ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

Written By:

ಒಳ್ಳೆಯದ್ದೋ, ಕೆಟ್ಟದ್ದೋ ಅದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ. ಹಾಗಿದ್ದರೂ ತಾವು ಪ್ರಯಾಣಿಸುವ ಕಾರಿನ ಮೇಲೆ ಕಾಗೆ ಕೂತಿರುವ ಘಟನೆಯ ಬಳಿಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ತಮ್ಮ ಅಧಿಕೃತ ಫಾರ್ಚ್ಯುನರ್ ಕಾರನ್ನೇ ಬದಲಾಯಿಸಿದ್ದಾರೆ.

ಹಳೆಯ ಕಾರಿನ ಬದಲಿಗೀಗ ಸಿಎಂ ನಿವಾಸವನ್ನು ಹೊಚ್ಚ ಹೊಸ ಫಾರ್ಚ್ಯುನರ್ ಬಂದು ತಲುಪಿದೆ. ನೂತನ ಕಾರಿಗೆ '2016' ಎಂಬ ನಂಬರ್ ದೊರಕಿದ್ದು, ಇದು ಸಿಎಂ ಅದೃಷ್ಟ ಸಂಖ್ಯೆಯಾಗಿ ಬದಲಾದಿತೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಈ ನಡುವೆ ಮೂಢ ನಂಬಿಕೆಗಳನ್ನು ನಂಬುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಸಿದ್ದರಾಮಯ್ಯ, ಕಾರು ಬದಲಿಸುವ ವಿಚಾರ ಎರಡು ತಿಂಗಳುಗಳ ಹಿಂದೆಯೇ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಕಾರಿನಲ್ಲಿ ತಾಂತ್ರಿಕ ತೊಂದರೆ ಇರುವುದರಿಂದ ಬದಲಾಯಿಸಬೇಕಾಯಿತು ಎಂಬುದನ್ನು ವಿವರಿಸಿದ್ದರು.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಮುಖ್ಯಮಂತ್ರಿ ಸಿದ್ದರಾಮಯ್ಯ ಖರೀದಿಸಿರುವ ನೂತನ ಶ್ವೇತ ವರ್ಣದ ಫಾರ್ಚ್ಯುನರ್ ಹೈ ಎಂಡ್ ಮಾದರಿಯ ಬೆಲೆ ಸರಿ ಸುಮಾರು 35 ಲಕ್ಷ ರುಪಾಯಿಗಳೆಂದು ಅಂದಾಜಿಸಲಾಗಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಸಿಎಂ ಸಿದ್ದು ಹಳೆಯ ಫಾರ್ಚ್ಯುನರ್ ಕಾರಿನ ನಂಬರ್ 'KA-01 G-5734' ಎಂಬುದಾಗಿತ್ತು. ಈಗ ಹೊಸ ಫಾರ್ಚ್ಯುನರ್ ಕಾರು 'KA-01 GA - 2016' ಎಂಬ ನಂಬರ್ ಪ್ಲೇಟ್ ಗಿಟ್ಟಿಸಿಕೊಂಡಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಐಷಾರಾಮಿ ಕ್ರೀಡಾ ಬಳಕೆಯ ವಾಹನವಾಗಿರುವ ಟೊಯೊಟಾ ಫಾರ್ಚ್ಯುನರ್ ಗೆ ಭಾರತದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಇದು ಉದ್ಯಮಿಗಳ ನೆಚ್ಚಿನ ವಾಹನ ಕೂಡಾ ಆಗಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ದೃಢವಾದ ನಿಲುವು, ಶೈಲಿ ಮತ್ತು ಶಕ್ತಿಶಾಲಿ ಎಂಜಿನ್ ಹೀಗೆ ಒಂದು ಎಸ್‌ಯುವಿ ಕಾರಿಗೆ ಬೇಕಾದ ಎಲ್ಲ ಗುಣ ವೈಶಿಷ್ಟ್ಯಗಳನ್ನು ನೂತನ ಫಾರ್ಚ್ಯುನರ್ ಪಡೆದುಕೊಂಡಿದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸಲಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಶಕ್ತಿಶಾಲಿ 3.0 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟೊಯೊಟಾ ಫಾರ್ಚ್ಯುನರ್ 343 ಎನ್ ಎಂ ತಿರುಗುಬಲದಲ್ಲಿ 170 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಟೊಯೊಟಾ ಫಾರ್ಚ್ಯುನರ್ ನಲ್ಲಿ ಏಳು ಮಂದಿಗೆ ಆರಾಮವಾಗಿ ಸಂಚರಿಸಬಹುದಾಗಿದ್ದು, 296 ಲೀಟರ್ ಗಳ ಢಿಕ್ಕಿ ಜಾಗವನ್ನು ಕೊಡಲಾಗಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಇನ್ನು ಮನರಂಜನೆಗೂ ಗರಿಷ್ಠ ಆದ್ಯತೆಯನ್ನು ಕೊಡಲಾಗಿದೆ. ಅತ್ಯಂತ ಏರ್ ಬ್ಯಾಗ್ ಸೇರಿದಂತೆ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಲಾಗುತ್ತಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ. ಅಂತೆಯೇ ಫೋರ್ ವೀಲ್ ಚಾಲನಾ ಆಯ್ಕೆ ಇದರಲ್ಲಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ವೈಶಿಷ್ಟ್ಯಗಳ ಬಗ್ಗೆ ಕಣ್ಣಾಯಿಸುವುದಾದ್ದಲ್ಲಿ ಸ್ಮಾರ್ಟ್ ಕೀ ಜೊತೆಗೆ ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಗಾಗಿ ಪುಶ್ ಬಟನ್ ಮತ್ತು ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮಿರರ್ ಸೇವೆಯೂ ಇದರಲ್ಲಿರುತ್ತದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಇನ್ನುಳಿದಂತೆ ಪವರ್ ಫೋಲ್ಡಿಂಗ್ ಫಂಕ್ಷನ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಪೆಡಲ್ ಶಿಫ್ಟರ್ (ಆಟೋಮ್ಯಾಟಿಕ್ ವೆರಿಯಂಟ್ ನಲ್ಲಿ), ಕ್ರೂಸ್ ಕಂಟ್ರೋಲ್, ಎಂಐಡಿಗಾಗಿ ಟಿಎಫ್‌ಟಿ ಸ್ಕ್ರೀನ್, ಏಳು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಡಿವಿಡಿ, ಯುಎಸ್‌ಬಿ, ಆಕ್ಸ್‌,ಇನ್, ಬ್ಲೂಟೂತ್, ನೇವಿಗೇಷನ್ ಸಪೋರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ರಿಯರ್ ಎಸಿ ವೆಂಟ್ಸ್, ಚಿಲ್ಡ್ ಗ್ಲೋವ್ ಬಾಕ್ಸ್, ಲೆಥರ್ ಸೀಟು ಹೋದಿಕೆ, ಎಂಟು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲನಾ ಸೀಟು ಇತ್ಯಾದಿ ವಿಶಿಷ್ಟತೆಗಳು ಕಂಡುಬರಲಿದೆ.

ಕಾಗೆ ಕಾಟದಿಂದ ಬದಲಾಯ್ತು ಕಾರು; ಸಿಎಂ ಸಿದ್ದು ಅದೃಷ್ಟ ಸಂಖ್ಯೆ '2016'

ಸುರಕ್ಷತೆಯ ಬಗ್ಗೆ ಗಮನ ಹರಿಸುವುದಾದ್ದಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್, ಮೊಣಕಾಲು ಏರ್ ಬ್ಯಾಗ್ ಸೇರಿದಂತೆ ಒಟ್ಟು ಏಳು ಏರ್ ಬ್ಯಾಗ್, ಎಬಿಎಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಇಎಸ್‌ಸಿ, ಟಿಸಿಎಸ್, ರಿವರ್ಸ್ ಕ್ಯಾಮೆರಾ ಜೊತೆ ಪಾರ್ಕಿಂಗ್ ಸೆನ್ಸಾರ್, ಟ್ರಾಕ್ಟರ್ ಸ್ವೇ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಡೌನ್ ಹಿಲ್ ಅಸಿಸ್ಟ್ ಕಂಟ್ರೋಲ್ ಇರಲಿದೆ.

Picture credit: Indiatoday

English summary
Karnataka CM Siddaramaiah gets new Toyota Fortuner
Story first published: Wednesday, June 15, 2016, 12:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark