ದುಬಾರಿ ಬೆಲೆಯ ಲಂಬೊರ್ಗಿನಿ ಕಸ್ಟಮ್ ಪೇಂಟ್ ಅವೆಡೆಡರ್ ಎಸ್ ಖರೀದಿಸಿದ ತಮಿಳುನಾಡಿನ ವ್ಯಾಪಾರಿ

Written By:

ಭಾರತದಲ್ಲಿ ಇತ್ತೀಚೆಗೆ ಸೂಪರ್ ಕಾರುಗಳ ಕ್ರೇಜ್ ಹೆಚ್ಚುತ್ತಿದೆ. ಕಳೆದ ಕೆಲ ವರ್ಷಗಳಿಂದ ಸೂಪರ್ ಕಾರುಗಳ ಮಾರಾಟ ಪ್ರಕ್ರಿಯೆ ಕೂಡಾ ಗಣನೀಯ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಇದೀಗ ವಿನೂತನ ಮಾದರಿಯ ಲಂಬೊರ್ಗಿನಿ ಕಸ್ಟಮ್ ಪೇಂಟ್ ಅವೆಡೆಡರ್ ಎಸ್ ಆವೃತ್ತಿಯನ್ನು ತಮಿಳುನಾಡು ಮೂಲಕ ವ್ಯಾಪರಿಯೊಬ್ಬರು ಖರೀದಿ ಮಾಡಿದ್ದಾರೆ.

To Follow DriveSpark On Facebook, Click The Like Button
ಲಂಬೊರ್ಗಿನಿ ಕಸ್ಟಮ್ ಪೇಂಟ್ ಕಾರು ಖರೀದಿಸಿದ ತಮಿಳುನಾಡಿನ ವ್ಯಾಪಾರಿ

ಸೂಪರ್ ಕಾರು ಅಂದತಕ್ಷಣ ನಮಗೆಲ್ಲಾ ನೆನಪಿಗೆ ಬರುವುದೇ ಲಂಬೊರ್ಗಿನಿ. ಹೌದು.. ಸೂಪರ್ ಕಾರು ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಲಂಬೊರ್ಗಿನಿ ಸದ್ಯ ಸಾವಿರಾರು ಭಾರತೀಯ ಗ್ರಾಹಕರ ಕನಸನ್ನು ನನಸು ಮಾಡಿದೆ. ಯಾಕಂದ್ರೆ ಸೂಪರ್ ಕಾರು ಖರೀದಿಸಬೇಕೆಂಬ ಪ್ರತಿ ವ್ಯಕ್ತಿ ಕನಸಲ್ಲೂ ಲಂಬೊರ್ಗಿನಿ ಇದ್ದೆ ಇರುತ್ತೆ.

ಲಂಬೊರ್ಗಿನಿ ಕಸ್ಟಮ್ ಪೇಂಟ್ ಕಾರು ಖರೀದಿಸಿದ ತಮಿಳುನಾಡಿನ ವ್ಯಾಪಾರಿ

ಇದಕ್ಕೆ ಹಲವು ಕಾರಣಗಳಿವೆ. ಸೂಪರ್ ಕಾರುಗಳಲ್ಲೇ ಅತ್ಯತ್ತಮ ಕಾರ್ಯಕ್ಷಮತೆ, ಉತ್ತಮ ವಿನ್ಯಾಸದೊಂದಿಗೆ ಎಂತವರನ್ನು ಸೆಳೆಯಬಲ್ಲ ಶಕ್ತಿ ಲಂಬೊರ್ಗಿನಿ ಇದೆ. ಹೀಗಾಗಿಯೇ ವಿಶ್ವಮಟ್ಟದಲ್ಲಿ ಜನಪ್ರಿಯತೆ ಸಾಧಿಸಲು ಸಾಧ್ಯವಾಗಿದೆ.

ಲಂಬೊರ್ಗಿನಿ ಕಸ್ಟಮ್ ಪೇಂಟ್ ಕಾರು ಖರೀದಿಸಿದ ತಮಿಳುನಾಡಿನ ವ್ಯಾಪಾರಿ

ಸದ್ಯ ತಮಿಳುನಾಡು ಮೂಲದ ಮಲೀಕ್ ಸಹೋದರರಾದ ಮತ್ತು ಅಕ್ರಮ್ ಮಲೀಕ್ ಹಾಗೂ ಗಡಾಫಿ ಮಲೀಕ್ ಎನ್ನುವರು ಲಂಬೊರ್ಗಿನಿ ಕಸ್ಟಮ್ ಪೇಂಟ್ ಅವೆಡೆಡರ್ ಎಸ್ ಆವೃತ್ತಿಯನ್ನು ಖರೀದಿ ಮಾಡಿದ್ದು, ಬೆಂಗಳೂರು ಮೂಲದ ಉದ್ಯಮಿ ಕೆ.ವಿ.ಪ್ರಸಾದ್ ನಂತರ ಕಸ್ಟಮ್ ಪೇಂಟ್ ಅವೆಡೆಡರ್ ಎಸ್ ಆವೃತ್ತಿಯನ್ನು ಖರೀದಿ ಮಾಡಿದ 2ನೇ ಕಾರು ಇದಾಗಿದೆ.

ಲಂಬೊರ್ಗಿನಿ ಕಸ್ಟಮ್ ಪೇಂಟ್ ಕಾರು ಖರೀದಿಸಿದ ತಮಿಳುನಾಡಿನ ವ್ಯಾಪಾರಿ

ಇನ್ನೊಂದು ಪ್ರಮುಖ ವಿಚಾರ ಏನೆಂದರೇ ಸಾಮಾನ್ಯ ಮಾದರಿಯಲಂಬೊರ್ಗಿನಿ ಅವೆಡೆಡರ್ ಎಸ್ ಮತ್ತು ಕಸ್ಟಮ್ ಪೇಂಟ್ ಅವೆಡೆಡರ್ ಎಸ್ ಆವೃತ್ತಿಯ ಬೆಲೆಗೂ ಭಾರೀ ವ್ಯತ್ಯಾಸವಿದ್ದು, ಮೂಲ ಬೆಲೆಗಿಂತ ಹೆಚ್ಚುವರಿಯಾಗಿ 1 ಕೋಟಿ ಪಾವತಿಸಿ ಹೊಸ ಆವೃತ್ತಿಯನ್ನು ಖರೀದಿ ಮಾಡಲಾಗಿದೆ.

ಲಂಬೊರ್ಗಿನಿ ಕಸ್ಟಮ್ ಪೇಂಟ್ ಕಾರು ಖರೀದಿಸಿದ ತಮಿಳುನಾಡಿನ ವ್ಯಾಪಾರಿ

ಎಂಜಿನ್ ಸಾಮರ್ಥ್ಯ

ಲಂಬೊರ್ಗಿನಿ ಅವೆಡೆಡರ್ ಎಸ್ ಮಾದರಿಯು 6.5-ಲೀಟರ್ ಎನ್ಎ ವಿ12 ಎಂಜಿನ್ ಹೊಂದಿದ್ದು, 730-ಬಿಎಚ್‌ಪಿ ಮತ್ತು 690-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಲಂಬೊರ್ಗಿನಿ ಕಸ್ಟಮ್ ಪೇಂಟ್ ಕಾರು ಖರೀದಿಸಿದ ತಮಿಳುನಾಡಿನ ವ್ಯಾಪಾರಿ

ಇದರ ಜೊತೆಗೆ 7-ಸ್ಪೀಡ್ ಸಿಂಗಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಲಂಬೊರ್ಗಿನಿ ಅವೆಡೆಡರ್ ಎಸ್, 2.9 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆದುಕೊಳ್ಳಕೊಳ್ಳುವ ಶಕ್ತಿಯನ್ನು ಹೊಂದಿದೆ.

ಲಂಬೊರ್ಗಿನಿ ಕಸ್ಟಮ್ ಪೇಂಟ್ ಕಾರು ಖರೀದಿಸಿದ ತಮಿಳುನಾಡಿನ ವ್ಯಾಪಾರಿ

ಈ ಮೂಲಕ ಪ್ರತಿ ಗಂಟೆಗೆ 350 ಕಿಮಿ ಕ್ರಮಿಸುವ ಗುಣ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಹೆದ್ದಾರಿಯಲ್ಲಿ 6 ಕಿಮಿ ಮೈಲೇಜ್ ಮತ್ತು ಟ್ರಾಕ್‌ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಕೇವಲ 3 ಕಿಮಿ ಮೈಲೇಜ್ ನೀಡುವುದು.

English summary
Read in Kannada about India’s Most Expensive Lamborghini Goes To Tamil Nadu.
Story first published: Wednesday, November 29, 2017, 14:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark