ಬರಿ 15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

Written By:

2017ನೇ ಸಾಲು ಇಡೀ ಜಗತ್ತಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬದಲಾಯಿಸಲಿದೆ. ಯಾಕೆಂದರೆ ಸ್ವಿಜರ್ಲೆಂಡ್‌ನ ಪ್ರಸಿದ್ಧ ನಗರವಾಗಿರುವ ಜಿನೆವಾದಲ್ಲಿ ಅತಿ ನೂತನ ವಿದ್ಯುತ್ ಚಾಲಿತ ಬಸ್ಸೊಂದು ನಿರ್ಮಾಣವಾಗುತ್ತಿದ್ದು, ಕೇವಲ 15 ಸೆಕೆಂಡುಗಳಷ್ಟು ಮಾತ್ರ ಚಾರ್ಜ್ ಮಾಡಿಸಿದ್ದಲ್ಲಿ ಎರಡು ಕೀ.ಮೀ.ಗಳಷ್ಟು ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ನೂತನ ತಂತ್ರಜ್ಞಾನ ವಿಕಾಸವು ಭಾರತೀಯರ ಪಾಲಿಗೆ ನಿರ್ಣಾಯಕವೆನಿಸಲಿದ್ದು, ಯಾಕೆಂದರೆ ಇಂತಹದೊಂದು ಯೋಜನೆ ಭಾರತದಲ್ಲೂ ನನಸಾದ್ದಲ್ಲಿ ದೇಶದಲ್ಲಿ ಕಾರ್ಬನ್ ಡೈ ಓಕ್ಸೈಡ್ ಮಾಲಿನ್ಯ ಮಟ್ಟವನ್ನು 3.7 ಮಿಲಿಯನ್ ಟನ್ ಗಳಷ್ಟು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಕೈಗಾರಿಕೆ ಮತ್ತು ತಂತ್ರಜ್ಞಾನ ಉತ್ತೇಜನ ನೀಡುತ್ತಿರುವ ಜಿನೆವಾ ಸಾರ್ವಜನಿಕ ಸಾರಿಗೆ ನಿರ್ವಾಹಕ ಸಂಸ್ಥೆಯಾಗಿರುವ ಟಿಜಿಪಿ, ಜಿನೆವಾ ಪವರ್ ಯುಟಿಲಿಟಿ ಎಸ್ ಐಜಿ ಮತ್ತು ಎಬಿಬಿ ಜೊತೆ ಸೇರಿಕೊಂಡು ನೂತನ ಬಸ್ಸುಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ನೂತನ ಬಸ್ಸುಗಳು ಟಿಒಎಸ್‌ಎ ಎಂಬ ಸಂಕ್ಷಿಪ್ತ ಹೆಸರಿನಿಂದ ಗುರುತಿಸಲ್ಪಡಲಿದೆ. ಇದರರ್ಥ ಟ್ರಾಲಿಬಸ್ ಓಪ್ಟಿಮೈಸೇಷನ್ ಸಿಸ್ಟಂ ಅಲೈಮೆಂಟೇಷನ್ ಎಂಬುದಾಗಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಮೊದಲ ನೋಟದಲ್ಲಿ ಬಹುತೇಕ ಯುರೋಪ್ ನಗರಗಳಲ್ಲಿರುವಂತಹ ಟ್ರಾಲಿ ಬಸ್ಸುಗಳಿಗೆ ಸಮಾನ ಗೋಚರಿಸುತ್ತಿದೆ. ಆದರೆ ಬಸ್ಸಿನ ಮೇಲ್ಚಾವಣಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಲಿಸುವಂತಹ ತೋಳಿನಂತಿದ್ದು ಇದು ಕೋಶವನ್ನು ಸಂಪರ್ಕಿಸುತ್ತದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಇಂತಹ ಕೋಶಗಳು ಫ್ಲ್ಯಾಶ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಹೊಂದಿದ್ದು, ಪ್ರಯಾಣಿಕರು ಹತ್ತಿ ಇಳಿಯುವರಷ್ಟರಲ್ಲಿ ಕೇವಲ 15 ಸಕೆಂಡುಗಳಲ್ಲೇ ರಿಚಾರ್ಜ್ ಮಾಡಿಸಬಹುದಾಗಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

15 ಸೆಕೆಂಡುಗಳಷ್ಟು ಚಾರ್ಜ್ ಮಾಡಿಸಿದ್ದಲ್ಲಿ 600 ಕಿಲೋವ್ಯಾಟ್ ಉತ್ತೇಜನವನ್ನು ಪಡೆಯಲಿದೆ. ಇದರಿಂದ 130 ಪ್ರಯಾಣಿಕರೊಂದಿಗೆ ಬಹಳ ಸಲೀಸಾಗಿ ಎರಡು ಕೀ.ಮೀ.ಗಳಷ್ಟು ದೂರ ಪ್ರಯಾಣಿಸಲು ಸಾಧ್ಯವಾಗಲಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಬಳಿಕ ಬಸ್ ಡಿಪೋಗೆ ತೆರಳಿ ನಾಲ್ಕೈದು ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜಿಂಗ್ ಮಾಡಿಸಬಹುದಾಗಿದೆ. ಜಿನೆವಾದಲ್ಲಿರುವ ಡೀಸೆಲ್ ಬಸ್ಸುಗಳನ್ನು ನೂತನ ಬಸ್ಸುಗಳು ಬದಲಾಯಿಸಲಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಅಧ್ಯಯನ ವರದಿ ಪ್ರಕಾರ ಡೀಸೆಲ್ ಬಸ್ಸುಗಳು ವಾರ್ಷಿಕವಾಗಿ 6,00,000 ಕೀ.ಮೀ. ಗಳಷ್ಟು ದೂರ ಸಂಚರಿಸುತ್ತದೆ. ಅಂದರೆ ನೂತನ ಬಸ್ಸುಗಳು ರಸ್ತೆಗಳಿದರೆ ವಾರ್ಷಿಕವಾಗಿ 1,000 ಟನ್ ಕಾರ್ಬನ್ ಡೈ ಓಕ್ಸೈಡ್ ಮಾಲಿನ್ಯ ಮಟ್ಟ ಕಡಿಮೆಯಾಗಲಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಜಿನೆವಾದಲ್ಲಿ 2018ರಲ್ಲಿ ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸುವ ನೂತನ ಬಸ್ಸು ದೈನಂದಿನ 10,000 ಪ್ರಯಾಣಿಕರನ್ನು ಹೊತ್ತೊಯ್ಯಲಿದೆ.

ಭಾರತದಲ್ಲಿ ಯಾಕೆ ಮಹತ್ವ ಗಿಟ್ಟಿಸಿಕೊಳ್ಳುತ್ತದೆ?

ಭಾರತದಲ್ಲಿ ಯಾಕೆ ಮಹತ್ವ ಗಿಟ್ಟಿಸಿಕೊಳ್ಳುತ್ತದೆ?

ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ವರದಿ ಪ್ರಕಾರ ಭಾರತೀಯ ರಸ್ತೆಗಳಲ್ಲಿ ಡೀಸೆಲ್ ಬಸ್ಸುಗಳನ್ನು ಎಲೆಕ್ಟ್ರಿಕ್ ಬಸ್ಸುಗಳಿಂದ ಬದಲಾಯಿಸುವುದರ ಮೂಲಕ ವಾರ್ಷಿಕವಾಗಿ 25 ಟನ್ ಕಾರ್ಬನ್ ಡೈ ಓಕ್ಸೈಡ್ ಮಾಲಿನ್ಯವನ್ನು ಕಡಿಮೆ ಮಾಡಬಹುದಾಗಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಭಾರತದಲ್ಲಿ 1,50,000ದಷ್ಟು ಡೀಸೆಲ್ ಬಸ್ಸುಗಳು ಓಡಾಡುತ್ತಿದೆ. ಈ ಬಸ್ಸುಗಳನ್ನು ಎಲೆಕ್ಟ್ರಿಕ್ ಬಸ್ಸುಗಳಿಂದ ಬದಲಾಯಿಸಿದರೆ ಮಾಲಿನ್ಯ ಮಟ್ಟದಲ್ಲಿ ಗಣನೀಯ ಇಳಿಕೆ ಆಗಲಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭವಿಷ್ಯದ 100 ಸ್ಮಾರ್ಟ್ ಸಿಟಿ ಕನಸಲ್ಲಿ ಎಲೆಕ್ಟ್ರಿಕ್ ಬಸ್ಸು ಯೋಜನೆಗೆ ಮಹತ್ವ ಕೊಡಬೇಕಿದೆ. ಇದು 2030ರ ವೇಳೆಗೆ ಪ್ಯಾರಿಸ್ ಹವಾಮಾನ ಸಮ್ಮತಿಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

ಬರ15 ಸೆಕೆಂಡು ಚಾರ್ಜ್‌ನಲ್ಲಿ 2 ಕೀ.ಮೀ. ಪಯಣ; ಮೋದಿ ಸ್ಮಾರ್ಟ್ ಸಿಟಿಗೆ ಫರ್ಫೆಕ್ಟ್!

ವೈಯಕ್ತಿಕ ಸಂಚಾರದಿಂದಾಗಿ ನಮ್ಮ ಬೆಂಗಳೂರಿನಂತಹ ನಗರಗಳಲ್ಲಿ ದೈನಂದಿನ ಟ್ರಾಫಿಕ್ ಪ್ರಮಾಣದಲ್ಲಿ ಭಾರಿ ಹೆಚ್ಚಳುವುಂಟಾಗುತ್ತಿದೆ. ಹಾಗಿರುವಾಗ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿದೆ.

English summary
Geneva’s New Buses Could Be The Perfect Solution For Pollution Problem
Story first published: Friday, October 7, 2016, 10:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark