ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಇತ್ತೀಚಿಗೆ ಚೀನಾದಲ್ಲಿ ಕಾರೊಂದು ತಾಯಿ ಮಗುವಿಗೆ ಗುದ್ದಿರುವಂತಹ ಮನಕಲಕುವ ವೀಡಿಯೋ ಪ್ರಪಂಚದಾದ್ಯಂತ ಸಖತ್ ವೈರಲ್ ಆಗಿದೆ. ಆ ಪುಟ್ಟ ಕಂದಮ್ಮನಿಗೆ ತಾಯಿ ಮೇಲೆ ಇರುವ ನಿಷ್ಕಲ್ಮಷ ಪ್ರೀತಿಗೆ ಪ್ರಪಂಚದಾದ್ಯಂತ ಎಲ್ಲಾರೂ ಫಿಧಾ ಆಗಿದ್ದಾರೆ.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ರಸ್ತೆ ಅಪಘಾತಗಳಿಗೆ ಸಾಮಾನ್ಯ ಕಾರಣವೆಂದರೆ ವಾಹನ ಚಾಲಕರು ಸಂಚಾರ ನಿಯಮಗಳ ಉಲ್ಲಂಘಿಸುವುದು. ಆದ್ದರಿಂದ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಮತ್ತು ವಾಹನಗಳನ್ನು ಚಲಾಯಿಸುವಾಗ ಇತರರ ಜೀವಕ್ಕೆ ಹಾನಿಯಾಗದಂತೆ ಎಚ್ಚರ ವಹಿಸುವುದು ಎಲ್ಲರ ಕರ್ತವ್ಯವಾಗಿದೆ.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಭೀಕರ ಅಪಘಾತಗಳ ವೀಡಿಯೋಗಳು ವೈರಲ್ ಆಗುವುದು ಸಾಮಾನ್ಯ. ಈ ವೀಡಿಯೋದಲ್ಲಿರುವ ಆ ಪುಟ್ಟ ಬಾಲಕ ಪ್ರಪಂಚದಾದ್ಯಂತ ಎಲ್ಲರ ಗಮನಸೆಳದಿದ್ದಾನೆ. ಈಗಿನ ಮಕ್ಕಳು ತಮ್ಮ ತಾಯಿಯನ್ನು ಆನಾಥಾಶ್ರಮ ಸೇರಿಸುವ ಕಥೆಗಳನ್ನು ನೋಡಿ ಸಾಕಾಗಿರುವ ಜನರಿಗೆ ಈ ಪುಟ್ಟ ಕಂದಮ್ಮನ ತಾಯಿ ಪ್ರೀತಿಗೆ ಎಲ್ಲರ ಮನ ಗೆದ್ದಿದೆ. ಈ ಘಟನೆಯು ಚೀನಾ ದೇಶದಲ್ಲಿ ನಡೆದಿದೆ.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಪುಟ್ಟ ಬಾಲಕನು ಅಮ್ಮನ ಕೈ ಹಿಡುದುಕೊಂಡು ರಸ್ತೆ ದಾಡುತ್ತಿದ್ದ ಈ ಸಂದರ್ಭದಲ್ಲಿ ಯಮನಂತೆ ನಿಸ್ಸಾನ್ ಕಾರ್ ಒಂದು ಬಂದು, ಪುಟ್ಟ ಬಾಲಕ ಮತ್ತು ತಾಯಿ ಝಿಭ್ರಾ ಕ್ರಾಸ್‍‍ನಲ್ಲಿ ರಸ್ತೆ ದಾಡುತ್ತೀರುವಾಗಲೇ ಗುದ್ದುತ್ತದೆ.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಕಾರು ಗುದ್ದಿದ ರಭಸಕ್ಕೆ ತಾಯಿ ಮತ್ತು ಪುಟ್ಟ ಬಾಲಕ ಕೆಳಗೆ ಬೀಳುತ್ತಾರೆ. ಈ ಸಂದರ್ಭದಲ್ಲಿ ಮೊದಲು ಮಗು ಎದ್ದು ತನ್ನ ತಾಯಿಗೆ ಏನಾದರೂ ಆಗಿದೆಯೇ ಎಂದು ನೋಡುತ್ತಾನೆ. ನಂತರ ತನ್ನ ತಾಯಿಯನ್ನು ಗುದ್ದಿದ ಕಾರಿನ ಮೇಲೆ ಸಿಟ್ಟು ತೀರಿಸಿಕೊಳ್ಳುತ್ತಾನೆ.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಬೆಂಕಿಯ ಕೆಂಡದಂತೆ ಕುದಿಯುತ್ತಿತ್ತು ಆ ಪುಟ್ಟ ಕಂದಮ್ಮನ ಸಿಟ್ಟು. ಅದೇ ಸಿಟ್ಟಿನಲ್ಲಿ ಈ ಕಾರಿನ ಮುಂಭಾಗದ ಹೆಡ್‍‍ಲೈಟ್‍‍ಗೆ ಒದೆಯುತ್ತಾನೆ. ಆದರೂ ಆತನ ಸಿಟ್ಟು ಮಾತ್ರ ಕಿಂಚಿತ್ತು ಕಡಿಮೆ ಆಗುವುದಿಲ್ಲ. ಕಾರಿನ ಮೇಲೆ ಸಿಟ್ಟು ತೀರಿಸಿಕೊಂಡ ಬಳಿಕ ಚಾಲಕನ ಡೋರ್ ಬಳಿ ಓಡುತ್ತಾನೆ.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಚಾಲಕನು ಕಾರಿನಿಂದ ಡೋರ್ ತೆಗೆದು ಇಳಿಯದಂತೆ ಆತನ ಬಳಿ ತೆರಳಿ ಸಿನಿಮಾ ಸ್ಟೈಲ್‍‍ನಲ್ಲಿ ಆವಾಜ್ ಹಾಕುತ್ತಾನೆ. ಮತ್ತೆ ಆತನ ತಾಯಿ ಬಗ್ಗೆ ಯೋಚಿಸುತ್ತಾ ಅಳುತ್ತಾ ತನ್ನ ತಾಯಿ ಬಳಿ ಓಡಿ ಬರುತ್ತಾನೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ನಂತರ ಡಿಕ್ಕಿ ಹೊಡೆದ ಚಾಲಕನು ಆ ಬಾಲಕ ಮತ್ತು ತಾಯಿ ಬಳಿ ಬರುತ್ತಾನೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಗಂಭೀರ ಗಾಯವಾಗಿರುವುದಿಲ್ಲ. ಚಾಲಕನು ನಂತರ ತನ್ನ ಕಾರಿನಲ್ಲಿಯೇ ಆ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಎಂದು ವರದಿಯಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಆದರೆ ಆ ಪುಟ್ಟ ಕಂದಮ್ಮನಿಗೆ ಇರುವ ತಾಯಿ ಪ್ರೀತಿಗೆ ಪ್ರಪಂಚದ್ಯಾದಂತ ಎಲ್ಲರ ಮನಸ್ಸನ್ನು ಸೆಳೆದಿದೆ. ಪ್ರಪಂಚದಾದ್ಯಂತ ವೈರಲ್ ಆಗುತ್ತಿರುವ ವೀಡಿಯೋವನ್ನು ಇಲ್ಲಿ ನೀವು ನೋಡಬಹುದು.

MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಅಪಘಾತಕ್ಕೆ ಕಾರಣ ಚಾಲಕನೇ ಎಂದು ತಿಳಿದು ಬಂದಿದೆ. ಚಾಲಕನು ಸಿಗ್ನಿಲ್ ಜಂಪ್ ಮಾಡಿ ಬಂದು ಅಪಘಾತ ಮಾಡಿದ್ದಾನೆ. ಆದರೆ ಅಪಘಾತದಲ್ಲಿ ಯಾವುದೇ ದೊಡ್ಡ ನೋವು ಸಂಭವಿಸಲಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಆದರೇ ಕಾರು ಸ್ವಲ್ಪ ವೇಗದಲ್ಲಿದರೂ ದುರಂತದಲ್ಲಿ ಅಂತ್ಯವಾಗುವ ಸಾಧ್ಯತೆಗಳಿತ್ತು.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ರಸ್ತೆ ಅಪಘಾತ ಎನ್ನುವುದು ಭೀಕರ. ರಸ್ತೆ ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡಿರುವವರ ಕುಟುಂಬಕ್ಕೆ ಮಾತ್ರ ಆ ನೋವು ಎಷ್ಟು ಎಂಬುದು ಗೊತ್ತಿರುತ್ತದೆ. ಈ ಘಟನೆಯು ಒಂದು ಸಣ್ಣ ಉದಾಹರಣೆ ಮಾತ್ರ. ಇದರಿಂದ ವಾಹನ ಚಾಲನೆ ಮಾಡುವಾಗ ಒಮ್ಮೆ ಇವುಗಳನ್ನು ಚಿಂತಿಸಿ.

ಅಮ್ಮನ ಗುದ್ದಿದ ಕಾರಿನ ಮೇಲೆ ಪುಟ್ಟ ಕಂದಮ್ಮನ ಆಕ್ರೋಶ

ಅಪಘಾತದಲ್ಲಿ ಅಮಾಯಕ ಜನರ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಅವಸರವೇ ಅಪಘಾತ ಕಾರಣ ಎಂದು ಹೇಳುತ್ತಾರೆ, ಅದ್ದರಿಂದ ನಿಯಮಿತ ವೇಗದಲ್ಲೇ ವಾಹನ ಚಲಾಯಿಸಿ. ಸಂಚಾರಿ ನಿಯಮವನ್ನು ಪಾಲಿಸಿ. ಅದನ್ನು ಮೀರಿ ಇನ್ನೋಬ್ಬರಿಗೆ ಅಪಘಾತ ಮಾಡಿ ಅವರ ಬದುಕನ್ನು ಕತ್ತಲೆ ಮಾಡದಿರಿ.

Most Read Articles

Kannada
English summary
china little boy fighting with driver - Read in Kannada
Story first published: Friday, December 13, 2019, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X