ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

Written By:

ಮೋಟಾರ್ ಸ್ಪೋರ್ಟ್ ಕೌಶಲ್ಯ ಪ್ರದರ್ಶನ ಕೈಗೊಳ್ಳುವ ಮೂಲಕ ಯುವ ಸಮುದಾಯವನ್ನು ಸೆಳೆಯುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಪ್ರತಿ ವರ್ಷ ಆಟೋ ಪ್ರಿಕ್ಸ್ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಿನ್ನೇಯಷ್ಟೇ ನಡೆದ ಮೊದಲ ರೌಂಡ್ ಕಾರ್ ರೇಸ್ ಪ್ರಿಯರ ಮನಸೆಳೆದಿದ್ದು ಸುಳ್ಳಲ್ಲ.

ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

ಮೋಟಾರ್ ಸ್ಪೋರ್ಟ್ ಉತ್ತೇಜಿಸುವುದರ ಜೊತೆ ಜೊತೆಗೆ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಟೋಪ್ರಿಕ್ಸ್ ಆಯೋಜನೆ ಕೈಗೊಳ್ಳುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರಸಕ್ತ ವರ್ಷದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಈ ಮೂಲಕ ಆಟೋಪ್ರಿಕ್ಸ್ ಮೊದಲ ಹಂತದ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ದೊರೆತಿದ್ದು, ವರ್ಷದ ಅಂತ್ಯದ ವರೆಗೆ ವಿವಿಧ ನಗರಗಳಲ್ಲಿ ಆಟೋಪ್ರಿಕ್ಸ್ ಸರಣಿಗಳು ಆಯೋಜನೆಗೊಳ್ಳಲಿವೆ.

ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

ಇನ್ನು ಬೆಂಗಳೂರಿನ ಆಟೋ ಮ್ಯೂಸಿಯಂನಲ್ಲಿ ಗ್ರೌಂಡ್‌ನಲ್ಲಿ ನಡೆದ ಆಟೋಪ್ರಿಕ್ಸ್ ಕಾರ್ಯಕ್ರಮ ಹಲವು ವಿಶೇಷತೆಗೆ ಸಾಕ್ಷಿ ಆಗಿದ್ದಲ್ಲದೇ ಟ್ರೋಫಿಗಾಗಿ ಸ್ಪರ್ಧಿಗಳ ನಡುವೆ ನಡೆದ ಕಾದಾಟ ರೋಚಕತೆ ಕಾರಣವಾಗಿತ್ತು.

ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

ಕಾರ್ಯಕ್ರಮದಲ್ಲಿ ಚಾಂಪಿಯನ್ ಮತ್ತು ಚಾಂಪಿಯನ್ ಅಲ್ಲದ ಸ್ಪರ್ಧಿಗಳ ನಡುವೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದ ಮಾರುತಿ ಸುಜುಕಿಯು, ಒಟ್ಟು 1.8 ಕಿ.ಮಿ ಉದ್ದದ ಟ್ರ್ಯಾಕ್‌ನಲ್ಲಿ ವಿವಿಧ ಆಯಾಮಗಳಲ್ಲಿ ಜಯ ಸಾಧಿಸಿದ ವಿಜೇತರನ್ನು ಅಭಿನಂದಿಸಿತು.

Recommended Video - Watch Now!
Maruti Prices Post GST In Kannada - DriveSpark ಕನ್ನಡ
ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

ಸದ್ಯ ಆಟೋಪ್ರಿಕ್ಸ್ ಮೊದಲ ಹಂತ ಬೆಂಗಳೂರಿನಲ್ಲಿ ಮುಕ್ತಾಯಗೊಂಡಿದ್ದು, ಮುಂದಿನ ಹಂತದ ಸ್ಪರ್ಧೆಗಳು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯಲಿವೆ. ಹೀಗಾಗಿ ಮೊದಲ ಹಂತದ ಜಯಶಾಲಿಗಳು 2ನೇ ಹಂತದಲ್ಲೂ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.

ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

ನಿನ್ನೇ ನಡೆದ ಸ್ಪರ್ಧೆಗಳಲ್ಲಿ ಫೋರ್ಡ್ ಚಾಲನೆ ಮಾಡಿದ ನಾಜಿ ಮುದ್ದನ್ ಎಂಬುವರು ಪ್ರಥಮ ಸ್ಥಾನದೊಂದಿಗೆ ರೂ.30 ಸಾವಿರ ನಗದು ಮತ್ತು 'ಫಾಸ್ಟೆಸ್ಟ್ ಅಮೆಚೂರ್' ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಅದೇ ರೀತಿಯಾಗಿ ಓವರ್ ಆಲ್ ಫಾಸ್ಟೆಸ್ಟ್ ವಿಭಾಗದಲ್ಲಿ ಧ್ರುವ ಚಂದ್ರಶೇಖರ್ ಮತ್ತು ಫಾಸ್ಟೆಸ್ಟ್ ಲೇಡಿ ಡ್ರೈವರ್ ವಿಭಾಗದಲ್ಲಿ ಸುಪ್ರಿಯಾ ಜಂಬುನಾಥನ್ ಎಂಬುವರು ಪ್ರಶಸ್ತಿ ಮುಡಿಗೇರಿಸಿಕೊಂಡರು.

ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

ಇದಲ್ಲದೇ ದೇಶ್ಯಾದ್ಯಂತ ಆಟೋಫ್ರಿಕ್ಸ್ ಆಯೋಜಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಕೊಯಮತ್ತೂರು ಬಳಿಕ ಪುಣೆ, ಚಂಡಿಘರ್, ಇಂಧೋರ್, ಗುರುಗ್ರಾಮ್, ಗುವಾಹಾಟಿ ಮತ್ತು ಬುದ್ಧಾ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಫೈನಲ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಿದೆ.

ಬೆಂಗಳೂರಿನಲ್ಲಿ ಮೊಳಗಿದ ಮಾರುತಿ ಸುಜುಕಿ 2017ರ ಆಟೋಪ್ರಿಕ್ಸ್ ಸದ್ದು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಯುವ ಸಮುದಾಯವನ್ನು ಮೋಟಾರ್ ಸ್ಪೋಟ್ ವಿಭಾಗದತ್ತ ಸೆಳೆಯುವ ಉದ್ದೇಶದೊಂದಿಗೆ ಹಲವು ವರ್ಷಗಳಿಂದ ಆಟೋ ಪ್ರಿಕ್ಸ್ ಆಯೋಜನೆ ಕೈಗೊಳ್ಳುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಈ ಮೂಲಕ ನೂರಾರು ವೃತ್ತಿಪರ ಮೋಟಾರ್ ಸ್ಪೋರ್ಟ್ ಚಾಂಪಿಯನ್‌ಗಳನ್ನು ಹುಟ್ಟುಹಾಕುತ್ತಿದೆ.

English summary
Read in Kannada about Maruti Suzuki Autoprix 2017 Season One Debut Round Held In Bangalore.
Story first published: Monday, September 11, 2017, 18:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark