ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದರೂ ಕೆಲವು ಏರಿಯಾಗಳಲ್ಲಿ ಮಾತ್ರ ಕಳ್ಳತನ ಪ್ರಕರಣಗಳಿಗೆ ಕೊರತೆ ಇಲ್ಲ ಅಂದ್ರೆ ನಂಬಲೇಬೇಕು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದರೂ ಕೆಲವು ಏರಿಯಾಗಳಲ್ಲಿ ಮಾತ್ರ ಕಳ್ಳತನ ಪ್ರಕರಣಗಳಿಗೆ ಕೊರತೆ ಇಲ್ಲ ಅಂದ್ರೆ ನಂಬಲೇಬೇಕು. ಇದಕ್ಕೆ ಸಾಕ್ಷಿ ಅಂದ್ರೆ ಕಳೆದ ಎರಡು ಮೂರು ದಿನಗಳ ಹಿಂದೆ ನಡೆದ ಕಾರು ಚಕ್ರಗಳ ಕಳ್ಳತನ ಪ್ರಕರಣವೊಂದು ಬೆಂಗಳೂರು ಎಷ್ಟು ಸೇಫ್ ಆಗಿದೆ ಅನ್ನೋದಕ್ಕೆ ಪ್ರಮುಖ ಉದಾಹರಣೆಯಾಗಿದೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಹೌದು, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯ ಜೊತೆ ಜೊತೆಗೆ ಪಾರ್ಕಿಂಗ್ ಸಮಸ್ಯೆ ಕೂಡಾ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೀಗಾಗಿ ಪಾರ್ಕಿಂಗ್ ಸಮಸ್ಯೆ ಇರುವ ಕಾರು ಮಾಲೀಕರು ಮನೆ ಮುಂದಿನ ಸಾರ್ವಜನಿಕ ಜಾಗಗಳಲ್ಲಿ ಕಾರ್ ಪಾರ್ಕ್ ಮಾಡುವುದು ಸಾಮಾನ್ಯವಾಗುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರ ತಂಡವೊಂದು ಕಾರಿನ ಚಕ್ರಗಳನ್ನಷ್ಟೇ ಕಳ್ಳತನ ಮಾಡುತ್ತಿರುವುದು ಕಾರು ಮಾಲೀಕರಿಗೆ ತಲೆ ನೋವಾಗಿ ಪರಿಣಮಿಸಿದೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ರಾತ್ರಿ ವೇಳೆಯೇ ತಮ್ಮ ಕೈಚೆಳಕ ತೊರುವ ಕಳ್ಳರ ಗುಂಪು ಕಾರಿನ ಚಕ್ರಗಳನ್ನು ಮಾತ್ರವೇ ಕಳ್ಳತನ ಮಾಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಾರುಗಳನ್ನೇ ಟಾರ್ಗೆಟ್ ಮಾಡಿ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಕಳ್ಳತನಕ್ಕೂ ಮುನ್ನ ಕಾರು ನಿಲ್ಲುವ ಸ್ಥಳ ಹಾಗೂ ಪಾರ್ಕಿಂಗ್ ಸ್ಥಳದ ಸುತ್ತಮತ್ತಲಿನ ಸಿಸಿಟಿವಿಗಳ ಬಗೆಗೆ ಮಾಹಿತಿ ಕಲೆಹಾಕುವ ಖದೀಮರು, ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರನ್ನೇ ಯಾಮಾರಿಸಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕಾರಿನ ಚಕ್ರಗಳನ್ನು ಮಾತ್ರವೇ ಕಳ್ಳತನ ಮಾಡುವ ಈ ಖರೀದಿಮರು ಕಳ್ಳತನದಲ್ಲೂ ಮಾಸ್ಟರ್ ಪ್ಲ್ಯಾನ್ ಉಪಯೋಗಿಸುವುದಷ್ಟೇ ಅಲ್ಲದೇ ಕಾರಿನ ಇತರೆ ಭಾಗಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಎಚ್ಚರ ವಹಿಸಿ ಚಕ್ರಗಳನ್ನು ಬಿಚ್ಚಿಕೊಳ್ಳುತ್ತಾರೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಕಳೆದ 2 ದಿನಗಳ ಹಿಂದಷ್ಟೇ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಗಾಳದ ಮುಖ್ಯ ರಸ್ತೆಯಲ್ಲೇ ಅಮಾಯಕ ಬಡ ಚಾಲಕರನ್ನೇ ಗುರಿಯಾಗಿಸಿಕೊಂಡಿರುವ ಕಳ್ಳರು ಮಾರುತಿ ಸುಜುಕಿ ಡಿಸೈರ್ ಟೂರ್ ಕಾರಿನ ನಾಲ್ಕು ಚಕ್ರಗಳನ್ನು ಕಳ್ಳತನ ಮಾಡಿದ್ದಾರೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಜನಸಂದಣಿ ಇರುವ ಪ್ರದೇಶದಲ್ಲೇ ಈ ಕಳ್ಳತನ ಪ್ರಕರಣ ನಡೆದಿದ್ದು, ಹೊಸ ಕಾರು ಖರೀದಿ ಮಾಡಿ ಇನ್ನು ಒಂದು ವಾರವು ಕೂಡಾ ಆಗಿರಲ್ಲಿ ಎನ್ನವಾಗಿದೆ. ಹೀಗಾಗಿ ಕಾರು ಮಾಲೀಕರು ಇಂತಹ ಪ್ರಕರಣಗಳ ಎಚ್ಚೇತ್ತುಕೊಳ್ಳುವ ಅವಶ್ಯಕತೆಯಿದ್ದು, ಎಲ್ಲೆಂದರಲ್ಲೇ ಕಾರು ಪಾರ್ಕ್ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಇದಷ್ಟೇ ಅಲ್ಲದೇ ಕಳೆದ ಏಪ್ರಿಲ್‌ನಲ್ಲೂ ಸಹ ಬೆಂಗಳೂರಿನ ಟಾಟಾ ನಗರದಲ್ಲೂ ಇಂತದ್ದೆ ಪ್ರಕರಣ ನಡೆದ್ದಲ್ಲದೇ ಸುಮಾರು 5 ಕಾರುಗಳ ಚಕ್ರಗಳನ್ನಷ್ಟೇ ಕಳ್ಳತನ ಮಾಡಿದ್ದ ಕಳ್ಳರ ಗುಂಪು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಈ ಕೃತ್ಯವನ್ನು ನಡೆಸಿದ್ದರು.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಇದೀಗ ಮತ್ತೆ ಕಾರಿನ ಚಕ್ರಗಳನ್ನು ಕದಿಯುವ ಗ್ಯಾಂಗ್ ಆಕ್ಟಿವ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನೇ ಟಾರ್ಗೇಟ್ ಮಾಡಿ ಕಳ್ಳತನ ಮಾಡಲು ಸ್ಕೇಚ್ ಹಾಕುತ್ತಿದ್ದಾರೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾರು ಮತ್ತು ಬೈಕ್‌ಗಳನ್ನು ನಿಲ್ಲಿಸುವಾಗ ಅಗತ್ಯ ಸುರಕ್ಷಾ ಕ್ರಮಗಳಿಲ್ಲದೇ ಪಾರ್ಕ್ ಮಾಡಲೇಬೇಡಿ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಕಾರು ಕಳ್ಳತನ ತಡೆಯಲು ಸರಳ ವಿಧಾನಗಳು:

"ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ" ಎಂಬ ವಾಕ್ಯ ಎಷ್ಟು ಅರ್ಥಗರ್ಭಿತವಾಗಿದೆಯಲ್ಲವೇ? ತಂತ್ರಜ್ಞಾನ ಮುಂದುವರಿದಂತೆ ಅದರ ದುರ್ಬಳಕೆಯು ಜಾಸ್ತಿಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ಹಲವಾರು ದಶಕಗಳಿಂದ ಕಾರುಗಳ ತಂತ್ರಜ್ಞಾನಗಳಲ್ಲಿ ಭಾರೀ ಅಭಿವೃದ್ಧಿಯಾಗಿದೆ. ಆದರೂ ಇವೆಲ್ಲವನ್ನೂ ತಮ್ಮ ಕಪಟ ತಂತ್ರದ ಖದೀಮರು ಮೆಟ್ಟಿ ನಿಂತಿದ್ದಾರೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಡೋರ್ ಲಾಕ್ ಮತ್ತು ಗಾಜು ಮೇಲಕ್ಕೆ ಸರಿಸುವುದು

ಇದು ಸಾಮಾನ್ಯವಾಗಿ ಎಲ್ಲರೂ ಮಾಡಲೇಬೇಕಾದ ಪ್ರವತ್ತಿ. ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಬಳಿಕ ತರಾತುರಿಯಲ್ಲಿ ಡೋರ್ ಲಾಕ್ ಮಾಡುವುದಾಗಲಿ, ಗಾಜುಗಳನ್ನು ಮೇಲಕ್ಕೆ ಸರಿಸುವುದನ್ನು ಮರೆತುಬಿಡುತ್ತೇವೆ. ಪರಿಣಾಮ ದೊಡ್ಡ ಬೆಲೆಯನ್ನೇ ತೆರಬೇಕಾಗಿತ್ತು. ರಿಮೋಟ್ ಕೀ ನಿಯಂತ್ರಿತ ಕಾರಿನಲ್ಲಿ ಒಂದೇ ಬಟನ್ ನಲ್ಲಿ ಕಾರು ಮಾಡಬಹುದಾಗಿದ್ದರೂ ಮ್ಯಾನುವಲ್ ನಲ್ಲಿ ಇಂತಹ ಅನುಕೂಲಗಳಿರುವುದಿಲ್ಲ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಸುರಕ್ಷಿತ ಪಾರ್ಕಿಂಗ್

ಯಾವತ್ತೂ ವಾಹನ ನಿಲುಗಡೆಗಾಗಿ ಅತಿ ಹೆಚ್ಚು ಸುರಕ್ಷಿತ ಪ್ರದೇಶವನ್ನು ಆಯ್ಕೆ ಮಾಡಿ. ನಿಮಗೆ ಸೇಫ್ ಎಂದು ತೋಚುವ ಪ್ರದೇಶಗಳಲ್ಲಿ ಮಾತ್ರ ವಾಹನ ನಿಲುಗಡೆಗಾಗಿ ಅವಕಾಶ ಕೊಡಿ. ರಸ್ತೆ ಬದಿ, ಅಪರಿಚಿತ ಜಾಗ ಮುಂತಾದ ಕಡೆಗಳಲ್ಲಿ ವಾಹನ ಪಾರ್ಕಿಂಗ್ ಗೆ ಅನುವು ಮಾಡಿಕೊಡದಿರಿ. ಇನ್ನು ಅನಿವಾರ್ಯವೆನಿಸಿದ್ದಲ್ಲಿ ಹೆಚ್ಚು ಜನ ಸಂಚಾರವಿರುವ ಪ್ರದೇಗಳಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡಿ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಐಷಾರಾಮಿ ವಸ್ತುಗಳನ್ನು ಇಡಬೇಡಿ

ಕಾರಲ್ಲಿ ಲ್ಯಾಪ್ ಟಾಪ್, ಮೊಬೈಲ್, ಐಪ್ಯಾಡ್, ಐಫೋನ್, ಹ್ಯಾಂಡಲ್ ಬಾರ್, ಪರ್ಸ್ ಮುಂತಾದ ಬೆಲೆ ಬಾಳುವ ಡಿವೈಸ್ ಗಳನ್ನು ಇಟ್ಟುಕೊಂಡು ಪಯಣಿಸುವುದು ಬೇಡ. ಇದು ನಿಮ್ಮ ಕಾರ ಮೇಲೆ ಆಕ್ರಮಣ ಮಾಡುವ ಕಳ್ಳರಿಗೆ ಇನ್ನಷ್ಟು ಹುಮ್ಮಸ್ಸು ನೀಡಿದಂತಾಗುವುದು.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಚಲಿಸದಂತೆ ಮಾಡು (Immobiliser)

ಇದು ಅತ್ಯಂತ ಪರಿಣಾಮಕಾರಿ ಆಧುನಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇತ್ತೇಚಿಗಿನ ಕಾರುಗಳನ್ನು ಕದಿಯುವುದನ್ನು ತಡೆಯಲು ಕಾರುಗಳಲ್ಲೇ ಇಂಮೊಬಿಲೈಜರ್ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಇದೊಂದು ಎಲೆಕ್ಟ್ರಾನಿಕ್ ಸೆಕ್ಯೂರಿಟಿ ಡಿವೈಸ್ ಆಗಿದ್ದು, ಕಳ್ಳರು ಕಾರನ್ನು ಒಡೆದು ಒಳಪ್ರವೇಶಿಸಿದರೂ ಕಾರನ್ನು ಅಪಹರಿಸುವುದು ಇನ್ನು ದೂರದ ಮಾತು. ಯಾಕೆಂದರೆ ಇದರಲ್ಲಿ ಕಂಪ್ಯೂಟರ್ ಚಿಪ್ ಹೊಂದಿದ ಕೀಯು ಎಂಜಿನ್ ಜೊತೆ ಸಂಪರ್ಕದಲ್ಲಿರುತ್ತಿದ್ದು, ನಕಲಿ ಕೀ ಬಳಸಿ ಗಾಡಿ ಸ್ಟ್ಯಾರ್ಟ್ ಮಾಡಲು ಪ್ರಯತ್ನಿಸಿದರೂ ಪ್ರಯೋಜನ ಸಿಗದು

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಜಿಪಿಎಸ್ ಟ್ರ್ಯಾಕರ್

ಇನ್ನು ಸ್ವಲ್ಪ ಮುಂದಕ್ಕೆ ಯೋಚಿಸಿದರೆ ಕಾರು ಕಳ್ಳತವನ್ನು ತಡೆಯಲು ಜಿಪಿಎಸ್ ಟ್ರ್ಯಾಕರ್ ವ್ಯವಸ್ಥೆ ಲಭ್ಯವಿರುತ್ತದೆ. ಇದು ಸ್ಪಲ್ವ ದುಬಾರೆನಿಸಿದರೆ ಒಮ್ಮೆ ಹೂಡಿಕೆ ಮಾಡಿದರೆ ಮತ್ತೆ ಕಾರು ರಕ್ಷಣೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ನಕಲಿ ಸ್ಟಿಕ್ಕರ್

ಬಹುತೇಕ ಎಲ್ಲ ಖದೀಮರಿಗೂ ಕಾರು ಅಲರಾಂ ಹೇಗೆ ಆಫ್ ಮಾಡಿಕೊಳ್ಳಬೇಕು ಎಂಬುದು ಗೊತ್ತಿರುತ್ತದೆ. ಹಾಗಿದ್ದರೂ ಚುರುಕು ಬುದ್ಧಿವಂತಿಕೆಯಿಂದ ಕಳ್ಳರ ಹಾದಿ ತಪ್ಪಿಸಬಹುದು. ಇದಕ್ಕಾಗಿ ನಕಲಿ ಅಲರಾಂ ಸ್ಟಿಕ್ಕರ್ ಗಳನ್ನು ಕಾರಲ್ಲಿ ಅಂಟಿಸಿಕೊಳ್ಳಬಹುದಾಗಿದೆ. ನಕಲಿ ಅಲರಾಂಗಳನ್ನೇ ಜೋಡಣೆ ಮಾಡಿದರೆ ಇನ್ನು ಉತ್ತಮ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಸ್ಟೀರಿಂಗ್ ವೀಲ್ ಲಾಕ್

ಸ್ಟೀರಿಂಗ್ ವೀಲ್ ಲಾಕ್ ಮಾಡಿಟ್ಟುಕೊಳ್ಳುವ ಮೂಲಕ ಕಳ್ಳರ ಬಹುಮೂಲ್ಯ ಸಮಯವನ್ನು ವ್ಯರ್ಥ ಮಾಡಬಹುದು. ಹಾಗೆಯೇ ಬ್ರೇಕ್ ಪೆಡಲ್, ಶಿಫ್ಟರ್, ಸ್ಪೇರ್ ವೀಲ್ ಸೇರಿದಂತೆ ಇನ್ನಿತರ ಹೊರಮೈ ಆಕ್ಸೆಸರಿಗಳಿಗೂ ಇದೇ ನೀತಿ ಅನುಸರಿಸಬಹುದಾಗಿದೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ವಿಐಎನ್ ಸಂಖ್ಯೆ

ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದೆ. ನಿಮ್ಮ ಕಾರಿನ ವಿಐಎನ್ ಸಂಖ್ಯೆಯನ್ನು ಗಾಜು ಅಥವಾ ನಿಮಗೆ ಇಷ್ಟವಾದ ಕಡೆಗಳಲ್ಲಿ ಅಚ್ಚೊತ್ತುವ ಮೂಲಕ ಕಳ್ಳತನ ಸಾಧ್ಯತೆಯನ್ನು ಕಡಿಮೆ ಮಾಡಬಹುದಾಗಿದೆ. ಯಾಕೆಂದರೆ ಇದನ್ನು ಬದಲಾಯಿಸಿಕೊಳ್ಳಲು ಕಳ್ಳರಿಗೆ ಹೆಚ್ಚು ವೆಚ್ಚ ತಗುಲಲಿದೆ.

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ದಾಖಲೆ ಪತ್ರ

ಕಾರಿನ ದಾಖಲಾತಿ ಪತ್ರ, ವಿಮೆ ಅಥವಾ ಲೈಸನ್ಸ್ ಕಾಗದಗಳ ನೈಜ ಪ್ರತಿಗಳನ್ನು ಕಾರಿನಲ್ಲಿಡಬೇಡಿ. ಯಾಕೆಂದರೆ ಇದರಿಂದ ಕಾರಿನ ಮಾರಾಟ ಸುಲಭವಾಗಲಿದೆ. ಹಾಗೆಯೇ ಇತರ ಯಾವುದೇ ಅಮೂಲ್ಯ ದಾಖಲೆ ಪತ್ರಗಳನ್ನು ಕಾರಿನಲ್ಲಿಡುವ ಪ್ರವೃತ್ತಿಯನ್ನು ಕೈ ಬಿಡುವುದು ಒಳಿತು.

More from DriveSpark

Article Published On: Tuesday, July 10, 2018, 13:40 [IST]
English summary
maruti suzuki dzire tour car wheels stolen in bengaluru.
Read more on crime off beat bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+