"ವೇಗ ಮತ್ತು ಉದ್ವೇಗ"ದ ಹವಾ ಜೋರು- ಆದ್ರೆ ವಿಮಾ ಕಂಪನಿಗಳಿಗೆ ಮಾತ್ರ ಫುಲ್ ಲಾಸು..!!

Written By:

ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದಲೂ ಡಬ್ಬಿಂಗ್ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈ ಮಧ್ಯೆ ಹಾಲಿವುಡ್‌ನ ಬ್ಲಾಕ್ ಬಾಸ್ಟರ್ ಚಿತ್ರ ಫಾಸ್ಟ್ ಆ್ಯಂಡ್ ಫ್ಯೂರಿಯಸ್-8 ಕನ್ನಡದಲ್ಲೂ ಬಿಡುಗಡೆಯಾಗಿದ್ದು, ಚಿತ್ರದ ಟೈಟಲ್ ಸಖತ್ ಸುದ್ಧಿಯಾಗುತ್ತಿದೆ.

To Follow DriveSpark On Facebook, Click The Like Button

"ವೇಗ ಮತ್ತು ಉದ್ವೇಗ"

ಕನ್ನಡಕ್ಕೆ ಡಬ್ಬಿಂಗ್ ಹಿನ್ನೆಲೆ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರದ ಶೀರ್ಷಿಕೆಯನ್ನು ಸಾರಾಸಗಟಾಗಿ ಕನ್ನಡಕ್ಕೆ ಅನುವಾದ ಮಾಡಲಾಗಿದ್ದು, ವೇಗ ಮತ್ತು ಉದ್ವೇಗ ಎಂಬ ಟೈಟಲ್ ನೀಡಲಾಗಿದೆ.

"ಸಂಸಾರ, ಸರ್ವನಾಶ ಆಯ್ತು"

ಇದು ವೇಗ ಮತ್ತು ಉದ್ವೇಗ ಚಿತ್ರದ ಟ್ಯಾಗ್ ಲೈನ್. ಚಿತ್ರದ ಸಾರಂಶವನ್ನು ಟ್ಯಾಗ್ ಲೈನ್ ಮೂಲಕ ತಿಳಿಸಲಾಗಿದ್ದು, ಟ್ಯಾಗ್ ಲೈನ್ ಪದ ಬಳಕೆ ಸಿನಿ ಪ್ರಿಯರಿಗೆ ನಗೆ ತರಿಸದೇ ಇರಲಾರದು.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್

ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರದ ಕನ್ನಡದ ಟೈಟಲ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ತಹರೇವಾರಿ ಜೋಕ್ ಹುಟ್ಟಿಕೊಳ್ಳುತ್ತಿದ್ದು, ವೇಗ ಮತ್ತು ಉದ್ವೇಗದ ಬಗ್ಗೆ ಪ್ರೇಕ್ಷಕರು ಥ್ರೀಲ್ ಆಗಿದ್ದಾರೆ.

ವಿಶ್ವಾದ್ಯಂತ ಇಂದು ಬಿಡುಗಡೆ

ಸಿನಿ ಪ್ರಿಯರಿಗೆ ಭಾರೀ ಕುತೂಹಲ ಹುಟ್ಟಿಸಿರುವ ವೇಗ ಮತ್ತು ಉದ್ವೇಗ ಚಿತ್ರವು ಇಂದು ವಿಶ್ವಾದ್ಯಂತ ತೆರೆಕಂಡಿದ್ದು, ಹಿಂದಿನ ಚಿತ್ರಗಳಂತೆ ಮತ್ತೊಮ್ಮೆ ಬ್ಲಾಕ್ ಬಸ್ಟರ್ ಆಗುವ ನಿರೀಕ್ಷೆಯಲ್ಲಿದೆ.

ಗುಜರಿಗೆ ಬಿದ್ದಿವೆ ನೂರಾರು ಐಷಾರಾಮಿ ಕಾರುಗಳು

ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರವೇ ಒಂದು ಥ್ರೀಲ್ ಎಂದರೇ ತಪ್ಪಾಗಲಾರದು. ಇನ್ನು ಚಿತ್ರದ ಆರಂಭದಿಂದ ಹಿಡಿದು ಮುಗಿಯುವ ತನಕ ನಾಯಕ ಮತ್ತು ಖಳನಾಯಕ ನಡುವೆ ಘರ್ಷಣೆ ನಡೆಯುತ್ತಲೇ ಇರುವ ದೃಶ್ಯಗಳಿದ್ದು, ಚಿತ್ರ ನಿರ್ಮಾಣಕ್ಕಾಗಿ ನೂರಾರು ಕಾರುಗಳನ್ನು ಬಳಕೆ ಮಾಡಲಾಗಿದೆ.

ನಲುಗಿದ ವಿಮೆ ಕಂಪನಿಗಳು

'ದಿ ಫೇಟ್ ಆಫ್ ಫ್ಯೂರಿಯಸ್' ಚಿತ್ರ ಬಿಡುಗೆಡೆಗೆ ಸಿದ್ಧಗೊಳ್ಳುತ್ತಿದ್ದಂತೆ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ. ಆದ್ರೆ ವಿಮೆ ಕಂಪನಿಗಳಿಗೆ ಇದನ್ನು ಅರಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಕೇಳಿದ್ರೆ ನಿಮಗೂ ಕೂಡಾ ಶಾಕ್ ಆಗದೇ

ಇರಲಾರದು.

ದಿಗಿಲು ಮೂಡಿಸಿದ ಅಂಕಿಅಂಶ

ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರ ಸರಣಿಗಳ ನಿರ್ಮಾಣಕ್ಕಾಗಿ ಇದುವರೆಗೂ ಸಾವಿರಾರು ಐಷಾರಾಮಿ ವಾಹನಗಳನ್ನು ಬಳಕೆ ಮಾಡಲಾಗಿದ್ದು, ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣದ ವಾಹನಗಳು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದ್ದು , 194.1 ಮಿಲಿನ್ ಡಾಲರ್ ನಷ್ಟ ಸಂಭವಿಸಿದೆ.

ವಿಮೆ ಕಂಪನಿಗಳಿಗೆ ಯಾಕೆ ಸಂಕಷ್ಟ?

ಪ್ರತಿಯೊಬ್ಬರಿಗೂ ಈ ಪ್ರಶ್ನೆ ಮೂಡದೇ ಇರಲಾರದು. ಯಾಕೇಂದ್ರೆ ಚಿತ್ರ ನಿರ್ಮಾಣದ ವೇಳೆ ಹಾಳಾದ ಕಾರುಗಳಿಂದಾಗಿ ವಿಮೆ ಕಂಪನಿಗಳಿಗೆ ನೇರ ಹೊಡೆತ ಬಿಳುತ್ತಿದೆ. ಇದಕ್ಕೆ ಕಾರಣ ಚಿತ್ರದಲ್ಲಿ ಹಾಳಾದ ಕಾರುಗಳಿಗೆ ಚಿತ್ರ ತಯಾಕರು ಇನ್ಯೂರೆನ್ಸ್ ಕ್ಲೆಮ್ ಮಾಡಲು ಮುಂದಾಗಿರುವುದು.

ಇದುವರೆಗೆ ಬಿಡುಗಡೆಗೊಂಡ ಎಲ್ಲ 7 ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಒಟ್ಟು 514.3 ಮಿಲಿಯನ್ ಡಾಲರ್ ನಷ್ಟವಾಗಿದೆ. ಇದರ ಜೊತೆಗೆ 169 ಮಾಮೂಲಿ ವಾಹನಗಳು ಹಾನಿಗೀಡಾಗಿದ್ದು, 142 ಮಾಮೂಲಿ ವಾಹನಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.

ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರ ಸರಣಿಯಲ್ಲಿ ನೂರಾರು ದುಬಾರಿ ಕಾರುಗಳು ಧ್ವಂಸಗೊಂಡಿವೆ. ಅವುಗಳಲ್ಲಿ ಅತ್ಯಂತ ದುಬಾರಿ ಕಾರೆಂದರೆ ಫಾಸ್ಟ್ ಫ್ಯೂರಿಯಸ್ 7 ಚಿತ್ರದಲ್ಲಿ ಬಳಕೆಯಾಗಿದ್ದ ಲೈಕನ್ ಹೈಪರ್‌ಸ್ಪೋರ್ಟ್, ಈ ಕಾರಿನ ಮೌಲ್ಯ 3.4 ಮಿಲಿನ್ ಡಾಲರ್.

ಕೇವಲ ದುಬಾರಿ ಕಾರುಗಳು ಅಷ್ಟೇ ಅಲ್ಲ. ಇದರ ಜೊತೆಗೆ 37 ವಿಶೇಷ ವಾಹನಗಳೂ ಧ್ವಂಸಗೊಂಡಿದ್ದು, ಕಸ್ಟಮ್ ಮೇಡ್ ಮತ್ತು ರೇಸ್ ಕಾರುಗಳು, ಬಸ್ ಮತ್ತು ರೈಲುಗಳು, ಬೈಕ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಮಿಲಿಟರಿ ವಾಹನಗಳು ಗುಜರಿ ಸೇರಿವೆ.

ಫಾಸ್ಟ್ ಫ್ಯೂರಿಯಸ್ ಚಿತ್ರ ಸರಣಿಯಲ್ಲಿ ಒಟ್ಟು 53 ಕಟ್ಟಡಗಳು ಹಾನಿಗೀಡಾಗಿವೆ. ಜೊತೆಗೆ 32 ಕಟ್ಟಡಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಐಷಾರಾಮಿ ಹೋಟೆಲ್‌ಗಳಲ್ಲೂ ಭಾರೀ ಪ್ರಮಾಣದ ನಷ್ಟವಾಗಿದ್ದು, ಇದೆಲ್ಲವೂ ನಷ್ಟ ವಿಮೆ ಕಂಪನಿಗಳ ಮೇಲೆ ಬಿಳಲಿದೆ.

ಚಿತ್ರದ ಆದಾಯದಲ್ಲಿ ದಾಖಲೆಯ ಏರಿಕೆ

ಕಳೆದ 16 ವರ್ಷಗಳಲ್ಲಿ ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯಲ್ಲಿ ಎಂಟು ಚಿತ್ರಗಳು ತಯಾರಾಗಿದ್ದು, ಮೊದಲ 7 ಸರಣಿಗಳು ಭಾರತದಲ್ಲೂ ಹೆಚ್ಚಿನ ಆದಾಯ ತಂದುಕೊಟ್ಟಿವೆ. ದೇಶದಲ್ಲೇ ಒಟ್ಟು 1.29 ಬಿಲಿಯನ್ ಡಾಲರ್ ಮತ್ತು ವಿಶ್ವಾದ್ಯಂತ 3.89 ಮಿಲಿಯನ್ ಡಾಲರ್ ಗಳಿಕೆ ಕಂಡಿದೆ.

ಒಟ್ಟಿನಲ್ಲಿ ಹಾಲಿವುಡ್‌ನಲ್ಲಿ ಮಿಂಚುವ ಮೂಲಕ ಇದೀಗ ಕನ್ನಡಕ್ಕೂ ಬರುತ್ತಿರುವ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರ, ವೇಗ ಮತ್ತು ಉದ್ವೇಗದ ಮೂಲಕ ಸಿನಿ ಪ್ರಿಯರಿಗೆ ಹೊಸ ಥ್ರೀಲ್ ಕೊಡಲು ಮುಂದಾಗಿದೆ. ಆದ್ರೆ ಡಬ್ಬಿಂಗ್ ವಿರೋಧದ ನಡುವೆ ಚಿತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೆ ಎಂಬುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

English summary
Fast and Furious Hollywood film released Today in India and Abroad.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark