ಹಿಮಾಲಯದಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಮೇಲ್ಸುತುವೆ

Written By:

ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶವೂ ಎಲ್ಲ ಕ್ಷೇತ್ರಗಳಲ್ಲೂ ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಪೈಪೋಟಿಗೆ ಎರಗಿ ನಿಂತಿದೆ. ಇದೀಗ ಭಾರತೀಯ ಎಂಜಿನಿಯರ್‌ಗಳು ಮಗದೊಂದು ಐತಿಹಾಸಿಕ ಸಾಧನೆ ಮಾಡಲು ಹೊರಟಿದ್ದು, ಜಗತ್ತಿನ ಅತ್ಯಂತ ಎತ್ತರವಾದ ರೈಲ್ವೆ ಮೇಲ್ಸುತುವೆ ಹಿಮಾಲಯದಲ್ಲಿ ತಲೆಯೆತ್ತಲಿದೆ.

ವಿಶೇಷವೆಂದರೆ ಹಿಮಾಲಯದಲ್ಲಿ ನಿರ್ಮಾಣವಾಗಲಿರುವ ಚಿನಾಬ್ ರೈಲ್ವೆ ಮೇಲ್ಸುತುವೆ ವಿಶ್ವ ಪ್ರಸಿದ್ಧ ಫ್ರಾನ್ಸ್‌ನ ಈಫಲ್ ಗೋಪುರಗಿಂತಲೂ 35 ಮೀಟರುಗಳಷ್ಟು ಅಧಿಕ ಎತ್ತರವನ್ನು ಹೊಂದಿರಲಿದೆ. ಅಲ್ಲದೆ ಕುತುಬ್ ಮಿನಾರ್ ಸ್ತಂಭ ಗೋಪುರಗಿಂತಲೂ ಐದು ಪಟ್ಟು ಹೆಚ್ಚು ಎತ್ತರವನ್ನು ಹೊಂದಿರಲಿದೆ.

To Follow DriveSpark On Facebook, Click The Like Button
ಹಿಮಾಲಯದಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಮೇಲ್ಸುತುವೆ

ಎಲ್ಲವೂ ಯೋಜನೆಯಂತೆ ಸಾಗಿದ್ದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಮೇಲ್ಸುತುವೆ 2016ನೇ ಇಸವಿಯಲ್ಲಿ ಲೋಕಾಪರ್ಣೆಯಾಗಲಿದೆ.

ಚಿತ್ರದಲ್ಲಿ: (ಪ್ರಸ್ತಾವಿತ ಚಿನಾಬ್ ರೈಲ್ವೆ ಮೇಲ್ಸುತುವೆ ಯೋಜನೆಗೆ ಕಲಾವಿದನ ಸೃಷ್ಟಿ)

ಹಿಮಾಲಯದಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಮೇಲ್ಸುತುವೆ

ಇದು ಚಿನಾಬ್ ನದಿಯ ಮೇಲ್ಗಡೆಯಾಗಿ ಕಮಾನ್ ರೀತಿಯಲ್ಲಿ ತಲೆಯೆತ್ತಲಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ಪರ್ವತಗಳ ನಡುವೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ.

(ಚಿತ್ರದಲ್ಲಿ: ಚಿನಾಬ್ ನದಿ)

ಹಿಮಾಲಯದಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಮೇಲ್ಸುತುವೆ

ಪ್ರಸ್ತುತ ರೈಲ್ವೇ ಮೇಲ್ಸುತುವೆ ಒಟ್ಟು 359 ಮೀಟರ್ (1,177 ಅಡಿ) ಎತ್ತರವನ್ನು ಹೊಂದಿರಲಿದ್ದು, ಈಗಿನ ವಿಶ್ವದ ಅತ್ಯಂತ ಎತ್ತರದ ರೈಲ್ವೆ ಮೇಲ್ಸುತುವೆ ಚೀನಾದ ಗುಯಿಝೊ ಪ್ರಾಂತ್ಯದಲ್ಲಿರುವ ಬಿಪಾಂಗ್‌ಜಿಯಾಂಗ್ ನದಿ ರೈಲ್ವೆ ಮೇಲ್ಸುತುವೆಯನ್ನು (275 ಮೀಟರ್) ಮೀರಿ ನಿಲ್ಲಲಿದೆ.

ಚಿತ್ರದಲ್ಲಿ: ಚೀನಾದಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಮೇಲ್ಸುತುವೆ

ಹಿಮಾಲಯದಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಮೇಲ್ಸುತುವೆ

1,315 ಮೀಟರ್ ಉದ್ದವುಳ್ಳ ಈ ರೈಲ್ವೆ ಮೇಲ್ಸುತುವೆ ನಿರ್ಮಾಣಕ್ಕೆ ಸರಿ ಸುಮಾರು 25,000 ಟನ್ ಉಕ್ಕನ್ನು ಬಳಸಲಾಗುವುದು. ಇದನ್ನು ಹೆಲಿಕಾಪ್ಟರ್ ಮುಖಾಂತರ ರವಾನಿಸಲಾಗುವುದು.

ಚಿತ್ರದಲ್ಲಿ: ನವದೆಹಲಿಯ ರೈಲ್ವೆ ನಿಲ್ದಾಣಗಳಲ್ಲಿ ಸಾಮಾಜಿಕ ಜಾಲತಾಣ ತೆರೆಯುತ್ತಿರುವ ರೈಲ್ವೆ ಸಚಿವ ಡಿವಿ ಸದಾನಂದ ಗೌಡ

ಹಿಮಾಲಯದಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಮೇಲ್ಸುತುವೆ

ಸಲಾಲ್ ಹೈಡ್ರೋ ಪವರ್ ಅಣೆಕಟ್ಟು ಬಳಿ ನಿರ್ಮಾಣವಾಗುವ ಈ ಮಹತ್ತರ ಯೋಜನೆಗೆ ಒಟ್ಟು 512 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ.

ಚಿತ್ರದಲ್ಲಿ: ರಾಮೇಶ್ವರಂನಲ್ಲಿರುವ ಒಂದು ಶತಮಾನಕ್ಕಿಂತಲೂ ಹಳೆಯದಾದ ಪಂಬನ್ ರೈಲ್ವೆ ಮೇಲ್ಸುತುವೆಗೆ ನೌಕಾದಳದ ಹಡಗೊಂದು ಢಿಕ್ಕಿಯಾದಾಗ

ಹಿಮಾಲಯದಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಮೇಲ್ಸುತುವೆ

ಉಮದ್‌ಪುರ್-ಶ್ರೀನಗರ-ಬರಮುಲ್ಲ ರೈಲ್ವೆ ಜಾಲದ ಭಾಗವಾಗಿರುವ ಈ ಯೋಜನೆಯನ್ನು ಕೊಂಕಣ ರೈಲ್ವೇ ಕಾರ್ಪೋರೇಷನ್ ಕೈಗೆತ್ತಿಕೊಂಡಿದೆ.

ಚಿತ್ರದಲ್ಲಿ (ಚಿನಾಬ್ ನದಿ)

 

English summary
Engineers are toiling in the Himalayas to build the world's highest railway bridge which is expected to be 35 metres taller than the Eiffel Tower when completed by 2016.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark