ಹೆಲ್ಮೆಟ್ ಧರಿಸದ ಪೊಲೀಸ್ ಪೇದೆಯನ್ನು ತಡೆಹಿಡಿದ ಯುವಕ- ಮುಂದೇನಾಯ್ತು ನೀವೆ ನೋಡಿ..!

ರಸ್ತೆ ನಿಯಮಗಳನ್ನು ಪಾಲಿಸದಿದ್ದರೆ, ಮತ್ತೊಮ್ಮೆ ಹೀಗೆ ಮಾಡಿದ್ರೆ ಎಂದು ತಡೆ ಹಿಡಿದು ದಂಡ ಹಾಕುವ ಪೊಲೀಸರೇ ರಸ್ತೆ ನಿಯಮಗಳನ್ನು ಪಾಲಿಸದೇ ಇದ್ರೆ ಹೇಗೆ? ಇಲ್ಲಿ ಕೂಡಾ ನಡೆದಿದ್ದು ಅದೇ. ಸಂಚಾರಿ ನಿಯಮವನ್ನು ಉಲ್ಲಂಘಿಸಿ ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡುತ್ತಿದ್ದ ಪೊಲೀಸ್ ಪೇದೆಗೆ ಯುವಕನೊಬ್ಬ ಸಂಚಾರಿ ನಿಯಮ ಪಾಲನೆಯ ಪಾಠ ಮಾಡಿದ್ದಾನೆ.

ಹೆಲ್ಮೆಟ್ ಧರಿಸದ ಪೊಲೀಸನ್ನ ತಡೆಹಿಡಿದ ಯುವಕ. ಮುಂದೇನಾಯ್ತು?

ಮುಂಬೈ ನಗರದ ಭಾಂದ್ರಾದಲ್ಲಿ ಪೊಲೀಸ್ ಪೇದೆಯೊಬ್ಬ ಹೆಲ್ಮೆಟ್ ರಹಿತ ಬೈಕ್ ಸವಾರಿ ಮಾಡುತ್ತಿದ್ದಾಗ ಅಲ್ಲಿನ ಸ್ಥಳೀಯ ಯುವಕನೊಬ್ಬ ಬೈಕಿನ ಕೀಲಿಯನ್ನು ತೆಗೆದುಕೊಂಡು ಹೆಲ್ಮೆಟ್ ಹಾಕಿದ ನಂತರವೇ ನಿಮ್ಮ ಬೈಕ್ ಕೀಲಿ ಕೊಡುತ್ತೇನೆ ಎಂದು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟ್ರಾಫಿಕ್ ರೂಲ್ಸ್ ವಿಚಾರಕ್ಕೆ ಬಂದರೆ ಅದು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತೆ. ನಮಗೊಂದು ರೂಲ್ಸ್ ನಿಮಗೊಂದು ರೂಲ್ಸ್ ಇಲ್ಲ ಎಂದು ಕಿರುಚಾಡಿದ ಘಟನೆ ನಡೆದಿದ್ದು, ನಂತರ ಸಮೀಪದಲ್ಲಿದ್ದ ಮತ್ತೊಬ್ಬ ಸ್ಥಳೀಯನಿಂದ ಹೆಲ್ಮೆಟ್ ಪಡೆದು ಹಾಕಿಕೊಂಡ ನಂತರವಷ್ಟೇ ಪೊಲೀಸ್ ಪೇದೆಗೆ ಬೈಕ್ ಕೀ ನೀಡಲಾಗಿದೆ.

ಘಟನೆಯಿಂದ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಬೈಕ್ ಸವಾರಿ ಮಾಡುವ ಯಾವುದೇ ಪೊಲೀಸ್ ಪೇದೆಯಾಗಲಿ ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಲೇ ಬೇಕು ಮತ್ತು ಇನ್ನಿತರೆ ಟ್ರಾಫಿಕ್ ನಿಯಮಗಳನ್ನು ಪಾಲಿಸಲೇಬೇಕು ಎಂಬ ಸುತ್ತೋಲೆಯನ್ನು ನೀಡಲಾಗಿದೆ ಎಂದು ಜಂಟಿ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಖಡಕ್ ಸಲಹೆ ನೀಡಿದ್ದಾರೆ.

Most Read Articles

Kannada
English summary
Locals Stopped Police For Not Wearing Helmet. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X