ಮೊದಲ ಕಾರಿನ ನೆನಪು ಬಿಚ್ಚಿಟ್ಟ ಚಿತ್ರ ನಿರ್ದೇಶಕ
ನಟ, ನಟಿ ಹಾಗೂ ನಿರ್ದೇಶಕರ ಬಳಿ ದುಬಾರಿ ಕಾರುಗಳಿರುವುದು ಸಾಮಾನ್ಯ. ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್, ಆಡಿ, ಬಿಎಂಡಬ್ಲ್ಯುನಂತಹ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸಲು ಅವರು ಇಷ್ಟಪಡುತ್ತಾರೆ.

ಈ ಕಾರಣಕ್ಕೆ ಐಷಾರಾಮಿ ಕಾರುಗಳನ್ನು ಖರೀದಿಸುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ. ಚಿತ್ರೋದ್ಯಮದಲ್ಲಿರುವ ಬಹುತೇಕ ಜನರ ಮೊದಲ ಕಾರು ಸರಳವಾದ ಕಾರುಗಳಾಗಿದ್ದವು. ಈಗಂತೂ ಹಲವರ ಮೊದಲ ಕಾರುಗಳು ಐಷಾರಾಮಿ ಕಾರುಗಳೇ ಆಗಿರುತ್ತವೆ. ಕೆಲವರು ತಮ್ಮ ಮೊದಲ ಕಾರನ್ನು ಮರೆತರೂ, ಹೆಚ್ಚಿನವರು ಅದನ್ನು ಎಂದಿಗೂ ಮರೆಯುವುದಿಲ್ಲ.

ಕೆಲವು ಸೆಲೆಬ್ರಿಟಿಗಳು ತಮ್ಮ ಮೊದಲ ಕಾರಿನ ಖರೀದಿಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಅವರಲ್ಲಿ ಇಮ್ತಿಯಾಜ್ ಅಲಿ ಸಹ ಒಬ್ಬರು. ಇಮ್ತಿಯಾಜ್ ಅಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅವರು ತಮ್ಮ ಮೊದಲ ಕಾರಿನ ನೆನಪುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಇಮ್ತಿಯಾಜ್ ಅಲಿಯವರ ಮೊದಲ ಕಾರು ಮಾರುತಿ 800. ಈ ಕಾರು ಭಾರತೀಯರ ಮನಸ್ಸಿನಲ್ಲಿ ಎಂದೆಂದಿಗೂ ಇರುತ್ತದೆ. ಇಮ್ತಿಯಾಜ್ ಅಲಿ ಆವರಿಗೆ ಮಾತ್ರವಲ್ಲದೇ ಹೆಚ್ಚಿನ ಜನರ ಮೊದಲ ಕಾರು ಮಾರುತಿ 800.

ನಿರ್ದೇಶಕ ಇಮ್ತಿಯಾಜ್ ಅಲಿ ತಮ್ಮ ಮೊದಲ ಕಾರ್ ಆದ ಮಾರುತಿ 800ನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾರುತಿ 800 ಕಾರಿನಲ್ಲಿ ಇಮ್ತಿಯಾಜ್ ಅಲಿ ಗೋವಾ ಪ್ರವಾಸಕ್ಕೆ ಹೋಗಿದ್ದಾಗ ಈ ಫೋಟೋ ತೆಗೆಯಲಾಗಿದೆ. ಈ ಮಾಹಿತಿಯನ್ನು ಇಮ್ತಿಯಾಜ್ ಅಲಿರವರೇ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ:
MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ನನ್ನ ಮೊದಲ ಕಾರು. ಮೊದಲ ಹೈವೇ ಪ್ರಯಾಣ ಗೋವಾಕ್ಕೆ ಎಂದು ಹೇಳಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇರುವ ಇಮ್ತಿಯಾಜ್ ಅಲಿರವರು ಈ ಮಾಹಿತಿಯನ್ನು ತಮ್ಮ ಹಳೆಯ ನೆನಪುಗಳೊಂದಿಗೆ ಹಂಚಿಕೊಂಡಿದ್ದಾರೆ. ನಿರ್ದೇಶಕ ಇಮ್ತಿಯಾಜ್ ಅಲಿರವರ ಈ ಪೋಸ್ಟ್ ಸಾಕಷ್ಟು ಜನರ ಗಮನ ಸೆಳೆದಿದೆ.

ಮಾರುತಿ 800 ಕಾರು, ಭಾರತದ ವಾಹನ ಉದ್ಯಮದ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಭಾರತೀಯರು ಎರಡು ಕಾರುಗಳನ್ನು ಎಂದಿಗೂ ಮರೆಯುವುದಿಲ್ಲ. ಒಂದು ಹಿಂದೂಸ್ತಾನ್ ಅಂಬಾಸಿಡರ್. ಇನ್ನೊಂದು ಮಾರುತಿ 800. ಮಾರುತಿ 800 ಕಾರಿನ ಉತ್ಪಾದನೆ ಸ್ಥಗಿತಗೊಂಡಿದ್ದರೂ ಜನರು ಅದನ್ನು ಎಂದಿಗೂ ಮರೆಯುವುದಿಲ್ಲ.
MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಮಾರುತಿ 800 ಕಾರಿನ ಉತ್ಪಾದನೆಯನ್ನು 1983ರಲ್ಲಿ ಆರಂಭಿಸಲಾಯಿತು. ಅಂದಿನಿಂದ 2014ರವರೆಗೆ 31 ವರ್ಷಗಳ ಕಾಲ ಈ ಕಾರ್ ಅನ್ನು ಉತ್ಪಾದಿಸಲಾಯಿತು. ಮಾರುತಿ 800 ಭಾರತದ ರಸ್ತೆಗಳಲ್ಲಿ ಅತಿ ಹೆಚ್ಚು ಕಾಲ ಚಲಿಸಿದ ಕಾರುಗಳಲ್ಲಿ ಒಂದಾಗಿದೆ.

31 ವರ್ಷಗಳ ಆವಡಿಯಲ್ಲಿ 26 ಲಕ್ಷಕ್ಕೂ ಹೆಚ್ಚು ಮಾರುತಿ 800 ಕಾರುಗಳು ಮಾರಾಟವಾಗಿದ್ದವು. ಮಾರುತಿ 800 ಕಾರಿನಿಂದಾಗಿಯೇ ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಜನಪ್ರಿಯವಾಯಿತು ಎಂದರೆ ತಪ್ಪಲ್ಲ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸಾಧಾರಣ ವಿನ್ಯಾಸ, ಉತ್ತಮ ಮೈಲೇಜ್ ಹಾಗೂ ಕೈಗೆಟಕುವ ಬೆಲೆಯ ಕಾರಣದಿಂದಾಗಿ ಮಾರುತಿ 800 ಕಾರು ಹೆಚ್ಚು ಜನಪ್ರಿಯವಾಯಿತು. 1990 ಹಾಗೂ 2000ರ ದಶಕದಲ್ಲಿ ಜನಪ್ರಿಯವಾಗಿದ್ದ ಮಾರುತಿ 800 ಕಾರ್ ಅನ್ನು 2014ರಲ್ಲಿ ಸ್ಥಗಿತಗೊಳಿಸಲಾಯಿತು.


Click it and Unblock the Notifications