ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಹಣ ಇದ್ದವರಿಗೆ ವಾಹನ ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಒಂದು ವಾಹನ ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ವಾಹನ ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪಾರವು ವಾಹನ ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ನೀವು ಯಾವುದೇ ಕಾರನ್ನು ಖರೀದಿ ಮಾಡುವಾಗ ಅದರಲ್ಲಿರುವ ಫೀಚರ್ಸ್, ಹೊರ ವಿನ್ಯಾಸ ಮತ್ತು ಕಾರಿನ ಬಣ್ಣವನ್ನು ತಲೆಯಲ್ಲಿ ಇಟ್ಟುಕೊಂಡು ಹೋಗಿರುತ್ತೀರಿ. ಆದ್ರೆ ಆ ಶೋರುಂನಲ್ಲಿ ನೀವು ಊಹಿಸಿಕೊಂಡ ಕಾರು ಇದ್ದರೂ, ಅದರಲ್ಲಿ ನೀವು ಬಯಸುವ ಬಣ್ಣ ಇಲ್ಲವಾಗಿರಬಹುದು. ಇದ್ದರೂ ಸಹ ಅದನ್ನು ಈಗಾಗಲೆ ಯಾರರೊಬ್ಬರು ಬುಕ್ಕಿಂಗ್ ಮಾಡಿಕೊಂಡಿರುತ್ತಾರೆ. ಆದ್ರೆ ಇಲ್ಲಿ ನಡೆದದ್ದೆ ಬೇರೆ ಕೇಳಿದ ಬಣ್ಣದಲ್ಲಿ ಕಾರಿದ್ದರೂ ಸಹ ಬೇರೆ ಕಾರನ್ನು ನೀಡಿದ ಡೀಲರ್‍‍‍ಗೆ ಇದೀಗ ಗ್ರಾಹಕ ನ್ಯಾಯಾಲಯವು ದಂಡವನ್ನು ವಿದಿಸಿದೆ.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಹೌದು, ಸೆಪ್ಟೆಂಬರ್ 23, 2017ರಂದು ಬೆಂಗಳೂರಿನ ನಿವಾಸಿಯಾದ ಪೆಟವಾಟ್ ಎಂಬಾತ ವೈಟ್‍‍ಫೀಲ್ಡ್ ಸಮೀಪದಲ್ಲಿರುವ ರೆನಾಲ್ಟ್ ಶೋರುಂಗೆ ಡಸ್ಟರ್ ಕಾರನ್ನು ಖರೀದಿಸಲು ಹೋದಾಗ, ಅಲ್ಲಿ ತನಗೆ ನೆಚ್ಚಿನ ಹಸಿರು ಬಣ್ಣದ ಡಸ್ಟರ್ ಕಾರು ಕಾಣಿಸಿ ಅದನ್ನು ಖರೀದಿಸಿಸಲು ಮುಂದಾದರು.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಹಾಗೆಯೆ ತಾನು ಆಯ್ಕೆ ಮಾಡಲಾದ ಬಣ್ಣದ ರೆನಾಲ್ಟ್ ಡಸ್ಟರ್ ಕಾರನ್ನು ಡೆಲಿವರಿ ಮಾಡುವುದಾಗಿ ಅಲ್ಲಿನ ಸಿಬ್ಬಂದಿಯು ಹಣವನ್ನು ಸ್ವೀಕರಿಸಲಾಗಿದ್ದು, ಸೆಪ್ಟೆಂಬರ್ 28, 2017ರಂದು ಡೆಲಿವರಿ ನೀಡುವುದಾಗಿ ಹೇಳಿದ್ದರು. ಇದೇ ಖುಷಿಯಿಂದ ಸೆಪ್ಟೆಂಬರ್ 24, 2017ರಂದು ಪೆಟವಾಟ್ ತಾನೀಗಾಗಲೆ ಬಳಸುತ್ತಿದ್ದ ಕಾರನ್ನು ಮಾರಿಬಿಟ್ಟಿದ್ದರು.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಮುಂದಿನ ದಿನವೇ ಪೆಟವಾಟ್ ರೆನಾಲ್ಟ್ ಡೀಲರ್ ಅನು ಭೇಟಿ ನೀಡಿದಾಗ ಆತನಿಗೆ ಒಂದು ಶಾಕಿಂಗ್ ವಿಚಾರ ಕಾದಿತ್ತು, ಅದೇನೆಂದರೆ ತಾನು ಇಷ್ಟ ಪಟ್ಟು ಆಯ್ಕೆ ಮಾಡಿದ್ದ ಹಸಿರು ಬಣ್ಣದ ರೆನಾಲ್ಟ್ ಡಸ್ಟರ್ ಈಗಾಗಲೆ ಬೇರವರು ಖರೀದಿಸಿರುವುದಾಗಿ ಮತ್ತು ಸಧ್ಯಕ್ಕೆ ಆರೆಂಜ್ ಬಣ್ಣದ ಡಸ್ಟರ್ ಕಾರು ತೆಗೆದುಕೊಂಡು ಹೋಗಲು ಮತ್ತು ಹಸಿರು ಬಣ್ಣದ ಡಸ್ಟರ್ ಕಾರು ಇನ್ನು ಒಂದು ತಿಂಗಳಿವರೆಗು ಕಾಯಬೇಕಾಗಿ ಹೇಳಿದ್ದರು.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಬೇರೆ ದಾರಿ ತೋಚದೆಯೆ ವೈಯಕ್ತಿಕ ವಿಷಯಗಳ ಕಾರಣಗಳಿಂದ, ಆತನಿಗೆ ಇಷ್ಟವಿಲ್ಲದ ಕಾರನ್ನು ಕೊಂಡೊಯ್ದರು ಪೆಟಾವಾಟ್. ಆರೆಂಜ್ ಬಣ್ಣದ ರೆನಾಲ್ಟ್ ಕಾರನ್ನು ಡೆಲಿವರಿ ಪಡೆದ ನಂತರ, ಮುಂದಿನ ತಕ್ಷಣವೇ ರೆನಾಲ್ಟ್ ಸಂಸ್ಥೆಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದರು.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಹಲವಾರು ವಾದ ವಿವಾದಗಾಳ ನಂತರ ಏಪ್ರಿಲ್ 26, 2019ರಂದು ಗ್ರಾಹಕ ನ್ಯಾಯಲಯವು ದೂರುದಾರರ ಪರವಾಗಿ ತೀರ್ಪನ್ನು ನೀಡಲಾಯಿತು. ತೀರ್ಪಿನ ಪ್ರಕಾರ ರೆನಾಲ್ಟ್ ಸಂಸ್ಥೆಯು ಪೆಟಾವಾಟ್‍‍ಗೆ ಹಸಿರು ಬಣ್ಣಾದ ಕಾರನ್ನು ನೀಡಬೇಕಾಗಿದ್ದು, ಸಂಸ್ಥೆಯು ಪೆಟಾವಾಟ್‍ಗೆ ಮಾನಸಿಕ ಸಂಕಟ ನೀಡಿದ ಕಾರಣ ರೂ.10,000 ಮತ್ತು ಮೊಕದಮ್ಮೆ ವೆಚ್ಚಗಳಿಗಾಗಿ ರೂ. 5,000 ದಂಡವನ್ನು ನೀಡಬೇಕಾಗಿದೆ.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಇವುಗಳ ಜೊತೆಗೆ, ವಿಮೆ, ಆಡ್-ಆನ್ ವಿಮೆ, ರೋಡ್ ಟ್ಯಾಕ್ಸ್, ರಿಜೆಸ್ಟ್ರೇಷನ್ ಟ್ಯಾಕ್ಸ್, ಡೆಲಿವರಿ ಚಾರ್ಜೆಸ್, ಸ್ಟ್ಯಾಂಡರ್ಡ್ ಆಕ್ಸಿಸೆರಿಗಳು, ಖರೀದಿಸಿದ ಆರೆಂಜ್ ಬಣ್ಣದ ರೆನಾಲ್ಟ್ ಕಾರೀನ ಮೇಲಿದ್ದ ವಿಸ್ಥರಿತ ಖಾತರಿ ಪ್ಯಾಕೇಜುಗಳನ್ನು ನೀಡಲಿರುವ ಹಸಿರು ಬಣ್ಣದ ರೆನಾಲ್ಟ್ ಡಸ್ಟರ್ ಕಾರಿನ ಪ್ಯಾಕೇಜ್‍‍ಗಳಂತೆ ಬದಲಿಸಲು ತೀರ್ಪಿನಲ್ಲಿ ಹೇಳಲಾಗಿದೆ.

ತಪ್ಪು ಬಣ್ಣದ ರೆನಾಲ್ಟ್ ಕಾರನ್ನು ನೀಡಿದ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ - ಹೀಗು ಮೋಸ ಮಾಡ್ತಾರ.?

ಹೀಗಾಗಿರುವುದು ಇದೇನು ಮೊದಲನೆಯೆದಲ್ಲ ಇದಕ್ಕು ಮುನ್ನವೇ ಡೀಲರ್‍‍ಗಳು ಮತ್ತು ಸರ್ವೀಸ್ ಸೆಂಟರ್‍‍ನವರು ಯಾವ ರೀತಿ ತಮ್ಮ ಗ್ರಾಹಕರಿಗೆ ಟೋಪಿ ಹಾಕಿ ಸಿಕ್ಕಿಕೊಂಡಿದ್ದಾರೆ ಎಂಬುವ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಇನ್ನಾದರು ವಾಹನ ಖರೀದಿಸುವಾಗ ಇಂತಹ ವಿಚಾರಗಳು ಮತ್ತು ನಿಮ್ಮ ಹಣದ ಬಗ್ಗೆ ಗಮನವಿರಲಿ.

Source: Teambhp

Most Read Articles

Kannada
English summary
Renault Duster Wrong Colour Delivered Customer Wins Court Case. Read In Kannada
Story first published: Tuesday, May 7, 2019, 15:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X