ನೆಟ್ಟಿಗರ ಮನಗೆದ್ದ ಮಾಡಿಫೈ ಚೇತಕ್ ಸ್ಕೂಟರ್: ಇದರಲ್ಲಿದೆ ಕಾರಿನ ಸ್ಟೀರಿಂಗ್ ವ್ಹೀಲ್, ಬೆಂಕಿ ಉಗುಳುವ ಎಕ್ಸಾಸ್ಟ್

ಪಂಜಾಬ್ ರಾಜ್ಯದ ಜನರಿಗೆ ವಾಹನಗಳ ಮೇಲೆ ಕ್ರೇಜ್ ಹೆಚ್ಚು ಇದೆ. ಪಂಜಾಬ್ ರಾಜ್ಯದಲ್ಲಿ ವಾಹನಗಳನ್ನು ವಿಭಿನ್ನವಾಗಿ ಮಾಡಿಫೈಗೊಳಿಸುತ್ತಾರೆ. ಅಲ್ಲಿನ ರಸ್ತೆಗಳಲ್ಲಿ ಹೆಚ್ಚು ಮಾಡಿಫೈಗೊಂಡ ಎಸ್‍ಯುವಿಗಳು ಕಾಣಸಿಗುತ್ತದೆ. ಇತ್ತೀಚೆಗೆ ರೇಂಜ್ ರೋವರ್ ಎಸ್‌ಯುವಿಯ ರೀತಿಯಲ್ಲಿ ಕಾಣುವಂತೆ ಕಸ್ಟಮೈಸ್ ಮಾಡಿದ ಮಾರುತಿ ಬ್ರೆಝಾದ ಚಿತ್ರಗಳು ವರದಿ ಮಾಡಿದ್ದೇವೆ.

ಇದೀಗ ಪಂಜಾಬ್ ರಾಜ್ಯದ ಸ್ಕೂಟರ್ ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. Malkitbaj_wa ಎಂಬ ಹೆಸರಿನ Instagram ಪ್ರೊಫೈಲ್ ಹ್ಯಾಂಡಲ್ ಮಾಡಿಫೈಗೊಂಡ ಬಜಾಜ್ ಚೇತಕ್ ಹಲವಾರು ರೀಲ್ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದೆ. ಸಾಮಾನ್ಯ ಹ್ಯಾಂಡಲ್‌ಬಾರ್ ಬದಲಿಗೆ ಕಾರಿನ ಸ್ಟೀರಿಂಗ್ ವೀಲ್ ಅನ್ನು ಸ್ಕೂಟರ್‌ನಲ್ಲಿ ಅಳವಡಿಸಿದ್ದಾರೆ. ಇಷ್ಟೇ ಅಲ್ಲದೇ ಈ ಸ್ಕೂಟರ್ ಮುಂಭಾಗದಲ್ಲಿ ಕಾರಿನ ಅಲಾಯ್ ವ್ಹೀಲ್ ಗಳನ್ನು ಕೂಡ ಅಳವಡಿಸಿದ್ದಾರೆ.

ನೆಟ್ಟಿಗರ ಮನಗೆದ್ದ ಮಾಡಿಫೈ ಚೇತಕ್ ಸ್ಕೂಟರ್

ಈ ವ್ಯಕ್ತಿಯು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಇತರ ಒಂದೆರಡು ವೀಡಿಯೊಗಳಿವೆ, ಅದು ಅದೇ ಸ್ಕೂಟರ್ ಅನ್ನು ಫೈರ್ ಎಕ್ಸಾಸ್ಟ್ ಕಿಟ್ ಅನ್ನು ತೋರಿಸುತ್ತದೆ. ಎಕ್ಸಾಸ್ಟ್ ಬಾರ್ಬೆಕ್ಯೂಗೆ ಸಾಕಷ್ಟು ಉತ್ತಮವಾಗಿದೆಯೇ ಎಂದು ಖಚಿತವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅದೇ ವ್ಯಕ್ತಿ ಅಪ್‌ಲೋಡ್ ಮಾಡಿದ ಫಾಲೋ ಅಪ್ ವೀಡಿಯೊಗಳಲ್ಲಿ ಸ್ಟೀರಿಂಗ್ ವೀಲ್ ಅನ್ನು ಈಗ ಸ್ಕೂಟರ್‌ನ ಮೂಲ ಹ್ಯಾಂಡಲ್‌ಬಾರ್‌ಗೆ ಬದಲಾಯಿಸಲಾಗಿದೆ. ಈ ವ್ಯಕ್ತಿ ವಾಹನಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಅನ್ನು ಹೊಂದಿದ್ದಾರೆ.

ಸ್ಕೂಟರ್‌ನಲ್ಲಿ ಮಾಡಲಾದ ಮಾರ್ಪಾಡುಗಳು ಖಂಡಿತವಾಗಿಯೂ ಕಾನೂನಿನ ಅಡಿಯಲ್ಲಿ ನೋಡಿದರೆ ಅದು ಕಾನೂನುಬದ್ಧವಾಗಿಲ್ಲ. ಆದರೆ ಪಂಜಾಬ್ ರಾಜ್ಯದಲ್ಲಿ ಈ ರೀತಿಯ ವಿಭಿನ್ನವಾದ ವಾಹನ ಮಾಡಿಫೈಗಳನ್ನು ಮಾಡುತ್ತಾರೆ. ಈ ಮಾಡಿಫೈ ಸ್ಕೂಟರ್ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಅದೇ Instagram ಪ್ರೊಫೈಲ್‌ನಲ್ಲಿ ಹೆಚ್ಚಿನ ವೀಡಿಯೊಗಳನ್ನು ಕೆಳಗೆ ಸ್ಕ್ರೋಲ್ ಮಾಡುವುದರಿಂದ ವ್ಯಕ್ತಿಯು ಅದೇ ಸ್ಕೂಟರ್‌ನಲ್ಲಿ ಹಲವಾರು ಇತರ ಎಕ್ಸಾಸ್ಟ್‌ಗಳನ್ನು ಅಳವಡಿಸಿರುವ ಇತರ ವೀಡಿಯೊಗಳನ್ನು ತೋರಿಸುತ್ತದೆ. ವೀಡಿಯೊಗಳಲ್ಲಿ ಒಂದು ರಾಯಲ್ ಎನ್‌ಫೀಲ್ಡ್-ಪ್ರೇರಿತ ಪೈಪ್ ಅನ್ನು ತೋರಿಸುತ್ತದೆ.

ನೆಟ್ಟಿಗರ ಮನಗೆದ್ದ ಮಾಡಿಫೈ ಚೇತಕ್ ಸ್ಕೂಟರ್

ಆದರೆ ಇನ್ನೊಂದು ಕ್ಲಿಪ್‌ಗಳು ಅದೇ ಸ್ಕೂಟರ್ ಅನ್ನು ಟ್ರಾಕ್ಟರ್-ಮಾದರಿಯ ಎಕ್ಸಾಸ್ಟ್‌ನೊಂದಿಗೆ ಅಳವಡಿಸಿರುವುದನ್ನು ತೋರಿಸುತ್ತದೆ. ಇನ್ನು ಮಾಡಿಫೈಗೊಂಡ ಸ್ಕೂಟರ್ ಬಜಾಜ್ ಚೇತಕ್ ಆಗಿದೆ. ಇದು ಒಂದು ಕಾಲದಲ್ಲಿ ಭಾರತೀಯರ ನೆಚ್ಚಿನ ಸ್ಕೂಟರ್ ಆಗಿತ್ತು. ಇದು ಭಾರತೀಯ ದ್ವಿಚಕ್ರ ವಾಹನ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಭಾರತದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಮಾಡಿದ ಮೋಡಿ ಇನ್ನು ಕೂಡ ಯಾರು ಮರೆತಿಲ್ಲ. ಹಮಾರ ಬಜಾಜ್ ಎಂಬ ಜಾಹೀರಾತು ಇನ್ನು ಹಲವರ ಮನದಲ್ಲಿ ಹಾಗೇ ಅಚ್ಚಳಿಯದೇ ಉಳಿದಿದೆ.

ಒಂದು ಕಾಲದಲ್ಲಿ ಹೆಚ್ಚಿನ ಮನೆಯಲ್ಲೂ ಸಾಮಾನ್ಯವಾಗಿದ್ದ ಸ್ಕೂಟರ್ ಎಂದರೆ ಬಜಾಜ್‌ ಚೇತಕ್ ಆಗಿತ್ತು. ಹಿಂದಿನ ಪೀಳಿಗೆಯ ಬಹುತೇಕ ಜನರು ಚೇತಕ್ ಸ್ಕೂಟರ್ ನಲ್ಲೇ ವಾಹನವನ್ನು ಚಾಲನೆ ಮಾಡಲು ಕಲಿತಿರಬಹುದು. ಇನ್ನು ಬಜಾಜ್ ಚೇತಕ್ ಭಾರತೀಯ ಮೋಟಾರು ಇತಿಹಾಸದ ಪ್ರಮುಖ ಭಾಗವಾಗಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಬಜಾಜ್ ಎಂಬ ಹೆಸರಿನಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಮಾಡಲು ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಹೆಸರಿನಲ್ಲಿ ಬಿಡುಗಡೆಗೊಳಿಸಿತು. ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಹಳೆಯ ಮೋಡಿಯನ್ನು ಮಾಡಲು ಸಾಧ್ಯವಾಗಿಲ್ಲ.

ನೆಟ್ಟಿಗರ ಮನಗೆದ್ದ ಮಾಡಿಫೈ ಚೇತಕ್ ಸ್ಕೂಟರ್

ಇನ್ನು ಪಂಜಾಬ್ ನಲ್ಲಿ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯನ್ನು ರೇಂಜ್ ರೋವರ್‌ನಂತೆ ಮಾಡಿಫೈಗೊಳಿಸಿದ ಚಿತ್ರಗಳು ವೈರಲ್ ಆಗಿದೆ. ವಾಸ್ತವವಾಗಿ ಈ ಕಾರು ಇತ್ತೀಚೆಗೆ ಬಿಡುಗಡೆಯಾದ ಹೊಸ ತಲೆಮಾರಿನ ಮಾರುತಿ ಬ್ರೆಝಾ ಎಂದು ಹೇಳಲಾಗುತ್ತಿದೆ. ವಾಹನದ ನೋಂದಣಿ ಸಂಖ್ಯೆಯ ಪ್ರಕಾರ ಪಂಜಾಬ್ ಮೂಲದ ಕಾರು ಎಂದು ಗೊತ್ತಾಗಿದೆ. ಕಾರಿನ ಸಂಪೂರ್ಣ ವಿನ್ಯಾಸವನ್ನೇ ಬದಲಾಯಿಸಿರುವ ವಿಡಿಯೋವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ. ರೇಂಜ್ ರೋವರ್ ಇವೊಕ್ ಕಾರಿನ ಡಿಸೈನ್‌ ಅನ್ನು ಬ್ರೆಝಾಗೆ ನೀಡಲಾಗಿದೆ.

ಈ ಮೂಲಕ ಬ್ರೆಝಾ ಮುಂಭಾಗದಿಂದ ಹಿಂಭಾಗಕ್ಕೆ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಕಾರಿನ ಮುಂಭಾಗದಲ್ಲಿ ರೇಂಜ್ ರೋವರ್ ಎಂಬ ದೊಡ್ಡ ಅಕ್ಷರಗಳನ್ನು ಮೂಲ ಮಾದರತಿಯಂತೆ ಬರೆರುವುದನ್ನು ವೀಡಿಯೊದಲ್ಲಿ ಕಾಣಬಹುದು. ಕಾರಿನಲ್ಲಿ ದೊಡ್ಡ ಬದಲಾವಣೆಗಳನ್ನು ನೋಡುವುದಾದರೆ, ಅದರ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ಗಳಲ್ಲಿ ರೇಂಜ್ ರೋವರ್ ಡಿಸೈನ್ ನೀಡಲಾಗಿದೆ. ಈ ಕಾರಿನ ಸೈಡ್ ಪ್ರೊಫೈಲ್ ಕುರಿತು ಮಾತನಾಡುವುದಾದರೆ, ಇದರಲ್ಲಿ ಕಂಡುಬರುವ ಸ್ಟಾಕ್ ಅಲಾಯ್ ವೀಲ್‌ಗಳನ್ನು ಬದಲಿಸಿ ಮಲ್ಟಿಸ್ಪೋಕ್ ಅಲಾಯ್ ವೀಲ್‌ಗಳು ಮತ್ತು ಅಗಲವಾದ ಟೈರ್‌ಗಳನ್ನು ನೀಡಲಾಗಿದೆ.

Most Read Articles

Kannada
English summary
Chetak scooter modification with car steering wheel details in kannada
Story first published: Thursday, January 19, 2023, 13:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X