ಇನ್ನೆಂದು ಮಂಗಳೂರು ದುರಂತ ಮರುಕಳಿಸದು; ಬಂದಿದೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

Written By:

ನಿರಂತರ ಅಂತರಾಳಗಳಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಈ ಸಮಸ್ಯೆ ಅರ್ಥವಾಗಬಹುದು. ಲ್ಯಾಂಡಿಂಗ್ ಗೂ ಮುಂಚಿತವಾಗಿ ವಿಮಾನಗಳು ಅಲ್ಲಿಯೇ ಸಮೀಪದಲ್ಲಿ ಸುತ್ತುತ್ತಿರುವುದನ್ನು ಮನಗಾಣಬಹುದಾಗಿದೆ. ಇಂತಹ ಎಲ್ಲ ಏರ್ ಟ್ರಾಫಿಕ್ ತೊಂದರೆಗಳನ್ನು ನೀಗಿಸಲು ಭಾರತ ಅತಿ ನೂತನ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಇನ್ನು ಮುಂದೆ ವಿಮಾನಯಾನ ಚಟುವಟಿಕೆಗಳು ಹೆಚ್ಚು ದಕ್ಷ ಹಾಗೂ ವೆಚ್ಚವನ್ನು ಕಡಿತ ಮಾಡಲಿದೆ.

ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೋ) ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಗಗನ್ ಅಥವಾ ಜಿಪಿಎಸ್ ಏಡೆಡ್ ಜಿಯೊ ಆಗ್ಮೆಂಟೆಡ್ ನ್ಯಾವಿಗೇಷನ್ ವ್ಯವಸ್ಥೆಯು ವಿಮಾನಗಳಿಗೆ ನಿಖರವಾಗಿ ದಿಕ್ಕು ತೋರಿಸಲಿದೆ. ತನ್ಮೂಲಕ ಉಪಗ್ರಹ ಆಧಾರಿತ ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರುವ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಗಗನ್ ದಿಕ್ಸೂಚಿ ವ್ಯವಸ್ಥೆಯು ಭಾರತೀಯ ವಾಯು ವಲಯದಲ್ಲಿ ಆಧುನಿಕ ಸಂವಹನ, ಸಂಚರಣೆ, ಕಣ್ಗಾವಲು ಹಾಗೂ ಏರ್ ಟ್ರಾಫಿಕನ್ನು ಸಮಪರ್ಕವಾಗಿ ನಿರ್ವಹಿಸಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಗಗನ್ ದಿಕ್ಸೂಚಿ ವ್ಯವಸ್ಥೆಯ ಅಭಿವೃದ್ಧಿಗೆ ಸರಿ ಸುಮಾರು 774 ಕೋಟಿ ರುಪಾಯಿಗಳನ್ನು ವ್ಯಯ ಮಾಡಲಾಗಿದೆ. ಪ್ರಮುಖವಾಗಿಯೂ ಏರ್ ಟ್ರಾಫಿಕ್ ನಿಯಂತ್ರಿಸುವುದರಿಂದ ಪ್ರಯಾಣದ ಅವಧಿ ಕಡಿಮೆಯಾಗಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಇದರಿಂದಾಗಿ ಇಂಧನ ಬಳಕೆಯು ಗಣನೀಯವಾಗಿ ಕುಸಿಯಲಿದ್ದು, ವಿಮಾನ ನಿರ್ವಹಣಾ ವೆಚ್ಚದಲ್ಲೂ ಇಳಿಕೆಯುಂಟಾಗಲಿದೆ. ಕ್ರಮೇಣ ಇದು ವಿಮಾನ ಪ್ರಯಾಣ ದರ ಇಳಿಕೆಗೂ ಸಹಕಾರಿಯಾಗಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಮಂಗಳೂರು ಹಾಗೂ ಲೇಹ್ ನಂತಹ ಅತ್ಯಂತ ಕಠಿಣವಾದ ವಿಮಾನ ನಿಲ್ದಾಣಗಳಲ್ಲಿ ಬಹಳ ನಿಖರವಾಗಿ ವಿಮಾನ ಲ್ಯಾಂಡಿಂಗ್ ಮಾಡಲು ನೂತನ ಗಗನ್ ದಿಕ್ಸೂಚಿ ವ್ಯವಸ್ಥೆಯಿಂದ ಸಾಧ್ಯವಾಗಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಗಗನ್ ವಿಮಾನಯಾನ ದಿಕ್ಸೂಚಿ ವ್ಯವಸ್ಥೆಯು ಈಗಿರುವ ಎರಡು ವಿಮಾನಗಳ ಬದಲು 50ರಷ್ಟು ವಿಮಾನಗಳನ್ನು ಏಕಕಾಲದಲ್ಲಿ ಕಾರ್ಯ ನಿರ್ವಹಿಸಲು ನೆರವಾಗಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಈಗಿರುವ ನಿಯಮದ ಪ್ರಕಾರ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಾಗ ಎರಡು ವಿಮಾನಗಳ ನಡುವೆ ಕನಿಷ್ಠ 18 ಕೀ.ಮೀ. ಗಳ ಅಂತರವಿರಬೇಕು. ಪ್ರಸ್ತುತ ಗಗನ್ ವ್ಯವಸ್ಥೆಯೊಂದಿಗೆ ಈ ಅಂತರ ಕೇವಲ 360 ಮೀಟರ್ ಗಳಿಗೆ ಇಳಿಕೆಯಾಗಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ದೆಹಲಿಯಂತಹ ದೇಶದ ಪ್ರಮುಖ ನಗರಗಳಲ್ಲಿ ವಿಮಾನ ಪ್ರಯಾಣದ ಅವಧಿಯು ಗಣನೀಯವಾಗಿ ಕುಸಿಯಲಿದೆ. ಲ್ಯಾಂಡಿಂಗ್ ನಿಖರವಾಗಿ ಆಗುವುದರಿಂದ ಸಮಯ ಲಾಭ, ಇಂಧನ ಲಾಭ, ನಿರ್ವಹಣಾ ವೆಚ್ಚ ಕಡಿಮೆ ಹಾಗೂ ಹೆಚ್ಚು ಸುರಕ್ಷಿತವೆನಿಸಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಗಗನ್ ಯೋಜನೆಯಾಗಿ ಭಾರತೀಯ ಸರಕಾರವು 378 ಕೋಟಿ ರು., ಎಎಐ 226 ಕೋಟಿ ರು. ಹಾಗೂ ಉಳಿದ 170 ಕೋಟಿ ರುಪಾಯಿಗಳನ್ನು ಇಸ್ರೋ ಹೂಡಿಕೆ ಮಾಡಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಿ ಕೊಟ್ಟಿರುವ ಜಿಸ್ಯಾಟ್ 8 ಮತ್ತು 10 ಗಳೆಂಬ ಎರಡು ಸಂಪರ್ಕ ಉಪಗ್ರಹಗಳ ಸಿಗ್ನಲ್ ನಿಂದ ಗಗನ್ ಕಾರ್ಯ ನಿರ್ವಹಿಸಲಿದೆ. ಇವುಗಳು ದೇಶದಲ್ಲಿ ಸ್ಥಿತಗೊಂಡಿರುವ 15 ರೆಫೆರನ್ಸ್ ತಾಣಗಳಿಂದ ಸಿಗ್ನಲ್ ಕಲೆ ಹಾಕಲಿದೆ. ಇದರ ಹೊರತಾಗಿ ಬೆಂಗಳೂರು ಸೇರಿದಂತೆ ಮೂರು ಅಪ್ ಲಿಂಕ್ ಸ್ಟೇಷನ್ ಗಳಿರಲಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಗಗನ್ ಸ್ಯಾಟಲೈಟ್ ನಿಂದ ಸಿಗ್ನಲ್ ಗಳನ್ನು ಪಡೆಯಲು ವಿಮಾನಗಳಲ್ಲಿ ಸ್ಪೇಸ್ ಬೇಸ್ಡ್ ಆಗ್ಮೆಂಟೆಡ್ ಸಿಸ್ಟಂ (ಎಸ್ ಬಿಎಎಸ್) ಲಗತ್ತಿಸುವ ಅಗತ್ಯವಿದೆ.

ಏರ್ ಟ್ರಾಫಿಕ್ ನಿಯಂತ್ರಣಕ್ಕೆ 'ಗಗನ್' ವಿಮಾನ ದಿಕ್ಸೂಚಿ ವ್ಯವಸ್ಥೆ

ಎಸ್ ಬಿಎಎಸ್ ವಿಮಾನಗಳಲ್ಲಿ ಜೋಡಣೆ ಮಾಡಲು ಮತ್ತು ಪೈಲಟ್ ಗೆ ತರಬೇತಿ ನೀಡಲು ಎರಡು ಕೋಟಿ ರುಪಾಯಿಗಳಷ್ಟು ವೆಚ್ಚ ತಗುಲಲಿದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ಹಿಂದೇಟು ಹಾಕುತ್ತಿದೆ ಎಂಬ ಬಗ್ಗೆಯೂ ಎಎಐ ಆತಂಕ ವ್ಯಕ್ತಪಡಿಸಿದೆ.

Read more on ಭಾರತ india
English summary
India developed new Navigation System Gagan to ease landing in airports
Story first published: Thursday, August 18, 2016, 12:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark