ಚಿತ್ರದುರ್ಗದಲ್ಲಿ ನಿಯಂತ್ರಣ ತಪ್ಪಿ ಪತನಗೊಂಡ ಲಘು ವಿಮಾನ
ಕೇಂದ್ರದ ರಕ್ಷಣಾ ಇಲಾಖೆಯು ನಿರ್ಮಾಣ ಮಾಡಿದ್ದ ಸರ್ವೇಕ್ಷಣಾ ಡ್ರೋಣ್ ಒಂದು ಹಾರಾಟದ ವೇಳೆ ಪತನವಾಗಿರುವ ಘಟನೆಯು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕೇಂದ್ರದ ರಕ್ಷಣಾ ಇಲಾಖೆಯು ನಿರ್ಮಾಣ ಮಾಡಿದ್ದ ಸರ್ವೇಕ್ಷಣಾ ಡ್ರೋಣ್ ಒಂದು ಹಾರಾಟದ ವೇಳೆ ಪತನವಾಗಿರುವ ಘಟನೆಯು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಳ್ಳಕೆರೆ ಬಳಿ ನಿರ್ಮಾಣವಾಗಿರುವ ಕೇಂದ್ರ ರಕ್ಷಣಾ ಸಂಶೋಧನೆ ಹಾಗೂ ಅಭಿವದ್ಧಿ ಸಂಸ್ಥೆಯು ತನ್ನ ಸಂಶೋಧನೆಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲು ಡ್ರೋಣ ಬಳಸುತ್ತಿದ್ದಾಗ ಈ ಘಟನೆ ನಡೆದಿದ್ದು, ಚಳ್ಳಕೆರೆ ತಾಲೂಕಿನ ದೊರೆಮಂದಲಹಟ್ಟಿ ಗ್ರಾಮದ ರಾಗಿ ಹೊಲದಲ್ಲಿ ಬಿದ್ದಿದೆ.

ಬೆಳಗ್ಗೆ 9 ಗಂಟೆಗೆಯೇ ಈ ಘಟನೆ ನಡೆದಿದ್ದು, ಸುಮಾರು ಏಳು ಅಡಿ ಉದ್ದ ಹಾಗೂ 20 ಕೆಜಿ. ತೂಕ ಹೊಂದಿದೆ. ವಿಮಾನವು ಬಿದ್ದದ್ದನ್ನು ರಾಗಿ ಹೊಲಕ್ಕೆ ನೀರು ಹಾಯಿಸುತ್ತಿದ್ದ ಮಹಿಳೆ ನೋಡಿ ತಕ್ಷಣವೇ ದೂರ ಸರಿದಿದ್ದಾರೆ.

ಡಿಆರ್‌ಡಿಒ ವಿಜ್ಞಾನಿಗಳಾದ ಸರವಣ ಮತ್ತು ಶಿವಬಾಲಸುಬ್ರಮಣ್ಯಂ ಹಾಗೂ ಇನ್ನಿತರ ವಿಜ್ಞಾನಿಗಳ ತಂಡ ಸ್ಥಳ ಪರೀಶೀಲನೆ ನಡೆಸಿದ ಬಳಿಕ ವಿಮಾನವನ್ನು ಡಿಆರ್‌ಡಿಒ ಕಚೇರಿಗೆ ಕೊಂಡೊಯ್ಯಲಾಯಿತು ಎನ್ನಲಾಗಿದೆ.

ಇನ್ನು ಘಟನೆಗೂ ಮುನ್ನ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿಮಾನಕ್ಕೆ ಕೇಂದ್ರದ ರಡಾರ್‌ನ ಸಂಪರ್ಕ ಕಡಿದುಕೊಂಡಿದ್ದು, ಡಿಆರ್‌ಡಿಒ ಕೇಂದ್ರದಿಂದ ಮೂರು ಕಿ.ಮೀ. ಹೊರಭಾಗದಲ್ಲಿ ಈ ಅವಘಡ ನಡೆದಿದೆ.

ಆದ್ರೆ ಅದೃಷ್ಟವಶಾತ್ ಡ್ರೋಣ್ ಪತನದಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಡಿಆರ್‌ಡಿಒ ಕೇಂದ್ರದಲ್ಲಿ ನಡೆಯುವ ಸಂಶೋಧನೆಗಳ ಮಾಹಿತಿಯು ಸೋರಿಕೆಯಾಗದಂತೆ ತಡೆಯಲು ಈ ಡ್ರೋಣ್ ಬಳಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಸಂಶೋಧನಾ ಕೇಂದ್ರದ ಸುತ್ತ ಸಂಚರಿಸಿ ಅಪರಿಚಿತ ವ್ಯಕ್ತಿಗಳ ಬಗ್ಗೆ ಸುಳಿವು ನೀಡುತ್ತಿದ್ದ ಈ ಲಘು ವಿಮಾನವು ದುಬಾರಿ ಬೆಲೆಯ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದು, ಅವಘಡದಿಂದ ಲಘು ವಿಮಾನದಲ್ಲಿದ್ದ ಹಲವು ಉಪಕರಣಗಳು ಮಣ್ಣುಪಾಲಾಗಿವೆ.
Images Source: TOI
Trending On DriveSpark Kannada:
ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...
ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?
ಲಾರಿ ಮತ್ತು ಫಾರ್ಚೂನರ್ ಮಧ್ಯೆ ಡಿಕ್ಕಿ- ಬಿಜೆಪಿ ಶಾಸಕ ಸ್ಥಳದಲ್ಲೇ ಸಾವು..!!


Click it and Unblock the Notifications








