ದೆಹಲಿ ರಸ್ತೆಯಲ್ಲಿ ಮೊತ್ತ ಮೊದಲ ತ್ರಿಡಿ ಸ್ಪೀಡ್ ಬ್ರೇಕರ್

By Nagaraja

ವೇಗಕ್ಕೆ ಕಡಿವಾಣ ಹಾಕುವ ಮುಖಾಂತರ ಅಪಘಾತ ಪ್ರಕರಣಗಳಿಗೆ ತಡೆಯೊಡ್ಡಲು ಮುಂದಾಗಿರುವ ನವದೆಹಲಿ ನಗರಪಾಲಿಕೆ ಮಂಡಳಿಯು (ಎನ್‌ಡಿಎಂಸಿ), ರಾಷ್ಟ್ರ ರಾಜಧಾನಿಯ ರಸ್ತೆಗಳಲ್ಲಿ ಅತ್ಯಾಧುನಿಕ ತ್ರಿಡಿ ಚಿತ್ರ ಕಲೆಗಾರಿಕೆಗೆ ಮೊರೆ ಹೋಗಿದೆ.

ನವದೆಹಲಿಯ ರಾಜಾಜಿ ಮಾರ್ಗ್ ನಲ್ಲಿ ನೂತನ ತ್ರಿಡಿ ಪೈಟಿಂಗ್ ಗಳನ್ನು ರಸ್ತೆಗಳಲ್ಲಿ ಆಳವಡಿಸಲಾಗಿದೆ. ಅಪಘಾತ ಪೀಡಿತ ಪ್ರದೇಶಗಳಲ್ಲಿ ತ್ರಿಡಿ ಚಿತ್ರಗಳನ್ನು ಬಿಡಿಸಲಾಗಿದ್ದು, ವಾಹನ ವೇಗಕ್ಕೆ ಕಡಿವಾಣ ಬೀಳಲಿದೆ.

ದೆಹಲಿ ರಸ್ತೆಯಲ್ಲಿ ಮೊತ್ತ ಮೊದಲ ತ್ರಿಡಿ ಸ್ಪೀಡ್ ಬ್ರೇಕರ್

ದೂರದಿಂದ ಬರುವ ವಾಹನಗಳಿಗೆ ನೈಜ ಸ್ಪೀಡ್ ಬ್ರೇಕರ್ ನಂತೆ ಭಾಸವಾಗುವ ಇಂತಹ ತ್ರಿಡಿ ಚಿತ್ರಗಳು ಎದುರಾದಾಗ ಚಾಲಕರು ಬ್ರೇಕ್ ಅದುಮುವ ಮೂಲಕ ನಿಧಾನವಾಗಿ ಚಲಿಸುವ ಪ್ರಯತ್ನ ಮಾಡಲಿದ್ದಾರೆ.

ದೆಹಲಿ ರಸ್ತೆಯಲ್ಲಿ ಮೊತ್ತ ಮೊದಲ ತ್ರಿಡಿ ಸ್ಪೀಡ್ ಬ್ರೇಕರ್

ಪ್ರಸ್ತುತ ಪ್ರಯೋಗಾರ್ಥವಾಗಿ ತ್ರಿಡಿ ರಸ್ತೆ ಕಲೆಗಾರಿಕೆಯನ್ನು ರಚಿಸಲಾಗಿದೆ. ಇದು ಯಶಸ್ವಿಯಾದ್ದಲ್ಲಿ ನಗರದ ಇತರೆಡೆಗಳಿಗೆ ಹೊಸ ತಂತ್ರಜ್ಞಾನವು ವ್ಯಾಪಿಸಲಿದೆ.

ದೆಹಲಿ ರಸ್ತೆಯಲ್ಲಿ ಮೊತ್ತ ಮೊದಲ ತ್ರಿಡಿ ಸ್ಪೀಡ್ ಬ್ರೇಕರ್

ದೆಹಲಿ ಸ್ಟ್ರೀಟ್ ಆರ್ಟ್ (ಡಿಎಸ್ ಎ) ಜೊತೆಗಾರಿಕೆಯಲ್ಲಿ ಎನ್‌ಡಿಎಂಸಿ, ತ್ರಿಡಿ ಚಿತ್ರಗಳನ್ನು ರಸ್ತೆಗಳಲ್ಲಿ ಬಿಡಿಸಿವೆ. ತನ್ಮೂಲಕ ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನ ಮಾಡಿದೆ.

ದೆಹಲಿ ರಸ್ತೆಯಲ್ಲಿ ಮೊತ್ತ ಮೊದಲ ತ್ರಿಡಿ ಸ್ಪೀಡ್ ಬ್ರೇಕರ್

ಕೇಂದ್ರ ಸಾರಿಗೆ ಸಚಿವಾಲಯದ ವರದಿಗಳ ಪ್ರಕಾರ ವರ್ಷಂಪ್ರತಿ ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ಸರಾಸರಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ದೆಹಲಿ ರಸ್ತೆಯಲ್ಲಿ ಮೊತ್ತ ಮೊದಲ ತ್ರಿಡಿ ಸ್ಪೀಡ್ ಬ್ರೇಕರ್

2019ರ ವೇಳೆಯಾಗುವಾಗ ರಸ್ತೆ ಅಪಘಾತದಲ್ಲಿ ಉಂಟಾಗುತ್ತಿರುವ ಸಾವಿನ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವುದು ಗುರಿಯಾಗಿದೆ.

ದೆಹಲಿ ರಸ್ತೆಯಲ್ಲಿ ಮೊತ್ತ ಮೊದಲ ತ್ರಿಡಿ ಸ್ಪೀಡ್ ಬ್ರೇಕರ್

ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಯುರೋಪ್ ಖಂಡಗಳಲ್ಲಿ ರಸ್ತೆ ತ್ರಿಡಿ ಚಿತ್ರಗಳು ಸಾಮಾನ್ಯವಾಗಿದೆ. ಈಗ ಭಾರತದಲ್ಲೂ ಅಪಘಾತ ಪ್ರಕರಣ ಕಡಿಮೆಯಾಗಲು ನೆರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
Read more on ದೆಹಲಿ delhi
English summary
Delhi gets its first 3D virtual speed breaker
Story first published: Friday, July 15, 2016, 15:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X