ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣಿ..!

ರಾಜಕಾರಣೆಗಳು ಚುನಾವಣೆಗೆ ಮುಂಚಿತವಾಗಿ ಸಾಲುಗಟ್ಟಲೆ ಭರವಸೆಗಳನ್ನು ನೀಡುತ್ತಾರೆ. ಭಾರತದಲ್ಲಿ ಜನರ ಮತಗಳನ್ನು ಸೆಳೆಯಲು ಸುಳ್ಳು ಭರವಸೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಇದೇ ರೀತಿಯಲ್ಲಿ ಹರಿಯಾಣದ ರಾಜಕಾರಿಣಿಯೊಬ್ಬರು ಚುನಾವಣೆಗೆ ಮುಂಚಿತವಾಗಿ ಒಂದು ವಿಚಿತ್ರ ಭರವಸೆಯೊಂದನ್ನು ನೀಡಿದ್ದಾರೆ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ಹರಿಯಾಣ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿಯಾಗಿ ಸಿದ್ದವಾಗುತ್ತಿದ್ದಾರೆ. ಎಲ್ಲಾ ಪಕ್ಷಗಳು ರ‍್ಯಾಲಿ, ಸಭೆ ಮತ್ತು ಸಮಾರಂಭಗಳು ನಡೆಸುತ್ತಿದ್ದಾರೆ. ಜನರನ್ನು ಸೆಳೆಯಲು ತಮ್ಮ ಬತ್ತಳಿಕೆಯಲ್ಲಿ ಇರುವ ಎಲ್ಲಾ ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಇದೇ ರೀತಿ ಆಡಲಿತ ಪಕ್ಷ ಬಿಜೆಪಿಯ ಸ್ಥಳೀಯ ಅಭ್ಯರ್ಥಿ ದುದಾರಂ ಬಿಷ್ಣೋಯ್ ಅವರು ಸಭೆಯೊಂದರಲ್ಲಿ ಎಲ್ಲರೂ ಬೆರಗಾಗಿಸುವ ಭರವಸೆಯೊಂದನ್ನು ನೀಡಿದ್ದಾರೆ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ತುಂಬಿದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಅವರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯ ಸದಸ್ಯರಾದರೆ ಟ್ರಾಫಿಕ್ ಪೊಲೀಸರು ಯಾವುದೇ ದಂಡದ ಚಲನ್ ನೀಡದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿ‍ಜೆಪಿ ವಿಧಾನಸಭಾ ಅಭ್ಯರ್ಥಿ ಈ ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ಸೆಪ್ಟೆಂಬರ್ 1 ರಂದು ಭಾರತದಾದ್ಯಂತ ಕೇಂದ್ರ ಸರ್ಕಾರವು ಹೊಸ ಎಂವಿ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ದೇಶದಾದ್ಯಂತ ಹೊಸ ಎಂವಿ ಕಾಯ್ದೆಯ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಹಲವು ಕಡೆ ಪ್ರತಿಭಟನೆಗಳು ನಡೆದರೆ ಇನ್ನೂ ಕೆಲವು ಕಡೆ ಟ್ರಾಫಿಕ್ ಪೊಲೀಸರು ಮತ್ತು ವಾಹನ ಚಾಲಕರ ನಡುವೆ ಘರ್ಷಣೆಗಳು ನಡೆದಿದೆ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ಹೊಸ ಎಂವಿ ಕಾಯ್ದೆ ಜಾರಿಯಾದ ಬಳಿಕ ದಾಖಲೆ ಪ್ರಮಾಣದಲ್ಲಿ ದಂಡವನ್ನು ವಿಧಿಸುತ್ತಿದ್ದರು. ಹಲವು ರಾಜ್ಯದಲ್ಲಿ ಜನರ ಆಕ್ರೋಶ ಹೆಚ್ಚಾದಾಗ ಹೊಸ ನಿಯಮವನ್ನು ಜಾರಿಗೊಳಿಸಲಿಲ್ಲ, ಇನ್ನೂ ಕೆಲವು ರಾಜ್ಯಗಳಲ್ಲಿ ಹೊಸ ಕಾಯ್ದೆಯನ್ನು ತಿದ್ದುಪಡಿ ನಡೆಸಿ ಜಾರಿಗೊಳಿಸಿದ್ದಾರೆ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ಹೊಸ ಎಂವಿ ಕಾಯ್ದೆಯಿಂದ ಕಳೆದ ಸೆಪ್ಟೆಂಬರ್ ತಿಂಗಳ ಬಳಿಕ ಸಂಚಾರಿ ನಿಯಮವನ್ನು ಉಲ್ಲಂಘಿಸುವುದು ಶೇ.30 ರಷ್ಟು ಇಳಿಕೆಯಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಸಂಗ್ರಹಿಸುವ ದಂಡವು ಶೇ.21 ರಷ್ಟು ಹೆಚ್ಚಳವಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ವರದಿ ಮಾಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗಿದೆ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ಆದರೆ ಕೆಲವು ನಕಾರಾತ್ಮಕ ವಿಷಯವು ಕೂಡ ಒಳಗೊಂಡಿದೆ. ದುಬಾರಿ ದಂಡವನ್ನು ಕಟ್ಟು‍ನಿಟ್ಟಾಗಿ ಜಾರಿಗೊಳಿಸುವುದರಿಂದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಹಲವಾರು ಘರ್ಷಣೆಗಳು ನಡೆದಿವೆ. ದೇಶಾದ್ಯಂತ ಹಲವು ಭಾಗಗಳಲ್ಲಿ ಘರ್ಷಣೆಗಳು ಸಂಭವಿಸಿರುವ ವರದಿಗಳಾಗಿವೆ. ಅಲ್ಲದೇ ಮಧ್ಯಮ ಮತ್ತು ದಿನಕೊಲೀ ಕೆಲಸಗಾರರಿಗೆ ದುಬಾರಿ ಮೊತ್ತದ ದಂಡವು ದೊಡ್ಡ ಹೊರೆಯಾಗುತ್ತದೆ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ಕೆಲವು ಕಡೆಗಳಲ್ಲಿ ಎಲ್ಲಾ ದಾಖಲೆಗಳು ಸರಿಯಿದ್ದರೂ ಏನಾದರೂ ಕಾರಣ ಹೇಳಿ ದಂಡ ವಿಧಿಸಲಾಗುತ್ತಿದೆ. ಸಂಚಾರಿ ನಿಯಮದ ಇತಿಹಾಸದಲ್ಲಿ ಕಂಡು ಕೇಳಿಯರದಷ್ಟು ದಂಡವನ್ನು ವಿಧಿಸುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಜನರು ಆಕ್ರೋಶಗೊಂಡಿದ್ದಾರೆ. ಆದರೆ ಚುನಾವಣೆಗೆ ಇದನ್ನೇ ದಾಳವಾಗಿ ಬಳಸಿ ಜನರ ಮತವನ್ನು ಸೆಳೆಯಲು ಪ್ರಯತ್ನಿಸುವುದು ವಿಪರಾಸ್ಯ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ತಮ್ಮದೆ ಸರ್ಕಾರ ಜಾರಿಗೊಳಿಸಿದ ಎಂವಿ ಕಾಯ್ದೆಯ ಪ್ರಕಾರ ಚಲನ್ ಅನ್ನು ನೀಡದ ಹಾಗೆ ಚುನಾವಣೆಯಲ್ಲಿ ಗೆಲ್ಲಲು ಈ ರೀತಿಯ ಭರವಸೆಯನ್ನು ನೀಡುವುದು ಎಷ್ಟು ಸರಿ.

ವೋಟ್‍‍ಗಾಗಿ ವಾಹನ ಸವಾರರಿಗೆ ಭರ್ಜರಿ ಆಫರ್ ಘೋಷಿಸಿದ ರಾಜಕಾರಣೆ..!

ಭಾರತೀಯ ರಸ್ತೆಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ಅಪಘಾತಗಳು ಸಂಭವಿಸುತ್ತವೆ ಮತ್ತು ಈ ಅಪಘಾತಗಳು ಭೀಕರತೆಯಿಂದ ಕೂಡಿರುತ್ತವೆ. ಅಪಘಾತಗಳಾಗುದನ್ನು ತಪ್ಪಿಸಲು ಮತ್ತು ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂದು ಹೊಸ ಸಂಚಾರಿ ನಿಯಮವನ್ನು ಜಾರಿಗೊಳಿಸಲಾಗಿದೆ. ದಂಡಕ್ಕೆ ಹೆದರಿಯಾದರೂ ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂಬುದು ಇದರ ಉದ್ದೇಶವಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕಾದ ವಿಷಯವಾಗಿದೆ.

Most Read Articles

Kannada
English summary
Politician: You won’t have to pay vehicle fines if you vote for me - Read in Kanada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more