Just In
- 49 min ago
ಭಾರತದಲ್ಲಿ ಸೆಲ್ಟೊಸ್ ಫೇಸ್ಲಿಫ್ಟ್ ಆವೃತ್ತಿಯ ಬಿಡುಗಡೆಗಾಗಿ ಸಿದ್ದವಾದ ಕಿಯಾ ಮೋಟಾರ್ಸ್
- 10 hrs ago
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- 11 hrs ago
ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್
- 12 hrs ago
ಸ್ಥಗಿತವಾಯ್ತು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಸ್ಟ್ರೀಟ್ ರಾಡ್ ಬೈಕುಗಳು
Don't Miss!
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- News
ರಿಲಯನ್ಸ್ 3ನೇ ತ್ರೈಮಾಸಿಕ: ಶೇ 41ಕ್ಕೂ ಅಧಿಕ ಲಾಭ ದಾಖಲು
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಟಲ್ ಸುರಂಗದಲ್ಲಿನ ವಾಹನಗಳ ಸಂಚಾರದಲ್ಲಿ ಹೊಸ ದಾಖಲೆ
ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವಾದ ಅಟಲ್ ಟನಲ್‌ನಲ್ಲಿ ವಾಹನ ಸಂಚಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸುರಂಗ ಮಾರ್ಗ ಆರಂಭವಾದ ನಂತರ ಮೊದಲ ಬಾರಿಗೆ ಹೊಸ ಮಾರ್ಗದಲ್ಲಿ ಅತಿ ಹೆಚ್ಚು ವಾಹನಗಳು ಸಂಚರಿಸಿರುವುದಾಗಿ ವರದಿಯಾಗಿದೆ.

ಅಟಲ್ ಸುರಂಗ ಮಾರ್ಗವು ಉದ್ಘಾಟನೆಗೊಂಡ ಬಳಿಕ ಪ್ರವಾಸಿ ತಾಣವಾಗಿ ಬದಲಾಗಿದ್ದು, ಈ ಸುರಂಗ ಮಾರ್ಗದಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಸಂಚರಿಸುತ್ತಿದ್ದಾರೆ. ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಎಂಬ ಕೀರ್ತಿಗೆ ಪಾತ್ರವಾಗಿರುವ ಅಟಲ್ ಸುರಂಗವು ಸುಮಾರು 9.02 ಕಿ.ಮೀ ಉದ್ಧವಿದ್ದು, ರೋಹ್ಟಾಂಗ್ ಪಾಸ್‌ನ ಲಾಹೌಲ್-ಸ್ಪಿಟಿ ಜಿಲ್ಲೆಯ ಲಾಹೌಲ್ ಮತ್ತು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿಯನ್ನು ಸಂಪರ್ಕಿಸುತ್ತದೆ.

ಕರೋನಾ ವೈರಸ್ ಪರಿಣಾಮ ಇಷ್ಟುದಿನಗಳ ಕಾಲ ಕಡಿಮೆ ಸಂಚಾರ ದಟ್ಟಣೆ ಹೊಂದಿದ್ದ ಹೊಸ ಸುರಂಗ ಮಾರ್ಗದಲ್ಲಿ ಇದೀಗ ಹೆಚ್ಚಿನ ಪ್ರಮಾಣದ ವಾಹನಗಳು ಸಂಚರಿಸಿದ್ದು, ನಿನ್ನೆ ಒಂದೇ ದಿನಗಳಲ್ಲಿ 5,450 ವಾಹನಗಳು ಹೊಸ ಮಾರ್ಗದಲ್ಲಿ ಸಂಚರಿಸಿರುವುದಾಗಿ ವರದಿಯಾಗಿದೆ.

ಲಾಹೌಲ್-ಸ್ಪಿಟಿ ಜಿಲ್ಲೆಯ ಲಾಹೌಲ್ ಮತ್ತು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿ ನಡುವಿನ ಸಂಚಾರದ ಅವಧಿಯನ್ನು ತಗ್ಗಿಸಬೇಕೆಂಬ ಕೇಂದ್ರ ಹೆದ್ದಾರಿ ಅಭಿವೃದ್ದಿಯ ಆಶಯದಂತೆ ಹೊಸ ಮಾರ್ಗದ ಬಳಕೆಯು ಹೆಚ್ಚುತ್ತಿದ್ದು, ಹೊಸ ಸುರಂಗ ಮಾರ್ಗದಲ್ಲಿನ ಸುರಕ್ಷಿತ ಪ್ರಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಅಟಲ್ ಸುರಂಗ ಮಾರ್ಗವು ಸಮುದ್ರ ಮಟ್ಟದಿಂದ ಸುಮಾರು 3,100 ಮೀಟರ್ ಎತ್ತರದಲ್ಲಿದ್ದು, ಈ ಮಾರ್ಗವನ್ನು ಹಿಮಾಚಲ ಪ್ರದೇಶದ ಮನಾಲಿ ಹಾಗೂ ಲಡಾಖ್‌ನ ಲೇಹ್ ಪ್ರದೇಶದ ನಡುವೆ ನಿರ್ಮಿಸಲಾಗಿದೆ. 9.02 ಕಿ.ಮೀ ಉದ್ದದ ಈ ಸುರಂಗವು ವರ್ಷ ಪೂರ್ತಿ ಮನಾಲಿಗೆ ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕ ನೀಡುತ್ತದೆ. ಹಿಮಪಾತದಿಂದಾಗಿ ಈ ಹಿಂದೆ ಪ್ರತಿವರ್ಷ ಸುಮಾರು ಆರು ತಿಂಗಳ ಕಾಲ ಈ ರಸ್ತೆಯ ಮೇಲೆ ಪರಿಣಾಮ ಉಂಟಾಗುತ್ತಿತ್ತು.

ಈ ಹಿನ್ನಲೆಯಲ್ಲಿ 2000ರ ಜೂನ್ 3ರಂದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಹೊಸ ಯೋಜನೆಯ ಕುರಿತಂತೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

ಹಿಮಾಲಯದ ಪಿರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿರುವ ಹೊಸ ಸುರಂಗ ಮಾರ್ಗವು ಸಮುದ್ರ ಮಟ್ಟದಿಂದ 3,100 ಮೀಟರ್ (10,000 ಅಡಿ) ಎತ್ತರದಲ್ಲಿದ್ದು, ಅಲ್ಟ್ರಾ-ಮಾರ್ಡನ್ ವಿಶೇಷತೆಗಳೊಂದಿಗೆ ಈ ಸುರಂಗವನ್ನು ನಿರ್ಮಿಸಲಾಗಿದೆ.

ಹಾರ್ಸ್ ಶೂ ಶೇಪಿನಲ್ಲಿರುವ ಸಿಂಗಲ್ ಟ್ಯೂಬ್ ಡಬಲ್ ಲೇನ್ ನ ಈ ಈ ಸುರಂಗವು 8 ಮೀಟರ್ ರಸ್ತೆ ಹೊಂದಿದ್ದು, ಈ ಸುರಂಗದಲ್ಲಿ ವಾಣಿಜ್ಯ ವಾಹನಗಳು ಸರಾಗವಾಗಿ ಸಾಗುವಂತೆ 5.525 ಮೀಟರ್ ಓವರ್ ಹೆಡ್ ಕ್ಲಿಯರೆನ್ಸ್ ಹೊಂದಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಈ ಸುರಂಗವು 10.5 ಮೀಟರ್ ಅಗಲವಿದ್ದು, 3.6 x 2.25 ಮೀಟರ್ ಅಗ್ನಿ ನಿರೋಧಕ ತುರ್ತು ಪ್ರಗತಿ ಸುರಂಗವನ್ನು ಮುಖ್ಯ ಸುರಂಗದಲ್ಲಿ ನಿರ್ಮಿಸಲಾಗಿದೆ. ಯಾವುದೇ ದುರಂತ ಸಂಭವಿಸಿದರೆ ಜನರನ್ನು ರಕ್ಷಿಸಲು ಪ್ರತಿ 500 ಮೀಟರ್ ಗಳಿಗೆ ಒಂದು ಎಮರ್ಜೆನ್ಸಿ ಎಕ್ಸಿಟ್ ಗಳನ್ನು ನೀಡಲಾಗಿದೆ.

ಈ ಸುರಂಗ ಮಾರ್ಗವು ಮನಾಲಿ - ಲೇಹ್ ನಡುವಿನ ರಸ್ತೆ ದೂರವನ್ನು 46 ಕಿ.ಮೀಗಳವರೆಗೆ ಹಾಗೂ ಪ್ರಯಾಣ ಅವಧಿಯನ್ನು ನಾಲ್ಕರಿಂದ ಐದು ಗಂಟೆಗಳವರೆಗೆ ಕಡಿಮೆಗೊಳಿಸುತ್ತದೆ. 10 ವರ್ಷಗಳ ಅವಧಿಯಲ್ಲಿ ಬಾರ್ಡರ್ ರೋಡ್ಸ್ ಸಂಸ್ಥೆಯು ಈ ಸುರಂಗವನ್ನು ನಿರ್ಮಿಸಿದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಭದ್ರತೆಗಾಗಿ ಹೊಸ ಸುರಂಗ ಮಾರ್ಗದಲ್ಲಿ ಪ್ರತಿ 60 ಮೀಟರ್‌ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಸುರಂಗವನ್ನು ಎಲ್ಲಾ ರೀತಿಯ ಹವಾಮಾನವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.