ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

By Nagaraja

ಏಷ್ಯಾದಲ್ಲೇ ಅತಿ ದೊಡ್ಡ ಡಬಲ್ ಡೆಕ್ಕರ್ ರೈಲ್ವೆ-ರಸ್ತೆ ಸೇತುವೆ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಪೂರ್ವ ಭಾರತದ ಬ್ರಹ್ಮಪುತ್ರ ನದಿಯಲ್ಲಿ ತಲೆಯೆತ್ತಲಿರುವ 'ಬೋಗಿಬೀಲ್' ರೈಲು ಹಾಗೂ ರಸ್ತೆ ಸೇತುವೆಯು 2018ರ ವೇಳೆಗೆ ಲೋಕರ್ಪಣೆಯಾಗಲಿದೆ.

ಅಸ್ಸಾಂನ ದಿಬ್ರುಘರ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ರೈಲ್ವೆ ಹಾಗೂ ರಸ್ತೆ ಸೇತುವೆಯು ಬ್ರಹ್ಮಪುತ್ರ ನದಿಯಲ್ಲಿ ಉತ್ತರ ಹಾಗೂ ದಕ್ಷಿಣ ಭಾಗಗಳನ್ನು ಸಂಪರ್ಕಿಸಲಿದೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ಈ ಮಹತ್ತರ ಸೇತುವೆ ಕಾಮಗಾರಿ ಪೂರ್ಣಗೊಂಡ್ಡಲ್ಲಿ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳಂತಹ ಕಡಿಮೆ ಅಭಿವೃದ್ಧಿ ಹೊಂದಿರುವ ರಾಜ್ಯಗಳಿಗೆ ನೆರವಾಗಲಿದೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ಈ ಡಕ್ಕರ್ ಡೆಕ್ಕರ್ ರೈಲ್ವೆ-ರೆಸ್ತೆ ಸೇತುವೆಯ ವಿಶೇಷತೆ ಏನೆಂದರೆ ಕಳಗಡೆಯಿಂದ ಎರಡು ಹಾದಿಯ ರೈಲ್ವೆ ಟ್ರ್ಯಾಕ್ ಹಾಗೂ ಮೇಲ್ಪಾಗದಲ್ಲಿ ಮೂರು ಹಾದಿಗಳ ರಸ್ತೆ ಮಾರ್ಗವು ಜೋಡಣೆಯಾಗಲಿದೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ವಿಶಿಷ್ಟತೆ ಕಾಪಾಡಿಕೊಂಡಿರುವ ಈ ರೈಲ್ವೆ ಹಾಗೂ ರಸ್ತೆ ಸೇತುವೆಯು 4.9 ಕೀ.ಮೀ.ಗಳಷ್ಟು (4940 ಮೀಟರ್) ಉದ್ದವನ್ನು ಹೊಂದಿರಲಿದೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ಇಲ್ಲಿ ಬ್ರಹ್ಮ ಪುತ್ರ ನದಿಯ ಉತ್ತರದಿಂದ ದಕ್ಷಿಣ ಭಾಗಕ್ಕೆ ಸಂಪರ್ಕ ಸೇರಿದಂತೆ 74 ಕೀ.ಮೀ. ಗಳಷ್ಟು ಉದ್ದದ ರೈಲ್ವೆ ಮಾರ್ಗವು ನಿರ್ಮಾಣವಾಗಲಿದೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ದಕ್ಷಿಣದಲ್ಲಿ ದಿಬ್ರುಘರದಿಂದ 5.83 ಕೀ.ಮೀಗಳಷ್ಟು ದೂರದಲ್ಲಿರುವ ಚೋವಾಲ್ ಖೋವಾ ಹಾಗೂ ಉತ್ತರದಲ್ಲಿ ಸಿಸಿ ಬೋರ್ಗಾಂವ್ ಹಾಗೂ ಸಿರ್ಪನಿಗಳನ್ನು ನದಿ ತಟವನ್ನು ಸಂಪರ್ಕಿಸಲಿದೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ಸಂಪೂರ್ಣ ಬೋಗಿ ಬೀಲ್ ಸೇತುವೆ ಯೋಜನೆಗೆ ಬರೋಬ್ಬರಿ 4,857 ಕೋಟಿ ರುಪಾಯಿಗಳನ್ನು ಅಂದಾಜಿಸಲಾಗಿದೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ಸೇತುವೆ ನಿರ್ಮಾಣಕ್ಕಾಗಿ ಬ್ರಹ್ಮಪುತ್ರ ನದಿಯ ಅಗಲವನ್ನು 10 ಕೀ.ಮೀ. ಗಳಿಂದ 5 ಕೀ.ಮೀ. ಗಳಷ್ಟು ಕಿರಿದು ಮಾಡಬೇಕಾಗುತ್ತದೆ. ಅಲ್ಲದೆ ಸವೆತವನ್ನು ತಡೆಯಬಲ್ಲ ಬಹಳ ಗಟ್ಟಿಮುಟ್ಟಾದ 'ಗೈಡ್ ಬಂಡ್ಸ್' ಆಧಾರ ಸ್ತಂಭಗಳನ್ನು ನಿರ್ಮಿಸಲಾಗುತ್ತದೆ. ಕಾಮಗಾರಿಯು ಅತ್ಯಂತ ಸವಾಲಿನಿಂದ ಕೂಡಿರಲಿದೆ ಎಂದು ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ರೈಲ್ವೆ ಹಾಗೂ ರಸ್ತೆ ಸೇತುವೆ

ಸೇತುವೆ ನಿರ್ಮಾಣಕ್ಕಾಗಿ ಸ್ವಿಡನ್ ಹಾಗೂ ಡೆನ್ಮಾರ್ಕ್ ತಂತ್ರಗಾರಿಕೆಗಳನ್ನು ಬಳಕೆ ಮಾಡಲಾಗುತ್ತದೆ. ಹಾಗೆಯೇ ಇದು ಹಗುರ ಭಾರದ ಸೇತುವೆಯಾಗಿರಲಿದೆ.

Most Read Articles

Kannada
Read more on ಭಾರತ india
English summary
India’s longest rail-cum-road bridge in Northeast
Story first published: Saturday, August 27, 2016, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X