ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಇದುವರೆಗೆ ವಿದೇಶಿ ಐಷಾರಾಮಿ ಅಕ್ರಮ ಕಾರು ಆಮದು ಹಗರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಪುತ್ರ ಎಂ. ಕೆ. ಸ್ಟಾಲಿನ್ ಹಾಗೂ ಮೊಮ್ಮಗ ಉದಯನಿಧಿ ಸ್ಟಾಲಿನ್ ಹೆಸರು ಮಾತ್ರ ಕೇಳಿಬಂದಿದ್ದವು. ಆದರೆ ಇದೀಗ ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿರುವ ಕರುಣಾನಿಧಿ ಹಿರಿಯ ಪುತ್ರ ಎಂ.ಕೆ. ಅಳಗಿರಿ ಪಾತ್ರವನ್ನೂ ತನಿಖೆ ನಡೆಸುತ್ತಿರುವ ಸಿಬಿಐ ಬಯಲಿಗೆಳೆದಿದೆ.

ಇನ್ನು ಅಚ್ಚರಿಯ ವಿಷಯ ಏನೆಂದರೆ ಕರುಣಾನಿಧಿ ಕುಟುಂಬ ಇಂತಹದ್ದೊಂದು ಹಗರಣದಲ್ಲಿ ಭಾಗಿಯಾಗಿರುವುದು ಗೊತ್ತಿದ್ದರೂ ಈ ಪ್ರಕರಣವನ್ನು ಮುಚ್ಚಿಡಲು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹಿರಿಯ ಅಧಿಕಾರಿಯೊಬ್ಬರು ಪ್ರಯತ್ನಿಸಿದ್ದರು. ಪ್ರಸ್ತುತ ಪ್ರಕರಣವು ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ.

ವಿದೇಶದಿಂದ ಕಾನೂನುಬದ್ಧವಾಗಿ ಕಾರು ಆಮದು ಮಾಡಿಕೊಳ್ಳುವಾಗ ಭಾರಿ ತೆರಿಗೆ ಕಟ್ಟಾಬೇಕಾಗುತ್ತದೆ. ಇದನ್ನು ತಪ್ಪಿಸಲು ಅಕ್ರಮವಾಗಿ ಕಾರು ಆಮದು ಮಾಡಿಕೊಳ್ಳಲಾಗುತ್ತಿತ್ತು. ಪ್ರಕರಣದಲ್ಲಿ ಕರುಣಾನಿಧಿ ಪುತ್ರರಾದ ಸ್ಟಾಲಿನ್, ಅಳಗಿರಿ ಹಾಗೂ ಮೊಮ್ಮಗ ಉದಯನಿಧಿ ಸೇರಿದಂತೆ ಅನೇಕ ಗಣ್ಯರು ಶಾಮೀಲಾಗಿದ್ದಾರೆಂಬ ಆರೋಪವಿದೆ.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಟೊಯೊಟಾ ಎಸ್ಟಿಮಾ ಕಾರು ಆಮದು ವೇಳೆ ಆಮದು ಸುಂಕ ಪಾವತಿಸಿಲ್ಲವೆಂಬ ಆರೋಪವಿದೆ. ಅಳಗಿರಿ ಹಾಗೂ ಸ್ಟಾಲಿನ್ ಸಮಾನ ಪ್ರಕರಣದಲ್ಲಿ ಶಾಮೀಲಾಗಿರುವುದರ ಬಗ್ಗೆ ಆರೋಪವಿದೆ. ಈ ಸಂಬಂಧ ಸಿಬಿಐ ತನಿಖೆ ಪ್ರಗತಿಯಲ್ಲಿದೆ.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಅಳಗಿರಿ ಹಾಗೂ ಸ್ಟಾಲಿನ್ ಕುಟುಂಬ ಬಳಕೆ ಮಾಡಿರುವ ದುಬಾರಿ ಕಾರುಗಳಾದ ಬಿಎಂಡಬ್ಲ್ಯು ಎಕ್ಸ್5, ಟೊಯೊಟಾ ಲೆಕ್ಸಾಸ್ ಹಾಗೂ ಪ್ರಾಡೋ ಎಸ್‌ಯುವಿ ಬಗ್ಗೆ ತನಿಖೆ ನಡೆಯುತ್ತಿದೆ.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಕೆಲವು ದಿನಗಳ ಹಿಂದೆಯಷ್ಟ್ರೇ ಶ್ರೀಲಂಕಾ ತಮಿಳರ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರದ ಯುಪಿಎ ಸರಕಾರ ಬೆಂಬಲ ವಾಪಾಸ್ ಪಡೆದಿದ್ದ ಕೇವಲ 48 ಗಂಟೆಯೊಳಗೆ ಸ್ಟಾಲಿನ್ ಮನೆಗೆ ದಾಳಿ ನಡೆಸಿದ್ದ ಸಿಬಿಐ, ಆಮದು ಮಾಡಿರುವ 33 ಕಾರುಗಳ ಪೈಕಿ ಒಂದನ್ನು ಮುಟ್ಟಗೋಲು ಮಾಡಿಸಿತ್ತು.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಪ್ರಸ್ತುತ ಪ್ರಕರಣದಲ್ಲಿ ಕರುಣಾನಿಧಿ ಕುಟುಂಬದತ್ತ ತನಿಖೆ ವಿಸ್ತರಿಸಲಾಗಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಗಳತ್ತವೂ ಸಿಬಿಐ ಕೆಂಗ್ಗಣ್ಣು ಬೀರಿದೆ.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಸಿಬಿಐ ವರದಿ ಪ್ರಕಾರ ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿರುವ ಟೊಯೊಟಾ ಎಸ್ಟಿಮಾ ಕಾರು ಅಕ್ರಮವಾಗಿ ಆಮದು ಮಾಡಿರುವ ಬಗ್ಗೆ ಗೊತ್ತಿದ್ದರೂ ಡಿಆರ್‌ಐ ಹಿರಿಯ ತನಿಖಾಧಿಕಾರಿ ಮುರುಗೇಶನ್, ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸಿದ್ದರು.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಕರುಣಾನಿಧಿ ಕುಟುಂಬ ಹೊಂದಿರುವ ಬಿಎಂಡಬ್ಲ್ಯು ಎಕ್ಸ್5, ಲೆಕ್ಸಾಸ್, ಪ್ರಾಡೋ ಎಸ್‌ಯುವಿ ಕಾರುಗಳ ಬಗ್ಗೆಯೂ ತನಿಖೆ ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಕಾರಗಳು ಅಳಗಿರಿ, ಸ್ಟಾಲಿನ್ ಹಾಗೂ ಉದಯನಿಧಿ ಅವರಿಗೆ ಸೇರಿದ್ದಾಗಿವೆ.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಹೈದರಾಬಾದ್ ಮೂಲದ ಅಲೆಕ್ಸ್ ಜೋಸೆಫ್ ವಿದೇಶಿ ಐಷಾರಾಮಿ ಕಾರುಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದರಲ್ಲದೆ ಗಣ್ಯರಿಗೆ ಮಾರಾಟ ಮಾಡುತ್ತಿದ್ದ ಎಂಬ ಆರೋಪವಿದೆ.

ಅಕ್ರಮ ಕಾರು ಆಮದು- ಮಾಹಿತಿ ಇಲ್ಲಿದೆ

ಅಕ್ರಮ ಕಾರು ಆಮದು- ಮಾಹಿತಿ ಇಲ್ಲಿದೆ

ಬಿಎಂಡಬ್ಲ್ಯು ಎಕ್ಸ್5 ರಿಜಿಸ್ಟ್ರೇಷನ್ ನಂಬರ್ TN 04 AC 000

ಲೆಕ್ಸಾಸ್ ರಿಜಿಸ್ಟ್ರೇಷನ್ ನಂಬರ್ TN 01 AE 8080

ಪ್ರಾಡೋ ಎಸ್‌ಯುವಿ ರಿಜಿಸ್ಟ್ರೇಷನ್ ನಂಬರ್ TN 07 AQ 6000

ಟೊಯೊಟಾ ಎಸ್ಟೀಮಾ ರಿಜಿಸ್ಟ್ರೇಷನ್ ನಂಬರ್ 03 7789

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಇವೆಲ್ಲವೂ ಫ್ಯಾನ್ಸಿ ರಿಜಿಷ್ಟ್ರೇಶನ್ ನಂಬರ್ ಎಂಬುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ಇದರಂತೆ ಈ ಎಲ್ಲ ವಿಚಾರಗಳ ಬಗ್ಗೆ ಸಿಬಿಐ ವಿಚಾರಣೆ ಕೈಗೆತ್ತಿಗೊಂಡಿದೆ.

ಅಕ್ರಮ ಕಾರು ಆಮದು; ಕರುಣಾನಿಧಿ ಕುಟುಂಬ ಕೈವಾಡ?

ಇದೀಗ ಕರುಣಾನಿಧಿ ಕುಟುಂಬದ ಮೇಲಿರುವ ಕಾರು ಆಮದು ಹಗರಣದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ...

Most Read Articles

Kannada
English summary
It is not just DMK chief M Karunanidhi's younger son and his heir apparent MK Stalin and his son Udayanidhi, but even the DMK chief's elder son and former central minister MK Alagiri allegedly used illegally imported cars
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X