತ್ತು ಟಿವಿಎಸ್ ಸಂಸ್ಥೆಗಳಿಗಳಿಂದ ಬಿಎಸ್-4 ವಿನ್ಯಾಸಗಳ ಸಂಪೂರ್ಣ ಮಾಹಿತಿ ಕೋರಲಾಗಿದೆ.

ಒಂದು ವೇಳೆ ನಿಗದಿತ ಸಮಯಕ್ಕೆ ಮಾಹಿತಿ ನೀಡದೇ ಹೊದಲ್ಲಿ ಚೆನ್ನೈ ಮಾದರಿಯಲ್ಲೇ ಬೆಂಗಳೂರಿನಲ್ಲೂ ಹೊಸ ಬೈಕ್‍‌ಗಳ ನೋಂದಣಿ ಕಾರ್ಯವನ್ನು ತಡೆಹಿಡಿಯುವ ಸಾಧ್ಯತೆಗಳಿವೆ.

ಹೀಗಾಗಿ ಗ್ರಾಹಕರು ಬಿಎಸ್-4 ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡೆ ಹೊಸ ವಾಹನಗಳನ್ನು ಖರೀದಿ ಮಾಡುವುದು ಉತ್ತಮ.

English summary
Tamil Nadu RTOs have stopped registering two-wheelers manufactured by Yamaha, Hero and TVS.
Story first published: Saturday, April 22, 2017, 10:55 [IST]
Please Wait while comments are loading...

Latest Photos