2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಹೇಳಿಕೆ

2024ರ ವೇಳೆಗೆ ಭಾರತದ ರಸ್ತೆಗಳನ್ನು ಅಮೆರಿಕದ ರಸ್ತೆಗಳಂತೆ ಮಾಡಲು ಯೋಜಿಸಲಾಗಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ರಸ್ತೆಗಳು ದೇಶದ ಸಮೃದ್ಧಿಯೊಂದಿಗೆ ಸಂಪರ್ಕ ಹೊಂದಿವೆ ಮತ್ತು ಉತ್ತಮ ರಸ್ತೆಗಳು ಸಾರಿಗೆ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಇದು ತ್ವರಿತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಗಡ್ಕರಿ ಹೇಳಿದರು.

2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಹೇಳಿಕೆ

ಲೋಕಸಭಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ನಿತಿನ್ ಗಡ್ಕರಿ ಅವರು ಡಿಸೆಂಬರ್ 24 ರ ಒಳಗೆ ರಸ್ತೆ ಅಭಿವೃದ್ರಿಗೆ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದ ಅವರು, ಅಮೇರಿಕಾ ಶ್ರೀಮಂತ ದೇಶ ಎಂಬ ಕಾರಣಕ್ಕೆ ಅಮೇರಿಕಾದ ರಸ್ಯೆಗಳು ಉತ್ತಮವಾಗಿಲ್ಲ. ಬದಲಾಗಿ ಅಮೇರಿಕಾದಲ್ಲಿ ರಸ್ತೆಗಳು ಚೆನ್ನಾಗಿರುವ‌ ಹಿನ್ನೆಲೆಯಲ್ಲಿ ಅಮೇರಿಕಾ ಅಭಿವೃದ್ಧಿಯಲ್ಲಿ ಮತ್ತಷ್ಡು ಎತ್ತಕ್ಕೆ ಏರಿದೆ ಎಂದರು.

2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಹೇಳಿಕೆ

ಭಾರತವನ್ನು ಸಂಪದ್ಭರಿತವಾಗಿಸಲು 2024ರ ಡಿಸೆಂಬರ್ ಒಳಗೆ ಭಾರತದ ರಸ್ತೆ ಮೂಲಸೌಕರ್ಯವು ಅಮೆರಿಕದಂತೆಯೇ ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಗಡ್ಕರಿ ಸದನದಲ್ಲಿ ಹೇಳಿದರು. ರಸ್ತೆ ನಿರ್ಮಾಣವನ್ನು ಸುಧಾರಿಸಲು ಸರ್ಕಾರವು ಹೊಸ ತಂತ್ರಜ್ಞಾನಗಳನ್ನು ಅಳವಡಿಸುತ್ತಿದೆ ಎಂದ ಅವರು, ರಸ್ತೆ ನಿರ್ಮಾಣದಲ್ಲಿ ನಾಲ್ಕು ವಿಶ್ವದಾಖಲೆಗಳನ್ನು ಸ್ಥಾಪಿಸುವ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು.

2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಹೇಳಿಕೆ

ಬ್ಯಾಟರಿಗಳು ಮತ್ತು ಹೊಸ ತಂತ್ರಜ್ಞಾನಗಳ ಮೇಲಿನ ಸಂಶೋಧನೆಯು ಎಲೆಕ್ಟ್ರಿಕ್ ವಾಹನಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ, ಮುಂದಿನ ಎರಡು ವರ್ಷಗಳಲ್ಲಿ ಅವುಗಳನ್ನು ಪೆಟ್ರೋಲ್ ಚಾಲಿತ ವಾಹನಗಳಿಗೆ ಸಮಾನವಾಗಿ ಮಾಡುತ್ತದೆ ಎಂದು ಹೇಳಿದರು. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಸ್ತೆಗಳ ಉತ್ತಮ ಸಂಪರ್ಕವು ಬಹಳ ಮುಖ್ಯ ಎಂದು ಗಡ್ಕರಿ ಹೇಳಿದರು.

2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಹೇಳಿಕೆ

ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಎಲ್ಲಾ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಉತ್ತಮ ರಸ್ತೆ ಜಾಲದೊಂದಿಗೆ ಸಂಪರ್ಕಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ. ರಸ್ತೆ ಮೂಲಸೌಕರ್ಯ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದ ಸಚಿವಾಲಯದ ಕೆಲವು ಸಾಧನೆಗಳನ್ನು ಸದನದಲ್ಲಿ ಪಟ್ಟಿ ಮಾಡಿದರು. ಈಗ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ದೆಹಲಿಯಿಂದ ಮೀರತ್‌ಗೆ ಪ್ರಯಾಣದ ಸಮಯವನ್ನು ಕೇವಲ 40 ನಿಮಿಷಗಳಿಗೆ ಇಳಿಸಲಾಗಿದೆ ಎಂದರು. ಮುಂಬರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಬಗ್ಗೆ ಮಾತನಾಡಿದ ಗಡ್ಕರಿ, ಈ ಎಕ್ಸ್‌ಪ್ರೆಸ್‌ವೇ ಮೂಲಕ ಎರಡು ನಗರಗಳ ನಡುವಿನ ಪ್ರಯಾಣವನ್ನು ಕೇವಲ 12 ಗಂಟೆಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಹೇಳಿಕೆ

ಈ ವರ್ಷದ ಅಂತ್ಯದ ವೇಳೆಗೆ ಶ್ರೀನಗರದಿಂದ ಮುಂಬೈಗೆ ಕೇವಲ 20 ಗಂಟೆಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಅಲ್ಲದೇ ಕಾಶ್ಮೀರದ ಜೋಜಿಲಾ ಸುರಂಗ ಮಾರ್ಗದ ಕಾಮಗಾರಿಯನ್ನು ಪೂರ್ಣ ವೇಗದಲ್ಲಿ ಕೈಗೊಳ್ಳಲಾಗುತ್ತಿದ್ದು, 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು. ಪ್ರತಿದಿನ ಸರಾಸರಿ 50 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಸಾಧಿಸಲು ಸರ್ಕಾರ ಬಯಸುತ್ತದೆ ಎಂದು ಗಡ್ಕರಿ ಹೇಳಿದರು. ಪ್ರಸ್ತುತ, ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ ರಸ್ತೆಗಳನ್ನು ದಿನಕ್ಕೆ ಸರಾಸರಿ 37 ಕಿ.ಮೀ ವೇಗದಲ್ಲಿ ನಿರ್ಮಿಸಲಾಗುತ್ತಿದೆ.

2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಹೇಳಿಕೆ

ರಸ್ತೆಗಳು ಉತ್ತಮವಾಗಿದ್ದರೆ ದೇಶ ತಾನಾಗಿಯೇ‌ ಅಭಿವೃದ್ದಿ ಹೊಂದಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ರಸ್ತೆ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶಾದ್ಯಂತ ರಸ್ತೆ ಮೌಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ದೇಶದ ಸರ್ವತೋಮುಖ ಬೆಳವಣಿಗೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

Most Read Articles

Kannada
English summary
Indian roads to match united states by 2024 nitin gadkari
Story first published: Thursday, March 24, 2022, 12:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X