ವಿಹಾರ ನೌಕೆಯೊಳಗೊಂದು ನೌಕೆ; ತೇಲುವ ಗ್ಯಾರೇಜ್

By Nagaraja

ಜಗತ್ತಿನ ಪ್ರಮುಖ ನೌಕಾಯಾನ ಸಂಸ್ಥೆಗಳ ನಡುವೆ ಅತ್ಯಂತ ವಿಲಾಸಿ ವಿಹಾರ ನೌಕೆಗಳನ್ನು ನಿರ್ಮಿಸುವುದರಲ್ಲಿ ಪೈಪೋಟಿ ಏರ್ಪಟ್ಟಿರುವಂತೆಯೇ ಇಟಲಿಯ ನೌಕಾಯಾನ ಸಂಸ್ಥೆಯೊಂದು ವಿಹಾರ ನೌಕೆಯಲ್ಲೇ ಸ್ಪೀಡ್ ಬೋಟ್ (ಡ್ರೈವ್ ಇನ್ ಗ್ಯಾರೇಜ್) ವ್ಯವಸ್ಥೆಯನ್ನು ಒದಗಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಡಗಿನಲ್ಲಿ ಹೆಲಿಪ್ಯಾಡ್, ಈಜುಕೊಳ ಅಥವಾ ಮಲ್ಟಿಫ್ಲೆಕ್ಸ್ ಚಲನಚಿತ್ರ ಮಂದಿರಗಳು ಇರುವುದು ಸಾಮಾನ್ಯ. ಆದರೆ ಇಟಲಿಯ ಫೆರೆಟ್ಟಿ ಸಂಸ್ಥೆಯ (Ferretti Group) ಸಿಆರ್‌ಎನ್ ನಿರ್ಮಿಸಿರುವ ನೂತನ 'ಜೇಡ್' (J'ade) ವಿಹಾರ ನೌಕೆಯು ಫ್ಲೋಟಿಂಗ್ ಇಂಡೋರ್ ಗ್ಯಾರೇಜ್ (ತೇಲುವ ಗ್ಯಾರೇಜ್) ಹೊಂದಿರುವ ವಿಶ್ವದ ಮೊಟ್ಟ ಮೊದಲ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದರೆ ಈ ದುಬಾರಿ ವಿಹಾರ ನೌಕೆಯೊಳಗೆ ಎಂಟು ಮೀಟರ್ ಉದ್ದದ ಸ್ಪೀಡ್ ಬೋಟ್ ಸೌಲಭ್ಯವಿರಲಿದೆ.

ವಿಹಾರ ನೌಕೆಯೊಳಗೊಂದು ನೌಕೆ; ತೇಲುವ ಗ್ಯಾರೇಜ್

196 ಅಡಿ ಉದ್ದದ ಈ ವಿಹಾರ ನೌಕೆಯು ಹೆಡ್ರಾಲಿಕ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ಸ್ಪೀಡ್ ಬೋಟ್‌ನ ಉಪಯೋಗ ಇಲ್ಲದಾಗ ಈ ಒಳಾಂಗಣ ಪ್ರದೇಶವನ್ನು ಓಷಿಯನ್ ಪೂಲ್ ಆಗಿಯೂ ಬಳಕೆ ಮಾಡಬಹುದಾಗಿದೆ.

ವಿಹಾರ ನೌಕೆಯೊಳಗೊಂದು ನೌಕೆ; ತೇಲುವ ಗ್ಯಾರೇಜ್

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ಎಂಟು ಮೀಟರ್ ಉದ್ದದ ತೇಲುವ ಬೋಟ್ ಹಡಗಿನೊಳಗೆ ತರಲು ಯಾವುದೇ ಭಾರ ಎತ್ತುವ ಕ್ರೇನ್‌ಗಳ ಅಗತ್ಯವಿರುದಿಲ್ಲ. ಬದಲಾಗಿ ಕೇವಲ ಮೂರು ನಿಮಿಷಗಳಲ್ಲೇ 18,000 ಲೀಟರ್ ನೀರು ಖಾಲಿ ಮಾಡುವ ವ್ಯವಸ್ಥೆ ಹೊಂದಿದ್ದು, ಇದು ದೋಣಿ ಸುಲಭವಾಗಿ ಒಳ ಪ್ರವೇಶಿಸಲು ನೆರವಾಗಲಿದೆ.

ವಿಹಾರ ನೌಕೆಯೊಳಗೊಂದು ನೌಕೆ; ತೇಲುವ ಗ್ಯಾರೇಜ್

2014 ಮೊನಕೊ ವಿಹಾರ ನೌಕೆ ಶೋದಲ್ಲೂ ಶ್ರೇಷ್ಠ ಒಳಮೈಗಾಗಿ ಫೈನಲ್‌ಗೆ ನಾಮನಿರ್ದೇಶನ ಪಡೆದಿದ್ದ ಜೇಡ್ ಸ್ವಲ್ಪದರಲ್ಲೇ ಪ್ರಶಸ್ತಿ ಮಿಸ್ ಮಾಡಿಕೊಂಡಿತ್ತು. ಆದರೆ ಇದಕ್ಕೂ ಮೊದಲು 2013ರಲ್ಲಿ ಅಂತಾರಾಷ್ಟ್ರೀಯ ಬೋಟ್ ಶೋದಲ್ಲಿ ವಿಶ್ವ ವಿಹಾರ ನೌಕೆ ಪ್ರಶಸ್ತಿಗೆ ಪಾತ್ರವಾಗಿತ್ತು.

ವಿಹಾರ ನೌಕೆಯೊಳಗೊಂದು ನೌಕೆ; ತೇಲುವ ಗ್ಯಾರೇಜ್

ಈ ಖಾಸಗಿ ವಿಹಾರ ನೌಕೆಯನ್ನು ಸ್ಟುಡಿಯೋ ಝುಕೊನ್ ಇಂಟರ್‌ನ್ಯಾಷನಲ್ ಪ್ರೊಜೆಕ್ಟ್ ರಚಿಸಿದೆ. ಇದು ನಾಲ್ಕು ಕ್ಯಾಬಿನ್‌ಗಳಾಗಿ 10 ಆತಿಥಿಗಳಿಗೆ ಐಷಾರಾಮಿ ಅನುಭವ ನೀಡಲಿದೆ. ಜೊತೆಗೆ 13 ಸಿಬ್ಬಂದಿಗಳು ಇದರಲ್ಲಿ ಸೇವೆಗೆ ನಿರತರಾಗಿರಲಿದ್ದಾರೆ.

ವಿಹಾರ ನೌಕೆಯೊಳಗೊಂದು ನೌಕೆ; ತೇಲುವ ಗ್ಯಾರೇಜ್

ಅಕ್ವೇರಿಯಂ, ಜಿಮ್ನೇಸಿಯಂ, ಐಷಾರಾಮಿ ಬೆಡ್ ರೂಂ, ಶೌಚಾಲಯ, ಮೇಲ್ಛಾವಣಿ, ಪ್ರತ್ಯೇಕ ಈಜುಕೊಳ, ಮನರಂಜನೆ, ಡೈನಿಂಗ್ ಟೇಬಲ್, ಕಾಫಿ ಟೇಬಲ್ ಇನ್ನು ಇತ್ಯಾದಿ ಹೆಚ್ಚಿನ ವಿಲಾಸಿ ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ.

Most Read Articles

Kannada
English summary
CRN 125 M/Y J’Ade is the world’s first super yacht designed by Studio Zuccon International along with CRN technical Office and CRN Centro Stile was nominated for Best Interiors at 2014 Monaco Yacht Show which ran 24th-27th September 2014.
Story first published: Friday, October 10, 2014, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X