ಪೊಲೀಸರ ಫೇವರಿಟ್ ವಾಹನ ಯಾವುದು?

By Nagaraja

ವಿಶ್ವದ ಪ್ರತಿಯೊಂದು ರಾಷ್ಟ್ರದಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಟೋಮೊಬೈಲ್ ಜಗತ್ತಿನ ಕೊಡುಗೆ ಅಪಾರವಾಗಿದೆ. ಅಚಾನಕ್ ನಡೆದ ಅಹಿತಕರ ಘಟನೆಯನ್ನು ನಿಭಾಯಿಸಲು ಹಾಗೂ ತುರಂತ್ ಆಗಿ ಘಟನಾ ಸ್ಥಳಕ್ಕೆ ತಲುಪಲು ಕಾರುಗಳು ಪೊಲೀಸರಿಗೆ ನೆರವಾಗುತ್ತದೆ. ಹೀಗೆ ಹಲವು ವಿಧಗಳಲ್ಲಿ ವಾಹನಗಳು ಪೊಲೀಸರ ನೆರವಿಗೆ ಬರುತ್ತವೆ.

ಅಂದ ಹಾಗೆ ವಿವಿಧ ದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ರೀತಿಗಳ ಕಾರುಗಳನ್ನು ಬಳಕೆ ಮಾಡುತ್ತಾರೆ. ನಮ್ಮ ದೇಶದಲ್ಲಂತೂ ಮಹೀಂದ್ರ ಜೀಪ್‌ಗಳು ಪೊಲೀಸರ ಫೇವರಿಟ್ ವಾಹನವೆನಿಸಿದೆ.

ಇಂದಿನ ಈ ಲೇಖನದಲ್ಲಿ ವಿವಿಧ ದೇಶಗಳ ಪೊಲೀಸರು ಅಲ್ಲಿ ಬಳಸುವ ಕಾರುಗಳ ಕುರಿತು ಮಾಹಿತಿ ಕೊಡಲಿದ್ದೇವೆ. ಹೆಸರಲ್ಲಿ ಸೂಚಿಸಿರುವಂತೆಯೇ ಪೊಲೀಸ್ ಕಾರು ಎಂದಾಕ್ಷಣ ನಿರ್ವಹಣೆಯಲ್ಲೂ ಹೆಚ್ಚು ಪವರ್‌ಫುಲ್ ಆಗುತ್ತಿರುತ್ತದೆ.

ಟಾಪ್ 10 ಪೊಲೀಸ್ ಕಾರುಗಳು

ಟಾಪ್ 10 ಪೊಲೀಸ್ ಕಾರುಗಳು

ಜಗತ್ತಿನ ವಿವಿಧ ರಾಷ್ಟ್ರಗಳ ಪೊಲೀಸರು ಬಳಸುವ ವಾಹನಗಳ ಕುರಿತು ಮಾಹಿತಿ ಪಡೆಯುವುದಕ್ಕಾಗಿ ಫೋಟೊ ಫೀಚರ್ ಕ್ಲಿಕ್ಕಿಸುತ್ತಾ ಸಾಗಿರಿ...

Germany- Brabus CLS Rocket

ಅತ್ಯಾಕರ್ಷಕ ಕಾರು ತಯಾರಿಸುವುದಕ್ಕೆ ಜರ್ಮನಿ ಹೆಸರುವಾಸಿಯಾಗಿದೆ. ಅದೇ ರೀತಿ ಅಲ್ಲಿನ ಪೊಲೀಸರು ಶಕ್ತಿ ವರ್ಧಿತ ಮರ್ಸಿಡಿಸ್ ಬೆಂಝ್‌ನ ಬ್ರಾಬಸ್ ಸಿಎಲ್‌ಎಸ್ ರಾಕೆಟ್ ಕಾರುಗಳನ್ನು ಬಳಕೆ ಮಾಡುತ್ತವೆ.

 Michigan (USA)- Cadillac CTS-V

ಕ್ಯಾಡಿಲ್ಯಾಕ್ ಅಮೆರಿಕದ ಪ್ರೀಮಿಯಂ ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್ ಒಡೆತನದಲ್ಲಿರುವ ಅತ್ಯುನ್ನತ ಬ್ರಾಂಡ್ ಆಗಿದೆ. ಮಿಚಿಗನ್ ಸಿಟಿ ಪೊಲೀಸರು ಗಸ್ತು ವಾಹನವಾಗಿ ಕ್ಯಾಡಿಲ್ಯಾಕ್ ಸಿಟಿಎಸ್‌-ವಿ ಕಾರನ್ನು ಬಳಸುತ್ತಾರೆ.

ಟೆಕ್ಸಾಸ್ (ಅಮೆರಿಕ)- ಷೆವರ್ಲೆ ಕ್ಯಾಮರೊ

ಟೆಕ್ಸಾಸ್ (ಅಮೆರಿಕ)- ಷೆವರ್ಲೆ ಕ್ಯಾಮರೊ

ಅಮೆರಿಕದ ಟೆಕ್ಸಾಸ್ ಪೊಲೀಸರು ಕ್ರಿಮಿನಲ್‌ಗಳನ್ನು ಸೆರೆಹಿಡಿಯುವುದಕ್ಕಾಗಿ ಪವರ್‌ಫುಲ್ ಷೆವರ್ಲೆ ಕ್ಯಾಮರೊ ಕಾರನ್ನು ಬಳಸುತ್ತಾರೆ.

Florida (USA) - Dodge Challenge

ಇಲ್ಲಿ ಅಮೆರಿಕದ ಮತ್ತೊಂದು ಕ್ಲಾಸಿಕ್ ಕಾರನ್ನು ಪ್ರಸ್ತುಪಡಿಸಲಾಗಿದ್ದು, ಡೊಡ್ಜ್ ಚಾಲೆಂಜ್ ಕಾರನ್ನು ಟೆಕ್ಸಾಸ್ ಪೊಲೀಸರು ತಮ್ಮ ಸೇವೆಗಾಗಿ ಬಳಸುತ್ತಾರೆ.

Japan - Honda NSX

ವೇಗವರ್ಧಿತ ರಸ್ತೆಗಳಲ್ಲಿ ವೇಗದ ಕಾರುಗಳಿಗೆ ಜಪಾನ್ ಪ್ರಖ್ಯಾತಿ ಗಿಟ್ಟಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಅಪರಾಧ ನಿಯಂತ್ರಿಸಲು ಅಲ್ಲಿನ ಪೊಲೀಸರಿಗೆ ಇನ್ನಷ್ಟು ವೇಗವರ್ಧಿತ ಕಾರುಗಳ ಅಗತ್ಯವಿದೆ. ಇದರಂತೆ ಜಪಾನ್ ಪೊಲೀಸರು ಕಾನೂನು ಸುವ್ಯವಸ್ಥೆಗಾಗಿ ಹೊಂಡಾ ಎನ್‌ಎಸ್‌ಎಕ್ಸ್ ಸ್ಪೋರ್ಟ್ಸ್ ಕಾರನ್ನು ಬಳಸುತ್ತಾರೆ.

Abu Dhabi - Nissan GTR

ಅಬುದಾಬಿ ಪೊಲೀಸರು ಅಪರಾಧಿ ಕೃತ್ಯಗಳನ್ನು ತಡೆಯಲು ಹಾಗೂ ಗಸ್ತು ವಾಹನವಾಗಿ ನಿಸ್ಸಾನ್ ಜಿಟಿಆರ್ ಕಾರನ್ನು ಬಳಕೆ ಮಾಡುತ್ತಾರೆ. ನಿಮ್ಮ ಮಾಹಿತಿಗಾಗಿ, ಹಿಂದೆ ಫೆರಾರಿ ಕಾರನ್ನು ಮಾರಾಟ ಮಾಡಿದ್ದ ಭಾರತ ಕ್ರಿಕೆಟ್ ತಂಡದ ಸದಸ್ಯ ಸಚಿನ್ ತೆಂಡೂಲ್ಕರ್ ನಿಸ್ಸಾನ್ ಜಿಟಿಆರ್ ಖರೀದಿಸಿಕೊಂಡಿದ್ದರು.

France - Peugeot Sports GT

ನೀವಿದನ್ನು ಡ್ರೈವ್ ಮಾಡಬೇಕೆಂದು ಬಯಸಿದ್ದಲ್ಲಿ ಫ್ರಾನ್ಸ್ ಆರಕ್ಷಕ ಪಡೆಗೆ ಸೇರಿಕೊಳ್ಳುವುದು ಒಳಿತು. ಯಾಕೆಂದರೆ ಅಲ್ಲಿನ ಪೊಲೀಸರು ಹೈವೇಗಳಲ್ಲಿ ಗಸ್ತು ನಡೆಸಲು Peugeot Sports GT ವಾಹನವನ್ನು ಬಳಕೆ ಮಾಡುತ್ತಾರೆ.

Germany - Porsche 911

ಬ್ರಾಬಸ್ ಸಿಎಲ್‌ಎಸ್ ರಾಕೆಟ್ ಕಾರು ಸೇರಿದಂತೆ ಜರ್ಮನಿ ಪೊಲೀಸರು ದುಬಾರಿ ಪೋರ್ಷೆ ಕಾರಿನ ದೊಡ್ಡ ಅಭಿಮಾನಿಗಳಾಗಿದ್ದಾರೆ. ಅಲ್ಲಿನ ಪೊಲೀಸರು ಪೋರ್ಷೆ 911 ಕ್ಯಾರೆರಾ ಕಾರನ್ನು ಸಹ ಬಳಸುತ್ತಾರೆ.

Netherlands - Spyker C8

ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರು ಕೂಡಾ ಹಾಲೆಂಡ್‌ನ ಪೊಲೀಸ್ ಕಾರು ಎನಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಸ್ಪೈಕರ್ ಸಿ8 ಅತಿ ಹೆಚ್ಚು ವೇಗತೆಯನ್ನು ಹೊಂದಿದೆ.

India - Mahindra Jeep

ಅಂತಿಮವಾಗಿ ನಿಮಗೆಲ್ಲ ತಿಳಿದಂತೆ ನಮ್ಮ ದೇಶದಲ್ಲಿ ಮಹೀಂದ್ರ ಜೀಪ್‌ಗಳು ಪೊಲೀಸ್ ವಾಹನವಾಗಿ ಬಳಕೆಯಾಗುತ್ತಿದೆ. ಯಾವುದೇ ರೀತಿಯ ರಸ್ತೆ ಪರಿಸ್ಥಿತಿಯಲ್ಲೂ ಮಹೀಂದ್ರ ಜೀಪ್ ಪಿಕ್ ಅಪ್ ಅದ್ಭುತವಾಗಿದೆ. ಇದುವೇ ಪೊಲೀಸರ ನೆಚ್ಚಿನ ಕಾರು ಎನಿಸಿಕೊಳ್ಳಲು ಕಾರಣವಾಗಿದೆ.

Most Read Articles

Kannada
English summary
Do you know the car industry has a say in maintaining law and order across the world. Well, you will say once you see the different kinds of cars police and military forces uses in different countries. The police Jeep is something very familiar with Indians. Lets have a look at police cars from different countries.
Story first published: Tuesday, January 15, 2013, 12:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X