ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

Written By:

ಇತ್ತೇಚಿಗಿನ ದಿನಗಳಲ್ಲಿ ದುಬಾರಿ ಕಾರುಗಳು ಬೆಂಕಿಗಾಹುತಿಯಾಗುವ ಪ್ರಕರಣಗಳು ಜಾಸ್ತಿಯಾಗಿಯೇ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದಹೆಲಿಯ ಹೃದಯ ಭಾಗದಲ್ಲಿ ಇಟಲಿಯ ಐಕಾನಿಕ್ ಲಂಬೋರ್ಗಿನಿ ಸೂಪರ್ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.

ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

ಈಗ ಬಂದಿರುವ ತಾಜಾ ಮಾಹಿತಿಗಳ ಸ್ವೀಡನ್ ನಲ್ಲೂ ಇದಕ್ಕೆ ಸಮಾನವಾದ ಪ್ರಕರಣ ಬೆಳಕಿಗೆ ಬಂದಿದ್ದು, ಕೋಟಿ ಬೆಲೆ ಬಾಳುವ ಲಂಬೋರ್ಗಿನಿ ಅವೆಂಟಡೊರ್ ಎಲ್‌ಪಿ700-4 ಸೂಪರ್ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

ಡಾಲ್ ಬ್ಯಾಕ್ ರೇಸಿಂಗ್ (dahlback racing) ತಂಡದ ಮಾಲಿಕ ಹ್ಯಾನ್ಸ್ ಡಾಲ್ ಬ್ಯಾಕ್ ಅವರಿಗೆ ಸೇರಿದ ಲಂಬೋರ್ಗಿನಿ ಕಾರು ಇದಾಗಿದೆ.

ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

ಸದ್ಯಕ್ಕೆ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭಿಸಿಲ್ಲ. ಆದರೆ ಎಂಜಿನ್ ‌ನಿಂದ ದೊಡ್ಡದಾದ ಸ್ಪೋಟದ ಸದ್ದು ಕೇಳಿಸಿತ್ತು ಎಂಬುದು ತಿಳಿದು ಬಂದಿದೆ.

ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

ತಕ್ಷಣಕ್ಕೆ ಅಗ್ನಿ ಶಾಮಕ ಬಂದು ಕಾರ್ಯಾಚರಣೆ ಹಮ್ಮಿಕೊಂಡಿದ್ದರಿಂದ ಕಾರನ್ನು ಹೊರತುಪಡಿಸಿ ಇತರೆ ಯಾವುದೇ ನಾಶನಷ್ಟ ಸಂಭವಿಸಿಲ್ಲ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

ಸಾಮಾನ್ಯ ಅವೆಂಟಡೊರ್ ಗಿಂತಲೂ ಭಿನ್ನವಾಗಿ ಹಾನ್ಸ್ ಅವರಿಗಾಗಿ ಪ್ರತ್ಯೇಕವಾಗಿ ಟ್ಯೂನ್ ಮಾಡಲಾದ ಕಾರು ಇದಾಗಿದೆ. ಲಂಬೋರ್ಗಿನಿಯ ಸ್ವಾಂಡ್ರಾ ಕೋರ್ಸ್ ರೇಸಿಂಗ್ ವಿಭಾಗವು ಇದನ್ನು ನಿರ್ಮಿಸಿದೆ.

ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

ಮುಂಭಾಗದಲ್ಲಿ ಪರಿಷ್ಕೃತ ವಿನ್ಯಾಸ, ದೊಡ್ಡದಾದ ರಿಯರ್ ವಿಂಗ್, ಹೊಸತಾದ ಫ್ರಂಟ್ ಬಂಪರ್ ಹಾಗೂ ಕಪ್ಪು ವರ್ಣದ ಚಕ್ರಗಳು ಪ್ರಮುಖ ಆಕರ್ಷಣೆಯಾಗಿದೆ.

ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

ಒಟ್ಟಿನಲ್ಲಿ ತನಿಖೆಯ ಬಳಿಕವಷ್ಟೇ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

English summary
One-off Lamborghini Aventador LP700-4 Destroyed By Fire
Story first published: Tuesday, October 6, 2015, 12:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark