ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಹಲವು ಬಾರಿ ಪೆಟ್ರೋಲ್ ಬಂಕ್ ಗಳಿಗೆ ಇಂಧನ ತುಂಬಿಸಲು ಹೋದಾಗ ನೀಡಿದ ಹಣಕ್ಕೆ ತಕ್ಕಷ್ಟು ಇಂಧನವನ್ನು ತುಂಬಿಸುವುದಿಲ್ಲವೆಂಬ ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ದೇಶದ ಹಲವು ಭಾಗಗಳಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ಫ್ಯೂಯಲ್ ಫಿಲ್ಟರ್‌ಗಳಲ್ಲಿ ಅನಿರ್ದಿಷ್ಟ ವ್ಯವಸ್ಥೆಯನ್ನು ಬಳಸಿ ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ಇಂಧನವನ್ನು ವಿತರಿಸದೇ ವಂಚಿಸಲಾಗುತ್ತಿರುವ ಬಗ್ಗೆ ವರದಿಗಳಾಗುತ್ತಲೇ ಇರುತ್ತವೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಇತ್ತೀಚಿಗೆ ಇದೇ ಕಾರಣಕ್ಕಾಗಿ ಪೆಟ್ರೋಲ್ ಬಂಕ್ ವೊಂದನ್ನು ಸೀಲ್ ಮಾಡಲಾಗಿದೆ. ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಪೆಟ್ರೋಲ್ ಬಂಕಿಗೆ ಗುಜರಾತ್ ರಾಜ್ಯದ ಕೃಷಿ, ಇಂಧನ ಹಾಗೂ ಪೆಟ್ರೋಕೆಮಿಕಲ್ ಸಚಿವರಾದ ಮುಖೇಶ್ ಪಟೇಲ್ ರವರೇ ಮುಂದೆ ನಿಂತು ಬಂದ್ ಮಾಡಿಸಿದ್ದಾರೆ. ಅವರು ಈ ಪೆಟ್ರೋಲ್ ಬಂಕ್ ನಲ್ಲಿ ನಡೆಯುತ್ತಿದ್ದ ಅಕ್ರಮವನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಈ ಪೆಟ್ರೋಲ್ ಬಂಕ್ ಸೂರತ್ ನಗರದ ಜಹಾಂಗೀರ್‌ಪುರ ಪ್ರದೇಶದಲ್ಲಿದೆ. ಈ ಪೆಟ್ರೋಲ್ ಬಂಕ್ ಖಾಸಗಿ ಕಂಪನಿಯಾದ ನಯಾರಾದ ಔಟ್‌ಲೆಟ್ ಆಗಿದೆ. ಮುಖೇಶ್ ಪಟೇಲ್ ರವರು ಗುಜರಾತಿನ ಒಲ್ಪಾಡ್ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಸಹ ಪೆಟ್ರೋಲ್ ಬಂಕ್ ಹೊಂದಿದ್ದಾರೆ. ಪೆಟ್ರೋಲ್ ಬಂಕ್ ಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಅವರಿಗೆ ಹಲವಾರು ಜನರು ದೂರು ನೀಡಿದ್ದರು.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಈ ದೂರುಗಳ ವಾಸ್ತವತೆಯನ್ನು ಅರಿಯಲು ಪಟೇಲ್ ರವರು ತಮ್ಮ ಖಾಸಗಿ ವಾಹನಕ್ಕೆ ಪೆಟ್ರೋಲ್ ತುಂಬಿಸಲು ಭಾನುವಾರ ಸಾಮಾನ್ಯ ನಾಗರಿಕರಂತೆ ಈ ಪೆಟ್ರೋಲ್ ಬಂಕಿಗೆ ತೆರಳಿದ್ದಾರೆ. ಈ ವೇಳೆ ಇಂಧನ ತುಂಬುವ ಯಂತ್ರದ ಡಿಸ್ ಪ್ಲೇ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ಕೇಳಿದಾಗ, ಯಂತ್ರದ ಇನ್ನೊಂದು ಬದಿಯಲ್ಲಿರುವ ಡಿಸ್ಪ್ಲೇ ಪರದೆಯನ್ನು ನೋಡಲು ಹೇಳಿದ್ದಾರೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಅಕ್ರಮ ನಡೆಯುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಚಿವ ಪಟೇಲ್ ತಕ್ಷಣವೇ ಸೂರತ್‌ನ ಜಿಲ್ಲಾಧಿಕಾರಿ ಆಯುಷ್ ಓಕ್ ಅವರನ್ನು ಪೆಟ್ರೋಲ್ ಬಂಕಿಗೆ ತಪಾಸಣಾ ತಂಡವನ್ನು ಕರೆ ತರುವಂತೆ ತಿಳಿಸಿದ್ದಾರೆ. ಸೂರತ್ ಜಿಲ್ಲಾ ಸರಬರಾಜು ಇಲಾಖೆ, ತೂಕ ಮತ್ತು ಅಳತೆ ಇಲಾಖೆಯ ತಂಡಗಳು ಪೆಟ್ರೋಲ್ ಬಂಕಿನಲ್ಲಿ ಬಳಸಲಾದ ನಳಿಕೆಗಳು ತಪ್ಪಾಗಿ ಮಾಪನಾಂಕ ಹೊಂದಿರುವುದನ್ನು ಪತ್ತೆ ಹಚ್ಚಿವೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ತಪಾಸಣೆ ವೇಳೆ ಸ್ಟಾಕ್ ರಿಜಿಸ್ಟರ್‌ನಲ್ಲಿ ಪ್ರವೇಶ ವಿವರಗಳನ್ನು ಸಹ ನಮೂದಿಸದೇ ಇರುವುದು ತಿಳಿದುಬಂದಿದೆ. ಇದು ಪೆಟ್ರೋಲ್ ಬಂಕ್'ಗಳಲ್ಲಿ ಅಗತ್ಯವಾದ ಕಾರ್ಯ ವಿಧಾನಗಳಲ್ಲಿ ಒಂದಾಗಿದೆ. ಇದರ ಆಧಾರದ ಮೇಲೆ ತಕ್ಷಣವೇ ಈ ಪೆಟ್ರೋಲ್ ಬಂಕ್ ಅನ್ನು ಸೀಲ್ ಮಾಡಿ ಬಂದ್ ಮಾಡಲಾಗಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆಯನ್ನು ಸಹ ಆರಂಭಿಸಲಾಗಿದೆ.

ತನಿಖೆ ನಡೆಯುತ್ತಿರುವ ಬಗ್ಗೆ ಖುದ್ದು ಮುಖೇಶ್ ಪಟೇಲ್ ರವರೇ ಖಚಿತ ಪಡಿಸಿದ್ದಾರೆ. ಸರ್ಕಾರವು ಇಂಧನದ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಿದರೂ, ಪೆಟ್ರೋಲ್ ಬಂಕ್ ಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ ಎಂದು ಅವರು ಹೇಳಿದರು. ಬಹುತೇಕ ದೂರುಗಳಲ್ಲಿ ಜನರು ತಮ್ಮ ವಾಹನಗಳಿಗೆ ಕಡಿಮೆ ಇಂಧನ ತುಂಬುತ್ತಿರುವ ಬಗ್ಗೆಯೇ ತಿಳಿಸಿರುತ್ತಾರೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಬಂದ್ ಮಾಡಲಾದ ಪೆಟ್ರೋಲ್ ಬಂಕ್ ನಲ್ಲಿನ ಅನುಭವದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಂಧನ ತುಂಬಿಸುವವರು ಸಾಮಾನ್ಯಕ್ಕಿಂತ ಸುಮಾರು 12 ಮಿಲಿ ಲೀಟರ್ ಕಡಿಮೆ ಇಂಧನವನ್ನು ತುಂಬಿಸುತ್ತಾರೆ. ಈ ಪ್ರಮಾಣವು ಕಡಿಮೆ ಅನಿಸಬಹುದಾದರೂ ಒಂದು ದಿನಕ್ಕೆ ಈ ರೀತಿ ಹಲವು ಜನರಿಗೆ ಮಾಡಿದರೆ ಅದರಿಂದ ಭಾರೀ ಪ್ರಮಾಣದಲ್ಲಿ ಜನರಿಗೆ ವಂಚಿಸಿದಂತಾಗುತ್ತದೆ ಎಂಬುದು ಸ್ಪಷ್ಟ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಪ್ರಪಂಚದಲ್ಲಿ ಪೆಟ್ರೋಲ್, ಡೀಸೆಲ್‌ ದುಬಾರಿಯಾಗಿರುವ ದೇಶಗಳಲ್ಲಿ ಭಾರತವು ಸಹ ಸೇರಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದೇ ಇದಕ್ಕೆ ಪ್ರಮುಖ ಕಾರಣ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ ಪೆಟ್ರೋಲ್ ಅಥವಾ ಡೀಸೆಲ್ ನೀಡುವ ಹಲವು ವಿಲಕ್ಷಣ ಘಟನೆಗಳು ಭಾರತದಲ್ಲಿ ನಡೆದಿವೆ, ನಡೆಯುತ್ತಿವೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಇದರ ಜೊತೆಗೆ ಆಗಾಗ್ಗೆ ಪೆಟ್ರೋಲ್, ಡೀಸೆಲ್ ಕಳ್ಳತನಕ್ಕೆ ಸಂಬಂಧಿಸಿದ ಘಟನೆಗಳು ವರದಿಯಾಗುತ್ತವೆ. ಪೆಟ್ರೋಲ್, ಡೀಸೆಲ್ ಕಳ್ಳತನದ ಘಟನೆಗಳು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ನಡೆಯುತ್ತಿವೆ. ಇದೇ ರೀತಿಯ ಘಟನೆಯೊಂದು ಇತ್ತೀಚಿಗೆ ದೂರದ ಇಂಗ್ಲೆಂಡಿನಿಂದ ವರದಿಯಾಗಿತ್ತು. ಈಗ ಇಂಗ್ಲೆಂಡಿನಲ್ಲಿ ಇಂಧನದ ಕೊರತೆ ಎದುರಾಗಿದೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಇಂಧನ ಸಾಗಿಸುವ ಟ್ಯಾಂಕರ್ ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಚಾಲಕರು ಲಭ್ಯವಾಗದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಚಾಲಕರ ಕೊರತೆಯಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇಂಧನದ ಕೊರತೆ ಎದುರಾಗಿದೆ. ಇದರಿಂದಾಗಿ ಇಂಗ್ಲೆಂಡಿನಲ್ಲಿ ಪೆಟ್ರೋಲ್ ಬಂಕ್ ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಇದರ ಜೊತೆಗೆ ವಾಹನ ಸವಾರರ ನಡುವೆ ಮಾತಿನ ಚಕಮಕಿ, ಜಗಳಗಳು ಏರ್ಪಡುತ್ತಿವೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಇಂತಹ ಸನ್ನಿವೇಶದಲ್ಲಿಯೇ ಇಂಗ್ಲೆಂಡಿನಲ್ಲಿ ಇಂಧನ ಇಂಧನ ಕಳ್ಳತನದ ಘಟನೆ ವರದಿಯಾಗಿದೆ. ಇಂಗ್ಲೆಂಡ್‌ನಲ್ಲಿರುವ ಪೋರ್ಟ್ಸ್‌ಮೌತ್‌ ಎಂಬ ಪಾರ್ಕಿಂಗ್ ಸ್ಥಳದಿಂದ ರೂ. 45 ಲಕ್ಷ ಮೌಲ್ಯದ ಸುಮಾರು 30,000 ಲೀಟರ್ ಇಂಧನ ಕಳುವು ಮಾಡಿರುವ ಬಗ್ಗೆ ವರದಿಯಾಗಿತ್ತು.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ ರಾಮೇಶ್ವರ ತೇಲಿರವರು ಇತ್ತೀಚಿಗೆ ದೇಶದ ಜನರಿಗೆ ಉಚಿತ ಕೋವಿಡ್ 19 ಲಸಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದರು.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಹೊಸ ತೈಲ ಬೆಲೆಗಳು ಪ್ರತಿ ದಿನ 6 ಗಂಟೆಗೆ ಜಾರಿಗೆ ಬರುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ನಿತ್ಯ ಇಂಧನ ಬೆಲೆಯನ್ನು ಪರಿಷ್ಕರಿಸುತ್ತವೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ. ಇದಲ್ಲದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಇತರ ಅಂಶಗಳಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್, ಡೀಲರ್ ಕಮಿಷನ್, ಸರಕು ಶುಲ್ಕ ಇತ್ಯಾದಿಗಳು ಸೇರಿವೆ.

ಅಕ್ರಮವೆಸಗಿದ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಸಚಿವ

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ.

Most Read Articles

Kannada
English summary
Gujarat minister seals petrol bunk for fraudulent filling details
Story first published: Wednesday, November 10, 2021, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X