ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

By Nagaraja

ಚಾಲಕರಹಿತ ಕಾರುಗಳು ಈಗಲೂ ಪರೀಕ್ಷಾರ್ಥ ಹಂತದಲ್ಲಿದೆ. ಗೂಗಲ್ ನಂತಹ ದೈತ್ಯ ಸರ್ಚ್ ಎಂಜಿನ್ ಸಂಸ್ಥೆಗಳು ಚಾಲಕರಹಿತ ಆಟೋಮ್ಯಾಟಿಕ್ ಕಾರು ನಿರ್ಮಿಸುವ ಸಂಬಂಧ ಸತತ ಪರಿಶ್ರಮದಲ್ಲಿ ತೊಡಗಿಸಿಕೊಂಡಿದೆ.

ಹಾಗಿರಬೇಕೆಂದರೆ ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್ ಡ್ರೈವರ್ ಲೆಸ್ ರೈಲನ್ನೇ ಪರಿಚಯಿಸುತ್ತಿದೆ. ದೆಹಲಿ ಮೆಟ್ರೋ ಕಾಮಗಾರಿಯ ಮೂರನೇ ಹಂತವನ್ನು ಶರವೇಗದಲ್ಲಿ ಪೂರ್ಣಗೊಳಿಸುವ ಇರಾದೆಯಲ್ಲಿರುವ ದೆಹಲಿ ಮೆಟ್ರೋ, ಕಟ್ಟಿಂಗ್ ಎಡ್ಜ್ ಡ್ರೈವಲ್ ಲೆಸ್ ರೈಲುಗಳ ಪರೀಕ್ಷಾರ್ಥ ಸಂಚಾರವನ್ನು ಜುಲೈ ತಿಂಗಳಲ್ಲಿ ಆರಂಭಿಸಲಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ದೆಹಲಿ ಮೆಟ್ರೋ ನಿಕಟ ಭವಿಷ್ಯದಲ್ಲೇ ಹಳಿಗೆ ಬಿಡಲಿರುವ ಡ್ರೈವರ್ ಲೆಸ್ ಟ್ರೈನ್ ನಲ್ಲಿ ಕ್ಯಾಮೆರಾ ಮತ್ತು ಸೆನ್ಸಾರ್ ಗಳನ್ನು ಆಳವಡಿಸಲಾಗುವುದು.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮೊದಲ ಒಂದು ವರ್ಷದಷ್ಟು ಕಾಲ ಡ್ರೈವರ್ ಲೆಸ್ ರೈಲಿನಲ್ಲಿ ಚಾಲಕರು ಸಹಾಯಿಯಾಗಿ ಸಂಚರಿಸಲಿದ್ದಾರೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಡ್ರೈವರ್ ಲೆಸ್ ರೈಲಿಗಾಗಿ ವಿಶೇಷ ಬೋಗಿಗಳನ್ನು ಮುಕುಂದಪುರದ ಡಿಪೊದಲ್ಲಿ ನಿರ್ಮಿಸಲಾಗಿದೆ. ಪರೀಕ್ಷಾರ್ಥ ಸಂಚಾರ ಪರೀಕ್ಷೆಯು ಜುಲೈನಲ್ಲಿ ನಡೆಯಲಿದೆ ಎಂದು ದೆಹಲಿ ಮೆಟ್ರೋ ತಿಳಿಸಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಡ್ರೈವರ್ ಲೆಸ್ ರೈಲಿನಲ್ಲಿ ಗರಿಷ್ಠ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗುತ್ತಿದ್ದು, ಉಚಿತ ವೈಫೈ, ಹೆಚ್ಚು ಸ್ಥಳಾವಕಾಶಯುಕ್ತ ಸೀಟುಗಳು, ಡಿಜಿಟಲ್ ರೂಟ್ ಮ್ಯಾಪ್ ತೋರಿಸುವ ಎಲ್ ಇಡಿ ಸ್ಕ್ರೀನ್, ಕಡಿಮೆ ಶಬ್ದ ಮಾಲಿನ್ಯ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲೇ ಡ್ರೈವರ್ ಲೆಸ್ ರೈಲುಗಳನ್ನು ಲೋಕಾರ್ಪಣೆಗೊಳಿಸುವ ಗುರಿಯನ್ನು ದೆಹಲಿ ಮೆಟ್ರೋ ಹೊಂದಿದೆ. ಅಲ್ಲದೆ 81 ಇಂತಹ ರೈಲುಗಳನ್ನು ಓಡಿಸಲಾಗುವುದು. ಈ ಪೈಕಿ 14 ರೈಲುಗಳು ಈಗಲೇ ಮುಕುಂದಪುರ ಡಿಪೊವನ್ನು ಬಂದು ತಲುಪಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಮೂರನೇ ಹಂತದಲ್ಲಿ ನೂತನ ಸಂವಹನ ಆಧರಿತ ರೈಲು ನಿಯಂತ್ರಣ ಸಿಗ್ನಲ್ ತಂತ್ರಜ್ಞಾನವನ್ನು ಅವಿಷ್ಕರಿಸಲಾಗುತ್ತಿದೆ. ಇದರ ಪರೀಕ್ಷೆಯು ಜುಲೈ ತಿಂಗಳಿನಲ್ಲೇ ನಡೆಯಲಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಕೊರಿಯಾ ತಳಹದಿಯ ಸಂಸ್ಥೆಯಿಂದ ಡ್ರೈವರ್ ಲೆಸ್ ರೈಲನ್ನು ಭಾರತಕ್ಕೆ ತರಲಾಗುತ್ತಿದ್ದು, ಬಳಿಕ ಇಲ್ಲಿ ಜೋಡಣೆ ಮಾಡಲಾಗುತ್ತಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಆಟೋಮ್ಯಾಟಿಕ್ ರೈಲುಗಳ ಓಡಾಟವನ್ನು ನಿಯಂತ್ರಿಸಲು ವಿಶೇಷ ಕಂಟ್ರೋಲ್ ರೂಂಗಳ ವ್ಯವಸ್ಥೆಯೂ ಇರುತ್ತದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಮುಂಭಾಗದಲ್ಲಿ ಸಣ್ಣ ಪುಟ್ಟ ಅತಿ ಸೂಕ್ಷ್ಮವಾದ ಅಡೆತಡೆಗಳು ಎದುರಾದರೂ ಅವುಗಳನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯು ಇದರಲ್ಲಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ಅಲ್ಲದೆ ಮಹಿಳೆಯರಿಗೆ ಗುಲಾಬಿ ಬಣ್ಣದ ವಿಶೇಷ ಬೋಗಿಯ ವ್ಯವಸ್ಥೆಯೂ ಇರುತ್ತದೆ. ಒಟ್ಟಿನಲ್ಲಿ ರಾಜಧಾನಿಯ ಪ್ರಯಾಣಿಕರಿಗೆ ಡ್ರೈವರ್ ಲೆಸ್ ರೈಲು ಹೊಸ ಅನುಭವವಾಗಲಿದೆ.

Most Read Articles

Kannada
Read more on ದೆಹಲಿ delhi metro
English summary
Delhi Metro’s first driverless train to run by year end
Story first published: Saturday, April 9, 2016, 9:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X