ಇಂಧನ ಸೆಲ್ ಬ್ಯಾಟರಿ ಚಾಲಿತ ಲೊಕೊಮೊಟಿವ್ ನಿರ್ಮಾಣ: ಭಾರತೀಯ ರೈಲ್ವೆ

Written By:

ಜಲಜನಕ ಇಂಧನ ಕೋಶ ಮತ್ತು ಬ್ಯಾಟರಿ ಚಾಲಿತ 300 ಕಿಲೋವ್ಯಾಟ್ ಬ್ರಾಡ್-ಗೇಜ್ ಲೋಕೋಮೋಟಿವ್ ನಿರ್ಮಿಸಲು ಭಾರತೀಯ ರೈಲ್ವೇಸ್(ಐಆರ್) ಯೋಜನೆ ರೂಪಿಸಿದೆ.

ಇಂಧನ ಸೆಲ್ ಬ್ಯಾಟರಿ ಚಾಲಿತ ಲೊಕೊಮೊಟಿವ್ ನಿರ್ಮಾಣ : ಭಾರತೀಯ ರೈಲು

ಈ ವಾರಾಣಸಿಯ ಡೀಸೆಲ್ ಲೊಕೊಮೋಟಿವ್ ವರ್ಕ್ಸ್, ಈ ಯೋಜನೆಗಾಗಿ ಬಿಡಿಭಾಗ ನಿರ್ಮಾಣಕ್ಕಾಗಿ ನವೆಂಬರ್ 22ರೊಳಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ. ಈ ಲೊಕೊಮೊಟಿವ್ ಪ್ರೊಟಾನ್ ವಿನಿಮಯ ಪೊರೆ ಆಧಾರಿತ(ಪಿಇಎಂ)ಇಂಧನ ಕೋಶದ ವಿದ್ಯುತ್ ಸ್ಥಾವರವನ್ನು ಪಡೆದುಕೊಳ್ಳಲಿದೆ.

ಇಂಧನ ಸೆಲ್ ಬ್ಯಾಟರಿ ಚಾಲಿತ ಲೊಕೊಮೊಟಿವ್ ನಿರ್ಮಾಣ : ಭಾರತೀಯ ರೈಲು

ಈ ಇಂಧನ ಕೋಶ ಮತ್ತು ಬ್ಯಾಟರಿ ವ್ಯವಸ್ಥೆಯು 700 ಕಿಲೋವ್ಯಾಟ್‌ನಷ್ಟು ಟ್ರಾನ್ಸ್ಶಿಯೆಂಟ್ ಶಕ್ತಿಯನ್ನು ಒದಗಿಸುತ್ತದೆ ಹಾಗು ಟ್ರಾನ್ಸ್‌ಫಾರ್ಮೆರ್‌ನೊಂದಿಗೆ ಡಿಸಿ/ಡಿಸಿ ಬೂಸ್ಟ್ / ಬಕ್ ಪರಿವರ್ತಕವನ್ನು ಒದಗಿಸುತ್ತದೆ.

ಇಂಧನ ಸೆಲ್ ಬ್ಯಾಟರಿ ಚಾಲಿತ ಲೊಕೊಮೊಟಿವ್ ನಿರ್ಮಾಣ : ಭಾರತೀಯ ರೈಲು

ಹೈಡ್ರೋಜನ್ ಶೇಖರಣಾ ವ್ಯವಸ್ಥೆಯು ಕಾರ್ಬನ್ ಫೈಬರ್ / ಅಲ್ಯೂಮಿನಿಯಂ ಟ್ಯಾಂಕ್‌ಗಳನ್ನು ಒಳಗೊಂಡಿರುವ ಎರಡು ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತದೆ.

ಇಂಧನ ಸೆಲ್ ಬ್ಯಾಟರಿ ಚಾಲಿತ ಲೊಕೊಮೊಟಿವ್ ನಿರ್ಮಾಣ : ಭಾರತೀಯ ರೈಲು

21-ಟನ್ ಎಕ್ಸೆಲ್‌ಲೋಡ್ ಲೋಕೋಮೋಟಿವ್, ಹೊಸ ಅಂಡರ್‌ಫ್ರೇಮ್ ಮತ್ತು ಸೂಪರ್‌ಸ್ಟಾಕ್ಚರ್ ಹೊಂದಿರುತ್ತದೆ. ಆದರೆ ಬೋಗಿ, ಡಿಸಿ ಎಳೆತದ ಮೋಟಾರ್‌ಗಳು, ಏರ್ ಬ್ರೇಕ್‌ಗಳು, ವಿಜಿಲೆನ್ಸ್ ಕಂಟ್ರೋಲ್ ಡಿವೈಸ್, ಈವೆಂಟ್ ರೆಕಾರ್ಡರ್, ಸ್ಯಾಂಡರ್ಸ್, ಏರ್ ಡ್ರೈಯರ್‌ಗಳು ಮತ್ತು ಹಾರ್ನ್‌ಗಳನ್ನು ಒಳಗೊಂಡಂತೆ ಕೆಲವು ಅಂಶಗಳನ್ನುಅಲ್ಕೊ ಡೀಸೆಲ್ ಲೊಕೊಮೊಟಿವ್‌ನಿಂದ ಬಳಸಿಕೊಳ್ಳುತ್ತದೆ.

ಇಂಧನ ಸೆಲ್ ಬ್ಯಾಟರಿ ಚಾಲಿತ ಲೊಕೊಮೊಟಿವ್ ನಿರ್ಮಾಣ : ಭಾರತೀಯ ರೈಲು

ಬಿಡ್ ಮಾಡುವ ಗ್ರೂಪ್ ಈ ವಿಶೇಷ ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿವು ಹೊಂದಿರಬೇಕಾಗುತ್ತದೆ. ಹೆಚ್ಚು ತಿಳುವಳಿಕೆಯಿಂದಾಗಿ ಈ ಯೋಜನೆಗೆ ಹೆಚ್ಚು ಬಲ ತರಲಿದ್ದು, ಹೊಸ ಲೋಕೋಮೋಟಿವ್ ನಿರ್ಮಾಣದ ಮೊದಲ ಹೆಜ್ಜೆ ಸುಸೂತ್ರವಾಗಿ ನೆರವೇರುತ್ತದೆ.

Read more on train ರೈಲು
English summary
Indian Railways to build fuel-cell battery locomotive

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark