ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮ ಖಂಡು ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ಯಾತ್ರೆಯಲ್ಲಿ ಅವರು ತಮ್ಮ ಆಫ್ ರೋಡಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್‍‍ಗೆ ತೆರಳಿದ್ದರು. 107 ಕಿ.ಮೀ ಉದ್ದದ ಈ ಯಾತ್ರೆಯಲ್ಲಿ ಪೆಮ ಖಂಡು ಹಾಗೂ ಕಿರಣ್ ರಿಜಿಜುರವರು ಪೋಲಾರಿಸ್ ಆರ್‌ಝಡ್ಆರ್ ಎಟಿವಿ ಹಾಗೂ ಮಹೀಂದ್ರಾ ಥಾರ್ ವಾಹನಗಳಲ್ಲಿ ತೆರಳಿದ್ದರು.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು ಮಹೀಂದ್ರಾ ಥಾರ್ ಹಾಗೂ ಪೋಲಾರಿಸ್ ಆರ್‍‍ಝಡ್ಆರ್ ಎಟಿವಿ ವಾಹನಗಳನ್ನು ಶ್ಲಾಘಿಸಿದ್ದಾರೆ. ಕಿರಣ್ ರಿಜಿಜು ಅವರ ಅಧಿಕೃತ ಫೇಸ್‌ಬುಕ್ ಪೇಜ್‍‍ನಲ್ಲಿರುವ ಪೋಸ್ಟ್‌ನಲ್ಲಿ ಅವರು ಹಿಮಪಾತದ ಪ್ರದೇಶಗಳಲ್ಲಿ ಪೋಲಾರಿಸ್ ಕ್ವಾಡ್ ಬೈಕ್ ಅತ್ಯುತ್ತಮ ಭೂಪ್ರದೇಶದ ವಾಹನವಾಗಿದೆ.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಮಹೀಂದ್ರಾ ಥಾರ್ ಎಲ್ಲಾ ಹವಾಮಾನದ ರಸ್ತೆಗಳಿಗಾಗಿ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಅತ್ಯುತ್ತಮ ಜೀಪ್ ಎಂದು ಹೇಳಿದ್ದಾರೆ. ಕೇಂದ್ರ ಸಚಿವರು ಶೇರ್ ಮಾಡಿರುವ ವಿಡಿಯೋದಲ್ಲಿ ಅವರು ಹಿಮದಲ್ಲಿ ಕ್ವಾಡ್ ಬೈಕ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಅವರ ಹಿಂದೆ ಹಲವಾರು ಮಹೀಂದ್ರಾ ಥಾರ್ ವಾಹನಗಳು ಹೋಗುತ್ತಿರುವುದನ್ನೂ ಸಹ ಕಾಣಬಹುದು. ಪೆಮ ಖಂಡು ಹಾಗೂ ಕಿರಣ್ ರಿಜಿಜು ಇಬ್ಬರೂ ಈ ಯಾತ್ರೆಯಲ್ಲಿ ಆರ್‍‍ಝಡ್‍ಆರ್ ಬಳಸಿದ್ದಾರೆ. ಮಹೀಂದ್ರಾ ಥಾರ್ ಭಾರತದಲ್ಲಿ ಜನಪ್ರಿಯ ಕಂಪನಿಯಾಗಿದ್ದು, ಆಫ್ ರೋಡ್ ಪ್ರಿಯರು ಈ ಕಂಪನಿಯ ವಾಹನಗಳನ್ನು ಹೆಚ್ಚು ಇಷ್ಟ ಪಡುತ್ತಾರೆ.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಮಹೀಂದ್ರಾ ಥಾರ್ ಭಾರತದಲ್ಲಿರುವ ಗಟ್ಟಿ ಮುಟ್ಟಾದ ಆಫ್ ರೋಡ್ ವಾಹನಗಳಲ್ಲಿ ಒಂದಾಗಿದೆ. ಈ ಎಸ್‍‍ಯುವಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಸ್ಟಮೈಸ್ ಮಾಡಬಹುದಾಗಿದೆ. ಈ ಎಸ್‌ಯುವಿ ಕಡಿಮೆ ರೆಶಿಯೊ ಅನುಪಾತದಲ್ಲಿ 4X4 ಸಿಸ್ಟಂ ಅನ್ನು ನೀಡುತ್ತದೆ.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಥಾರ್‍‍ನಲ್ಲಿರುವ ಮ್ಯಾನುವಲ್ ಡಿಫರೆನ್ಷಿಯಲ್ ಲಾಕರ್‌ಗಳಿಂದ ಆಫ್ ರೋಡ್ ಟ್ರಾಕ್‍‍ಗಳಲ್ಲಿ ಈ ವಾಹನದ ಪರ್ಫಾಮೆನ್ಸ್ ಹೆಚ್ಚಾಗುತ್ತದೆ. ಮತ್ತೊಂದೆಡೆ, ಪೋಲಾರಿಸ್ ಎಟಿವಿಗಳು ತಮ್ಮ ಆಫ್-ರೋಡಿಂಗ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಪ್ರಪಂಚದ್ಯಾಂತವಿರುವ ಸೇನೆಗಳು ಈ ವಾಹನಗಳನ್ನು ಕಷ್ಟಕರವಾದ ಭೂಪ್ರದೇಶಗಳನ್ನು ತಲುಪಲು ಬಳಸುತ್ತವೆ. ಐಟಿಬಿಪಿಯಂತಹ ಭಾರತೀಯ ಪಡೆಗಳು ಸಹ ಹಿಮ ಪ್ರದೇಶದಲ್ಲಿ ಸುಲಭವಾಗಿ ಚಲಿಸಲು ಪೋಲಾರಿಸ್ ಎಟಿವಿಗಳನ್ನು ಬಳಸುತ್ತವೆ. ಈ ವಾಹನಗಳನ್ನು ಹದಗೆಟ್ಟ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ಈ ವಾಹನಗಳ ಬಳಕೆಯು ಕಾನೂನುಬದ್ಧವಲ್ಲ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಮಹೀಂದ್ರಾ ಥಾರ್ ಒರಟಾದ ವಾಹನವಾಗಿದ್ದು, ಸುಲಭವಾಗಿ ನಿರ್ವಹಿಸಬಹುದಾಗಿದೆ. ಸರಿಯಾದ ಟಯರ್‍‍ಗಳೊಂದಿಗೆ ಥಾರ್ ಅನ್ನು ಮಾಡಿಫೈಗೊಳಿಸಿದರೆ, ಯಾವುದೇ ಕಠಿಣವಾದ, ಹದಗೆಟ್ಟ ರಸ್ತೆಗಳಲ್ಲಿಯೂ ಸಹ ಸರಾಗವಾಗಿ ಚಲಿಸಬಹುದು.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಮಹೀಂದ್ರಾ ಥಾರ್ ಹೆಚ್ಚಿನ ಸಂಖ್ಯೆಯ ಆಫ್ ರೋಡ್ ಪ್ರಿಯರ ನೆಚ್ಚಿನ ವಾಹನವಾಗಿದೆ. ಈ ಯಾತ್ರೆಯಲ್ಲಿ ಥಾರ್ ಕಠಿಣವಾದ ರಸ್ತೆಗಳಲ್ಲಿ ಚಲಿಸಿರುವ ಕಾರಣ ಈ ವಾಹನವು ಕೇಂದ್ರ ಸಚಿವರ ಗಮನವನ್ನು ಸೆಳೆದಿದೆ. ಕಿರಣ್ ರಿಜಿಜುರವರು ಇತರ ಸಚಿವರು ಈ ವಾಹನದಲ್ಲಿ ಪ್ರಯಾಣಿಸಿದರೇ ಎಂಬುದನ್ನು ತಿಳಿಸಿಲ್ಲ.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಆದರೆ ರಕ್ಷಣಾ ಪಡೆಯವರು ಈ ವಾಹನದಲ್ಲಿದ್ದರು ಎಂದು ಹೇಳಿದ್ದಾರೆ. ಅಂದ ಹಾಗೆ ಈ ಯಾತ್ರೆಯು ಸಮುದ್ರ ಮಟ್ಟದಿಂದ 15,600 ಅಡಿಗಳ ಎತ್ತರದಲ್ಲಿತ್ತು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮ ಖಂಡುರವರು ಸಹ ಆಟೋಮೊಬೈಲ್ ಪ್ರಿಯರಾಗಿದ್ದಾರೆ.

ಈ ಎರಡು ವಾಹನಗಳು ಬೆಸ್ಟ್ ಎಂದ ಕ್ರೀಡಾ ಸಚಿವರು..!

ಕೆಲವು ದಿನಗಳ ಹಿಂದಷ್ಟೇ ಅವರು ಅರುಣಾಚಲ ಪ್ರದೇಶದಲ್ಲಿ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಬೈಕ್ ಅನ್ನು ಚಲಾಯಿಸುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು. ಇದರ ಹಲವು ಚಿತ್ರಗಳನ್ನು ಪೆಮಾ ಖಂಡುರವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು.

Article Published On: Wednesday, October 30, 2019, 16:17 [IST]
English summary
Mahindra thar polaris atv best in the segment says sports minister - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+