ಐಎನ್‌ಎಸ್ ಕೋಲ್ಕತ್ತಾ ಯುದ್ಧ ಹಡಗಿನಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ

Written By:

ಭಾರತೀಯ ನೌಕಾದಳ ಮಗದೊಂದು ಮೈಲುಗಲ್ಲನ್ನು ಸಾಧಿಸಿದ್ದು, ಐಎನ್‌ಎಸ್ ಕೋಲ್ಕತ್ತಾ ಯುದ್ಧ ಹಡಗಿನ ಮೇಲಿಂದ ಗಾಳಿಯಲ್ಲೇ ಶತ್ರುವಿನ ದಾಳಿಯನ್ನು ಹೊಡೆದುರುಳಿಸಲು ಸಾಮರ್ಥ್ಯವುಳ್ಳ ಅತ್ಯಾಧುನಿಕ ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ.

ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ನೆಲದಿಂದ ದೂರ ವ್ಯಾಪ್ತಿ ಏರ್ ಮಿಸೈಲ್ (ಎಲ್‌ಆರ್ ಎಸ್‌ಎಎಂ) ಪಶ್ಚಿಮ ಬಂದಿರನಲ್ಲಿ ಯಶಸ್ವಿ ಪ್ರಯೋಗ ನಡೆಸಲಾಯಿತು. ಇದರೊಂದಿಗೆ ಭಾರತೀಯ ನೌಕಾ ಪಡೆಗೆ ಆನೆ ಬಲ ಬಂದಂತಾಗಿದೆ.

ಐಎನ್‌ಎಸ್ ಕೋಲ್ಕತ್ತಾ ಯುದ್ಧ ಹಡಗಿನಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ

ಇದು ಕೇವಲ ಮಿಸೈಲ್ ಮಾತ್ರವಲ್ಲದೆ ಬಹು ಕ್ರಿಯಾತ್ಮಕ ಕಣ್ಗಾವಲು ವ್ಯವಸ್ಥೆ, ಪತ್ತೆ ಹಚ್ಚುವಿಕೆಗಾಗಿ ಅಪಾಯ ಎಚ್ಚರಿಕೆ ರಾಡಾರ್ (ಎಂಎಫ್ ಸ್ಟಾರ್), ಮಿಸೈಲ್ ಟ್ರ್ಯಾಂಕಿಗ್ ಮತ್ತು ಮಾರ್ಗದರ್ಶಿ ವ್ಯವಸ್ಥೆಗಳು ಇದರಲ್ಲಿರಲಿದೆ.

ಐಎನ್‌ಎಸ್ ಕೋಲ್ಕತ್ತಾ ಯುದ್ಧ ಹಡಗಿನಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ

ಪ್ರಸ್ತುತ ಕ್ಷಿಪಣಿ ಪರೀಕ್ಷೆಯನ್ನು ಭಾರತೀಯ ನೌಕಾದಳ, ಡಿಆರ್‌ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಆಯೋಜಿಸಿದೆ.

ಐಎನ್‌ಎಸ್ ಕೋಲ್ಕತ್ತಾ ಯುದ್ಧ ಹಡಗಿನಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ

ವರ್ಷಗಳಿಂದಲೂ ಹೈದರಾಬಾದ್ ಡಿಆರ್‌ಡಿಒ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ ನಡೆಸಿಕೊಂಡು ಬರುತ್ತಿದ್ದ ಅವಿರತ ಪ್ರಯತ್ನದ ಫಲವೇ ಇದಾಗಿದೆ.

ಐಎನ್‌ಎಸ್ ಕೋಲ್ಕತ್ತಾ ಯುದ್ಧ ಹಡಗಿನಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ

ಭಾರತದಲ್ಲಿ ಎಲ್‌ಆರ್ ಸ್ಯಾಮ್ ಕ್ಷಿಪಣಿಯನ್ನು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ನಿರ್ಮಿಸಿದೆ.

ಐಎನ್‌ಎಸ್ ಕೋಲ್ಕತ್ತಾ ಯುದ್ಧ ಹಡಗಿನಿಂದ ಯಶಸ್ವಿ ಕ್ಷಿಪಣಿ ಪರೀಕ್ಷೆ

ಭಾರತೀಯ ನೌಕಾದಳದ ಭವಿಷ್ಯದ ಯುದ್ಧ ನೌಕೆಗಳಲ್ಲಿ ಕ್ಷಿಪಣಿಗಳು ಪ್ರಮುಖ ಅಸ್ತ್ರವಾಗಿ ಮಾರ್ಪಾಡುಗೊಳ್ಳಲಿದೆ. ಇದು ದೂರಗಾಮಿ ವಾಯು ದಾಳಿಯನ್ನು ಹೊಡೆದುರುಳಿಸುವಷ್ಟು ಸಾಮರ್ಥ್ಯ ಹೊಂದಿದೆ.

English summary
Successful conduct of LR SAM firing by Indian Army
Story first published: Thursday, December 31, 2015, 9:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark