ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

By Nagaraja

ಸತತ ಎರಡನೇ ಸಾಲಿನಲ್ಲೂ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಡೀ ವಿಶ್ವಕ್ಕೆ ಅಗ್ರವೆನಿಸಿದೆ. ಇದರ ಜೊತೆಗೆ ಅಂತರಾಷ್ಟ್ರೀಯ ವಿಮಾನ ಕೌನ್ಸಿಲ್ (ಎಸಿಐ) ಬಿಡುಗಡೆಗೊಳಿಸಿರುವ ಪ್ರಶಸ್ತಿ ಪಟ್ಟಿಯಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿ ದೆಹಲಿ ವಿಮಾನ ನಿಲ್ದಾಣ ಯಶಸ್ವಿಯಾಗಿದೆ.

Also Read: ಪ್ರಪಂಚದ 23 ಭಯಾನಕ ವಿಮಾನ ರನ್ವೇಗಳು

ಏರ್ ಪೋರ್ಟ್ಸ್ ಕೌನ್ಸಿಲ್ ಇಂಟರ್ ನ್ಯಾಷನಲ್ (ಎಸಿಐ) ವರ್ಷಂಪ್ರತಿ ಪ್ರಶಸ್ತಿಗಳನ್ನು ಪ್ರಕಟಿಸುತ್ತಿದ್ದು, ಈ ನಡುವೆ ದೆಹಲಿ ಇಂದಿರಾ ಗಾಂಧಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ (ಐಜಿಐಎ) ತನ್ನ ಅಂತರಾಷ್ಟ್ರೀಯ ದರ್ಜೆಯನ್ನು ಕಾಯ್ದುಕೊಂಡಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ವಾರ್ಷಿಕವಾಗಿ 25ರಿಂದ 40 ದಶಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿರುವ ದೆಹಲಿ ಅಂತರಾಷ್ಟೀಯ ವಿಮಾನ ನಿಲ್ದಾಣ ಸತತ ಎರಡನೇ ಬಾರಿಗೆ ಎಂಪಿಪಿಎ ( Million Passengers Per Annum) ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ಏಷ್ಯಾ ಫೆಸಿಫಿಕ್ ಗಾತ್ರದಲ್ಲಿ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾನ ಮೇಲುಗೈಯನ್ನು ಸಾಧಿಸಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ಅಂತೆಯೇ ಏಷ್ಯಾ ಫೆಸಿಫಿಕ್ ವಲಯದಲ್ಲಿ ಎರನಡೇ ಅತ್ಯುತ್ತಮ ವಿಮಾನ ನಿಲ್ದಾಣವೆಂಬ ಕೀರ್ತಿಗೂ ದೆಹಲಿ ಅರ್ಹವಾಗಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ವಿಶ್ವದಾದ್ಯಂತ ವೇಗವಾಗಿ ಬದಲಾಗುತ್ತಿರುವ ವಾಯುಯಾನ ಭೂದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ಪ್ರಯಾಣಿಕರ ತೃಪ್ತಿ ಹೆಚ್ಚಿಸಲು ಮತ್ತು ವ್ಯಾಪಾರ ನಿರ್ವಹಣೆಯನ್ನು ಸುಧಾರಿಸಲು ಏರ್ ಪೋರ್ಟ್ ಸರ್ವಿಸ್ ಕ್ವಾಲಿಟಿ (ACI-ASQ) ಅತಿ ಮಹತ್ವದೆನಿಸಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

2007ರಲ್ಲಿ ಖಾಸಗೀಕರಣಕ್ಕೆ ಒಳಗಾಗಿರುವ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಏರ್ ಪೋರ್ಟ್ ಸರ್ವೀಸ್ ಕ್ವಾಲಿಟಿ ರಾಕಿಂಗ್ ನಲ್ಲಿ 101ನೇ ಸ್ಥಾನದಲ್ಲಿತ್ತು.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ಆದರೆ ನಾಲ್ಕು ವರ್ಷದ ಅವಧಿಯಲ್ಲಿ ಅಂದರೆ 2011ರಲ್ಲಿ ಎಎಸ್ ಕ್ಯೂ ರಾಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ನೆಗೆತ ಕಂಡಿತ್ತು. 2013ರ ವರೆಗೆ ಇದೇ ಸ್ಥಾನವನ್ನು ಕಾಪಾಡಿಕೊಂಡಿತ್ತು.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ತದಾ ಬಳಿಕ 2014ರಲ್ಲಿ ಮೊದಲ ಬಾರಿಗೆ ನಂ.1 ಸ್ಥಾನಕ್ಕೆ ಜಿಗಿತ ಕಂಡಿರುವ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2015ನೇ ಸಾಲಿನಲ್ಲೂ ಇದನ್ನು ಕಾಪಾಡಿಕೊಂಡಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಮರಣಾರ್ಥ ನಾಮಕರಣಗೊಂಡಿರವು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇಶದ ಅತ್ಯಂತ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ಪ್ರಾರಂಭದಲ್ಲಿ ಭಾರತೀಯ ವಾಯುಸೇನೆಯ ಅಧೀನತೆಯಲ್ಲಿದ್ದ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತೀಯ ಏರ್ ಪೋರ್ಟ್ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು. ಬಳಿಕ 2006ರಲ್ಲಿ ಜಿಎಂಆರ್ ಗ್ರೂಪ್ ಒಕ್ಕೂಟದಲ್ಲಿ ದೆಹಲಿ ಅಂತರಾಷ್ಟ್ರೀಯ ಏರ್ ಪೋರ್ಟ್ ಲಿಮೆಟೆಡ್ (ಡಿಐಎಎಲ್) ಅಧಿಕಾರ ವಹಿಸಿಕೊಂಡಿತ್ತು.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ

ವರದಿಗಳ ಪ್ರಕಾರ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಯಾಣಿಕ ಟ್ರಾಫಿಕ್ ಲೆಕ್ಕಾಚಾರದಲ್ಲಿ ವಿಶ್ವದಲ್ಲೇ 26ನೇ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ.

ಸತತ ಎರಡನೇ ಬಾರಿಗೂ ದೆಹಲಿ ವಿಮಾನ ನಿಲ್ದಾಣ ವಿಶ್ವಕ್ಕೆ ಅಗ್ರ
  • ದುಬೈ ಪಾಲಾಗಲಿದೆ ವಿಶ್ವದ ಬೃಹತ್ ವಿಮಾನ ನಿಲ್ದಾಣ
  • ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

Most Read Articles

Kannada
English summary
Delhi’s IGI airport retains world’s number 1 position
Story first published: Wednesday, March 2, 2016, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X