ಜಗತ್ತಿನಲ್ಲಿ ಅತಿ ವೇಗದಲ್ಲಿ ಸಂಚರಿಸುವ ಹುಲ್ಲುಗತ್ತರಿ

By Nagaraja

ದಾಖಲೆ ಸ್ಥಾಪಿಸಿವುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಅದರಲ್ಲೂ ಪ್ರಮುಖವಾಗಿಯೂ ವಾಹನ ತಯಾರಕ ಸಂಸ್ಥೆಗಳು ಒಂದಲ್ಲ ಒಂದು ಮೈಲುಗಲ್ಲನ್ನು ಸ್ಥಾಪಿಸುವುದರಲ್ಲಿ ಸದಾ ಗಮನಕೇಂದ್ರಿತವಾಗಿರುತ್ತದೆ.

ನಾವಿಂದು ಪರಿಚಯಿಸಲಿರುವ ಹುಲ್ಲು ಟ್ರಾಕ್ಟರ್ ಜಗತ್ತಿನಲ್ಲಿ ಅತಿ ವೇಗದಲ್ಲಿ ಚಲಿಸುವ ಹುಲ್ಲುಗತ್ತರಿ ವಾಹನವಾಗಿದೆ. ಜಪಾನ್ ಮೂಲದ ದಿಗ್ಗಜ ಕಂಪನಿ ಹೋಂಡಾ ಈ 'ಮೀನ್ ಮೊವೆರ್' ಹುಲ್ಲು ಟ್ರಾಕ್ಟರನ್ನು ತಯಾರಿಸಿದೆ.

ಸಾಮಾನ್ಯವಾಗಿ ಶ್ರೀಮಂತರು, ಮನೆಯೆದರು ಅಥವಾ ಉದ್ಯಾವನಗಳಲ್ಲಿ ಅಂದತೆಯ ಪ್ರತೀಕವಾಗಿ ಬೆಳೆಸಿದ ಹುಲ್ಲುಗಳನ್ನು ಕತ್ತರಿಸಲು ಹುಲ್ಲು ಟ್ರಾಕ್ಟರ್‌ಗಳನ್ನು ಬಳಸುತ್ತಾರೆ. ಆದರೆ ಪ್ರತಿ ಗಂಟೆಗೆ 209 ಕೀ.ಮೀ. ವೇಗದಲ್ಲಿ ಚಲಿಸುವ ಹುಲ್ಲುಗತ್ತರಿಯನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ ಎಂಬುದಕ್ಕೆ ಕಂಪನಿಯೇ ಉತ್ತರ ನೀಡಬೇಕಾಗುತ್ತದೆ.

Honda Mean Mower

ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ವಾಹನ ಜಗತ್ತಿನಲ್ಲಿ ಹೆಸರು ಪಡೆದಿರುವ ಕೆಲವು ಫೆರಾರಿ ಹಾಗೂ ಪೋರ್ಷೆ‌ಗಳಂತಹ ಸ್ಫೋರ್ಟ್ಸ್ ಕಾರಿಗಿಂತಲೂ ವೇಗದಲ್ಲಿ ಈ ಹೋಂಡಾ ಹುಲ್ಲು ಟ್ರಾಕ್ಟರ್ ಚಲಿಸುವ ಸಾಮರ್ಥ್ಯ ಹೊಂದಿದೆ.

Honda Mean Mower

ಪ್ರಶಸ್ತಿ ವಿಜೇತ ಬ್ರಿಟಿಷ್ ಟೂರಿಂಗ್ ಕಾರ್ ಚಾಂಪಿಯನ್‌ಶಿಪ್ (ಬಿಟಿಸಿಸಿ) ಪಾಟ್ನರ್ ಟೀಮ್ ಡೈನಾಮಿಕ್ ಜತೆ ಸೇರಿಕೊಂಡು ಈ ಮೀನ್ ಮೊವರ್ ಹುಲ್ಲುಗತ್ತರಿಯನ್ನು ತಯಾರಿಸಲಾಗಿದೆ.

Honda Mean Mower

ಪ್ರಸ್ತುತ ಹುಲ್ಲು ಟ್ರಾಕ್ಟರ್ ಕೇವಲ ನಾಲ್ಕು ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 209 ಕೀ.ಮೀ. ವೇಗದಲ್ಲಿ ಚಲಿಸಲಿದೆ.

Honda Mean Mower

ಹೋಂಡಾ ಎಚ್‌ಎಫ್2620 ತಲಹದಿಯಲ್ಲಿ ಮೀನ್ ಪವರ್ ಹುಲ್ಲುಗತ್ತರಿ ತಯಾರಿಸಲಾಗಿದೆ.

Honda Mean Mower

ಇಷ್ಟೊಂದು ವೇಗತೆಯಲ್ಲಿ ಚಲಿಸುವ ಹೊರತಾಗಿಯೂ ಗಂಟೆಗೆ 25 ಕೀ.ಮೀ. ವೇಗ ಮಿತಿಯೊಳಗೆ ಸಂಚರಿಸಿದ್ದಲ್ಲಿ ಮಾತ್ರ ಪ್ರಸ್ತುತ ಟ್ರಾಕ್ಟರ್‌ನಿಂದ ಹುಲ್ಲು ಕತ್ತರಿಸಲು ಸಾಧ್ಯವಾಗಲಿದೆ.

Honda Mean Mower

ಇದರ 1000 ಸಿಸಿ ಎಂಜಿನ್ 109 ಅಶ್ವಶಕ್ತಿ (96 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಪ್ಯಾಡೆಲ್ ಶಿಫ್ಟ್ ಗೇರ್ ಬಾಕ್ಸ್ ಇರಲಿದೆ.

Honda Mean Mower

ಈ ಹುಲ್ಲು ಟ್ರಾಕ್ಟರ್‌ನ ಮತ್ತೊಂದು ನೆಗೆಟಿವ್ ಅಂಶ ಏನೆಂದರೆ, ಹೆಚ್ಚು ಶಬ್ದ ಮಾಲಿನ್ಯವನ್ನುಂಟು ಮಾಡಲಿದೆ.

ಪ್ರಮಾಣ- 130 ಡೆಸಿಬಲ್ ಮೀಟರ್

Honda Mean Mower

ಅಂತಿಮವಾಗಿ ಹೋಂಡಾ ಮೀನ್ ಮೊವರ್ ಹುಲ್ಲು ಟ್ರಾಕ್ಟರ್, ಒಂದು ಆಲ್ ಟರೈನ್ ವೆಹಿಕಲ್ (ಎಲ್ಲ ಭೂಪ್ರದೇಶಕ್ಕೂ ಹೊಂದಿಕೆಯಾಗುವ ವಾಹನ) ಆಗಿದೆ. ಇದರ ಅಡಿಭಾಗದಲ್ಲಿ ಹುಲ್ಲುಗತ್ತರಿ ಲಗತ್ತಿಸಲಾಗಿದೆ.

Honda Mean Mower

ಆಕರ್ಷಕ ವೀಡಿಯೋಗಾಗಿ ಮುಂದಿನ ಸ್ಲೈಡರ್ ಕ್ಲಿಕ್ಕಿಸುತ್ತಾ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ವೀಡಿಯೋ ವೀಕ್ಷಿಸಿ

Most Read Articles

Kannada
English summary
Honda worked with Team Dynamics, its title-winning British Touring Car Championship (BTCC) partner, to create the “Mean Mower,” a lawn tractor that goes from 0-60 mph (96 km/h) in 4 seconds and reaches a top speed of 209 km/h!
Story first published: Thursday, July 18, 2013, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X