ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ಟಾಟಾ ನಿರ್ಮಾಣದ ಹಲವು ಎಸ್‌ಯುವಿ ಕಾರು ಮಾದರಿಗಳು ಈಗಾಗಲೇ ಸೇನಾಪಡೆಯಲ್ಲಿ ಮಾತ್ರವಲ್ಲದೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಬೆಂಗಾವಲು ಪಡೆಗಳಲ್ಲೂ ಸ್ಥಾನ ಪಡೆದುಕೊಂಡಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಸಫಾರಿ ಎಸ್‌ಯುವಿಯು ಕೂಡಾ ಕೆಲವೇ ದಿನಗಳಲ್ಲಿ ವಿಐಪಿ ಬೆಂಗಾವಲು ಪಡೆಗಾಗಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ಬಲಿಷ್ಠ ಬಾಡಿ ವಿನ್ಯಾಸ ಮತ್ತು ಸುರಕ್ಷಿತ ವಿಚಾರವಾಗಿ ಗ್ರಾಹಕರ ಗಮನಸೆಳೆಯುತ್ತಿರುವ ಟಾಟಾ ಹೊಸ ಕಾರುಗಳು ವ್ಯಯಕ್ತಿಕ ಬಳಕೆಗೆ ಮಾತ್ರವಲ್ಲದೆ ರಕ್ಷಣಾ ಪಡೆಯ ವಾಹನ ಮಾದರಿಗಳಾಗಿ ಹೊರಹೊಮ್ಮಿದ್ದು, ಫಾರ್ಚೂನರ್ ಕಾರಿಗೆ ಸರಿಸಮನಾದ ವಿನ್ಯಾಸ ಪಡೆದುಕೊಂಡಿರುವ ಹೊಸ ತಲೆಮಾರಿನ ಸಫಾರಿ ಕಾರು ಇದೀಗ ಸಿಐಎಸ್ಎಫ್ ಪಡೆಯಲ್ಲಿ ಪ್ರಮುಖ ರಕ್ಷಾಣಾ ಕಾರು ಮಾದರಿಯಾಗಿ ಬಳಕೆಯಾಗುತ್ತಿದೆ.

ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ದೇಶದ ಅತಿದೊಡ್ದ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಟಾಟಾ ಹೊಸ ಸಫಾರಿ ಕಾರನ್ನು ಪ್ರದರ್ಶಿಸಲಾಗಿದ್ದು, ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಕಾರನ್ನು ವಿಐಪಿಗಳ ಭದ್ರತೆಗಾಗಿ ಬಳಕೆ ಮಾಡಲಿದೆ.

ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ವಿಐಪಿ ಭದ್ರತಾ ವೈಶಿಷ್ಟ್ಯತೆ ಹೊಂದಿರುವ ಸಫಾರಿ ಕಾರುಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ವಿಭಿನ್ನವಾದ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಭದ್ರತಾ ವೈಶಿಷ್ಟ್ಯತೆಗೆ ಪೂರಕವಾಗಿ ಹೆಚ್ಚುವರಿ ಫೀಚರ್ಸ್‌ಗಳನ್ನು ಸೇರಿಸಲಾಗುತ್ತದೆ.

ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿರುವ ಹೊಸ ಕಾರು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ ಬೆಲೆಯು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷಕ್ಕೆ ನಿಗದಿಪಡಿಸಲಾಗಿದೆ. 6 ಸೀಟರ್ ಮತ್ತು 7 ಸೀಟರ್ ಮಾದರಿಗಳೊಂದಿಗೆ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದೆ.

ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ಸ್ಟ್ಯಾಂಡರ್ಡ್ ಸಫಾರಿ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷದಿಂದ ರೂ. 21.25 ಲಕ್ಷ ಬೆಲೆ ಹೊಂದಿದ್ದಲ್ಲಿ ಅಡ್ವೆಂಚರ್ ಪೆರಸೊನಾ ಸಫಾರಿ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.20 ಲಕ್ಷದಿಂದ ರೂ. 21.45 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ಹೊಸ ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವಿಐಪಿ ಬೆಂಗಾವಲು ಪಡೆಯಲ್ಲಿ ಮಿಂಚುತ್ತಿದೆ ಟಾಟಾ ಹೊಸ ಸಫಾರಿ ಎಸ್‌ಯುವಿ

ಟಾಟಾ ಕಂಪನಿಯು ಹೊಸ ಕಾರಿನ ಪ್ರತಿ ಮಾದರಿಯಲ್ಲೂ ಸದ್ಯಕ್ಕೆ 2 ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಮುಂಬರುವ ದಿನಗಳಲ್ಲಿ ಹೈ ಎಂಡ್ ಮಾದರಿಯಾಗಿರುವ ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಆಫ್ ರೋಡ್ ಪರ್ಫಾಮೆನ್ಸ್‌ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುವ ಯೋಜನೆಯಲ್ಲಿದೆ.

Most Read Articles

Kannada
English summary
CISF Used All-New Safari SUV To Demonstrate Various Drills During 52nd Raising Day. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X