ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

Written By:

ನೀವು ಪ್ರಖ್ಯಾತ ಹಾಗೂ ದುಬಾರಿ ಹೋಟೆಲ್‌ಗಳಿಗೆ ಭೇಟಿ ಕೊಟ್ಟರೆ ಅಲ್ಲಿ ನಿಮ್ಮ ಸೇವೆಗೆ ನಿಯುಕ್ತರಾಗಿರುವ ಖಾಸಾನೌಕರರು ಕೀ ತೆಗೆದುಕೊಂಡು ಸುರಕ್ಷಿತವಾಗಿ ವಾಹನ ಪಾರ್ಕಿಂಗ್ ಮಾಡುತ್ತಾರೆ. ಇದಕ್ಕಾಗಿಯೇ ಪ್ರತ್ಯೇಕ ವಾಲೆಟ್ (valet) ಡೆಸ್ಕ್‌ಗಳನ್ನು ತೆರೆಯಲಾಗುತ್ತದೆ.

ಆದರೆ ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ ಮುಂಭಾಗದಲ್ಲಿ ನಡೆದ ಇಂತಹದೊಂದು ಘಟನೆಯಲ್ಲಿ ಹೋಟೆಲ್ ಅಂಗಸೇವಕರ ಅಚಾತುರ್ಯದಿಂದಾಗಿ ಬೆಲೆ ಬಾಳುವ ಲಂಬೋರ್ಗಿನಿ ಸೂಪರ್ ಕಾರೊಂದು ಢಿಕ್ಕಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

ದೆಹಲಿ ಜನಪ್ರಿಯ ಲಿ ಮೆರಿಡಿಯನ್ ಹೋಟೆಲ್‌ನಿಂದ ಘಟನೆ ವರದಿಯಾಗಿದ್ದು, ಹೋಟೆಲ್ ಸಿಬ್ಬಂದಿ (valet) ಮಾಡಿರುವ ತಪ್ಪಿನಿಂದಾಗಿ ಐಷಾರಾಮಿ ಲಂಬೋರ್ಗಿನಿ ಗಲರ್ಡೊ ಸೂಪರ್ ಕಾರು ಪುಡಿ ಪುಡಿಯಾಗಿದೆ.

ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

ಹೋಟೆಲ್ ಸಿಬ್ಬಂದಿ ಕಾರನ್ನು ಸೂಕ್ತ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ವೇಳೆ ನಡೆಸಿದ ಎಡವಟ್ಟಿನಿಂದಾಗಿ ಅಪಘಾತ ಸಂಭವಿಸಿದೆ ಎಂಬುದು ತಿಳಿದು ಬಂದಿದೆ.

ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

ಕಡಿಮೆ ಬೆಲೆಯ ಕಾರಾಗಿದ್ದರೆ ಇದು ಅಷ್ಟೊಂದು ಮಾಧ್ಯಮ ಸುದ್ದಿ ಗಿಟ್ಟಿಸುತ್ತಿರಲಿಲ್ಲ. ಆದರೆ ಐಷಾರಾಮಿ ಕಾರಾಗಿದ್ದರಿಂದ ಅದರಲ್ಲೂ ಇಟಲಿಯ ಐಕಾನಿಕ್ ಲಂಬೋರ್ಗಿನಿಗೆ ಇಂತಹದೊಂದು ದಯನೀಯ ಪರಿಸ್ಥಿತಿ ಬಂದಿರುವುದು ಬೇಸರಕ್ಕೆ ಕಾರಣವಾಗಿದೆ.

ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಕಾರಿನ ಎಂಜಿನ್ ಭಾಗಗಳಿಗೆ ಯಾವುದೇ ರೀತಿಯ ಪೆಟ್ಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

ಬಹುಶ: ಲಂಬೋರ್ಗಿನಿ ಸೂಪರ್ ಕಾರಿನ ವೇಗವರ್ಧನೆ ಬಗ್ಗೆ ಸಿಬ್ಬಂದಿಗೆ ಗೊತ್ತಿರಲಿಲ್ಲವೇನೋ ಅಥವಾ ಇದೇ ಮೊದಲ ಬಾರಿಗೆ ಪಾರ್ಕ್ ಮಾಡಲು ಪ್ರಯತ್ನಿಸುತ್ತಿರಬಹುದು. 500ಕ್ಕಿಂತಲೂ ಹೆಚ್ಚು ಅಶ್ವಶಕ್ತಿ ಉತ್ಪಾದಿಸಲು ಸಾಮರ್ಥ್ಯವಿರುವ ಲಂಬೋರ್ಗಿನಿ ಬಹುಬೇಗನೇ ವೇಗವರ್ಧನೆ ಪಡೆದುಕೊಳ್ಳುತ್ತದೆ.

ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ

ಅಂದ ಹಾಗೆ ಈ ಎಲ್ಲ ಎಡವಟ್ಟಿನಿಂದಾಗಿ ರಿಪೇರಿ ವೆಚ್ಚವನ್ನು ಯಾರು ಭರಿಸಲಿದ್ದಾರೆ ಎಂಬುದು ಪ್ರಶ್ನೆಯ ವಿಚಾರವಾಗಿದೆ. ಹೋಟೆಲ್ ಅಧಿಕೃತರಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೊಂದೆಡೆ ಕಾರು ಮಾಲಿಕ ತಮ್ಮ ನತದೃಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಆದರೂ ಅಂತಿಮವಾಗಿ ಮೂಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ದೇಶದಲ್ಲಿ ಕಾಣಸಿಗುವ ಅತಿ ವಿರಳ ಕಾರುಗಳಲ್ಲಿ ಒಂದಾಗಿರುವ ಲಂಬೋರ್ಗಿನಿ ಸೂಪರ್ ಕಾರನ್ನು ಹೇಗೆ ಪಾರ್ಕ್ ಮಾಡಿಸಬಹುದು ಎಂಬುದರ ಬಗ್ಗೆ ಹೋಟೆಲ್ ಸಿಬ್ಬಂದಿಗೆ ತರಬೇತಿ ನೀಡುವುದಾದರೂ ಹೇಗೆ?

English summary
Do you cringe every time you have to drop your keys off to a valet? Many of us do, and while valet parking sure saves you the hassle of finding a spot for your transport, there are instances when you could swear it was a new scratch here, or a fresh dent there.
Story first published: Wednesday, July 9, 2014, 15:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark