ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

Written By:

ಜಗತ್ತಿನ ಹಲವು ವಿಸ್ಮಯಕಾರಿ ರಸ್ತೆ ಸೇತುವೆಗಳ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಆದರೆ ಇವೆಲ್ಲಕ್ಕೂ ಮಿಗಿಲಾದ ಗಗನ ಚುಂಬಿಸುವ ಅತ್ಯಂತ ರೋಚಕ ಹಾಗೂ ಅತ್ಯದ್ಭುತ ಗಾಜಿನ ಸೇತುವೆಯೊಂದನ್ನು ನಾವಿಂದು ಪರಿಚಯಿಸಲಿದ್ದೇವೆ.

Also Read : ನೀವು ನೋಡಿರದ ಅತ್ಯಾದ್ಭುತ ರಸ್ತೆ ಸೇತುವೆಗಳಿವು

ಪ್ರಮುಖವಾಗಿಯೂ ಪ್ರವಾಸಿಗರನ್ನು ಆಕರ್ಷಿಸುವ ಏಕೈಕ ಉದ್ದೇಶದೊಂದಿಗೆ ಈ ವಿಸ್ಮಯಕಾರಿ ಗಾಜಿನ ಸೇತುವೆ ಚೀನಾದಲ್ಲಿ ತಲೆಯೆತ್ತಿದೆ. ಮತ್ತಷ್ಟು ಆಸಕ್ತಿದಾಯಕ ವಿವರಗಳಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ತಾಜಾ ಪ್ರವಾಸ ಆಕರ್ಷಣೆಯಾಗಿರುವ ಪ್ರಸ್ತುತ ಸ್ಕೈವಾಲ್ಕ್ ಚೀನಾದ ಝಾಂಗ್ಜಿಯಾಂಜಿ (Zhangjiajie) ರಾಷ್ಟೀಯ ಉದ್ಯಾನವನದ ಮೇಲ್ಗಡೆಯಾಗಿ ಎರಡು ಬೃಹತ್ ಪರ್ವತಗಳ ನಡುವೆ ಸ್ಥಿತಗೊಂಡಿದೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಸಮುದ್ರ ತಲದಿಂದ 900 ಅಡಿ ಮೇಲ್ಗಡೆಯಾಗಿ ಹಾದು ಹೋಗುವ ಪ್ರಸ್ತುತ ಸೇತುವೆ, ಜಗತ್ತಿನ ಅತಿ ಉದ್ದದ ಹಾಗೂ ಎತ್ತರದಲ್ಲಿರುವ ಗ್ಲಾಸ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವ ಪ್ರವಾಸಿಗರು, ತಮ್ಮ ಜೀವನದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ ಎಂದಿದ್ದಾರೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

0.27 ಮೈಲು (1,410 ಅಡಿ) ಉದ್ದದ ಇಲ್ಲಿನ ಗಾಜಿನ ಸೇತುವೆಯಲ್ಲಿ ಒಂದೇ ಸಮಯಕ್ಕೆ 800ರಷ್ಟು ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಕೃತರು ಅಭಿಪ್ರಾಯಪಡುತ್ತಾರೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

19 ಅಡಿ ಅಗಲದ ಈ ವಿಸ್ಮಯಕಾರಿ ಗಾಜಿನ ಸೇತುವೆಯಲ್ಲಿ ಫ್ಯಾಶನ್ ಶೋ ಆಯೋಜಿಸುವ ಉದ್ದೇಶವನ್ನು ಆಯೋಜಕರು ಹೊಂದಿದ್ದಾರೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಈ ಮಹತ್ವಾಕಾಂಕ್ಷೆಯ ಸಾಹಸೋದ್ಯಮದ ಹಿಂದೆ ಇಸ್ರೇಲ್ ವಾಸ್ತುಶಿಲ್ಪಿ ಹೈಮ್ ಡೋಟನ್ (Haim Dotan) ಪ್ರಮುಖ ಸೂತ್ರಧಾರಿ ಎನಿಸಿಕೊಂಡಿದ್ದಾರೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಗಗನ ಚುಂಬಿಸುವ ಈ ಗಾಜಿನ ಸೇತುವೆಯಿಂದ ಕೆಳಕ್ಕೆ ನೋಡಿದಾಗ 3000ದಷ್ಟು ಬಂಡೆ ಕಲ್ಲುಗಳಿಂದ ಸುತ್ತುವರಿಯಲ್ಪಟ್ಟಿರುವ ರಾಷ್ಟ್ರೀಯ ಉದ್ಯಾನದ ಅಮೋಘ ದರ್ಶನವಾಗುತ್ತಿದೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಅಷ್ಟಕ್ಕೂ ಇವೆಲ್ಲಕ್ಕೂ ಸ್ಪೂರ್ತಿ ಯಾರು ಗೊತ್ತೇ? ಹೌದು, 2009ನೇ ಇಸವಿಯಲ್ಲಿ ಬಿಡುಗಡೆಯಾಗಿರುವ ಜೇಮ್ಸ್ ಕ್ಯಾಮರೂನ್ ಅವರ 'ಅವತಾರ' ಸಿನೆಮಾ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಇಂತಹದೊಂದು ಸಾಹಸಕ್ಕೆ ಚೀನಾ ಕೈ ಹಾಕುತ್ತಿರುವುದು. ಇದಕ್ಕೂ ಮೊದಲು ಲಾಂಗ್ ಗ್ಯಾಂಗ್‌ನಲ್ಲಿ ಸ್ಥಿತಗೊಂಡಿರುವ ರಾಷ್ಟ್ರೀಯ ಭೂವೈಜ್ಞಾನಿಕ ಉದ್ಯಾನವನದ ಅಂಚಿನಲ್ಲಿ ಪಾರದರ್ಶಕ ಮೆರೆಯುವ ಯುವನ್ ಡುವನ್ (Yuanduan) ಗಾಜಿನ ಕಾಲುದಾರಿ ಸೃಷ್ಟಿಸುವ ಮೂಲಕ ದಾಖಲೆ ಬರೆದಿತ್ತು.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಕಣ್ಮಣ ತನಿಸುವ ಈ ವಿಹಂಗಮ ವೀಕ್ಷಣೆಯ ಸೇತುವೆ ಜಗತ್ತಿನ ಅತಿ ಉದ್ದದ ಕ್ಯಾಂಟಿಲಿವರ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಚ್ಚರಿ, ಅತ್ಯದ್ಭುತ; ಚೀನಾದಲ್ಲಿ ಗಗನ ಚುಂಬಿಸುವ ಗಾಜಿನ ಸೇತುವೆ

ಕುದುರೆ ಶೂ ಆಕಾರದ ಈ ನಡೆದಾರಿಯು ಒಂದೇ ಸಮಯಕ್ಕೆ 30ರಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

English summary
China Zhangjiajie skywalk most terrifying walkway in the world
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark