ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

Written By:

ಜನಸಾಮಾನ್ಯರ ಬಂಡಿ ಸೈಕಲ್‌ನಲ್ಲಿ ಸಾಹಸ ಯಾತ್ರೆ ಕೈಗೊಳ್ಳುವುದು ಸಾಮಾನ್ಯ. ಇನ್ನು ಕೆಲವರು ಪರಿಸರ ಸ್ನೇಹಿ ಚಟುವಟಿಕೆಗಳ ಭಾಗವಾಗಿ ಸೈಕಲ್ ಸವಾರಿಯನ್ನು ಇಷ್ಟಪಡುತ್ತಾರೆ.

ಇವನ್ನೂ ಓದಿ: ಬಂದಿದೆ ಬೈಕ್‌ಗಿಂತಲೂ ವೇಗವಾಗಿ ಚಲಿಸುವ ಸೈಕಲ್

ವ್ಹಾವ್...ಗಾಳಿಯಲ್ಲಿ ಹಾರುವ ಸೈಕಲ್!

ಆದರೆ ನಾವಿಂದು ಪರಿಚಯಿಸಲಿರುವ ಸೈಕಲ್ ವಿಶ್ವದ ಅತ್ಯಂತ ಅಪಾಯಕಾರಿ ಸೈಕಲ್‌ ಎಂಬ ಅಪಕೀರ್ತಿಗೆ ಪಾತ್ರವಾಗಿದೆ. ಇದೇ ಕಾರಣಕ್ಕಾಗಿ ಈ ಸೈಕಲ್ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿದೆ. ಈಗಾಗಲೇ ಮೂರು ಗಿನ್ನೆಸ್ ದಾಖಲೆಗಳನ್ನು ತಮ್ಮ ಕೊರಳಿಗೆ ಹಾಕಿಕೊಂಡಿರುವ 33ರ ಹರೆಯದ ಪ್ಲಂಬರ್ ಕಾಲಿನ್ ಫರ್ಜ್ ಎಂಬಾತರೇ ಇದನ್ನು ನಿರ್ಮಿಸಿದ್ದಾರೆ. ತಮ್ಮ ಪ್ರೀತಿಯ ಗಾಡಿಯನ್ನು ಅಕ್ಕರೆಯಿಂದ 'ನೋರಾ' ಎಂದು ಕರೆಯುತ್ತಾರೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ಶಕ್ತಿಶಾಲಿ ಜೆಟ್ ಎಂಜಿನ್ ನಿಯಂತ್ರಿತ ನೋರಾ ಸೈಕಲ್ ಪ್ರತಿ ಗಂಟೆಗೆ 50 ಮೈಲ್ (80.46 ಕೀ.ಮೀ) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೂಂದಿದೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ತಾವೇ ಅಭಿವೃದ್ಧಿಪಡಿಸಿರುವ ಜೆಟ್ ಎಂಜಿನ್ ಇದಕ್ಕೆ ಆಳವಡಿಸಲಾಗಿದ್ದು, ಯಾವುದೇ ಸುರಕ್ಷಾ ಮಾನದಂಡಗಳಿಲ್ಲದೇ ಆರಾಮವಾಗಿ ಚಲಿಸುತ್ತಾರೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ಅಷ್ಟಕ್ಕೂ ಕಾಲಿನ್, ಜಗತ್ತಿನ ಅತ್ಯಂತ ವೇಗದ ಮೊಬಿಲಿಟಿ ಸ್ಕೂಟರ್ ಹಾಗೂ ರಿಲೇ ಫುಶ್‌ಬೈಕ್‌ಗಾಗಿಯೂ ಗಿನ್ನೆಸ್ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ಸ್ಥಳೀಯ ವಾಯುಪಡೆಯ ನೆಲೆಯಲ್ಲಿ ಪರೀಕ್ಷಾರ್ಥ ಚಾಲನೆ ಮಾಡಿರುವ ಈತ, ನಾಲ್ಕು ತಿಂಗಳ ಪರಿಶ್ರಮದ ಬಳಿಕ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್ ನಿರ್ಮಿಸಿದ್ದಾರೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ಇಷ್ಟಾದರೂ ಯಾವುದೇ ಸುರಕ್ಷಾ ಮಾನದಂಡಗಳನ್ನು ಅನುಸರಿಸದಿರುವುದು ಟೀಕೆಗೆ ಕಾರಣವಾಗಿದೆ. ಇದರ ಸೀಟಿನ ಕೆಳಗಡೆಯೇ ಇಂಧನ ಡಬ್ಬಿ ಹಾಗೂ ಎಕ್ಸಾಸ್ಟ್ ಪೈಪ್‌ಗಳಿದ್ದು ತುಂಬಾನೇ ಅಪಾಯಕಾರಿ ಎನಿಸಿಕೊಂಡಿದೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ಇನ್ನು ವೇಗವಾಗಿ ಚಲಿಸುವಾಗ ಬೆಂಕಿಯ ಜ್ವಾಲೆಯು ಇಡೀ ಪ್ರಕೃತಿಯನ್ನು ಆವರಿಸುವಂತಿದೆ. ಹಾಗೆಯೇ ಸೈಕಲ್ ಮುಂದಕ್ಕೆ ಚಲಿಸಿದಂತೆ ಎಕ್ಸಾಸ್ಟ್ ಪೈಪ್‌ಗಳು ಬಿಸಿಯಾಗಿ ಕೆಂಡದ ರೂಪ ತಾಳುತ್ತಿದೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ಬಹುಶ: ಇದೇ ಕಾರಣಕ್ಕಾಗಿ ಜಗತ್ತಿನ ಅತ್ಯಂತ ಅಪಾಯಕಾರಿ ಸೈಕಲ್ ಎನಿಸಿಕೊಂಡಿದೆ. ಕಾಲನ್ ತಮ್ಮ ಮಾತುಗಳಲ್ಲೇ ಹೇಳುವ ಪ್ರಕಾರ, ಇದು ತನ್ನ ಮೋಜಿನ ಸೃಷ್ಟಿಯಾಗಿದ್ದು, ಅಷ್ಟೇ ಭಯಾನಕ ಸವಾರಿ ಕೂಡಾ ಹೌದು ಎಂದಿದ್ದಾರೆ.

ಇದುವೇ ಪ್ರಪಂಚದ ಅತ್ಯಂತ ಅಪಾಯಕಾರಿ ಸೈಕಲ್

ನನ್ನ ಸ್ನೇಹಿತನ ತಾಯಿ ದೈನಂದಿನ ಬಳಕೆಗಾಗಿ ಉಪಯೋಗಿಸುತ್ತಿದ್ದ ಸೈಕಲನ್ನು ನೆನೆಗುದಿಗೆ ಹಾಕಲು ಬಯಿಸಿದ್ದರು. ಆದರೆ ನಾನಿದ್ದಕ್ಕೆ ಹೊಸ ರೂಪ ಕಲ್ಪಿಸಿಕೊಡಲು ಇಷ್ಟಪಟ್ಟೆ ಎಂದು ವಿವರಿಸಿದ್ದಾರೆ.

ರೋಚಕ ವೀಡಿಯೋ ವೀಕ್ಷಿಸಿ

English summary
This the world's most dangerous bicycle. 32 year-old plumber, Colin Furze, builds jet powered bicycle nicknamed Norah

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark