ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

Posted By: Staff

ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಕಾವೇರುತ್ತಿದ್ದು, ಡೋನಾಲ್ಡ್ ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ನಡುವೆ ಕಠಿಣ ಸ್ಪರ್ಧಾಕಣ ಏರ್ಪಟ್ಟಿದೆ. ಅತ್ತ ಅಮೆರಿಕ ಅಧ್ಯಕ್ಷರನ್ನು ಬರ ಮಾಡಿಕೊಳ್ಳಲು ನೂತನ ಲಿಮೊಸಿನ್ ಕಾರಿನ ನಿರ್ಮಾಣವು ಭಾರಿ ಜೋರಾಗಿ ನಡೆಯುತ್ತಿದೆ.

ಇತ್ತೀಚೆಗಷ್ಟೇ ನಾವು ಭವಿಷ್ಯದ ಅಮೆರಿಕ ಅಧ್ಯಕ್ಷರಿಗೆ ಏರ್ ಫೋರ್ಸ್ ಒನ್ ವಿಮಾನ ನಿರ್ಮಿಸುವ ಕುರಿತು ವರದಿ ಮಾಡಿದ್ದೆವು. ಇದು 2024ರ ವೇಳೆಯಲ್ಲಷ್ಟೇ ಸೇವೆಗೆ ಲಭ್ಯವಾಗಲಿದೆ. ಈ ನಡುವೆ ಗರಿಷ್ಠ ಭದ್ರತೆಗಳನ್ನು ಒಳಗೊಂಡಿರುವ ಲಿಮೊ ಕಾರನ್ನು ನಿರ್ಮಿಸಲಾಗಿದೆ.

ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

ಅಮೆರಿಕ ಅಧ್ಯಕ್ಷರ ಲಿಮೊ ಕಾರು ಟೆಸ್ಟಿಂಗ್ ಪ್ರಕ್ರಿಯೆಯು ಬಹಳ ರಹಸ್ಯವಾಗಿ ನಡೆಯುತ್ತಿದೆ. ಈ ನಡುವೆ ರಹಸ್ಯ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

ಈಗಿರುವ ಲಿಮೊ ಕಾರಿನಂತೆ ನೂತನ ಕ್ಯಾಡಿಲಾಕ್ ಕಾರನ್ನು ಜನರಲ್ ಮೋಟಾರ್ಸ್ ಸಂಸ್ಥೆಯು ನೀಡಲಿದೆ. ಇದು ಕೂಡಾ ಹೆವಿ ಡ್ಯೂಟಿ ಟ್ರಕ್ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

ಬುಲೆಟ್ ಫ್ರೂಪ್, ಬಾಂಬ್ ಫ್ರೂಪ್ ಜೊತೆಗೆ ಗರಿಷ್ಠ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಲ್ಲದೆ ಸುರಕ್ಷಾ ದೃಷ್ಟಿಕೋನದಲ್ಲಿ ಇನ್ನಿತರ ಅತ್ಯಾಧುನಿಕ ಸುರಕ್ಷಾ ವೈಶಿಷ್ಟ್ಯಗಳನ್ನು ಗೌಪ್ಯವಾಗಿಡಲಾಗಿದೆ.

ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

ರಾಕೆಟ್ ದಾಳಿಯಿಂದಲೂ ಅಮೆರಿಕ ಅಧ್ಯಕ್ಷರ ಲಿಮೊ ಕಾರು ಪಾರಾಗಲಿದೆ. ಇದಕ್ಕೆ ಸಂಕ್ಷಿಪ್ತವಾಗಿ 'ದಿ ಬೀಸ್ಟ್' ಎಂಬ ಹೆಸರನ್ನಿಡಲಾಗಿದೆ.

ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

ಇನ್ನು ಟೈರ್ ಬ್ಲಾಸ್ಟ್ ಆದರೂ ನಿರ್ದಿಷ್ಟ ಕೀ.ಮೀ. ಗಳ ದೂರದ ವರೆಗೆ ಸರಾಸರಿ ಅತ್ಯುತ್ತಮ ವೇಗದಲ್ಲಿ ಬರಿ ಫ್ಲ್ಯಾಟ್ ಚಕ್ರದಿಂದ ಚಲಿಸಲಿದೆ.

ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

ತುರ್ತು ಅಗತ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ವೈದ್ಯಕೀಯ ಸೇವೆಯನ್ನು ನೀಡಲಾಗುವುದು. ಇನ್ನು ಗರಿಷ್ಠ ಸಂವಹನ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ.

ನೂತನ ಅಮೆರಿಕ ಅಧ್ಯಕ್ಷರಿಗೆ ಲಿಮೊ ಗಾಡಿಯ ಸರ್ಪಗಾವಲು

ಈಗಿರುವ ಲಿಮೊಸಿನ್ ಕಾರನ್ನು 2009ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಗಿಟ್ಟಿಸಿಕೊಂಡಿದ್ದರು. ನೂತನ ಕಾರೀಗ ಹೊಸ ಅಧ್ಯಕ್ಷರ ಪ್ರಮಾಣ ವಚನದ ವೇಳೆ ಹಸ್ತಾಂತರವಾಗುವ ಸಂಭವವಿದೆ.

English summary
Cadillac New Presidential Limo Spy Pics
Please Wait while comments are loading...

Latest Photos