ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

Written By:

ಅಷ್ಟಕ್ಕೂ ಕಾರು ಬ್ಯಾಟರಿ ಮುಟ್ಟಿದ ತಕ್ಷಣ ಶಾಕ್ ತಗಲುತ್ತಾ? ಅನೇಕರು ಕಾರು ಬ್ಯಾಟರಿಯನ್ನು ಮುಟ್ಟಲು ಹಿಂಜರಿಯುತ್ತಾರೆ. ಯಾಕೆಂದರೆ ಕಾರು ಬ್ಯಾಟರಿಯನ್ನು ಸ್ಪರ್ಶಿಸುವುದು ಜೀವಕ್ಕೆ ಅಪಾಯ ಎಂಬ ತಪ್ಪು ಕಲ್ಪನೆ ಹೊಂದಿರುತ್ತಾರೆ.

ಕಾರಿನ ಘಟಕಗಳಿಗೂ ಕಾಲಮಿತಿ ಇದೆ ಗೊತ್ತಾ?

ಇನ್ನು ಸತ್ಯಾಂಶ ಬಗ್ಗೆ ತಿಳಿಯೋಣ. ನಿಮ್ಮ ಕಾರಿನ 12 ವೋಲ್ಟ್ ಬ್ಯಾಟರಿಯಿಂದ ಹೇಗೆ ಶಾಕ್ ಹೊಡೆಯಲು ಸಾಧ್ಯ ಹೇಳಿ ನೋಡೋಣ? ಅಂದ ಮಾತ್ರಕ್ಕೆ ನೀವು ಅಪಾಯ ಆಹ್ವಾನಿಸಬಹುದೇ? ಖಂಡಿತ ಇಲ್ಲ. ಮುಂದಿನ ಸ್ಲೈಡರ್ ಕ್ಲಿಕ್ಕಿಸುತ್ತಾ ಕಾರು ಬ್ಯಾಟರಿ ಬಗೆಗಿನ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳ ಬಗ್ಗೆ ವಿವರವನ್ನು ಪಡೆದುಕೊಳ್ಳಿರಿ...

ಮಿಥ್ಯಾ ಕಲ್ಪನೆ

ಮಿಥ್ಯಾ ಕಲ್ಪನೆ

ಕಾರು ಬ್ಯಾಟರಿಗಳನ್ನು ಮುಟ್ಟಿದಾಗ ಉಂಟಾಗುವ ಶಾಕ್‌ನಿಂದಾಗಿ ನೀವು ಸಾಯಬಹುದು. ಹಾಗಾಗಿ ಇದರ ಪಾಸಿಟಿಪ್ ಅಥವಾ ನೆಗೆಟಿವ್ ಟರ್ಮಿನಲ್ ಯಾವುದೇ ಕಾರಣಕ್ಕೂ ಮುಟ್ಟಬಾರದು.

ಸತ್ಯಾಂಶ

ಸತ್ಯಾಂಶ

12 ವೋಲ್ಟನ್ನು ತಡೆಯುವ ಶಕ್ತಿಯನ್ನು ನಿಮ್ಮ ದೇಹ ಹೊಂದಿದ್ದು, ಯಾವುದೇ ಅಪಾಯ ಸಂಭವಿಸುವುದಿಲ್ಲ. ಹಾಗಾಗಿ ಕಾರು ಬ್ಯಾಟರಿಯಿಂದ ಶಾಕ್ ತಗುಲಲಿದೆ ಎಂಬುದು ಮಿಥ್ಯಾ ಕಲ್ಪನೆಯಾಗಿದೆ.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ನೀವು ಕಾರು ಬ್ಯಾಟರಿಗಳನ್ನು ಮುಟ್ಟುವ ಗೋಚಿಗೆ ಹೋಗುವುದೇ ಬೇಡ ಎಂಬ ನಿಲುವನ್ನು ಹೊಂದಿರಬಹುದು. ಹಾಗಿದ್ದರೂ ಲೋಹದ ಕಂಕಣ, ನೆಕ್ಲೇಸ್ ಅಥವಾ ಉಂಗುರ ಧರಿಸಿದರೂ ಇವುಗಳು ಬ್ಯಾಟರಿಯ ಪ್ಲಸ್ ಹಾಗೂ ನೆಗೆಟಿವ್ ಟರ್ಮಿನಲ್‌ಗೆ ಸ್ಪರ್ಶಿಸಿದ್ದಲ್ಲಿ ಸಣ್ಣ ಪ್ರಮಾಣದಲ್ಲಿ ಸುಟ್ಟು ಹೋಗುವ ಸಾಧ್ಯತೆಯಿದೆ.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ಕಾರು ಬ್ಯಾಟರಿಯ ಪಾಸಿಟಿವ್ ಟರ್ಮಿನಲನ್ನು ನೀವು ಸ್ಪರ್ಶಿಸಿದ ಬಳಿಕ ನಿಮ್ಮ ದೇಹದ ಯಾವುದೇ ಭಾಗವು ಕಾರನ್ನು ಸ್ಪರ್ಶಿಸಿದರೂ ನೆಗೆಟಿವ್ ಸಂಪರ್ಕ ತಗುಲಲಿದಂತೆ. ಯಾಕೆಂದರೆ ಕಾರಿನ ಸಂಪೂರ್ಣ ಲೋಹದ ಭಾಗವು ಬ್ಯಾಟರಿ ಜತೆ ನೆಗೆಟಿವ್ ಸಂಪರ್ಕ ಹೊಂದಿರುತ್ತದೆ.

ಇದೀಗ ಯಾವೆಲ್ಲ ಕಾರಣಗಳಿಂದಾಗಿ ಕಾರು ಬ್ಯಾಟರಿಯಿಂದ ಹಾನಿಯುಂಟಾಗುವ ಸಾಧ್ಯತೆಯಿದೆ ಎಂಬುದನ್ನು ತಿಳಿದುಕೊಳ್ಳೋಣ.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ಕಾರು ಬ್ಯಾಟರಿಯಿಂದ ಆಸಿಡ್ ಲೀಕ್ ಆದ್ದಲ್ಲಿ ನಿಮ್ಮ ಚರ್ಮ ಸುಟ್ಟು ಹೋಗುವ ಸಾಧ್ಯತೆಯಿದೆ.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ಇನ್ನು ಕಾರಿನ ಬ್ಯಾಟರಿಗೆ ಬೆಂಕಿಯ ಕಿಡಿ ತಗುಲಿದರೆ ಹೈಡ್ರೋಜನ್ ಗ್ಯಾಸ್ ದಹನವಾಗಿ ಇದರಿಂದ ಆಸಿಡ್‌ ಲೀಕ್ ಆಗುವ ಸಾಧ್ಯತೆಯಿದೆ.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ಕಾರು ಬ್ಯಾಟರಿ ಟರ್ಮಿನಲ್ ಮೇಲೆ ಇತರ ಲೋಹದ ಭಾಗಗಳ ಬಳಕೆಯಿಂದಾಗಿ ಲೋಹ ಬಿಸಿಯಾಗುವ ಸಾಧ್ಯತೆಯಿದ್ದು, ಇದನ್ನು ಸ್ಪರ್ಶಿಸಿದ್ದಲ್ಲಿ ಬಿಸಿ ತಗುಲಲಿದೆ.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ಇನ್ನು ಕೆಲವೊಂದು ಬಾರಿ ಕೇಬಲ್‌ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಗಳಿದ್ದು, ಇದರಿಂದಲೂ ಬೆಂಕಿನ ಕಿಡಿ ಹೊತ್ತಿಕೊಳ್ಳಬಹುದು.

ಕಾರು ಬ್ಯಾಟರಿಗಳು ಶಾಕ್ ಹೊಡೆಯುತ್ತಾ?

ಆಟೋಮೋಟಿವ್ ಬ್ಯಾಟರಿ ಎಂದರಿಯಲ್ಪಡುವ ಕಾರು ಎಸ್‌ಎಲ್‌ಐ ಬ್ಯಾಟರಿಗಳು ಮರು ಚಾರ್ಚ್ ಮಾಡುವ ಸಾಮರ್ಥ್ಯ ಹೊಂದಿದ್ದು, ವಾಹನಗಳಿಗೆ ಚೈತನ್ಯವನ್ನು ತುಂಬುತ್ತದೆ. ಇದು ಸ್ಟಾರ್ಟಿಂಗ್, ಲೈಟಿಂಗ್ ಹಾಗೂ ಇಗ್ನಿಷನ್‌ಗಳೆಂಬ ಮೂರು ಅಂಶಗಳನ್ನು ಅಡಗಿರುತ್ತದೆ. ಇದು ಆರು ಗಾಲ್ವನಿಕ್ ಸೆಲ್‌ಗಳನ್ನು (galvanic cell) ಹೊಂದಿದ್ದು, ತಾಲ ಒಂದು ಗಾಲ್ವನಿಕ್ ಸೆಲ್ 2.1 ವೋಲ್ಟ್ ಜತೆ ಸೇರಿ ಒಟ್ಟು 12.6 ವೋಲ್ಟ್ ಉತ್ಪಾದಿಸುತ್ತದೆ.

English summary
Have you ever received a shock from a car battery? The minute you are asked to hold the red and black ends of the jumper cable with your bare hands all you think about is a battery shock!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark