ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

By Nagaraja

ಬಹಳ ಹಿಂದಿನಿನಿಂದಲೇ ಐಕಾನಿಕ್ ರೇಂಜ್ ರೋವರ್ ಕಾರುಗಳಿಗೂ ಬ್ರಿಟನ್‌ನ ರಾಣಿ ಎಲಿಜಬೆತ್ ಗೂ ಎಲ್ಲಿಲ್ಲದ ನಂಟು. 1950ರ ದಶಕದಲ್ಲಿ ಕ್ವೀನ್ ಎಲಿಜಬೆತ್ ಮೊದಲ ಬಾರಿಗೆ ಲ್ಯಾಂಡ್ ರೋವರ್ ಕಾರನ್ನು ಗಿಟ್ಟಿಸಿಕೊಂಡಿದ್ದರು. ತದಾ ಬಳಿಕ ರೇಂಜ್ ರೋವರ್ ವಿಶ್ವದೆಲ್ಲಡೆ ಅತ್ಯಂತ ವಿಶ್ವಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದೆ.

ಹಾಗೊಂದು ವೇಳೆ ಬ್ರಿಟನ್ ರಾಣಿಯ ಕಾರನ್ನು ಹೊಂದಿಕೊಳ್ಳಬೇಕೆಂಬ ಕನಸು ನಿಮ್ಮ ಮನಸ್ಸಲ್ಲೂ ಹುಟ್ಟಿಕೊಂಡಿದ್ದರೆ ನಿಮಗಿದೋ ಕಾದಿದೆ ಸುವರ್ಣವಕಾಶ. ಅದೇನೆಂದರೆ ಪ್ರಸ್ತುತ ಬ್ರಿಟನ್ ರಾಯಲ್ ದಂಪತಿಗಳಾದ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್ ಟನ್ ಬಳಕೆ ಮಾಡಿರುವ ರೇಂಜ್ ರೋವರ್ ಕಾರನ್ನು ಹರಾಜಿಗಿಡಲಾಗುತ್ತಿದೆ.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ಪ್ರಖ್ಯಾತ ಆನ್ ಲೈನ್ ಹರಾಜು ವೆಬ್ ಸೈಟ್ ಆಗಿರುವ ಚಾರಿಟಿ ಸ್ಟಾರ್ಸ್, ರೇಂಜ್ ರೋವರ್ ವೋಗ್ ಎಸ್ ಇ ಕಾರನ್ನು ಹರಾಜಿಗಿಡುತ್ತಿದೆ. ತನ್ಮೂಲಕ ರಾಯಲ್ ದಂಪತಿಗಳ ವೈಯಕ್ತಿಕ ಆಸ್ತಿಯನ್ನು ಪಡೆಯುವ ಅವಕಾಶ ನಿಮಗೂ ದೊರೆಯಲಿದೆ.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ಲ್ಯಾಂಡ್ ರೋವರ್ ವಿಐಪಿ ವಿಭಾಗದಿಂದ ಹಸ್ತಾಂತರ ಮಾಡಲಾಗಿರುವ ಐಷಾರಾಮಿ ರೇಂಜ್ ರೋವರ್ ಕಾರಲ್ಲಿ ಅನೇಕ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ತಮ್ಮ ಮೊದಲ ಹೆರಿಗೆಯ ಬಳಿಕ ರಾಣಿ ಕ್ಯಾಥರಿನ್ ಜೊತೆ ವಿಲಿಯಮ್ ಆಸ್ಪತ್ರೆಯಿಂದ ಅರಮನೆಯತ್ತ ಇದೇ ಕಾರಲ್ಲಿ ಪ್ರಯಾಣ ಬೆಳೆಸಿದ್ದರು.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ರಾಯಲ್ ದಂಪತಿಗಳ ಭಾಗವಾಗಿರುವ ರೇಂಜ್ ರೋವರ್ ಈಗ ಐಕಾನಿಕ್ ವಾಹನಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ರೇಂಜ್ ರೋವರ್ ವೋಗ್ ಎಸ್ ಇ ಮಾದರಿಯು ಎಸ್ ಡಿ ವಿ8 4.4 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 334 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ಆಲ್ ಟರೈನ್ ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಹೊಂದಿರುವ ರೇಂಜ್ ರೋವರ್ ಲೆಥರ್ ಸೀಟುಗಳೊಂದಿಗೆ ಆರಾಮದಾಯಕ ಚಾಲನೆಯನ್ನು ಖಾತ್ರಿಪಡಿಸುತ್ತದೆ.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ಮೆಮರಿ ಸೀಟು, ಹೀಟಡ್ ರಿಯರ್ ಸೀಟು, ಇಂಟಿರಿಯರ್ ಮೂಡ್ ಲೈಟಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಇಂಟೆಲಿಜೆಂಟ್ ಎಮರ್ಜನ್ಸಿ ಬ್ರೇಕಿಂಗ್ ಮತ್ತು ಆಕ್ಟಿವ್ ಸೀಟು ಬೆಲ್ಟ್, ಮೆರಿಡಿಯನ್ ಸೌರಂಡ್ ಸಿಸ್ಟಂ, ಎಂಟು ಇಂಚುಗಳ ಹೈ ರೆಸೊಲ್ಯೂಷನ್ ಟಚ್ ಸ್ಕ್ರೀನ್ ಜೊತೆ ಡ್ಯುಯಲ್ ವ್ಯೂ, ಸ್ಯಾಟಲೈಟ್ ನೇವಿಗೇಷನ್, ಬ್ಲೂಟೂತ್, ಫೋನ್ ಸಂಪರ್ಕ, ಡಿಜಿಟಲ್ ಟಿವಿ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಬ್ರಿಟನ್ ರಾಯಲ್ ದಂಪತಿಗಳ ರೇಂಜ್ ರೋವರ್ ಕಾರು ಹರಾಜಿಗೆ!

ಇದರ ಜೊತೆಗೆ ಅಡಾಪ್ಟಿವ್ ಕ್ಸೆನಾನ್ ಹೆಡ್ ಲ್ಯಾಂಪ್, ಆಟೋಮ್ಯಾಟಿಕ್ ಹೈ ಬೀಮ್ ಅಸಿಸ್ಟ್, ಪ್ಯಾನರಾಮಿಕ್ ಸನ್ ರೂಫ್, ಸೌರಂಡ್ ಕ್ಯಾಮೆರಾ, ಪಾರ್ಕಿಂಗ್ ಅಸಿಸ್ಟ್ ಮುಂತಾದ ಸೇವೆಗಳನ್ನು ಪಡೆದಿದೆ.

Most Read Articles

Kannada
Read more on ಕಾರು car
English summary
Prince William & Catherine’s Range Rover Vogue SE is for auction
Story first published: Wednesday, August 17, 2016, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X