ರೈಲನ್ನೇ ಎತ್ತಿಕೊಂಡು ಸಾಗುವ ವಿಮಾನವಿದು!

Written By:

ನೆಲ, ಜಲ, ವಾಯು ಹೀಗೆ ಯಾವುದೇ ಸಾರಿಗೆ ವ್ಯವಸ್ಥೆಯನ್ನು ತೆಗೆದುಕೊಂಡರೂ ಎಲ್ಲವೂ ಅಲ್ಲಲ್ಲಿ ತುಂಡರಿಸಲ್ಪಟ್ಟಿದೆ. ನಿಸ್ಸಂಶಯವಾಗಿಯೂ ನೀವು ಎಲ್ಲೇ ಹೋಗ ಬಯಸಿದ್ದಲ್ಲೂ ವಾಹನ ದಟ್ಟನೆ ಹಾಗೂ ವಾಯುವ್ಯ ಮಾಲಿನ್ಯ ಸದಾ ಎದುರಿಸುತ್ತಿರುವ ತೊಂದರೆಯಾಗಿದೆ.

ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

ಇಂತಹ ಎಲ್ಲ ತೊಂದರೆಗಳನ್ನು ನಿವಾರಿಸಲು ನಿರಂತರವಾಗಿ ಹೊಸ ಹೊಸ ತಂತ್ರಜ್ಞಾನಗಳ ನೆರವು ಪಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಬುಲೆಟ್ ರೈಲು ಹಾಗೂ ತೀರಾ ಇತ್ತೀಚೆಗೆ ಹಸಿರು ವಾಹನಗಳನ್ನು ಪರಿಚಯಿಸಲಾಯಿತು. ಇಷ್ಟೆಲ್ಲ ಆದರೂ ಎಲ್ಲೋ ಒಂದು ಕಡೆ ಸಮಸ್ಯೆ ಇನ್ನೂ ಕಾಡುತ್ತಿಲೇ ಇದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ಬ್ರಿಟನ್‌ನ ಗ್ಲಾಸ್‌ಗೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡವೊಂದು ಹೊರೈಝನ್ ವಿಮಾನ ಕಾನ್ಟೆಪ್ಟ್‌ವೊಂದನ್ನು ಅಭಿವೃದ್ಧಿಪಡಿಸಿದೆ.

To Follow DriveSpark On Facebook, Click The Like Button
ರೈಲನ್ನೇ ಎತ್ತಿಕೊಂಡು ಸಾಗುವ ವಿಮಾನವಿದು!

ಇಲ್ಲಿ ವಿದ್ಯಾರ್ಥಿಗಳ ತಂಡ ಅವಿಷ್ಕರಿಸಿರುವ ತಂತ್ರಜ್ಞಾನವನ್ನು ವಿವರಿಸುವುದಾದ್ದಲ್ಲಿ ನಿಮ್ಮಲ್ಲಿ ಅಚ್ಚರಿಯುಂಟಾಗಬಹುದು. ಯಾಕೆಂದರೆ ಈ ವ್ಯವಸ್ಥೆಯ ಪ್ರಕಾರ ವಿಮಾನಗಳು ಚಲಿಸುವ ರೈಲುಗಳನ್ನು 'ಪೊಡ್'ಗಳಂತೆ ಎತ್ತಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಸಂಚಾರ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸಬಹುದಾಗಿದೆ.

ರೈಲನ್ನೇ ಎತ್ತಿಕೊಂಡು ಸಾಗುವ ವಿಮಾನವಿದು!

ದೀರ್ಘ ಪ್ರಯಾಣದ ವೇಳೆ ಎದುರಾಗುತ್ತಿರುವ ತೊಂದರೆಯನ್ನು ನಿಖರವಾಗಿ ಅಧ್ಯಯನ ಮಾಡಿರುವ ಆಂಡ್ರ್ಯೂ ಫ್ಲೈನ್, ಇವಾನ್ ಅಲ್‌ಸ್ಟನ್, ಮಾರ್ಟಿನ್ ಕೇನೆ ಮತ್ತು ಮಾಸನ್ ಹೋಲ್ಡನ್, ಇಂತಹದೊಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಪಿಕಪ್ ಪೊಡ್

ಪಿಕಪ್ ಪೊಡ್

ಹಾಗೊಂದು ವೇಳೆ 2050ರ ವೇಳೆಗೆ ಹೊರೈಝನ್ ಕಾನ್ಸೆಪ್ಟ್ ನನಸಾದ್ದಲ್ಲಿ, ಸಾಂಪ್ರಾದಾಯಿಕ ವಿಮಾನ ನಿಲ್ದಾಣಗಳನ್ನು ಇಂತಹ ಸ್ಕೈಲೈನ್ ಪೊಡ್‌ಗಳು ಬದಲಿ ವ್ಯವಸ್ಥೆಯಾಗಲಿದ್ದು, ಪಿಕಪ್ ಡ್ರಾಪ್ ಸೇವೆ ಸಲ್ಲಿಸಲಿದೆ.

ಸ್ಕೈಲೈನ್ ಸ್ಟೇಷನ್

ಸ್ಕೈಲೈನ್ ಸ್ಟೇಷನ್

ಹೊರೈಝನ್ ಪ್ರಯಾಣಿಕರು ತಮ್ಮ ಸ್ಥಳೀಯ ಸ್ಕೈಸ್ಟೇಷನ್‌ನಿಂದ ಪಯಣ ಆರಂಭಿಸಬಹುದಾಗಿದೆ. ಅಲ್ಲದೇ ಅಲ್ಲಿಯೇ ಭದ್ರತಾ ಪರಿಶೀಲನೆಯ ಬಳಿಕ ತಮ್ಮ ಪ್ರವಾಸ ಆರಂಭಿಸಬಹುದಾಗಿದೆ.

ಒಳಾಂಗಣ ವಿನ್ಯಾಸ

ಒಳಾಂಗಣ ವಿನ್ಯಾಸ

ಪ್ರಸ್ತುತ ವಿಮಾನವು ಬಾಗಿದ ರೆಕ್ಕೆ ವಿನ್ಯಾಸ ಹೊಂದಿದೆ. ಇದು ಸಾಂಪ್ರಾದಾಯಿಕ ವಿಮಾನಗಳಿಗಿಂತಲೂ ಹೆಚ್ಚಿನ ಪರಿಣಾಮಕಾರಿ ವಿನ್ಯಾಸ ಕಾಯ್ದುಕೊಂಡಿದೆ.

ಆಸನ ವ್ಯವಸ್ಥೆ

ಆಸನ ವ್ಯವಸ್ಥೆ

ಇದು 48 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಪ್ರಯಾಣಿಕರು ಪ್ರವಾಸದುದ್ಧಕ್ಕೂ ತಮ್ಮ ಆಸನವನ್ನು ಕಾಯ್ದುಕೊಳ್ಳಬಹುದಾಗಿದೆ. ಅಲ್ಲದೆ ಸಂಪೂರ್ಣ ವಿದ್ಯುತ್ ಚಾಲಿತವಾಗಿದ್ದು, ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ರೈಲನ್ನೇ ಎತ್ತಿಕೊಂಡು ಸಾಗುವ ವಿಮಾನವಿದು!

ವಿಮಾನಕ್ಕೆ ರೈಲು ಸಂಪರ್ಕವಾದ ಬಳಿಕ ಪ್ರಯಾಣಿಕರು ವಿಮಾನ ಕೊಠಡಿಯೊಳಗೆ ತೆರಳಬಹುದಾಗಿದ್ದು, ಇಲ್ಲಿ ಮನರಂಜನೆಗಾಗಿ ಹೆಚ್ಚಿನ ಒತ್ತು ಕೊಡಲಾಗಿದೆ. ಇದರಲ್ಲಿ ಕೆಫೆ, ಬಾರ್ ಮುಂತಾದ ವ್ಯವಸ್ಥೆಗಳಿವೆ. ಅಲ್ಲದೆ ಗಾಜಿನ ಮುಖಾಂತರ ಹೊರಂಗಣ ಪ್ಯಾನಾರೋಮಿಕ್ ವೀಕ್ಷಣೆಯನ್ನು ಪಡೆಯಬಹುದಾಗಿದೆ.

ರೈಲನ್ನೇ ಎತ್ತಿಕೊಂಡು ಸಾಗುವ ವಿಮಾನವಿದು!

ಪ್ರಯಾಣಿಕರು ತಮ್ಮ ಗುರಿ ತಲುಪುವ ಮೊದಲ ಮತ್ತೆ ತಮ್ಮ ಸೀಟಿಗೆ ಮರಳಬೇಕಾಗಿದೆ. 240 ಕೀ.ಮೀ. ವೇಗದಲ್ಲಿ ಚಲಿಸುವ ಈ ಹೊರೈಝನ್ ವಿಮಾನ ಲ್ಯಾಂಡ್ ಆಗಲು ಚಕ್ರಗಳು ಇಲ್ಲವಾಗಿದ್ದರಿಂದ ಪ್ರತ್ಯೇಕ ಆಯಸ್ಕಾಂತೀಯ ಶಕ್ತಿಯಿಂದ ನಿಯಂತ್ರಿಸಲ್ಪಡಲಿದೆ. ಆದರೆ ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದು ಇನ್ನು ವಿಜ್ಞಾನಿಗಳಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ.

Story first published: Friday, June 13, 2014, 14:14 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark