ರಸ್ತೆಯಲ್ಲಿನ ಗುಂಡಿಗೆ ಮಹಿಳಾ ಬೈಕರ್ ಜಾಗೃತಿ ವಿರಾಜ್ ಬಲಿ
ರಸ್ತೆಯಲ್ಲಿನ ತೆರೆದ ಗುಂಡಿಗೆ ಬೈಕ್ ಅಪ್ಪಳಿಸಿದ ಪರಿಣಾಮ ಮಹಿಳಾ ಬೈಕರ್‌ರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿನ ತೆರೆದ ಗುಂಡಿಗೆ ಬೈಕ್ ಅಪ್ಪಳಿಸಿದ ಪರಿಣಾಮ ಮಹಿಳಾ ಬೈಕರ್‌ರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬೈ ಮೂಲದ 34 ವರ್ಷದ ಮಹಿಳಾ ಬೈಕರ್ ಜಾಗೃತಿ ವಿರಾಜ್ ಹೊಗಾಲೆ ರಸ್ತೆ ಗುಂಡಿಗೆ ಬಲಿಯಾಗಿದ್ದು, ವಿರಾಜ್ ಹೊಗಾಲೆ ಅವರು ವೀಕೆಂಡ್‍ನಲ್ಲಿ ಬೈಕ್ ರೈಡಿಗೆ ಹೋಗಿದ್ದರು.

ಬೆಳಗಿನ 9 ಗಂಟೆಗೆ ತಮ್ಮ ಸ್ನೇಹಿತರೊಂದಿಗೆ ಮುಂಬೈನ ಬಾಂದ್ರಾದಿಂದ ಜವ್ಹಾರ್‌ಗೆ ಪ್ರಯಾಣ ಆರಂಭಿಸಿದ್ರು. ಆದ್ರೆ ಈ ವೇಳೆ ಸಣ್ಣಗೆ ಮಳೆಯಾಗುತ್ತಿದ್ದರಿಂದ ಬೈಕ್ ನಿಯಂತ್ರಿಸಲು ಸಾಧ್ಯವಾಗಿಲ್ಲ.

ಈ ವೇಳೆ ಟ್ರಕ್‍ವೊಂದನ್ನು ಓವರ್‍ಟೆಕ್ ಮಾಡಲು ಮುಂದಾದಾಗ ತೆರೆದ ಗುಂಡಿಗೆ ಜಾಗೃತಿ ವಿರಾಜ್ ಬೈಕ್ ನೆಲಕ್ಕೆ ಅಪ್ಪಳಿಸಿದೆ. ಇದರಿಂದ ಬ್ಯಾಲೆನ್ಸ್ ತಪ್ಪಿದ ಜಾಗೃತಿ ಟ್ರಕ್‍ನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅದೇ ವೇಳೆ ಜಾಗೃತಿ ಸ್ನೇಹಿತರು ತಮ್ಮ ಬೈಕ್‍ನಲ್ಲಿ ಹಿಂದೆಯೇ ಬಂದಿದ್ದು, ಬರುವ ವೇಳೆಗಾಗಲೇ ಜಾಗೃತಿ ಕೊನೆಯುಸಿರೆಳೆದಿದ್ದರು ಎಂದು ಬಾಂದ್ರಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಹೀಗಾಗಿ ರಸ್ತೆಗಳಲ್ಲಿ ಬಿದ್ದಿರುವ ಹೊಂಡಗಳಿಂದ ದೇಶದ ವಿವಿದಡೆ ದಿನಂಪ್ರತಿ ಒಂದಿಲ್ಲ ಒಂದು ಸಾವಿನ ಪ್ರಕರಣಗಳು ದಾಖಲಾಗುತ್ತಿದ್ದು, ವಾಹನ ಸವಾರರ ಸಾವಿಗಾಗಿ ಕಾಯ್ದಿರುವ ಗುಂಡಿಗಳನ್ನು ಮುಚ್ಚವ ಕೆಲಸವಾಗಬೇಕಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಟ್ರಕ್ ಚಾಲಕನ ಬದಲು ಸ್ಥಳೀಯ ಪಾಲಿಕೆ ಸದಸ್ಯ ಮತ್ತು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು ಅನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.


Click it and Unblock the Notifications








