ಜಪಾನ್ ಬುಲೆಟ್ ರೈಲು ಭಾರತಕ್ಕೆ; ಅಗ್ರಜರು ಯಾರು?

By Nagaraja

ಭಾರತದ ಮಹತ್ತರ ಮುಂಬೈ-ಅಹಮಾದಾಬಾದ್ ನಡುವಣ ಬುಲೆಟ್ ರೈಲು ಯೋಜನೆಯನ್ನು ನನಸಾಗಿಸಲು ಜಪಾನ್ ನೆರವಾಗಲಿದೆ. ಇದಕ್ಕೆ ಸಂಬಂಧಪಟ್ಟಂತೆ ಭಾರತದ ಜೊತೆ ತನ್ನ ತಂತ್ರಗಾರಿಕೆಯನ್ನು ಜಪಾನ್ ಹಂಚಿಕೊಳ್ಳಲಿದೆ.

Also Read: ಮುಂಬೈ-ಅಹಮಾದಾಬಾದ್ ಬುಲೆಟ್ ರೈಲು ಮುಹೂರ್ತ ಫಿಕ್ಸ್

ಸ್ವಲ್ಪ ತಡವಾಗಿಯಾದರೂ ಅತಿ ವೇಗದ ಬುಲೆಟ್ ರೈಲು ಯುಗಕ್ಕೆ ಭಾರತವೂ ಕಾಲಿಡುತ್ತಿದೆ. ಇಡೀ ಜಗತ್ತನ್ನೇ ಗಮನಿಸಿ ನೋಡಿದಾಗ ಅತಿ ವೇಗದ ರೈಲುಗಳು ಅನೇಕ ದೇಶಗಳಲ್ಲಿ ಓಡಾಡುತ್ತಿದೆ. ಪ್ರಸ್ತುತ ಲೇಖನದಲ್ಲಿ ವಿಶ್ವದ ಅತಿ ವೇಗದ ರೈಲುಗಳ ಬಗ್ಗೆ ಚರ್ಚಿಸಲಿದ್ದೇವೆ.

ಮ್ಯಾಗ್ಲೆವ್ ಬುಲೆಟ್ ರೈಲು - ಜಪಾನ್

ಮ್ಯಾಗ್ಲೆವ್ ಬುಲೆಟ್ ರೈಲು - ಜಪಾನ್

ಯಾರು ಏನೇ ಪ್ರಯತ್ನ ಪಟ್ಟರೂ ಜಪಾನ್ ಮ್ಯಾಗ್ಲೆವ್ ಬುಲೆಟ್ ರೈಲು ಪ್ರಭಾವವನ್ನು ಮೀರಿಸುವುದು ಸ್ವಲ್ಪ ಕಷ್ಟವೇ ಸರಿ. ಜಗತ್ತಿನ ಅತಿ ವೇಗದ ಪ್ರಯಾಣಿಕ ರೈಲು ಎಂಬ ಕೀರ್ತಿ ಹೊಂದಿರುವ ಜಪಾನ್ ಮ್ಯಾಗ್ಲೆವ್ ರೈಲು ಗಂಟೆಗೆ 603 ಕೀ.ಮೀ. ವೇಗದಲ್ಲಿ ಓಡಾಡುವ ಸಾಮರ್ಥ್ಯ ಹೊಂದಿದೆ.

Picture credit: Saruno Hirobano/Wiki Commons
ಟಿಆರ್-09 - ಜರ್ಮನಿ

ಟಿಆರ್-09 - ಜರ್ಮನಿ

ತಾನೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಶಕ್ತಿ ಪ್ರದರ್ಶನ ನಡೆಸುತ್ತಿರುವ ಜರ್ಮನಿಯ ಟಿಆರ್-09 ರೈಲು ಗಂಟೆಗೆ 500 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆಯಾದರೂ ಭದ್ರತಾ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಗಂಟೆಗೆ 450 ಕೀ.ಮೀ. ವೇಗವನ್ನಷ್ಟೇ ಕಾಪಾಡಿಕೊಳ್ಳಲಾಗುತ್ತಿದೆ.

Picture credit: Állatka/Wiki Commons
ಶಾಂಘೈ ಮ್ಯಾಗ್ಲೆವ್ - ಚೀನಾ

ಶಾಂಘೈ ಮ್ಯಾಗ್ಲೆವ್ - ಚೀನಾ

ಗಂಟೆಗೆ ಸರಾಸರಿ 251 ಕೀ.ಮೀ. ವೇಗದಲ್ಲಿ ಸಂಚರಿಸುವ ನೆರೆಯ ಚೀನಾದ ಶಾಂಘೈ ಮ್ಯಾಗ್ಲೆವ್ ರೈಲು ಗಂಟೆಗೆ 430 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

Picture credit: Alex Needham/Wiki Commons
ಹಾರ್ಮನಿ ಸಿಆರ್‌ಎಚ್380ಎ - ಚೀನಾ

ಹಾರ್ಮನಿ ಸಿಆರ್‌ಎಚ್380ಎ - ಚೀನಾ

ಟೆಸ್ಟಿಂಗ್ ವೇಳೆ ಗಂಟೆಗೆ 480 ಕೀ.ಮೀ. ವೇಗವನ್ನು ಕಾಪಾಡಿಕೊಂಡಿರುವ ಚೀನಾದ ಹಾರ್ಮನಿ ಸಿಆರ್‌ಎಚ್380ಎ ರೈಲು ಕಾರ್ಯಾಚರಣೆಯ ವೇಳೆ ಗಂಟೆಗೆ 380 ಕೀ.ಮೀ. ವೇಗ ಕಾಪಾಡಿಕೊಂಡಿದೆ.

Picture credit: N509FZ/Wiki Commons
ಟಿಜಿವಿ ರೆಸಾವೂ - ಫ್ರಾನ್ಸ್

ಟಿಜಿವಿ ರೆಸಾವೂ - ಫ್ರಾನ್ಸ್

ಗಂಟೆಗೆ 380 ಕೀ.ಮೀ. ವೇಗದಲ್ಲಿ ಚಲಿಸಬಲ್ಲ ಫ್ರಾನ್ಸ್‌ನ ಈ ಬಂಡಿಯು ಗಂಟೆಗೆ 320 ಕೀ.ಮೀ. ವೇಗದಲ್ಲಷ್ಟೇ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

Picture credit: bigbug21/Wiki Commons
ಸಿಮೆನ್ಸ್ ವೆಲರೊ ಇ/ಎವಿಎಸ್ 103 - ಸ್ಪೇನ್

ಸಿಮೆನ್ಸ್ ವೆಲರೊ ಇ/ಎವಿಎಸ್ 103 - ಸ್ಪೇನ್

ಸಾಮಾನ್ಯವಾಗಿ ಗಂಟೆಗೆ 350 ಕೀ.ಮೀ. ವೇಗದಲ್ಲಿ ಸಂಚರಿಸುವ ಸ್ಪೇನ್‌ನ ಸಿಮೆನ್ಸ್ ರೈಲು ಪ್ರಾಯೋಗಿಕ ಸಂಚಾರದ ವೇಳೆ ಗಂಟೆಗೆ 400 ಕೀ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಅಚ್ಚರಿ ಮೂಡಿಸಿತ್ತು.

Picture credit: Sebastian Terfloth/Wiki Commons
ಟಲ್ಗೊ 350 (ಟಿ350), ಸ್ಪೇನ್

ಟಲ್ಗೊ 350 (ಟಿ350), ಸ್ಪೇನ್

ಆರಂಭದಲ್ಲಿ RENFE AVE ಕ್ಲಾಸ್ 10 ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಟಲ್ಗೊ 350 ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
list of world's fastest trains
Story first published: Saturday, December 12, 2015, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X