ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಮಹೇಂದ್ರ ಸಿಂಗ್ ಧೋನಿ ಎಂದರೆ ಯಾರಿಗೆ ತಾನೆ ಗೊತಿಲ್ಲ ಹೇಳಿ. ತನ್ನ ನಾಯಕತ್ವದಿಂದ ಕೂಲ್ ಕ್ಯಾಪ್ಟೆನ್ ಎಂದು ಹೆಸರು ಪಡೆದ ಈತ, ತನ್ನ ಬ್ಯಾಟಿಂಗ್ ಹಾಗು ವಿಕೆಟ್ ಕೀಪಿಂಗ್ ಸಾಮರ್ಥ್ಯದಿಂದ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯು ಸಹ ಜನಪ್ರಿಯತೆಯನ್ನು ಪಡೆದಿದ್ದಾರೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಗೇಮ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಗೆ ಕ್ರಿಕೆಟ್ ಬಗ್ಗೆ ಮಾತ್ರ ಒಲವು ಎಂದುಕೊಂಡರೆ ಅದು ತಪ್ಪಾಗುತ್ತದೆ. ಏಕೆಂದರೆ ಅವರ ಗ್ಯಾರೇಜಿನಲ್ಲಿನ ವಾಹನಗಳನ್ನು ಕಂಡರೆ ಇವರಿಗೆ ಬೈಕ್‍ ಮತ್ತು ಕಾರುಗಳ ಬಗ್ಗೆ ಕೂಡಾ ಕ್ರೇಜ್ ಇದೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಮಹಿ ಅವರ ಹತ್ತಿರ ಇರುವ ಬೈಕ್ ಹಾಗು ಕಾರ್ ಕಲೆಕ್ಷನ್ ಬಗ್ಗೆ ಸಂಪೂರ್ಣ ಮಾಹಿತಿ ಇಂದಿನ ಲೇಖನದಲ್ಲಿ..

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಕವಾಸಕಿ ನಿಂಜಾ ಹೆಚ್‍2

ಕವಾಸಕಿ ನಿಂಜಾ ಹೆಚ್2 ಎಮ್.ಎಸ್ ಧೋನಿಯವರ ಬೈಕ್ ಕಲೆಕ್ಷನ್‍‍ನಲ್ಲಿ ಪ್ರಥಮ ಸ್ಥಾನವನ್ನು ಪದೆದಿದ್ದು, 2015ರಲ್ಲಿ ಬಿಡುಗಡೆಗೊಂಡ ಈ ಬೈಕ್ ಅನ್ನು ಮಹೀ ಖರೀದಿ ಮಾಡಿ ದೇಶದಲ್ಲಿ ಪ್ರಥಮ ಕವಾಸಕಿ ನೊಂಜಾ ಹೆಚ್2 ಬೈಕ್ ಪಡೆದ ಮೊದಲ ಮಾಲಿಕರಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಹತ್ತಿರ ಇರುವ ಕವಾಸಕಿ ನಿಂಜಾ ಹೆಚ್2 ಬೈಕ್ 1.0 ಲೀಟರ್, 4 ಸಿಲೆಂಡರ್ ಎಂಜಿನ್ ಸಹಾಯದಿಂದ 197ಬಿಹೆಚ್‍‍ಪಿ ಮತ್ತು 134ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ರೂ. 33 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಕನ್ಫೆಡರೇಟ್ ಎಕ್ಸ್132 ಹೆಲ್‍ಕ್ಯಾಟ್

ಧೋನಿಯ ಬೈಕ್ ಕಲೆಕ್ಷನ್‍‍ನಲ್ಲಿ ಮತ್ತೊಂದು ದುಬಾರಿ ಬೈಕ್ ಕನ್ಫೆಡರೇಟ್ ಎಕ್ಸ್132 ಹೆಲ್‍ಕ್ಯಾಟ್. ಈ ಬೈಕ್ 2.2 ಲೀಟರ್ ವಿ-ಟ್ವಿನ್ ಎಂಜಿನ್ ಸಹಾಯದಿಂದ 121ಬಿಹೆಚ್‍‍ಪಿ ಮತ್ತು 190ಎನ್ಎಮ್ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದೀಗ ಈ ಬೈಕ್ ಮಾರುಕಟ್ಟೆಯಲ್ಲಿ ರೂ. 60 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಕವಾಸಕಿ ನಿಂಜಾ ಜೆಡ್‍ಎಕ್ಸ್-14ಆರ್

ಮಹೇಂದ್ರ ಸಿಂಗ್ ಧೋನಿ ಬೈಕ್ ಕಲೆಕ್ಷನ್‍‍ನಲ್ಲಿ ನಿಂಜಾ ಜೆಡ್‍ಎಕ್ಸ್-14ಆರ್ ಒಂದು ಹೈಪರ್‍‍ಬೈಕ್ ಆಗಿದ್ದು, ಇದು ಕವಾಸಾಕಿ H2 ನ ಆಗಮನದವರೆಗೆ ನಿಂಜಾ ಶ್ರೇಣಿಯಲ್ಲಿನ ಅತ್ಯಂತ ದುಬಾರಿ ಉತ್ಪಾದನಾ ಮೋಟಾರ್ಸೈಕಲ್ ಎಂಜಿನಿಯರಿಂಗ್ Z2-14R ಬೈಕ್ ಆಗಿದೆ. ಕವಾಸಕಿ ನಿಂಜಾ ಜೆಡ್‍ಎಕ್ಸ್-14ಆರ್ ಬೈಕ್ 1.4 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 197ಬಿಹೆಚ್‍‍ಪಿ ಮತ್ತು 162.5ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ರೂ. 16.4 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಯಮಹಾ ಆರ್‍‍‍ಡಿ350

ಯಮಹಾ ಆರ್‍‍ಡಿ350 ಎಮ್.ಎಸ್ ಧೋನಿಯವರ ಮೊದಲ ಬೈಕ್ ಎನ್ನಲಾಗಿದ್ದು, ಇದನ್ನು ಕೇವಲ ರೂ. 4,500 ಸಾವಿರಕ್ಕೆ ಖರೀದಿ ಮಾಡಿದ್ದರು ಹಾಗು ಈ ಬೈಕ್ ಇನ್ನು ಮಹಿಯ ಬೈಕ್ ಕಲೆಕ್ಷನ್‍‍ನಲ್ಲಿ ಸ್ಥಾನ ಪಡೆದಿದೆ. ಧೋನಿ ಈ ಬೈಕ್ ನನ್ನು ಸಂಪೂರ್ಣವಾಗಿ ಮಾಡಿಫೈ ಮಾಡಲಾಗಿದ್ದು, ಕೆಂಪು ಬಣ್ಣದ ಪೆಯಿಂಟ್‍ ಸ್ಕೀಮ್ ಅನ್ನು ನೀಡಿದ್ದಾರೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಯ್

ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಯ್ ಮಹೇಂದ್ರ ಸಿಂಗ್ ಧೋನಿಯವರು ಖರೀದಿಸಿದ ಬೈಕ್ ಕಲೆಕ್ಶನ್‍‍ನಲ್ಲಿ ಏಕಮಾತ್ರ ಕ್ರೂಸರ್ ಬೈಕ್‍ ಆಗಿದೆ. ಫ್ಯಾಟ್ ಬಾಯ್ ಬೈಕ್ ಸಾಫ್ಟ್ ನೀಲಿ ಕ್ರೂಸರ್ ಮೋಟರ್‍‍ಸೈಕಲ್ ಆಗಿದ್ದು ಇದು ಸಾಫ್ಟ್ ಟ್ರೈಲ್ ಶ್ರೇಣಿಯ ಭಾಗವಾಗಿದೆ. ಇನ್ನು ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಯ್ ಬೈಕ್ 1,690ಸಿಸಿ ವಿ ಟ್ವಿನ್ ಎಂಜಿನ್ ಸಹಾಯದಿಂದ 61ಬಿಹೆಚ್‍‍ಪಿ ಮತ್ತು 132ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ರೂ. 18.11 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಹಮ್ಮರ್ ಎಚ್2

ಸದೃಢ ದೇಹಕಾಯವನ್ನು ಹೊಂದರುವ ಮಹಿಗೆ ಎಲ್ಲ ಅರ್ಥದಲ್ಲೂ ಅಮೆರಿಕದ ಐಕಾನಿಕ್ ಹಮ್ಮರ್ ಎಚ್2 ಮಸಲ್ ಕಾರು ಯೋಗ್ಯವೆನಿಸಲಿದೆ. ಮೂಲತ: ಮಿಲಿಟರಿ ಅಗತ್ಯಗಳಿಗಾಗಿ ಬಳಕೆಯಾಗುತ್ತಿದ್ದ ಹಮ್ಮರ್ ದೈತ್ಯ ಗಾಡಿಯನ್ನು ಭಾರತೀಯ ಭೂಸೇನೆಯ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಕೂಡಾ ಆಗಿರುವ ಧೋನಿ ಸಹ ಮೆಚ್ಚಿಕೊಂಡಿದ್ದಾರೆ. ಇದರಲ್ಲಿರುವ ಶಕ್ತಿಶಾಲಿ 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ 393 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 10 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಮಹೀಂದ್ರ ಸ್ಕಾರ್ಪಿಯೊ

ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮಹೀಂದ್ರ ಸ್ಕಾರ್ಪಿಯೊ ದೇಶದ ಅತ್ಯಂತ ಜನಪ್ರಿಯ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿದೆ. ಭಾರತ ಪ್ರಧಾನ ಮಂದ್ರಿ ನರೇಂದ್ರ ಮೋದಿ ಸಹ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದನ್ನೇ ಬಳಕೆ ಮಾಡುತ್ತಿದ್ದರು. ಇನ್ನು ಕೆಲವು ಆಫ್ ರೋಡ್ ಪ್ರೇಮಿಗಳು ಸ್ಕಾರ್ಪಿಯೊವನ್ನು ತಮಗೆ ತಕ್ಕಂತೆ ಮಾರ್ಪಾಡುಗೊಳಿಸುತ್ತಾರೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಮಿಟ್ಸುಬಿಸಿ ಔಟ್ಲೆಂಡರ್

ಜಪಾನ್ ಮೂಲದ ಮಿಟ್ಸುಬಿಸಿ ಔಟ್ಲೆಂಡರ್ ಕಾರು ಸಹ ಧೋನಿ ಬಳಿಯಿದೆ. ಇದು ಭಾರತ ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಪೆಟ್ರೋಲ್ ಎಸ್ ಯುವಿಗಳಲ್ಲಿ ಒಂದಾಗಿದೆ. ಕ್ರೀಡಾತ್ಮಕ ನಿರ್ವಹಣೆ ಹಾಗೂ ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ಗಾಗಿ ಹೆಸರು ಮಾಡಿರುವ ಔಟ್ಲೆಂಡರ್ ಕಾರಿನಲ್ಲಿ 2.4 ಲೀಟರ್ (170 ಅಶ್ವಶಕ್ತಿ) ಎಂಐವಿಇಸಿ ನೈಸರ್ಗಿಕವಾಗಿ ಚೋಷಿತ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಆಡಿ ಕ್ಯೂ7

ಆಡಿ ಕ್ಯೂ7 ಐಷಾರಾಮಿ ಕ್ರಾಸೋವರ್ ಕಾರು ಭಾರತೀಯ ಕ್ಯಾಪ್ಟನ್ ಗೆ ಹೆಚ್ಚು ಯೋಗ್ಯವೆನಿಸಲಿದೆ. ಅತ್ಯಂತ ಶಕ್ತಿಶಾಲಿ ವಿ12 ಟರ್ಬೊ ಡೀಸೆಲ್ ಎಂಜಿನ್ ಇದರಲ್ಲಿದ್ದು, ರೋಚಕ ಆಫ್ ರೋಡ್ ಅನುಭವ ಕಾಯ್ದುಕೊಂಡಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಮೊನೊಕಾಕ್ ಚಾಸೀ ಸಮತೋಲನ ಕಾಪಾಡಲು ನೆರವಾಗಲಿದೆ.

ಎಂ.ಎಸ್ ಧೋನಿಯವರ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ.?

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ಕ್ರೀಡಾ ಬಳಕೆಯ ವಾಹನವು ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿದೆ. ಇದು ಭಾರತದಲ್ಲಿ ಡಿಸ್ಕವರಿ ಸ್ಪೋರ್ಟ್ ಮಾದರಿಯನ್ನು ಬದಲಾಯಿಸುವ ಸಾಧ್ಯತೆಯಿದೆ. ಅಲ್ಲದೆ ಭಾರತದಲ್ಲಿ ಜೋಡಣೆಯಾಗಲಿರುವ ಮೊದಲ ಲ್ಯಾಂಡ್ ರೋವರ್ ಎಸ್ ಯುವಿ ಎಂದೆನಿಸಿಕೊಳ್ಳಲಿದೆ. ಇದರಲ್ಲಿರುವ 2.2 ಲೀಟರ್ 4 ಸಿಲಿಂಡರ್ ಎಸ್ ಡಿ4 ಟರ್ಬೊ ಎಂಜಿನ್ 148 ಹಾಗೂ 187 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

Most Read Articles

Kannada
English summary
MS Dhoni’s AWESOME car & motorcycle garage: Hummer H2 to Kawasaki Ninja H2R
Story first published: Saturday, October 6, 2018, 13:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X