ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

50ನೇ ಯುಎಇ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಭಾರತೀಯ ಮೂಲದ ಡ್ರೈವರ್‌ ಒಬ್ಬರಿಗೆ ಜಾಕ್ ಪಾಟ್ ಹೊಡೆದಿದೆ. ಅವರು ಮಹಜೂಜ್‌ನ ಸಾಪ್ತಾಹಿಕ ಲಕ್ಕಿ ಡ್ರಾದಲ್ಲಿ ಮೊದಲ ಬಹುಮಾನವನ್ನು ಗೆದ್ದಿದ್ದಾರೆ. 22 ವರ್ಷದ ಅಕ್ಷಯ್ ಅರಿಕಡನ್ ಅರವಿಂದನ್, ಎಂಬುವವರೇ ಇತ್ತೀಚಿಗೆ ಮುಕ್ತಾಯಗೊಂಡ ಮಹಜೂಜ್‌ನ ಸಾಪ್ತಾಹಿಕ ಲಕ್ಕಿ ಡ್ರಾದಲ್ಲಿ 1 ಕೆ.ಜಿ ಚಿನ್ನ ಗೆದ್ದ ಅದೃಷ್ಟಶಾಲಿ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಯುಎಇಯ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಈ ಲಕ್ಕಿ ಡ್ರಾ ಅನ್ನು ಹಮ್ಮಿಕೊಳ್ಳಲಾಗಿತ್ತು. ಅಕ್ಷಯ್ ಅರಿಕಡನ್ ಅರವಿಂದನ್, ಮೂಲತಃ ಕೇರಳದವರು. ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಗ್ಯಾಸ್ ಏಜೆನ್ಸಿಯೊಂದರಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು 2018ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಿದರು.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಅವರು ತಮ್ಮ ತಾಯಿ, ಸಹೋದರ ಹಾಗೂ ಅತ್ತಿಗೆಯನ್ನು ಒಳಗೊಂಡಿರುವ ತಮ್ಮ ಕುಟುಂಬವನ್ನು ಪೋಷಿಸಲು ಯುಎಇಯಲ್ಲಿ ಕೆಲಸ ಮಾಡುತ್ತಾರೆ. ಅವರ ತಂದೆ 2020ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಕಾಕತಾಳೀಯ ಎಂಬಂತೆ ಅಕ್ಷಯ್ ರವರು ತಮ್ಮ ತಂದೆಯ ಮೊದಲ ಪುಣ್ಯ ಸ್ಮರಣೆಯ ದಿನದಂದೇ ಈ ಬಹುಮಾನವನ್ನು ಗೆದ್ದಿದ್ದಾರೆ. ಅಕ್ಷಯ್ ತಾವು ಗೆದ್ದ ಈ ಬಹುಮಾನವನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಈ ಸಾಧನೆಗೆ ತಮ್ಮ ತಂದೆಯ ಆಶೀರ್ವಾದವೇ ಕಾರಣ ಎಂದು ಅವರು ಹೇಳಿದ್ದಾರೆ. ಇಷ್ಟು ವರ್ಷಗಳ ಕಾಲ ತಮಗೆ ಆಧಾರ ಸ್ತಂಭವಾಗಿದ್ದ ತಂದೆಯಿಲ್ಲದ ಬದುಕು ದುಸ್ತರವಾಗಿದೆ ಎಂದು ಅವರು ಹೇಳಿದ್ದಾರೆ. ಅವರು ಗೆದ್ದಿರುವ ಬಹುಮಾನವು ಅವರಿಗೆ ಸಾಕಷ್ಟು ನೆರವಾಗಬಲ್ಲದು. ಈ ಬಹುಮಾನದಿಂದ ಬರುವ ಹಣದಿಂದ ತಮ್ಮ ಆರ್ಥಿಕ ಹೊರೆ ಹಾಗೂ ಜವಾಬ್ದಾರಿಗಳು ಕಡಿಮೆಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಅಕ್ಷಯ್ ಅರಿಕಡನ್ ಅರವಿಂದನ್ ಅವರ ಹೊರತಾಗಿ, ಮಹಜೂಜ್ ಲಕ್ಕಿ ಡ್ರಾದಲ್ಲಿ ಮತ್ತಿಬ್ಬರು ಭಾರತೀಯರು ಸಹ ಬಹುಮಾನ ಪಡೆದಿದ್ದಾರೆ. ಭಾರತೀಯ ಮೂಲದವರಾದ ಇಮ್ರಾನ್ ಹಾಗೂ ರಿಜು ಅವರು ತಲಾ 10 ಲಕ್ಷ ದಿರ್ಹಮ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ. 2,06,34,490 ನಗದು ಹಣ ಗೆದ್ದಿದ್ದಾರೆ. ಇಮ್ರಾನ್ ಯುಎಇಯಲ್ಲಿ ಸೇಲ್ಸ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಇನ್ನು ರಿಜು ಗಲ್ಫ್ ರಾಷ್ಟ್ರಗಳಲ್ಲಿ ಮೋಟಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. 1 ಮಿಲಿಯನ್‌ ದಿರ್ಹಾಮ್ ಎರಡನೇ ಬಹುಮಾನದ ಹಣವನ್ನು 43 ಜನರು ಹಂಚಿಕೊಂಡಿದ್ದಾರೆ, ಪ್ರತಿಯೊಬ್ಬರೂ 23,255 ದಿರ್ಹಮ್‌ ಅಂದರೆ ರೂ. 4,79,855 ಬಹುಮಾನ ಪಡೆಯಲಿದ್ದಾರೆ. ಯುಎಇಯಲ್ಲಿ ನಡೆಯುವ ಲಕ್ಕಿ ಡ್ರಾದಲ್ಲಿ ಭಾರತೀಯರು ಬಹುಮಾನ ಗೆದ್ದಿರುವುದು ಇದೇ ಮೊದಲ ಬಾರಿಯಲ್ಲ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಈ ಹಿಂದೆ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾದಲ್ಲಿ ಕೆಲವು ಭಾರತೀಯರು ರೇಂಜ್ ರೋವರ್ ಹಾಗೂ ಮೆಕ್ಲಾರೆನ್ 570 ಎಸ್ ಸ್ಪೈಡರ್ ಕಾರುಗಳನ್ನು ಗೆದ್ದಿದ್ದರು. ಯುಎಇ ನೋಂದಣಿ ನೀತಿಗೆ ಅನುಗುಣವಾಗಿ, ಎಮಿರೇಟ್ಸ್ ಇಂಟಿಗ್ರೇಟೆಡ್ ಟೆಲಿಕಮ್ಯುನಿಕೇಶನ್ಸ್ ಕಂಪನಿಯ (ಇಐಟಿಸಿ) ಡು ತಮ್ಮ ಸೇವೆಗಳಲ್ಲಿ ಕಡಿತವಾಗುವುದನ್ನು ತಪ್ಪಿಸಲು ಜನವರಿ 31ಕ್ಕೂ ಮುನ್ನ ಸಂಖ್ಯೆಗಳ ನೋಂದಣಿಯನ್ನು ನವೀಕರಿಸಲು ಅವಧಿ ಮೀರಿದ ಐಡಿ ನೋಂದಣಿ ಹೊಂದಿರುವ ಗ್ರಾಹಕರನ್ನು ಆಹ್ವಾನಿಸುತ್ತದೆ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಅದರಂತೆ ಬಲ್ವೀರ್ ರವರು ಸಹ ತಮ್ಮ ಡು ಮೊಬೈಲ್ ಸಂಖ್ಯೆಯನ್ನು ಮರು ನೋಂದಣಿ ಮಾಡಿದರು. ಜನವರಿ 31ಕ್ಕೂ ಮುನ್ನ ಐಡಿ ನೋಂದಣಿಯನ್ನು ನವೀಕರಿಸುವ ಎಲ್ಲಾ ಗ್ರಾಹಕರು ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಈ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಮ್ಯಾಕ್ಲಾರೆನ್ ಸ್ಪೋರ್ಟ್ಸ್ ಕಾರ್ ಅನ್ನು ಉನ್ನತ ಬಹುಮಾನವಾಗಿ ನೀಡಲಾಗುತ್ತದೆ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಬಲ್ವೀರ್ ಸಿಂಗ್ ಸ್ವತಃ ನಮ್ಮ ಭಾರತದ ಪಂಜಾಬ್‍ನಲ್ಲಿನ ಬಿಶನ್ ಕೋಟ್ ಮೂಲದವರಾಗಿದ್ದು, ಕಳೆದ 10 ವರ್ಷಗಳಿಂದ ದುಬೈನ ರಾಸ್‍-ಅಲ್ ಕೈಮಾನಲ್ಲಿನ ಘನ ಮೇಲ್ಮೈ ತಯಾರಿಕಾ ಕಂಪನಿಯಲ್ಲಿ (ಸಾಲಿಡ್ ಸರ್ಫೇಸ್ ಮ್ಯಾನುಫ್ಯಾಕ್ಚುರಿಂಗ್ ಕಂಪೆನಿ) ಕಾರ್ಯನಿರ್ವಹಿಸುತ್ತಿದ್ದರು. ಬಲ್ವೀರ್ ಸಿಂಗ್‍ಗೆ ಲಕ್ಕಿ ಡ್ರಾನಲ್ಲಿ ಮೆಕ್ಲರೆನ್ 570ಎಸ್ ಸ್ಪೈಡರ್ ಐಷಾರಾಮಿ ಸ್ಪೋರ್ಟ್ ಕಾರನ್ನು ಗೆದ್ದಿರುವುದಾಗಿ ಕರೆ ಬಂದಾಗ ಆತನಿಗೆ ನಂಬಲಾಗಲಿಲ್ಲವಾದರೂ ಇದೊಂದು ಪ್ರಾಂಕ್ ಕಾಲ್ ಎಂದು ಸುಮ್ಮನಿದ್ದರು.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಆದರೆ ಕೆಲ ಸಮಯದ ನಂತರ ಇದು ನಿಜವೆಂದು ಗೊತ್ತಾಗಿ ಇದೀಗ ಸುಮಾರು 1.5 ಕೋಟಿ ಬೆಲೆ ಬಾಳುವ ಐಷಾರಾಮಿ ಸ್ಪೋರ್ಟ್ ಕಾರಿನ ಮಾಲೀಕರಾಗಿದ್ದಾರೆ. ಅದಾಗ್ಯೂ, ಬಲ್ವೀರ್ ಸಿಂಗ್ ದುಬೈನಲ್ಲಿ ಕಾರ್ಪೆಂಟರ್ ವೃತ್ತಿಯಲ್ಲಿರುವ ಒಬ್ಬ ಸರಳ ವ್ಯಕ್ತಿ. ಆತನಿಗೆ ಈ ರೀತಿಯ ಕರೆ ಬಂದರೆ ಅವರಿಗೆ ನಂಬಲಾದರೂ ಹೇಗೆ ಸಾಧ್ಯ ನೀವೇ ಹೇಳಿ. ಹಾಗೆಯೆ ಐಷಾರಾಮಿ ಕಾರನ್ನು ಗೆದ್ದ ನಂತರವೂ ಅದನ್ನು ನಿಭಾಯಿಸುವ ಸಾಮರ್ಥ್ಯ ಬಲ್ವೀರ್ ಸಿಂಗ್‍ರವರಿಗೆ ಹೇಗಾದರು ಬರಬೇಕು ಅಲ್ಲವೇ..?

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಲಕ್ಕಿ ಡ್ರಾನಲ್ಲಿ ಮೆಕ್ಲಾರೆನ್ 570 ಐಷಾರಾಮಿ ಸ್ಪೋರ್ಟ್ ಕಾರನ್ನು ಗೆದ್ದ ಕೆಲವೇ ದಿನಗಳಲ್ಲಿ ಅದನ್ನು ಮಾರಿಕೊಂಡು, ಹೊಸ ವ್ಯವಹಾರವನ್ನು ಶುರು ಮಾಡಲು ಯೋಜನೇ ಮಾಡಿಕೊಂಡರು ಮತ್ತು ಇದರ ಜೊತೆಗೆ ಇನ್ನು ಹಲವಾರು ಯೋಜನೆಗಳನ್ನು ಸಹ ಹೊಂದಿದ್ದಾರೆ. ಇನ್ನು ಬಲ್ವೀರ್ ಸಿಂಗ್‍ರವರು ಲಕ್ಕಿ ಡ್ರಾನಲ್ಲಿ ಗೆದ್ದ ಮೆಕ್ಲಾರೆನ್ 570 ಎಸ್ ಕಾರಿನ ಬಗ್ಗೆ ಹೇಳುವುದಾರೇ ಈ ಕಾರು ಸುಮಾರು ರೂ. 1.47 ಕೋಟಿಗೆ ಮಾರಾಟವಾಗುತ್ತಿದೆ.

ಲಕ್ಕಿ ಡ್ರಾದಲ್ಲಿ ಒಂದು ಕೆ.ಜಿ ಚಿನ್ನ ಗೆದ್ದ ಭಾರತೀಯ ಮೂಲದ ಯುವಕ

ಈ ಕಾರು 3.8 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ ಸಹಾಯದಿಂದ 562 ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. ಸುಮಾರು 1359 ಕಿಲೋಗ್ರಾಂ ತೂಕ ಹೊಂದಿರುವ ಈ ಕಾರು 3.2 ಸೆಕೆಂಡಿನಲ್ಲಿ 0 ಇಂದ 100 ಗಳ ಆಕ್ಸಿಲರೇಷನ್ ಸಾಮರ್ಥ್ಯ ಮತ್ತು ಗಂಟೆಗೆ ಸುಮಾರು 328 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಹೀಗಾಗಿ ತಿಂಗಳಿಗೆ ಸುಮಾರು ರೂ. 36 ಸಾವಿರ ಸಂಪಾದನೆಯನ್ನು ಹೊಂದಿರುವ ಬಲ್ವೀರ್ ಸಿಂಗ್ ಈ ಕಾರಿನ ಮೈನ್‍ಟೈನೆನ್ಸ್ ಅನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರ ಬಳಿ ಡ್ರೈವಿಂಗ್ ಲೈಸೆನ್ಸ್ ಕೂಡಾ ಇರಲಿಲ್ಲ. ಈ ಕಾರಿನ ಬಗ್ಗೆ ಏನೂ ತಿಳಿಯದ ಸಿಂಗ್ ನಂತರ ಗೂಗಲ್ ಮಾಡಿ, ಆನಂತರ ಕಾರನ್ನು 1.13 ಕೋಟಿಗೆ ಮಾರಿ ಬಿಷನ್ ಕೋಟ್‍ನಲ್ಲಿನ ತನ್ನ ಮನೆಗೆ ಕಳುಹಿಸಿದ್ದಾರೆ. ನಂತರ ಅವರು ಭಾರತಕ್ಕೆ ಮರಳಿದಾಗ ಹೊಸ ಕಾರನ್ನು ಕೂಡಾ ಖರೀದಿ ಮಾಡುವ ಯೋಜನೆಯಲ್ಲಿದ್ದಾರಂತೆ.

Most Read Articles

Kannada
English summary
Indian driver wins 1 kg gold in uae details
Story first published: Tuesday, December 28, 2021, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X