ಬಂದೇ ಬಿಡ್ತು ವಿಶ್ವದ ಮೊದಲ ಹಾರುವ ಕಾರು 'ಗೈರೊಕಾಪ್ಟಾರ್' !

Written By:

ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಹಾರುವ ಕಾರು 'ಪಿಎಎಲ್-ವಿ ಲಿಬರ್ಟಿ' ಅನ್ನು ಬಿಕರಿಗೆ ಇಡುವ ಮೂಲಕ ಕಾನೂನುಬದ್ಧ ಹಾರಾಟಕ್ಕೆ ನಾಂದಿ ಹಾಡಿದಂತಾಗಿದೆ.

ಹಾರುವ ಕಾರು 'ಪಿಎಎಲ್-ವಿ ಲಿಬರ್ಟಿ'ಯ ಒಡೆಯರಾಗಬೇಕೆಂದರೆ ನೀವು ಸುಮಾರು 4.18 ಕೋಟಿ ರೂ.ಗಳನ್ನು ಕೊಟ್ಟು ಕೊಂಡುಕೊಳ್ಳಬೇಕಾಗುತ್ತದೆ, ಹಾಗು ಮುಂದಿನ ವರ್ಷ ಎಂದರೆ 2018ರ ಕೊನೆಯಲ್ಲಿ ನಿಮ್ಮ ಕೈ ಸೇರಲಿದೆ.

ಈ ಹಾರುವ ಕಾರಿನ ಬೆಲೆ ಸುಮಾರು ರೂ. 3.78 ಕೋಟಿ (ತೆರಿಗೆ ಹೊರತುಪಡಿಸಿ)  ಬೆಲೆ ಇರಲಿದೆ ಎಂದು ಪಿಎಎಲ್-ವಿ ಅಂತರ್ಜಾಲ ತಾಣನಲ್ಲಿ ಅಂದಾಜಿಸಲಾಗಿದೆ.

ಕಾರಿನ ಚಲಾವಣೆ ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀರಾ ? ಪ್ರತಿಯೊಂದು ತರಬೇತಿಯನ್ನು ಕಂಪನಿಯೇ ನೀಡಲಿದೆ.

ಮೊದಲ 90 ಹಾರುವ ಕಾರುಗಳು ಮಾರಾಟ ಮಾಡಲಿದ್ದು, ಅದರಲ್ಲಿ 40 ಕಾರುಗಳು ಯುರೋಪ್ ಗೆ ನೀಡಲು ನಿರ್ಧರಿಸಲಾಗಿದೆ.

ಎಲ್ಲಾ ಕಾರುಗಳನ್ನು ತಲುಪಿಸಿದ ಮೇಲೆ ಲಿಬರ್ಟಿ ಸ್ಪೋರ್ಟ್ ಆವೃತಿಯ ಉತ್ಪಾದನೆಗೆ ಕೈ ಹಾಕಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.ಮೂರು ಚಕ್ರದ ಹೊಂದಿರುವ ಕಾರು ಇದಾಗಿದೆ. ಕಾರಿನ ಮೇಲೆ ರೋಟರ್ ಬ್ಲೇಡ್ ಗಳನ್ನು ಇರಿಸಲಾಗಿದ್ದು, ಅವುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಎರಡು ಎಂಜಿನ್ ಹೊಂದಿರುವ ಗೈರೊಕಾಪ್ಟಾರ್ ಇದಾಗಿದ್ದು, ಐದು ಅಥವಾ ಹತ್ತು ನಿಮಿಷದೊಳಗಾಗಿ ಭೂಮಿಯಿಂದ ಮೇಲೇಳುವ ಸಾಮರ್ಥ್ಯ ಹೊಂದಿದೆ.

ರೋಟರ್ ಬ್ಲೇಡುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುವ ವ್ಯವಸ್ಥೆ ಇದ್ದರೂ ಸಹ ಅದನ್ನು ನಿಯಂತ್ರಣ ಮಾಡುವ ಟೈಲ್ ವಿಭಾಗದ ವ್ಯವಸ್ಥೆಯನ್ನು ಚಾಲಕ ಹೊಂದಿರುತ್ತಾನೆ.

ಹಾರುವ ಕಾರು ಸಿಕ್ಕಿತೆಂದು ಸಿಕ್ಕ ಸಿಕ್ಕಲಿ ಹಾರಿಸುವ ಮತ್ತು ಇಳಿಸುವ ಹಾಗಿಲ್ಲ ಓದುಗರೇ, ಈ 'ಪಿಎಎಲ್-ವಿ ಲಿಬರ್ಟಿ' ಕಾರನ್ನು ನೀವು 200X200 ಮೀಟರ್ ಜಾಗದಲ್ಲಿ ಮಾತ್ರ ಹಾರಿಸಬಹುದು.

ಈ ಕಾರನ್ನು ಹಾರಿಸುವುದಕ್ಕೆ ಪ್ರತ್ಯೇಕವಾದ ಪರವಾನಗೆ ಕೂಡ ಬೇಕು. ಪ್ರತಿ ಲೀಟರ್ ಗೆ 10.97 ಕಿ.ಮೀ ಇಂಧನ ಕ್ಷಮತೆ ಹೊಂದಿದೆ.

ನಿನ್ನೆಯಷ್ಟೇ ಬಿಡುಗಡೆಗೊಂಡಿರುವ ಹೋಂಡಾ ಸಿಟಿ ಕಾರಿನ ಚಿತ್ರಗಳನ್ನು ಈಗಲೇ ನೋಡಿ...

English summary
World’s first commercial flying car PAL-V Liberty is air-legal and its deliveries are scheduled towards end-2018.
Please Wait while comments are loading...

Latest Photos