ರಾಜಕಾರಣಿಗಳ ಮನಸ್ವೇಚ್ಛೆ ಕೆಂಪು ದೀಪ ಬಳಕೆಗೆ ಬಿತ್ತು ಬ್ರೇಕ್

By Nagaraja

ದೇಶದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ, ಗಣ್ಯರು, ಜನಪ್ರತಿನಿಧಿಗಳು ತಮ್ಮ ಕಾರುಗಳ ಮೇಲೆ ಮನಸ್ವೇಚ್ಛೆ ಕೆಂಪು ದೀಪ ಆಳವಡಿಕೆ ಹಾಗೂ ಸೈರನ್ ಬಳಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

ಇದೀಗ ಸುಪ್ರೀಂ ಆದೇಶವನ್ನು ಪಾಲಿಸುವಲ್ಲಿ ಕಟುಬದ್ಧವಾಗಿರುವ ರಾಜ್ಯದ ನೂತನ ಸಿಎಂ ಸಿದ್ಧರಾಮಯ್ಯ, ಕೆಂಪು ದೀಪದ ಇಂತಹ ಕಾರುಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಸಾರ್ವಜನಿಕರ ನಿರಾತಂಕ ಸಂಚಾರದ ಹಕ್ಕಿಗೆ ಚ್ಯುತಿ ತರುಹ ಇಂತಹ ಪಯಣ ಕಾನೂನುಬಾಹಿರ. ಇದರಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಕಳೆದ ವಾರ ಸಚಿವ ಸಂಪುಟ ಸಭೆ ನಡೆಸಿರುವ ಸಿಎಂ ಸಿದ್ಧರಾಮಯ್ಯ, ಮಂತ್ರಿಗಳು ಹಾಗೂ ನ್ಯಾಯಾಧೀಶರು ಮಾತ್ರ ಕಾರಿನ ಮೇಲೆ ಕೆಂಪು ದೀಪ ಹಾಕಿಕೊಳ್ಳಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಆದೇಶವನ್ನು ಮೀರಿ ಧಾರ್ಮಿಕ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕೆಂಪು, ಹಸಿರು ಮುಂತಾದ ದೀಪಗಳನ್ನು ವಾಹನಗಳ ಮೇಲೆ ಬಳಸಿಕೊಂಡರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ರಾಜಕಾರಣಿಗಳ ಮನಸ್ವೇಚ್ಛೆ ಕೆಂಪು ದೀಪ ಬಳಕೆಗೆ ಬಿತ್ತು ಬ್ರೇಕ್

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯ ಸಾಂವಿಧಾನಿಕ ಮುಖ್ಯಸ್ಥರ ವಾಹನಗಳಿಗಷ್ಟೇ ಕೆಂಪು ದೀಪವನ್ನು ಆಳವಡಿಸುವ ಅನುಮತಿಯಿದೆ.

ರಾಜಕಾರಣಿಗಳ ಮನಸ್ವೇಚ್ಛೆ ಕೆಂಪು ದೀಪ ಬಳಕೆಗೆ ಬಿತ್ತು ಬ್ರೇಕ್

ಇನ್ನುಳಿದಂತೆ ಪೊಲೀಸ್, ಅಂಬುಲೆನ್ಸ್, ಅಗ್ನಿಶಾಮಕ, ಸೇನೆಯ ವಾಹನಗಳು ಹಾಗೂ ಮೋಟಾರ್ ವಾಹನ ಕಾಯ್ದೆಯ ವಾಹನಗಳನ್ನು ಹೊರತುಪಡಿಸಿ ಇತರ ಯಾವುದೇ ಗಣ್ಯರ ವಾಹನಗಳಲ್ಲಿ ಕೆಂಪು ದೀಪ ಆಳವಡಿಸಬಾರದು.

ರಾಜಕಾರಣಿಗಳ ಮನಸ್ವೇಚ್ಛೆ ಕೆಂಪು ದೀಪ ಬಳಕೆಗೆ ಬಿತ್ತು ಬ್ರೇಕ್

ಈ ಹಿಂದೆಲ್ಲ ರಾಜ್ಯ ಸರಕಾರಗಳು ಮನಸ್ಸಿಗೆ ಬಂದಂತೆ ಕೆಂಪು ದೀಪ ಹಾಕಿಕೊಳ್ಳಲು ಅನುಮತಿ ನೀಡುತ್ತಿದ್ದವು. ಇದರಿಂದ ಜನ ಸಾಮಾನ್ಯರ ಹಕ್ಕಿಗೆ ಧಕ್ಕೆಯುಂಟಾಗಿತ್ತು.

ರಾಜಕಾರಣಿಗಳ ಮನಸ್ವೇಚ್ಛೆ ಕೆಂಪು ದೀಪ ಬಳಕೆಗೆ ಬಿತ್ತು ಬ್ರೇಕ್

ಪ್ರಕರಣವನ್ನು ಇನ್ನು ಆಳವಾಗಿ ಪರಿಗಣಿಸಿದರೆ ಕೆಂಪು ದೀಪ ಹಾಗೂ ಸರ್ಕಾರಿ ವಾಹನ ಫಲಕಗಳನ್ನು ಮರೆಮಾಚದೆ ಅವರ ಮಕ್ಕಳು, ಕುಟಂಬ ವರ್ಗ ತಮ್ಮ ಖಾಸಗಿ ಅಗತ್ಯಗಳಿಗಾಗಿ ಬಳಸುತ್ತಿರುವುದನ್ನು ನಾವು ಕಂಡಿರುತ್ತೇವೆ.

ರಾಜಕಾರಣಿಗಳ ಮನಸ್ವೇಚ್ಛೆ ಕೆಂಪು ದೀಪ ಬಳಕೆಗೆ ಬಿತ್ತು ಬ್ರೇಕ್

ಒಟ್ಟಿನಲ್ಲಿ ರಾಜ್ಯದಲ್ಲಿ ಕೆಂಪು ದೀಪದ ಕಾರುಗಳಿಗೆ ಕಡಿವಾಣ ಬೀಳಲಿದ್ದು, ಈ ಸಂಬಂಧ ಸಿಎಂ ಸಿದ್ದು ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೆಯೇ 1998ರ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಆಗಬೇಕಾಗಿರುವುದು ಅಗತ್ಯವೆನಿಸಿದೆ.

Most Read Articles

Kannada
English summary
The Council of Ministers meeting decided to issue guidelines to restrict the use of red beacon vehicles to limited number of functionaries. The decision comes in the light of a Supreme Court directive to state governments for restricting the use of beacon lights to minimize inconvenience for common public
Story first published: Tuesday, June 4, 2013, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X